1.ಚಂದ್ರನಲ್ಲಿ ವಿಕ್ರಂ ಮೊದಲ ಹೆಜ್ಜೆ ಇಟ್ಟ ಜಾಗ ಇನ್ನು ಶಿವಶಕ್ತಿ ಸ್ಥಳ, ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ದಿನ
ಭಾರತದ ಚಂದ್ರಯಾನ 3 ಲ್ಯಾಂಡ್ ಆದ ಜಾಗವನ್ನು ಇನ್ನು ಮುಂದೆ ಶಿವಶಕ್ತಿ ಪಾಯಿಂಟ್ ಎಂದು ಕರೆಯಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಚಂದ್ರನಲ್ಲಿ ವಿಜಯಧ್ವಜ ಊರಿದ ದಿನವಾದ ಆಗಸ್ಟ್ 23ನ್ನು ʼಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದರು. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ (ISRO) ಕಮಾಂಡ್ ಪಾಯಿಂಟ್ ಪೀಣ್ಯದ ಇಸ್ಟಾಕ್‌ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: PM Narendra Modi: ಅಂದೂ ಅದೇ ಜಾಕೆಟ್ ಧರಿಸಿದ್ದರು ಮೋದಿ! ಇದೆಂಥಾ ಕಾಕತಾಳೀಯ!
2. ಬಿಜೆಪಿ ನಾಯಕರ ದೂರವಿಟ್ಟ ಮೋದಿ: ಕಾಂಗ್ರೆಸ್-ಬಿಜೆಪಿ ನಡುವೆ ಬ್ಯಾರಿಕೇಡ್ ಫೈಟ್
ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಲು ಬಂದ ಪ್ರಧಾನಿ ಮೋದಿ ಅವರು ರಾಜ್ಯದ ಬಿಜೆಪಿ ನಾಯಕರ ಜತೆ ಮಾತನಾಡದೆ ಇರುವುದು ಚರ್ಚೆಗೆ ಗ್ರಾಸವಾಗಿದೆ. ಮೋದಿ ಅವರು ರಾಜ್ಯ ಬಿಜೆಪಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದರೆ, ಬಿಜೆಪಿ ಮೋದಿ ನಡೆಯನ್ನು ಸಮರ್ಥಿಸಿದೆ. ಆದರೆ, ಬಿಜೆಪಿ ನಾಯಕರು ಬ್ಯಾರಿಕೇಡ್ ಹತ್ತಿ ಮೋದಿ ಅವರಿಗೆ ಕೈಬೀಸಿದ್ದು ಕುತೂಹಲ ಮೂಡಿಸಿತ್ತು.
ವರದಿ 1:: ಸರ್ವಾಧಿಕಾರಿ ಮರ್ಜಿ ಮುಂದೆ ಬೀದಿಪಾಲಾದ ಬಿಜೆಪಿ ನಾಯಕರು; ವ್ಯಂಗ್ಯವಾಡಿದ ಕಾಂಗ್ರೆಸ್
ವರದಿ 2: ಗುಲಾಮರಿಗೆ ಇದು ಅರ್ಥ ಆಗಲ್ಲ; ಸಾಮ್ರಾಟರೆಲ್ಲ ಬೀದಿಪಾಲಾಗಿದ್ದಾರೆಂಬ ಕಾಂಗ್ರೆಸ್ ಗೇಲಿಗೆ ಬಿಜೆಪಿ ಪ್ರತ್ಯುತ್ತರ
ವರದಿ 3: ಮೋದಿ ಬಿಜೆಪಿ ನಾಯಕರನ್ನು ಹತ್ತಿರ ಸೇರಿಸಿಲ್ಲ ಯಾಕೆಂದರೆ… : ಬಿ.ಎಲ್ ಸಂತೋಷ್ ವಿವರಣೆ
3. ಸೋಮಶೇಖರ್ ಮೋದಿ ಬಂದಾಗ ಗೈರು, ಡಿಕೆಶಿ ಜತೆ ಹಾಜರ್; ಸಿಎಂ ಭೇಟಿಯಾದ ಶಿವರಾಂ ಹೆಬ್ಬಾರ್
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದರೂ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಮಾತ್ರ ಆ ಕಡೆ ಸುಳಿದಿಲ್ಲ. ಆದರೆ, ಸಂಜೆ ಡಿಸಿಎಂ ಡಿಕೆಶಿವಕುಮಾರ್ ಜತೆ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಅವರು ಬೆಳ್ಳಂಬೆಳಗ್ಗೆಯೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಜನಸ್ಪಂದನ ಕಾರ್ಯಕ್ರಮಕ್ಕೆ ಡಿಕೆಶಿಗೆ ಆಹ್ವಾನ; ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಫಿಕ್ಸಾ?
4.ಯಾದಗಿರಿಯಲ್ಲಿ ಚಂದ್ರಯಾನದ ಜೋಡಿ ಮೋಡಿ: ಮಕ್ಕಳಿಗೆ ವಿಕ್ರಂ, ಪ್ರಗ್ಯಾನ್ ಹೆಸರು
ಯಾದಗಿರಿ: ಭಾರತದ ಚಂದ್ರಯಾನ್ 3 (Chandrayaan 3) ಯಶಸ್ಸು ದೇಶದ ಪ್ರತಿಯೊಬ್ಬರನ್ನೂ ಪ್ರಭಾವಿಸಿದೆ ಅನ್ನುವುದನ್ನು ಪ್ರೂವ್ ಮಾಡುವುದಕ್ಕೆ ಈ ಒಂದೇ ಉದಾಹರಣೆ ಸಾಕು. ಯಾದಗಿರಿಯಲ್ಲಿ ಕುಟುಂಬವೊಂದು ನವಜಾತ ಶಿಶುಗಳಿಗೆ ವಿಕ್ರಮ್ ಮತ್ತು ಪ್ರಜ್ಞಾನ್ ಎಂದು ಹೆಸರಿಟ್ಟು ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ತಮಿಳ್ನಾಡಿನ ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ಅಗ್ನಿ ಅವಘಡ – 10 ಪ್ರಯಾಣಿಕರು ಸಜೀವ ದಹನ
ಇತ್ತೀಚೆಗಷ್ಟೇ ಒಡಿಶಾದ ಬಾಲಾಸೋರ್‌ನಲ್ಲಿ 3 ರೈಲುಗಳ ನಡುವೆ ಭೀಕರ ರೈಲು ಅಪಘಾತ ಸಂಭವಿಸಿ 300 ಅಧಿಕ ಜನ ಮೃತಪಟ್ಟಿದ್ದರು. ಇದೀಗ ಮಧುರೈ ಸಮೀಪ ಪ್ರವಾಸಿ ರೈಲಿಗೆ ಬೆಂಕಿ ತಗುಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 10 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರೈಲಿನೊಳಗೆ ಸಿಲಿಂಡರ್ ಇಟ್ಟು ಅಡುಗೆ ಮಾಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ವಿಸ್ತಾರ ಅಂಕಣ: ಎರಡು ಬಾರಿ ಸಂಸದರಾದವರ ವಿಸಿಟಿಂಗ್ ಕಾರ್ಡ್‌ನಲ್ಲಿ ಅದರ ಉಲ್ಲೇಖವೇ ಇರಲಿಲ್ಲ!ಸಿಂಗಪುರದ ಅಭಿವೃದ್ಧಿ ಎಂದರೆ ಕಟ್ಟಡ, ರಸ್ತೆ ನಿರ್ಮಾಣ ಅಲ್ಲವೇ ಅಲ್ಲ. ಅದು ಒಂದು ಭಾಗ ಮಾತ್ರ. ಮುಖ್ಯವಾಗಿ ಜನರ ನಡವಳಿಕೆ, ಶಿಸ್ತು ಸಿಂಗಪುರ ಮಾದರಿ. ಭ್ರಷ್ಟಾಚಾರ ಅಲ್ಲಿ ಇಲ್ಲವೇ ಇಲ್ಲ ಎಂದಲ್ಲ. ಆದರೆ ರಾಜಕಾರಣಿಗಳು ತೋರುವ ಪಾರದರ್ಶಕತೆಯ ಕಾರಣಕ್ಕೆ ಜನಸಾಮಾನ್ಯರಲ್ಲೂ ಭ್ರಷ್ಟಾಚಾರದ ಕುರಿತು ತಿರಸ್ಕಾರ ಭಾವನೆಯೇ ಇದೆ ಎನ್ನುತ್ತಾರೆ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
7. Toby Movie: ʻಟೋಬಿʼ ಚೆನ್ನಾಗಿಲ್ಲ ಅಂದಿದ್ದಕ್ಕೆ ಮಹಿಳೆಗೆ ಅವಾಚ್ಯ ನಿಂದನೆ; ದುಷ್ಕರ್ಮಿ ವಿರುದ್ಧ ನೆಟ್ಟಿಗರ ಆಕ್ರೋಶ
8. Viral video: ಮುಸ್ಲಿಂ ಮಕ್ಕಳಿಗೆ ಸಹಪಾಠಿಗಳಿಂದ ಕಪಾಳಮೋಕ್ಷ; ಟೀಚರ್ ವಿರುದ್ಧ ಆಕ್ರೋಶ
9. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೇ ಮುನ್ನಡೆ ವರದಿ: ಖರ್ಗೆ ಗರಂ, 20 ಬರಲೇಬೇಕು ಎಂದು ಆರ್ಡರ್
10. Oldest doctor: 101 ವರ್ಷದ ಜಗತ್ತಿನ ಅತ್ಯಂತ ಹಿರಿಯ ವೈದ್ಯ! ಇವರಿಗೆ ಈಗಲೂ ಕಾಯಕವೇ ಕೈಲಾಸ!