Site icon Vistara News

ವಿಸ್ತಾರ TOP 10 NEWS: ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿಯಿಂದ, ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ದಿವಾಳಿವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-modi attacks congress to silicon valley bank bankrupt and more news

#image_title

1. Modi in Karnataka: ಕಾಂಗ್ರೆಸಿಗರು ನನಗೆ ಸಮಾಧಿ ತೋಡುತ್ತಿದ್ದಾರೆ; ನಾನು ಜನರಿಗೆ ಹೆದ್ದಾರಿ ಮಾಡುತ್ತಿದ್ದೇನೆ: ಪ್ರಧಾನಿ ನರೇಂದ್ರ ಮೋದಿ
ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾಂಗ್ರೆಸಿಗರು ಇದೀಗ ನನ್ನ ಸಮಾಧಿಯನ್ನು ತೋಡುವಲ್ಲಿ ನಿರತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಗೆಜ್ಜಲಗೆರೆಯಲ್ಲಿ ಆಯೋಜನೆ ಮಾಡಿದ್ದ, 12 ಸಾವಿರ ಕೋಟಿ ರೂ. ಮೊತ್ತದ 210 ಕಿಲೋಮೀಟರ್ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Modi in Karnataka: ಕಾಂಗ್ರೆಸ್‌ನಿಂದ ಬಸವೇಶ್ವರರಿಗೆ ಅವಮಾನ: ರಾಹುಲ್‌ ಭಾಷಣ ಉಲ್ಲೇಖಿಸಿದ ಮೋದಿ
ಭಾರತದ ಪ್ರಜಾಪ್ರಭುತ್ವವನ್ನು ಆಗಾಗ್ಗೆ ಕಟಕಟೆಯಲ್ಲಿ ನಿಲ್ಲಿಸುವವರಿಂದ ಜಾಗೃತವಾಗಿರಿ ಎನ್ನುವ ಮೂಲಕ, ಇತ್ತೀಚೆಗೆ ಲಂಡನ್‌ನಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು. ಐಐಟಿ-ಧಾರವಾಡ ಕ್ಯಾಂಪಸ್ ಹೊರಗಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಐಐಟಿ ಧಾರವಾಡ ಲೋಕಾರ್ಪಣೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಲೋಕಾರ್ಪಣೆ, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್‌ ವಿದ್ಯುದೀಕರಣ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಉದ್ಘಾಟನೆ, ಜಯದೇವ ಆಸ್ಪತ್ರೆಯ ಶಂಕುಸ್ಥಾಪನೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಶಂಕುಸ್ಥಾಪನೆ, ಹೈಟೆಕ್ ಕ್ರೀಡಾ ಸಂಕೀರ್ಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Modi in Karnataka: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು: ಪ್ರಧಾನಿ ನರೇಂದ್ರ ಮೋದಿ ಉಲ್ಲೇಖ
ಶಿವಮೊಗ್ಗದಲ್ಲಿ ಫೆಬ್ರವರಿ 27ರಂದು ಉದ್ಘಾಟನೆಯಾದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರನ್ನು ಪ್ರಸ್ತಾಪಿಸುವ ಮೂಲಕ ನರೇಂದ್ರ ಮೋದಿ ನಾಮಕರಣ ಮಾಡಿದ್ದಾರೆ.  ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Same Sex Marriage: ಸಲಿಂಗಿಗಳ ಮದುವೆಗೆ ಕೇಂದ್ರ ವಿರೋಧ, ಕುಟುಂಬ ಕಲ್ಪನೆಗೆ ಧಕ್ಕೆ ಎಂದು ಸುಪ್ರೀಂಗೆ ಸ್ಪಷ್ಟನೆ
ದೇಶದಲ್ಲಿ ಸಲಿಂಗಿಗಳ ಮದುವೆಯನ್ನು ಕಾನೂನುಬದ್ಧಗೊಳಿಸುವ (Same Sex Marriage:) ಕುರಿತು ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಸಲಿಂಗಿಗಳ ಜೋಡಿಯು ಮದುವೆ ಕಾನೂನುಬದ್ಧಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Oscars 2023: ಆಸ್ಕರ್‌ ಪ್ರಶಸ್ತಿ ಘೋಷಣೆಗೆ ಕ್ಷಣಗಣನೆ… ಆರ್‌ಆರ್‌ಆರ್ ಜತೆಗೆ ಮತ್ತ್ಯಾವ ಚಿತ್ರಗಳು ನಾಮನಿರ್ದೇಶನ? ಇಲ್ಲಿದೆ ವಿಸ್ತೃತ ಮಾಹಿತಿ
ಭಾರತದ ಮೂರು ಸಿನಿಮಾಗಳು ಆಸ್ಕರ್‌ ಪ್ರಶಸ್ತಿಯ (Oscars 2023 Nominations) ಅಂತಿಮ ಸುತ್ತಿಗೆ ನಾಮನಿರ್ದೇಶನದಲ್ಲಿವೆ. ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಒರಿಜಿನಲ್‌ ಬೆಸ್ಟ್‌ ಹಾಡು ಕೆಟಗರಿ, ಅತ್ಯುತ್ತಮ ಸಾಕ್ಷ್ಯಚಿತ್ರ ಕೆಟಗರಿಯಲ್ಲಿ ಆಲ್‌ ದಿ ಬ್ರೆತ್ಸ್‌ , ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್‌ ವಿಸ್ಪರರ್ಸ್ ನಾಮಿನೇಟ್‌ ಆಗಿವೆ. ಇವುಗಳ ಜತೆಗೆ ಜತೆಗೆ ಜಗತ್ತಿನಾದ್ಯಂತ ಉತ್ತಮ ಪ್ರದರ್ಶನ ಕಂಡ ಅವತಾರ್‌ 2 (Avatar: The Way Of Water), ಟಾಪ್‌ ಗನ್‌: ಮಾವೆರಿಕ್‌ (Top Gun: Maverick) ಸೇರಿ ಹಲವು ಜಾಗತಿಕ ಸಿನಿಮಾಗಳು ಕೂಡ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ಭಾರತೀಯ ಕಾಲಮಾನ ಮಾರ್ಚ್ 13ರಂದು ಆಸ್ಕರ್ ಪ್ರಶಸ್ತಿ ಘೋಷಣೆಯಾಗಲಿದ್ದು, ಕುತೂಹಲ ಹೆಚ್ಚಾಗತೊಡಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. R Dhruvanarayana: ಮಣ್ಣಲ್ಲಿ ಮಣ್ಣಾದ ಆರ್.‌ ಧ್ರುವನಾರಾಯಣ; ಸ್ವಗ್ರಾಮ ಹೆಗ್ಗವಾಡಿಯಲ್ಲಿ ಅಂತ್ಯಸಂಸ್ಕಾರ, ಸಾವಿರಾರು ಮಂದಿ ಭಾಗಿ
ಹೃದಯಾಘಾತದಿಂದ ನಿಧನರಾಗಿದ್ದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.‌ ಧ್ರುವನಾರಾಯಣ ಅವರ (R Dhruvanarayana) ಅಂತ್ಯಸಂಸ್ಕಾರ, ಸ್ವಗ್ರಾಮವಾದ ತಾಲೂಕಿನ ಹೆಗ್ಗವಾಡಿಯಲ್ಲಿ ಭಾನುವಾರ ಮಧ್ಯಾಹ್ನ ಕುಟುಂಬಸ್ಥರು, ಬೆಂಬಲಿಗರು, ಕಾಂಗ್ರೆಸ್‌ ನಾಯಕರು ಹಾಗೂ ಸಾವಿರಾರು ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Act Of God: ಟಯರ್‌ ಸ್ಫೋಟ ಭಗವಂತನ ಆಟವಲ್ಲ, ಪರಿಹಾರ ಕೊಡಿ ಎಂದು ಇನ್ಶುರೆನ್ಸ್‌ ಕಂಪನಿಗೆ ಕೋರ್ಟ್‌ ಆದೇಶ
“ಚಲಿಸುತ್ತಿರುವಾಗಲೇ ವಾಹನದ ಟಯರ್‌ ಸ್ಫೋಟವಾಗುವುದು ಭಗವಂತನ ಆಟವಲ್ಲ”‌ (Act Of God) ಎಂದು ಸ್ಪಷ್ಟಪಡಿಸಿದ ಬಾಂಬೆ ಹೈಕೋರ್ಟ್‌, ಕಾರಿನ ಟಯರ್‌ ಸ್ಫೋಟದ ಬಳಿಕ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.25 ಕೋಟಿ ರೂ. ಪರಿಹಾರಿ ನೀಡಬೇಕು ಎಂದು ಇನ್ಶುರೆನ್ಸ್‌ ಕಂಪನಿಗೆ ಮೋಟಾರ್‌ ಅಪಘಾತ ಪರಿಹಾರ ನ್ಯಾಯಾಧಿಕರಣ ನೀಡಿದ ತೀರ್ಪನ್ನು ಎತ್ತಿಹಿಡಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. IND vs AUS: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಮ್ಯಾಚ್‌ ಮೇಲೆ ದಾಳಿಗೆ ಪ್ಯ್ಲಾನ್, ಶಂಕಿತ ಇಬ್ಬರು ಉಗ್ರರ ಬಂಧನ
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೆ ಬೆದರಿಕೆಯೊಡ್ಡಿದ ಆರೋಪದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಶಂಕಿತ ಇಬ್ಬರು ಉಗ್ರರನ್ನು ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್ ಸೈಬರ್ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ‌Silicon Valley Bank crisis : ಅಮೆರಿಕದಲ್ಲಿ 2008ರ ಬಳಿಕ ಅತಿ ದೊಡ್ಡ ಬ್ಯಾಂಕ್‌ ಇದೀಗ ದಿವಾಳಿ , ಷೇರುಪೇಟೆಯಲ್ಲಿ ತಲ್ಲಣ
ಅಮೆರಿಕದಲ್ಲಿ ಸ್ಟಾರ್ಟಪ್‌ಗಳಿಗೆ ಸಾಲ ನೀಡುತ್ತಿದ್ದ ಕ್ಯಾಲಿಫೋರ್ನಿಯಾ ಮೂಲದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ( SVB Financial Group) ಪತನವಾಗಿದೆ. 2008ರ ಬಳಿಕ ಅಲ್ಲಿನ ಅತಿ ದೊಡ್ಡ ಬ್ಯಾಂಕ್‌ ಇದೀಗ ಪತನವಾದಂತಾಗಿದೆ. ಬ್ಯಾಂಕ್‌ನ ವೈಫಲ್ಯದ ಪರಿಣಾಮ ನಾನಾ ಕಂಪನಿಗಳು, ಹೂಡಿಕೆದಾರರು, ಠೇವಣಿದಾರರ ಕೋಟ್ಯಂತರ ಡಾಲರ್‌ ಹಣ ಅತಂತ್ರವಾಗಿದೆ. ಷೇರುಪೇಟೆಯಲ್ಲಿ ಶುಕ್ರವಾರ ಷೇರು ದರಗಳು ಕುಸಿದಿದ್ದು, ಸೋಮವಾರ ಮತ್ತಷ್ಟು ಕುಸಿಯುವ ಆತಂಕ (Silicon Valley Bank crisis) ಸೃಷ್ಟಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಸಂಡೇ ರೀಡ್‌ | ಕ್ಯಾಪ್ಟನ್‌ ಗೋಪಿನಾಥ್‌ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ
ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರು ಬರೆದ, ವಿಜಯ್ ಜೋಷಿ ಅವರು ಕನ್ನಡಕ್ಕೆ ಅನುವಾದಿಸಿದ ‘ನಮ್ಮ ಭಾರತ’ ಪುಸ್ತಕವನ್ನು ಹರಿವು ಬುಕ್ಸ್ ಪ್ರಕಟಿಸಿದೆ.‌ ಗೋಪಿನಾಥ್ ಅವರ ವಿಚಾರಧಾರೆಗಳನ್ನು ಲೇಖಕ ವಿಜಯ್ ಜೋಷಿ ಸಶಕ್ತವಾಗಿ ನಿರೂಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version