Site icon Vistara News

ವಿಸ್ತಾರ TOP 10 NEWS | ʼಮಹಾʼ ಮಥನದ ನಡುವೆ ʼವಿಷಕಂಠನಾದ ಮೋದಿʼ ಸೇರಿ ಪ್ರಮುಖ ಸುದ್ದಿಗಳು

Vistara TOP 10 25062022

ಬೆಂಗಳೂರು: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಲ್ಲಿ ಗೆಲ್ಲುವವರು ಯಾರು ಎಂಬುದು ಕಾಣುತ್ತಿದ್ದರೂ ರಷ್ಯಾ-ಯೂಕ್ರೇನ್‌ ಯುದ್ಧದ ರೀತಿ ಇಲ್ಲಿಯೂ ಫಲಿತಾಂಶವೇ ಸಿಗದೆ ದಿನದೂಡುತ್ತಿದೆ. ಇದರ ನಡುವೆ ನೆಚ್ಚಿನ ಸ್ನೇಹಿತ ನರೇಂದ್ರ ಮೋದಿಯವರನ್ನು ʼವಿಷಕಂಠʼನಿಗೆ ಹೋಲಿಕೆ ಮಾಡಿರುವ ಅಮಿತ್‌ ಷಾ, ಪಠ್ಯಪುಸ್ತಕ ಕುರಿತು ಎಚ್‌.ಡಿ. ದೇವೇಗೌಡರಿಗೆ ಮನವರಿಕೆ ಮಾಡಿದ್ದೇನೆ ಎಂದ ಸಚಿವ ಬಿ.ಸಿ. ನಾಗೇಶ್‌, ಫಾಸ್ಟ್‌ ಟ್ಯಾಗ್‌ ಕುರಿತ ವಿಡಿಯೋ ಬಗ್ಗೆ ಫ್ಯಾಕ್ಟ್‌ ಚೆಕ್‌, ರಾಜ್ಯದಲ್ಲಿ ಸಚಿವಾಕಾಂಕ್ಷಿಗಳ ಕನಸಿಗೆ ತಣ್ಣೀರೆರೆಚಿದ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

೧. ಅನರ್ಹತೆಯಿಂದ ಪಾರಾಗಲು ಡೆಪ್ಯೂಟಿ ಸ್ಪೀಕರ್‌ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಿದ್ದವರಿಗೆ ಹಿನ್ನಡೆ
ಬಂಡಾಯ ಎದ್ದಿರುವ ಶಾಸಕರಲ್ಲಿ ಏಕನಾಥ್‌ ಶಿಂಧೆ ಸೇರಿ ಒಟ್ಟು ೧೬ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಉದ್ಧವ್‌ ಠಾಕ್ರೆ ಬಣ ಮಹಾರಾಷ್ಟ್ರ ಡೆಪ್ಯೂಟಿ ಸ್ಪೀಕರ್‌ ನರಹರಿ ಜಿರ್ವಾಲ್‌ರಿಗೆ ಮನವಿ ಮಾಡಿತ್ತು. ಆದರೆ ತಾವು ಅನರ್ಹತೆ ಅಸ್ತ್ರದಿಂದ ಪಾರಾಗಲು ಏಕನಾಥ್‌ ಶಿಂಧೆ ಬಣದ ಶಾಸಕರು ಡೆಪ್ಯೂಟಿ ಸ್ಪೀಕರ್‌ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದರು. ಆದರೆ ಅವರಿಗೀಗ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ಮಂಡಿಸಲ್ಪಟ್ಟಿದ್ದ ಅವಿಶ್ವಾಸ ನಿರ್ಣಯವನ್ನು ಡೆಪ್ಯೂಟಿ ಸ್ಪೀಕರ್‌ ನರಹರಿ ತಿರಸ್ಕರಿಸಿದ್ದಾರೆ. “ಅವಿಶ್ವಾಸ ಗೊತ್ತುವಳಿಯನ್ನು ನನ್ನ ಕಚೇರಿಗೆ ಬಂದು ಸಲ್ಲಿಸಲಾಗಿಲ್ಲ. ಹೀಗಾಗಿ ಇದಕ್ಕೆ ಮಾನ್ಯತೆ ಇಲ್ಲ” ಎಂದು ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ರಾಜಕೀಯ ಗೊಂದಲದ ಬಗ್ಗೆ ಕರ್ನಾಟಕದ ಜನಪ್ರತಿನಿಧಿಗಳು ಹೀಗೆಂದಿದ್ದಾರೆ

2. ಬೆಂಗಳೂರಿನ ನಾಲ್ವರು ವಿದ್ಯಾರ್ಥಿಗಳು ಕುಮಟಾದಲ್ಲಿ ಸಮುದ್ರ ಪಾಲು
ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ನಾಲ್ವರು ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಈಜುವ ವೇಳೆ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ 87 ವಿದ್ಯಾರ್ಥಿಗಳು ಕುಮಟಾ ಪ್ರವಾಸಕ್ಕೆ ಬಂದಿದ್ದರು. ಕುಮಟಾದ ಸಿಲ್ವರ್ ಸ್ಯಾಂಡ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಕಾಗಾಲ್‌ ಕಡಲತೀರದಲ್ಲಿ ಈಜುತ್ತಿದ್ದರು. ಈ ವೇಳೆ ಅಲೆಗೆ ಸಿಕ್ಕಿ ಅರ್ಜುನ್, ಚೈತ್ರಶ್ರೀ, ತೇಜಸ್, ಕಿರಣ್‌ಕುಮಾರ್ ಕಣ್ಮರೆಯಾಗಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

3. ತಿಂಗಳಲ್ಲಿ 15 ದಿನ ಕಾಡಿಗೆ ಹೋಗಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ
ಎಲ್ಲ ಹಂತದ ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ತಿಂಗಳಿಗೆ 15 ದಿನ ಅರಣ್ಯದಲ್ಲಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಸೂಚಿಸಿದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ನಿಗಮದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದೀರಿ. ಕಚೇರಿ ಬಿಟ್ಟು ಹೊರಗೇ ಬರುತ್ತಿಲ್ಲ. ಅರಣ್ಯಕ್ಕೆ ಹೋಗಿ. ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳವರೆಗಿನ ಎಲ್ಲರಿಗೂ ಇದು ಅನ್ವಯವಾಗುತ್ತದೆ. ತಿಂಗಳಲ್ಲಿ ೧೫ ದಿನ ಅರಣ್ಯದಲ್ಲಿ ಇದ್ದರೆ ಉಳಿದ ಸಿಬ್ಬಂದಿಗೆ ಆತ್ಮಸ್ಥೈರ್ಯ ಬರುತ್ತದೆ ಎಂದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೪. ದೇವೇಗೌಡರಿಗೆ ಪಠ್ಯ ಪರಿಷ್ಕರಣೆ ಬಗ್ಗೆ ಮನವರಿಕೆ ಮಾಡಿದ್ದೇವೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ 169 ಪುಟಗಳಲ್ಲಿ 150 ತಪ್ಪುಗಳನ್ನು ಮಾಡಿತ್ತು. ನಮ್ಮ ಸರ್ಕಾರದಲ್ಲಿ ಕೇವಲ 17 ತಪ್ಪುಗಳಾಗಿದ್ದು, ಅವುಗಳನ್ನು ಸರಿಮಾಡಿದ್ದೇವೆ. ಈ ಕುರಿತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಗೆ ಮನವರಿಕೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ಸಚಿವ ಅಶೋಕ್‌ ಹೇಳಿದ್ದು ಅಸತ್ಯ: ಪಠ್ಯ ಪರಿಷ್ಕರಣೆ ಕುರಿತು ಬರಗೂರು ರಾಮಚಂದ್ರಪ್ಪ ಉತ್ತರ

5. ನರೇಂದ್ರ ಮೋದಿ ವಿಷಕಂಠನಿದ್ದಂತೆ, ಅವರ ನೋವನ್ನು ನಾನು ಹತ್ತಿರದಿಂದ ಬಲ್ಲೆ: ಗೃಹ ಸಚಿವ ಅಮಿತ್‌ ಶಾ
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ (ಗುಜರಾತ್‌ನ ಅಂದಿನ ಮುಖ್ಯಮಂತ್ರಿ)ಯವರಿಗೆ ವಿಶೇಷ ತನಿಖಾ ತಂಡ (SIT)ಕ್ಲೀನ್‌ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಜಖಿಯಾ ಜಾಫ್ರಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಜೂ.24ರಂದು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಈ ಮೂಲಕ ಗಲಭೆಗೂ-ನರೇಂದ್ರ ಮೋದಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಎತ್ತಿಹಿಡಿದೆ. ಅದರ ಬೆನ್ನಲ್ಲೇ ಗೃಹ ಸಚಿವ ಅಮಿತ್‌ ಶಾ ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟು, ಗಲಭೆ ಬಗ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಮಾತನಾಡಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೬. ವಿಸ್ತಾರ Fact Check | ಕಾರಿನ ಗಾಜು ಒರೆಸಿದ ಹುಡುಗ FASTagನಿಂದ ಹಣ ಲಪಟಾಯಿಸಿದನೇ?
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೊ ವೈರಲ್‌ ಆಗಿತ್ತು. ಅದರಲ್ಲಿ Apple ಸ್ಮಾರ್ಟ್ ವಾಚ್‌ ಧರಿಸಿದ ಹುಡುಗನೊಬ್ಬ ವ್ಯಕ್ತಿಯೊಬ್ಬರ ಕಾರಿನ ಮುಂಭಾಗದ ಗಾಜನ್ನು ಒರೆಸುವ ನೆಪದಲ್ಲಿ ಪೇಟಿಎಂ FASTag ಅಕೌಂಟ್‌ನಿಂದ ಹಣ ಲಪಟಾಯಿಸಿದ್ದಾನೆ ಎಂದು ಆರೋಪಿಸಲಾಗಿತ್ತು.‌ ವಿಡಿಯೊದಲ್ಲಿ ಹುಡುಗ ಕಾರಿನ ಗಾಜನ್ನು ಒರೆಸುವಾಗ ಅಲ್ಲಿದ್ದ FASTag ಸ್ಟಿಕ್ಕರ್‌ ಮೇಲೆ ವಾಚನ್ನು ಆಡಿಸಿ ಸ್ಕ್ಯಾನ್‌ ಮಾಡಿದಂತೆ ಕಾಣುತ್ತಿತ್ತು. ಇದರೊಂದಿಗೆ FASTag ಅಕೌಂಟ್‌ನಿಂದ ಹಣ ಲಪಟಾಯಿಸಿದ್ದಾನೆ ಎಂಬ ಶಂಕೆ ಬರುವಂತಿತ್ತು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೭. ಭಾರತ್‌ NCAP ಮೂಲಕ ಕಾರುಗಳಿಗೆ ಸುರಕ್ಷತಾ ರೇಟಿಂಗ್‌ : ನಿತಿನ್‌ ಗಡ್ಕರಿ
ಭಾರತದ ರಸ್ತೆಯಲ್ಲಿರುವ ಎಲ್ಲ ಕಾರುಗಳು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಕೊಡುವುದಿಲ್ಲ. ಇಲ್ಲಿ ಮೈಲೇಜ್‌ಗೆ ಹೆಚ್ಚು ಆದ್ಯತೆ ನೀಡುವ ಕಾರಣ ಕಂಪನಿಗಳು ವಾಹನದ ಒಟ್ಟು ತೂಕ ಕಡಿಮೆ ಮಾಡುವ ಉದ್ದೇಶದಿಂದ ಕನಿಷ್ಠ ದರ್ಜೆಯ ವಸ್ತುಗಳನ್ನು ಬಳಸಿಕೊಂಡು ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತವೆ. ಹೀಗಾಗಿ ಅವಘಡಗಳ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಹಾನಿಯಾಗುತ್ತವೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭಾರತ್‌ NCAP ರಚಿಸಿ ಕಾರುಗಳಿಗೆ ಸುರಕ್ಷತಾ ರೇಟಿಂಗ್‌ ನೀಡಲಾಗುವುದು ಎಂದು ಘೋಷಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

8. world cup ಗೆದ್ದ ಅಪೂರ್ವ ಕ್ಷಣಕ್ಕೆ 39 ವರ್ಷ
1983ರಲ್ಲಿ ಭಾರತ ಮೊತ್ತ ಮೊದಲ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಅದರಿಂದಾಗಿ ಮುಂದೆ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಆಯಿತು ಬಿಸಿಸಿಐ. ಭಾರತದ ಕ್ರಿಕೆಟಿಗರು ಜನಪ್ರಿಯತೆ ಗಳಿಸಿದರು ಹಾಗೂ ಶ್ರೀಮಂತರಾದರು. ಸಚಿನ್ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ, ಜಾವಗಲ್ ಶ್ರೀನಾಥ್, ಮಹೇಂದ್ರ ಸಿಂಗ್‌ ಧೋನಿ, ಯುವರಾಜ್, ವೀರೇಂದ್ರ ಸೆಹ್ವಾಗ್‌, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್‌ ದ್ರಾವಿಡ್, ಸೌರವ್‌ ಗಂಗೂಲಿ, ಗೌತಮ್‌ ಗಂಭೀರ್ ಮೊದಲಾದ ತಾರಾ ಮೌಲ್ಯದ ನೂರಾರು ಆಟಗಾರರು ಬೆಳೆದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)̈̈̈

9. ವಿಸ್ತಾರ Money Guide | ಬ್ಯಾಂಕ್‌ಗಳಲ್ಲಿ ಸ್ವೀಪ್‌ ಇನ್‌- ಎಫ್‌ಡಿ ಅಡಿಯಲ್ಲಿ ನಿಮ್ಮ ಉಳಿತಾಯದ ಹಣಕ್ಕೆ ಸಿಗುತ್ತದೆ ಹೆಚ್ಚಿನ ಬಡ್ಡಿ!
ಬ್ಯಾಂಕ್‌ಗಳಲ್ಲಿ ಸೇವಿಂಗ್ಸ್‌ ಅಕೌಂಟ್‌ ಮತ್ತು ಫಿಕ್ಸೆಡ್‌ ಡಿಪಾಸಿಟ್‌ ಎರಡರ ವಿಶೇಷತೆಗಳನ್ನೂ ಒಳಗೊಂಡಿರುವ ಹಣಕಾಸು ಸೌಲಭ್ಯವೇ ಸ್ವೀಪ್‌ ಇನ್-‌ ಎಫ್‌ಡಿ. ಈ ಸ್ವೀಪ್‌ ಇನ್-ಎಫ್‌ಡಿ ಯೋಜನೆಯಡಿಯಲ್ಲಿ, ಗ್ರಾಹಕರು ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ ಕಡಿಮೆ ಬಡ್ಡಿ ದರಕ್ಕೆ ಜಮೆಯಾಗಿರುವ ಹೆಚ್ಚುವರಿ ಹಣವನ್ನು ಹೆಚ್ಚಿನ ಬಡ್ಡಿ ಆದಾಯ ತರುವ ಫಿಕ್ಸೆಡ್‌ ಡಿಪಾಸಿಟ್‌ (ನಿಶ್ಚಿತ ಠೇವಣಿ) ಆಗಿ ಪರಿವರ್ತಿಸಬಹುದು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. ʼಹೆಸರಿನವನಾದ ನಾನುʼ ಎಂದು ಕನಸು ಕಾಣುತ್ತಿದ್ದವರ ಸ್ವಪ್ನಭಂಗ ಮಾಡಿದ ಸಿಎಂ ಬೊಮ್ಮಾಯಿ
ಇನ್ನೇನು ಸಂಪುಟ ವಿಸ್ತರಣೆ ಆಗಿಯೇಬಿಡುತ್ತದೆ, ರಾಜಭವನದ ಗಾಜಿನ ಮನೆಯಲ್ಲಿ ʼಈ ಹೆಸರಿನವನಾದ ನಾನುʼ ಎಂದು ಪ್ರಮಾಣವಚನ ಸ್ವೀಕರಿಸುವ ಕನಸು ಕಾಣುತ್ತಿದ್ದವರಿಗೆ ಬಿಜೆಪಿ ತಣ್ಣೀರೆರೆಚಿದೆ. ನವ ದೆಹಲಿಗೆ ಹೋದ ಸಿಎಂ ಬಸವರಾಜ ಬೊಮ್ಮಾಯಿ ಇನ್ನೇನು ಸಚಿವರ ಪಟ್ಟಿಯೊಂದಿಗೆ ಬರುತ್ತಾರೆ ಎಂದು ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version