Site icon Vistara News

ವಿಸ್ತಾರ TOP 10 NEWS : ಮಕ್ಕಳಿಗೆ ಮೋದಿ ಮಾಸ್ಟರ್‌ ಪಾಠದಿಂದ, ಅದಾನಿ ಷೇರು ಆಘಾತದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-Modi pariksha pe charcha to adani share collapse and more news

1. Pariksha pe charcha 2023: ಹಾರ್ಡ್​ ವರ್ಕ್​​ ಮುಖ್ಯವೋ? ಸ್ಮಾರ್ಟ್​ ವರ್ಕ್​ ಮುಖ್ಯವೋ?; ಪ್ರಧಾನಿ ಮೋದಿ ಕೊಟ್ಟ ಉತ್ತರ ಹೀಗಿದೆ
ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಹೇರಬೇಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲಕರಿಗೆ ಹೇಳಿದರು. ಅವರು ಇಂದು ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ‘ಪರೀಕ್ಷಾ ಪೆ ಚರ್ಚಾ’ (Pariksha pe charcha 2023) ಸಂವಾದದಲ್ಲಿ ಮಾತನಾಡಿದರು. ಬೋರ್ಡ್​ ಪರೀಕ್ಷೆ ಎದುರಿಸಲಿರುವ, ಆಯ್ದ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರೊಂದಿಗೆ ಚರ್ಚೆ ನಡೆಸಿದ ಅವರು, ಮುಂಬರುವ ಪರೀಕ್ಷೆ ದೃಷ್ಟಿಯಿಂದ ಮಕ್ಕಳು, ಪಾಲಕರು, ಶಿಕ್ಷಕರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Pariksha Pe charcha 2023: ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ‘ಇದು ಔಟ್​ ಆಫ್​ ಸಿಲೇಬಸ್​’ ಎಂದ ಪ್ರಧಾನಿ ಮೋದಿ

2. Karnataka Election: ಯಡಿಯೂರಪ್ಪ ಎಲ್ಲರೂ ಒಪ್ಪಿರುವ ಧೀಮಂತ ನಾಯಕ; ಅವರಿಗೆ ಕಲ್ಲು ಹೊಡೆದರೆ ಬಿಜೆಪಿಗೆ ನಷ್ಟ: ವಿಜಯೇಂದ್ರ
ಬಿ.ಎಸ್. ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆಗಿ ಎಲ್ಲ ವರ್ಗದ ಜನರು ಒಪ್ಪಿಕೊಂಡ ಒಬ್ಬ ಧೀಮಂತ ‌ನಾಯಕ, ರೈತ ನಾಯಕ, ಒಬ್ಬ ಹೋರಾಟಗಾರ. ಯಡಿಯೂರಪ್ಪನವರಿಗೆ ಕಲ್ಲು ಎಸೆದರೆ ಅದು‌ ಪಕ್ಷಕ್ಕೆ ಹೊಡೆತ ಬೀಳುತ್ತದೆ. ಇದು‌ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಇಂಡಿ ತಾಲೂಕಿನ ಹೊರ್ತಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election: ಬಿಜೆಪಿಗೆ ಬಿಎಸ್‌ವೈ ಅನಿವಾರ್ಯ; ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಿ: ವರಿಷ್ಠರಿಗೆ 35ಕ್ಕೂ ಹೆಚ್ಚು ಶಾಸಕರ ಪತ್ರ

3. Adani Stocks : ವಂಚನೆಯ ಆರೋಪ, ಅದಾನಿ ಗ್ರೂಪ್‌ ಷೇರುಗಳಿಗೆ 46,000 ಕೋಟಿ ರೂ. ನಷ್ಟ, ಸಮೂಹ ಹೇಳಿದ್ದೇನು?
ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳು ಬುಧವಾರ ನಷ್ಟಕ್ಕೀಡಾಗಿದೆ. ಅಮೆರಿಕ ಮೂಲದ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಮೂಹವು (Gautam Adani) ಷೇರು ವ್ಯವಹಾರದಲ್ಲಿ ಅಕ್ರಮ ನಡೆಸಿದೆ ಎಂದು ಆರೋಪಿಸಿದೆ. ಇದರ ಬೆನ್ನಲ್ಲೇ ಗ್ರೂಪ್‌ನ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ( Adani Stocks) ಕಳೆದ ಎರಡು ವರ್ಷಗಳಿಂದ ಹಿಂಡೆನ್‌ಬರ್ಗ್‌ನ ವಿಧಿವಿಜ್ಞಾನ ಆರ್ಥಿಕ ಸಂಶೋಧನಾ ತಂಡ ತನ್ನ ತನಿಖೆಯನ್ನು ನಡೆಸುತ್ತಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. BBC Documentary On Modi: ದೆಹಲಿ ವಿವಿಯಲ್ಲಿ ಸಾಕ್ಷ್ಯಚಿತ್ರ ವೀಕ್ಷಣೆ, ಸೆಕ್ಷನ್‌ 144 ಜಾರಿ, 24 ವಿದ್ಯಾರ್ಥಿಗಳ ಬಂಧನ
ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿಯಾಗಿ ಚಿತ್ರಿಸಿರುವ ಇಂಡಿಯಾ: ದಿ ಮೋದಿ ಕ್ವಶ್ಚನ್‌ (India The Modi Question) ಬಿಬಿಸಿ ಡಾಕ್ಯುಮೆಂಟರಿಯ (BBC Documentary On Modi) ವೀಕ್ಷಣೆಗೆ ದೆಹಲಿ ವಿಶ್ವವಿದ್ಯಾಲಯದಲ್ಲೂ ವ್ಯವಸ್ಥೆ ಮಾಡಲಾಗಿದ್ದು, ವಿವಿ ಆವರಣದಲ್ಲಿ ಸೆಕ್ಷನ್‌ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಾಗೆಯೇ, ಕಾನೂನು ಸುವ್ಯವಸ್ಥೆ ಪಾಲನೆ ದೃಷ್ಟಿಯಿಂದ ಪೊಲೀಸರು 24 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಕೊಟ್ಟ ಕುದುರೆ ಏರಲಾಗದ HDK; ಸಿದ್ಧೌಷಧ ಅರೆದಿದ್ದು ಸಿದ್ದು: ಸಮ್ಮಿಶ್ರ ಸರ್ಕಾರದ ಪತನ ಕುರಿತು ಮಾಜಿ ಸಿಎಮ್‌ಗಳ ಜಟಾಪಟಿ
ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಪತನದ ವಿಚಾರದಲ್ಲಿ ಇಬ್ಬರು ಮಾಜಿ ಸಿಎಂಗಳ ನಡುವೆ ಜಟಾಪಟಿ ನಡೆದಿದೆ. ಕುಮಾರಸ್ವಾಮಿ ಕೊಟ್ಟ ಕುದುರೆಯನ್ನು ಏರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ಧರ್ಮಸ್ಥಳದ ಸಿದ್ಧವನದಲ್ಲಿ ಕುಳಿತು ಸರ್ಕಾವನ್ನು ಬೀಳಿಸಿದ್ದು ಸಿದ್ದರಾಮಯ್ಯ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Fake Marks Card: ದೇಶದ ವಿವಿಗಳ ನಕಲಿ ಮಾರ್ಕ್ಸ್‌ ಕಾರ್ಡ್‌ ಜಾಲ ಭೇದಿಸಿದ ಸಿಸಿಬಿ; 30 ಸಾವಿರಕ್ಕೆ ಸಿಗುತ್ತಿತ್ತು ವಿವಿ ಪದವಿ!
ದೇಶದ‌ ಪ್ರತಿಷ್ಠಿತ ವಿವಿಗಳ ನಕಲಿ ಮಾರ್ಕ್ಸ್ ಕಾರ್ಡ್‌ಗಳ (Fake Marks Card) ಮಾರಾಟ ಜಾಲದ‌ ಮೇಲೆ‌ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದೇಶದ ೧೨ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಸುಮಾರು 6,800ಕ್ಕೂ ಅಧಿಕ ಮಾರ್ಕ್ಸ್ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, 25ರಿಂದ 30 ಸಾವಿರಕ್ಕೆ ಈ ಜಾಲದವರು ಪದವಿ ಪ್ರಮಾಣ ಪತ್ರವನ್ನು ನೀಡುತ್ತಿದ್ದರು ಎಂಬ ಸಂಗತಿಯೂ ಬಯಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. JDS Karnataka : ಎಲ್ಲ ಸೈಲೆಂಟಾಗಿರಿ;‌ ನಾನೇ ಸರಿಮಾಡುವೆ: ಹಾಸನ ಸಮಸ್ಯೆ ಬಗೆಹರಿಸಲು ಸ್ವತಃ ಮೈದಾನಕ್ಕಿಳಿದ ಎಚ್‌.ಡಿ. ದೇವೇಗೌಡ
ಹಾಸನ ಜೆಡಿಎಸ್‌ನಲ್ಲಿ ಉದ್ಭವಿಸಿರುವ ಸಂಘರ್ಷವನ್ನು ಸರಿಪಡಿಸಲು (JDS Karnataka) ಸ್ವತಃ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರೇ ಮೈದಾನಕ್ಕಿಳಿದಿದ್ದಾರೆ. ತಾನೇ ಸಮಸ್ಯೆಯನ್ನು ಬಗೆಹರಿಸುತ್ತೇನೆ, ಎಲ್ಲರೂ ಮಾತನಾಡುವ ಬದಲು ಸುಮ್ಮನಿರಿ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Ayush Doctors Demands: ಆಯುಷ್ ವೈದ್ಯರ ಕೆಲಸಕ್ಕೆ ಸಿಗದ ಸಮಾನ ವೇತನ; ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ ಪಟ್ಟು
ಓದಿದ್ದು ಒಂದೇ ಮಾದರಿಯ ಪಠ್ಯ, ನಿರ್ವಹಿಸುತ್ತಿರುವುದು ಒಂದೇ ಮಾದರಿಯ ಕೆಲಸವಾದರೂ ವೇತನದಲ್ಲಿ ಅಜಾಗಜಾಂತರ ವ್ಯತ್ಯಾಸ ಇದೆ. ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸಿದರೂ ಆಯುಷ್‌ ವೈದ್ಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗದೆ (Ayush Doctors Demands) ಪರದಾಡುವಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. BRO Road At LAC: ಚೀನಾಗೆ ತಿರುಗೇಟು ನೀಡಲು ಲಡಾಕ್‌ ಗಡಿಯಲ್ಲಿ ಭಾರತ 135 ಕಿ.ಮೀ ಹೆದ್ದಾರಿ ನಿರ್ಮಾಣ
ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ಸೈನಿಕರನ್ನು ನಿಯೋಜಿಸಿ ಉಪಟಳ ಮಾಡುವ ಕುತಂತ್ರಿ ಚೀನಾ, ಗಡಿ ಬಳಿ ರಸ್ತೆ, ಗ್ರಾಮಗಳನ್ನು ನಿರ್ಮಿಸುವ ಮೂಲಕವೂ ಉದ್ಧಟತನ ಮಾಡುತ್ತದೆ. ಇದಕ್ಕೆ ಭಾರತ ತಿರುಗೇಟು ನೀಡುತ್ತಿದ್ದು, ಎಲ್‌ಎಸಿ ಬಳಿ 135 ಕಿ.ಮೀ ಹೆದ್ದಾರಿ (BRO Road At LAC) ನಿರ್ಮಿಸುವ ಕಾರ್ಯ ಆರಂಭಿಸಿದೆ. ಆ ಮೂಲಕ ವ್ಯೂಹಾತ್ಮಕವಾಗಿಯೂ ಚೀನಾಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Bal Puarskar: ಬೆಂಗಳೂರಿನ 8 ವರ್ಷದ ಬಾಲಕ ರಿಷಿಗೆ ರಾಷ್ಟ್ರೀಯ ಬಾಲ ಪುರಸ್ಕಾರ, ಈತನ ಐಕ್ಯು ಐನ್‌ಸ್ಟೀನ್‌ಗಿಂತ ಹೆಚ್ಚು
ಆಟವಾಡುವ ವಯಸ್ಸಿನಲ್ಲಿ ಆ್ಯಪ್ ಡೆವಲಪ್‌ ಮಾಡಿದ ಬೆಂಗಳೂರು ಮೂಲದ, ಎಂಟು ವರ್ಷದ ಪೋರ ರಿಷಿ ಶಿವಪ್ರಸನ್ನಗೆ 2023ನೇ ಸಾಲಿನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (Bal Puarskar) ದೊರೆತಿದೆ. ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಿಷಿ ಪ್ರಸನ್ನ ಸೇರಿ 11 ಬಾಲಕರಿಗೆ ಬಾಲ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಹಾಗೆಯೇ, ಈತನಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಶುಭ ಹಾರೈಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version