Site icon Vistara News

ವಿಸ್ತಾರ TOP 10 NEWS | ಮೋದಿಗೆ ಮಾತೃ ವಿಯೋಗದಿಂದ, ರಾಜ್ಯದಲ್ಲಿ ಅಮಿತ್‌ ಶಾ ಸಂಚಲನದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news modi mother heeraben demise to amit shah in karnataka and more prominent news

1. Amit Shah | ಸಂಸದೆ ಸುಮಲತಾರನ್ನೂ BJP ಲೆಕ್ಕಕ್ಕೆ ಸೇರಿಸಿಕೊಂಡ ಅಮಿತ್‌ ಶಾ!: JDS-Congress ವಿರುದ್ಧ ವಾಗ್ದಾಳಿ
ಇಲ್ಲಿಯವರೆಗೆ ಕರ್ನಾಟಕದಲ್ಲಿ ಅಧಿಕಾರ ನಡೆಸಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣವನ್ನು ನಡೆಸಿದ್ದು, ಅವರನ್ನು ಕಿತ್ತೊಗೆದು ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಸರಳ ಬಹುಮತ ನೀಡಿ ಎಂದು ಕೇಂದ್ರ ಗೃಹಸಚಿವ ಹಾಗೂ ಸಹಕಾರ ಸಚಿವ ಅಮಿತ್‌ ಶಾ (amit shah) ಕರೆ ನೀಡಿದ್ದಾರೆ. ಮಂಡ್ಯದಲ್ಲಿರುವ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಸಮಾವೇಶದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ಅಮಿತ್‌ ಶಾ ಹರಿಹಾಯ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Amit Shah | ಗೃಹಸಚಿವರಿಗೆ ತಲೆಬಾಗಿ ನಮಿಸುವೆ ಎಂದ ಎಚ್‌.ಡಿ. ದೇವೇಗೌಡ; ಅಮಿತ್‌ ಶಾಗೆ ಹೊಗಳಿಕೆಯ ಸುರಿಮಳೆ
ಅಮೂಲ್‌ ಡೈರಿ ಸ್ಥಾಪನೆ ಮೂಲಕ ದೇಶದಲ್ಲಿ ಕ್ಷೀರ ಕ್ರಾಂತಿ ಮಾಡಿದ ವರ್ಗೀಸ್‌ ಕುರಿಯನ್‌ ಅವರ ಮಾರ್ಗದಲ್ಲೇ ಕೇಂದ್ರ ಗೃಹಸಚಿವ ಹಾಗೂ ಸಹಕಾರ ಸಚಿವ ಅಮಿತ್‌ ಶಾ (amit shah) ಸಾಗುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Amit Shah | ನಂದಿನಿ ಅಸ್ತಿತ್ವಕ್ಕೆ ಧಕ್ಕೆ ಆತಂಕ?: ಮತ್ತೆ ಗೊಂದಲಕ್ಕೆ ಕಾರಣವಾಯಿತು ಅಮಿತ್‌ ಶಾ ಮಾತು
ಮೆಗಾ ಡೈರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್‌ ಶಾ (amit shah) ಆಡಿತ ಮಾತುಗಳು, ರಾಜ್ಯದ ಪ್ರತಿಷ್ಠಿತ ನಂದಿನಿ ಬ್ರ್ಯಾಂಡ್‌ ಅಸ್ತಿತ್ವದ ಕುರಿತು ಗೊಂದಲಗಳನ್ನು ಹುಟ್ಟುಹಾಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಅಮಿತ್‌ ಶಾ ಪ್ರವಾಸದ ಸಂಪೂರ್ಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

4. Heeraben Modi | ಬಾಳಿದಷ್ಟೇ ಸರಳವಾಗಿ ಭಗವಂತನಲ್ಲಿ ಲೀನವಾದರು ತಾಯಿ ಹೀರಾಬೆನ್​; ಪ್ರಧಾನಿ ಮೋದಿ ಸೂಚನೆ ಏನಿತ್ತು?
ಹೀರಾಬೆನ್​​ ತನ್ನ ಮಗನೇ ಪ್ರಧಾನಿಯಾದರೂ ಅದೆಷ್ಟು ಸರಳವಾಗಿ ಬಾಳಿದ್ದರೋ, ಅವರು ಮೃತಪಟ್ಟ ಮೇಲೆ ಅಂತಿಮ ವಿಧಿವಿಧಾನಗಳು-ಅಂತಿಮ ಸಂಸ್ಕಾರವೂ ಅಷ್ಟೇ ಸರಳವಾಗಿ ನಡೆದುಹೋಯಿತು. ಪ್ರಧಾನಿ ಮೋದಿ, ಮನಸು ಮಾಡಿದ್ದರೆ ತಮ್ಮ ಶತಾಯುಷಿ ತಾಯಿಯ ಅಂತ್ಯ ಸಂಸ್ಕಾರವನ್ನು ಇನ್ನಷ್ಟು ಆಡಂಬರವಾಗಿ ಮಾಡಬಹುದಿತ್ತು. ಆದರೆ ಹಾಗೆ ಮಾಡದೆ ಅವರು ಮಾದರಿಯಾದರು. ಈ ಕುರಿತು ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ.

ಹೀರಾಬೆನ್‌ ಮೋದಿಯವರ ನಿಧನದ ಕುರಿತ ಸಂಪೂರ್ಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. Heeraben Modi Passes Away | ತಾಯಿ ಹೀರಾಬೆನ್‌ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್‌ಗೆ ಬೆಳಗ್ಗೆ ಧಾವಿಸಿ, ಅಗಲಿದ ತಾಯಿ ಹೀರಾಬೆನ್‌ ಅವರಿಗೆ ಅಂತಿಮ ನಮನಗಳನ್ನು (Heeraben Modi Passes Away) ಸಲ್ಲಿಸಿದರು. ಅಹಮದಾಬಾದ್‌ನಲ್ಲಿ ಹೀರಾಬೆನ್‌ ಅವರ ಪಾರ್ಥಿವ ಶರೀರಕ್ಕೆ ಶಿರಬಾಗಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Rishabh Pant | ರಿಷಭ್​ ಪಂತ್​ ಆರೋಗ್ಯ ಸ್ಥಿತಿ ಕುರಿತು ಮ್ಯಾಕ್ಸ್​​ ಆಸ್ಪತ್ರೆಯ ವೈದ್ಯರು ಕೊಟ್ಟ ಹೇಳಿಕೆಗಳೇನು?
ಕಾರು ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕ್ರಿಕೆಟರ್​ ರಿಷಭ್ ಪಂತ್ (Rishabh Pant) ಅವರ ಆರೋಗ್ಯ ಸ್ಥಿತಿಯ ಬಗ್ಗೆ ಡೆಹ್ರಾಡೂನ್​ನ ಮ್ಯಾಕ್ಸ್​ ​ ಆಸ್ಪತ್ರೆಯ ಮೊದಲ ಬುಲೆಟಿನ್​ ಬಿಡುಗಡೆ ಮಾಡಿದೆ. ಅದರ ಪ್ರಕಾರ ಯುವ ಕ್ರಿಕೆಟಿಗ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ರೀತಿಯ ಆತಂಕಗಳು ಇಲ್ಲ. ಆದರೆ, ಆಗಿರುವ ಗಾಯಗಳಿಗೆ ಚಿಕಿತ್ಸೆ ಮುಂದುವರಿಯಲಿದ್ದು, ಸಂಜೆ ವೇಳೆ ಇನ್ನೊಂದು ಬುಲೆಟಿನ್ ಬಿಡುಗಡೆಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ರಿಷಭ್‌ ಪಂತ್‌ ಅಪಘಾತದ ಕುರಿತ ಎಲ್ಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Post Office Interest Rates | ಠೇವಣಿಯ ಬಡ್ಡಿ ಹೆಚ್ಚಳ, ಪೋಸ್ಟ್‌ ಆಫೀಸ್‌ ಗ್ರಾಹಕರಿಗೆ ಹೊಸ ವರ್ಷದ ಸಿಹಿ ಸುದ್ದಿ
ಅಂಚೆ ಕಚೇರಿಗಳಲ್ಲಿ ಕಿರು ಅವಧಿಗೆ ಠೇವಣಿ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದೆ. ಅಂಚೆ ಕಚೇರಿಯ ಹಲವು ಯೋಜನೆಗಳ ಮೇಲಿನ ಬಡ್ಡಿದರವನ್ನು 20 ಮೂಲಾಂಕಗಳಿಂದ 110 ಮೂಲಾಂಕಗಳಿಗೆ ಏರಿಕೆ (Post Office Interest Rates) ಮಾಡಲಾಗಿದ್ದು, ಇದರಿಂದ ಕೋಟ್ಯಂತರ ಠೇವಣಿದಾರರಿಗೆ ಹೆಚ್ಚಿನ ಲಾಭವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Reservation | ಒಕ್ಕಲಿಗ, ಪಂಚಮಸಾಲಿ ಒಬಿಸಿ ಮೀಸಲಾತಿ ಪರಿಷ್ಕರಣೆ ಎಲೆಕ್ಷನ್‌ ಗಿಮಿಕ್‌: ಮಾಜಿ ಸಿಎಂ ಸಿದ್ದರಾಮಯ್ಯ
ಒಬಿಸಿ ೩ಎ ಮೀಸಲಾತಿ ಹೊಂದಿದ್ದ ಒಕ್ಕಲಿಗರಿಗೆ 2ಸಿ ಹಾಗೂ ೩ಬಿ ಮೀಸಲಾತಿ ಹೊಂದಿದ್ದ ಪಂಚಮಸಾಲಿ ಸಮುದಾಯಕ್ಕೆ 2ಡಿ ಎಂದು ರಾಜ್ಯ ಸರ್ಕಾರ ಹೊಸದಾಗಿ ಪ್ರವರ್ಗ ಸೃಷ್ಟಿಸಿದೆ. ಈ ಬಗ್ಗೆ ನಮಗೆ ಪೂರ್ಣ ಮಾಹಿತಿ ಸಿಕ್ಕಿಲ್ಲ. ಮೀಸಲಾತಿ (Reservation) ಶೇಕಡಾ ಇಂತಿಷ್ಟೇ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಎಲ್ಲಿಂದ ಕೊಡುತ್ತಾರೆ ಎಂದು ತೀರ್ಮಾನವಾಗಿಲ್ಲ. ಈ ಮೀಸಲಾತಿ ಪರಿಷ್ಕರಣೆ ಎಲೆಕ್ಷನ್‌ ಗಿಮಿಕ್‌ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. SC ST Reservation | ಎಸ್‌ಸಿ ಎಸ್‌ಟಿ ಹೊಸ ಮೀಸಲಾತಿಯ ರೋಸ್ಟರ್‌ ಪ್ರಕಟ; ನೇಮಕಾತಿಗೆ ದಾರಿ ಸುಗಮ
ರಾಜ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ನೇಮಕಾತಿ ಹಾಗೂ ಹುದ್ದೆಗಳಲ್ಲಿ ಮೀಸಲಾತಿ (SC ST Reservation) ಹೆಚ್ಚಳ ಮಾಡಿ ಕಳೆದ ಅಕ್ಟೋಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರ ಈಗ ನಿಗದಿಪಡಿಸಲಾದ ಹೆಚ್ಚಿನ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ನೇರ ನೇಮಕಾತಿ ಮುಖಾಂತರ ಭರ್ತಿಮಾಡಬೇಕಾದ ರಿಕ್ತಸ್ಥಾನಗಳಿಗೆ ಬಿಂದುಗಳನ್ನು ಗುರುತಿಸಿ ಆದೇಶ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಭವಿಷ್ಯ ಪ್ರಶ್ನೋತ್ತರ | ಖರ್ಚು ಜಾಸ್ತಿಯಾಗುತ್ತಲೇ ಇದೆ, ಸಾಲ ತುಂಬಾ ಆಗಿದೆ, ಏನು ಮಾಡೋದು ಗುರೂಜಿ?
ಭವಿಷ್ಯ ಪ್ರಶ್ನೋತ್ತರ | ಇದು ಜ್ಯೋತಿಷ್ಯದ ಹೊಸ ಅಂಕಣ. ಇಲ್ಲಿ ನಮ್ಮ ಓದುಗರು ಕೇಳುವ ಪ್ರಶ್ನೆಗಳಿಗೆ ರಾಜಗುರು ಬಿ. ಎಸ್‌. ದ್ವಾರಕನಾಥ್‌ ಅವರು ಉತ್ತರಿಸಲಿದ್ದಾರೆ, ಪರಿಹಾರ ಸೂಚಿಸಲಿದ್ದಾರೆ. ಇಲ್ಲಿ ನೀವೂ ಪ್ರಶ್ನೆ ಕೇಳಬಹುದು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Pakistan Hindu | ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆ ಕೈಗೊಳ್ಳಿ: ಪಾಕಿಸ್ತಾನಕ್ಕೆ ಭಾರತ ತಾಕೀತು
  2. RIP Pele | ಬ್ರೆಜಿಲ್​ನ ಫುಟ್ಬಾಲ್​ ದಿಗ್ಗಜ ಪೀಲೆ ನಿಧನಕ್ಕೆ ಹಲವು ಗಣ್ಯರ ಸಂತಾಪ
  3. Numerology Predictions 2023 | ಸಂಖ್ಯಾಶಾಸ್ತ್ರದ ಪ್ರಕಾರ ಹೊಸ ವರ್ಷ ಹೇಗಿರಲಿದೆ?, ನಿಮ್ಮ ಭವಿಷ್ಯ ಹೇಗಿದೆ?
  4. Love Jihad | ಲವ್ ಜಿಹಾದ್ ತಡೆಗೆ ವಿಹಿಂಪದಿಂದ ಹೆಲ್ಪ್‌ಲೈನ್‌ ಆರಂಭ; ಮಾಹಿತಿ ಸಿಕ್ಕರೆ ಕರೆ ಮಾಡಿ ತಿಳಿಸಲು ಮನವಿ
  5. ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್​ ರೈಲಿಗೆ ಚಾಲನೆ ವೇಳೆ ಜೈ ಶ್ರೀರಾಮ್​ ಘೋಷಣೆ; ವೇದಿಕೆ ಏರದೆ ಮೌನವಾಗಿ ಕುಳಿತ ಮಮತಾ ಬ್ಯಾನರ್ಜಿ
  6. Tunisha Sharma Death | ತುನಿಶಾ ಶರ್ಮಾಳನ್ನು ಇಸ್ಲಾಂಗೆ ಮತಾಂತರಗೊಳಿಸಲು ಶಿಜಾನ್‌ ಒತ್ತಾಯ, ಸಂಚಲನ ಸೃಷ್ಟಿಸಿದ ನಟಿಯ ತಾಯಿ ಹೇಳಿಕೆ
  7. ಧವಳ ಧಾರಿಣಿ ಅಂಕಣ | ಜಗದ್ವಂದ್ಯನನ್ನು ಹೆತ್ತೂ ತಬ್ಬಲಿಯಾದ ಮಹಾತಾಯಿ
  8. New Year 2023 | ಹೊಸ ವರ್ಷದಲ್ಲಿ ಯಾವ ರಾಜ್ಯಗಳಲ್ಲಿ ಚುನಾವಣೆ? ಹೇಗಿದೆ ಪಕ್ಷಗಳ ರಣತಂತ್ರ?
Exit mobile version