1. PM Modi Parliament Speech: ಪ್ರತಿಪಕ್ಷಗಳ ಆರೋಪಗಳಿಗೆ ಗೇಲಿ ಮೂಲಕವೇ ಗೋಲಿ ಹೊಡೆದ ಮೋದಿ!
ಪ್ರಧಾನಿ ನರೇಂದ್ರ ಮೋದಿ ಅವರು ಇರುವುದೇ ಹಾಗೆ. ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡುವಾಗ, ಚಾಟಿಯೇಟು ಬೀಸುವಾಗ ವ್ಯಂಗ್ಯ, ಟೀಕೆ, ಗೇಲಿ, ವಿಮರ್ಶೆ, ತಿರುಗೇಟು, ಕುಚೋದ್ಯ, ಪರಾಮರ್ಶೆ, ವಿಡಂಬನೆ ಇದ್ದೇ ಇರುತ್ತವೆ. ಸ್ವಲ್ಪವಾದರೂ ಕಾಲೆಳೆಯದೆ ಪ್ರತಿಪಕ್ಷಗಳನ್ನು ಮೋದಿ ಸುಮ್ಮನೆ ಬಿಡುವುದಿಲ್ಲ. ಅಷ್ಟರಮಟ್ಟಿಗೆ ಅವರು ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುತ್ತಾರೆ. ಇದಕ್ಕೆ ಬುಧವಾರ ಸಂಸತ್ತಿನಲ್ಲಿ (PM Modi Parliament Speech) ರಾಷ್ಟ್ರಪತಿಯವರ ವಂದನಾ ನಿರ್ಣಯಕ್ಕೆ ಉತ್ತರಿಸುವ ವೇಳೆ ಒಂದೂವರೆ ತಾಸಿನ ನಿರರ್ಗಳ ಭಾಷಣವೇ ಸಾಕ್ಷಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: PM Modi Parliament Speech: ಈಗ ಬೇರೆ ದೇಶಗಳು ಭಾರತವನ್ನು ಅವಲಂಬಿಸಿವೆ! ನಮ್ಮದು 5ನೇ ದೊಡ್ಡ ಆರ್ಥಿಕತೆ: ಮೋದಿ
2. PM Modi Parliament Speech: ಭಾರತದಲ್ಲಿ ಕೆಲವರಿಗೆ ಹಾರ್ವರ್ಡ್ ವಿವಿ ಶೋಕಿ, ರಾಹುಲ್ ಗಾಂಧಿಗೆ ಮೋದಿ ತಿರುಗೇಟು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ (ಜನವರಿ ೭) ಸಂಸತ್‌ನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರಸ್ತಾಪಿಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕೆ ನರೇಂದ್ರ ಮೋದಿ (PM Modi Parliament Speech) ಅವರೂ ಇದೇ ವಿವಿ ಪ್ರಸ್ತಾಪಿಸಿ ತಿರುಗೇಟು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: PM Modi Parliament Speech: ಒಬ್ಬ ಮಹಾನ್ ನಾಯಕನಿಂದ ರಾಷ್ಟ್ರಪತಿಗೆ ಅವಮಾನ: ರಾಹುಲ್ ವಿರುದ್ಧ ಮೋದಿ ಆರೋಪ
3. RBI MPC meet 2023: ರೆಪೋ ದರ 6.5%ಕ್ಕೆ ಏರಿಕೆ, ಮತ್ತಷ್ಟು ಏರಲಿದೆ ಸಾಲದ ಇಎಂಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ವರ್ಷದ ಮೊದಲ ಹಣಕಾಸು ನೀತಿ ವರದಿಯನ್ನು ಮಂಡಿಸಿದ್ದು, ರೆಪೋ ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದಾರೆ. ಹಣದುಬ್ಬರವನ್ನು ಅಥವಾ ಬೆಲೆ ಏರಿಕೆಯನ್ನು ನಿಯಂತ್ರಿಸಲು ಬಡ್ಡಿ ದರ ಏರಿಕೆ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: RBI MPC Meet 2023 : ರೆಪೊ ದರ ಏರಿಕೆಯ ಪರಿಣಾಮ ನಿಮ್ಮ ಗೃಹಸಾಲ ಇಎಂಐ ಎಷ್ಟು ದುಬಾರಿಯಾಗಲಿದೆ? ಇಲ್ಲಿದೆ ಡಿಟೇಲ್ಸ್
4. B.Y. Vijayendra: ಕಾಂಗ್ರೆಸ್ ನಾಯಕರಿಗೆ ಅಡ್ರೆಸ್ ಇಲ್ಲ; ನಮ್ಮವರು ವಿಶ್ವ ನಾಯಕರು: ಟೀಕೆಗೆ ಬಿ.ವೈ. ವಿಜಯೇಂದ್ರ ಪ್ರತ್ಯುತ್ತರ
ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ ನಡೆಸುವ ಹೊಣೆ ನೀಡಿದ ದಿನವೇ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಬಿ.ವಿಜಯೇಂದ್ರ, ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Brahmin CM issue : ಬ್ರಾಹ್ಮಣ ಸಿಎಂ ಹೇಳಿಕೆ; ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ, ಆಕ್ರೋಶ
ರಾಜ್ಯದಲ್ಲಿ ಮುಂದಿನ ಸಿಎಂ ಆಗಿ ಬ್ರಾಹ್ಮಣರೊಬ್ಬರನ್ನು ಮಾಡುವ ಷಡ್ಯಂತ್ರ (Brahmin CM issue) ಬಿಜೆಪಿಯಲ್ಲಿ ನಡೆದಿದೆ ಎಂಬ ಹೇಳಿಕೆ ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಗದಗದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಜತೆಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗದಗ ಜಿಲ್ಲಾ ಬ್ರಾಹ್ಮಣರ ಸಂಘದಿಂದ ಪ್ರತಿಭಟನೆ ನಡೆದಿದ್ದು, ನಗರದ ಗಾಂಧಿ ಸರ್ಕಲ್‌ನಲ್ಲಿ ಕುಮಾರಸ್ವಾಮಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Highway Projects: ಕರ್ನಾಟಕದ 6 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ₹3,582 ಕೋಟಿ ನೀಡಿದ ಕೇಂದ್ರ ಸರ್ಕಾರ: ನಿತಿನ್ ಗಡ್ಕರಿ ಘೋಷಣೆ
ಕರ್ನಾಟಕ ರಾಜ್ಯದ ವಿವಿಧೆಡೆ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಅಗಲೀಕರಣದ ಸಲುವಾಗಿ ₹3,582 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಕುರಿತು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. D.K. Shivakumar: ಆಸ್ತಿಯಲ್ಲಿ ಏರಿಕೆ ಪ್ರಕರಣ; ಮಗಳು ಐಶ್ವರ್ಯಳಿಗೂ ಬಂದಿದೆ ಸಿಬಿಐ ನೋಟಿಸ್ ಎಂದ ಡಿಕೆಶಿ
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದೆರಡು ವರ್ಷದಿಂದ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐನಿಂದ ತನಿಖೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ (D.K. Shivakumar) ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಪುತ್ರಿ ಐಶ್ವರ್ಯಳಿಗೆ ಸಿಬಿಐ ನೋಟಿಸ್ (CBI Notice) ಜಾರಿ ಮಾಡಿದ್ದು, ಹಲವು ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿದೆ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಧ್ಯೆ ಈ ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದ್ದು, ಕೆಲವೇ ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. JDS Politics: ಎಚ್.ಡಿ. ಕುಮಾರಸ್ವಾಮಿ ತಂತ್ರವನ್ನೇ ಬಳಸಿ ಹಾಸನ ಟಿಕೆಟ್ ಕೇಳಿದ ಎಚ್.ಡಿ. ರೇವಣ್ಣ: ಬಿಗ್ ಬ್ರದರ್ ಹೊಸ ವರಸೆ
ವಿಧಾನಸಭೆ ಚುನಾವಣೆಯಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಎಚ್.ಡಿ. ಕುಮಾರಸ್ವಾಮಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಹೋದರ ಎಚ್.ಡಿ. ರೇವಣ್ಣ ಅಚ್ಚರಿಯ ಹೆಜ್ಜೆ ಇಟ್ಟಿದ್ದು, ಹೊಳೆನರಸಿಪುರದ ಜತೆಗೆ ಹಾಸನದಿಂದಲೂ ತಾನೇ ಸ್ಪರ್ಧಿಸುತ್ತೇನೆ (JDS Politics) ಎಂಬ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Turkey Earthquake: ಭೂಕಂಪದಲ್ಲಿ ಮೃತರ ಸಂಖ್ಯೆ 11 ಸಾವಿರಕ್ಕೇರಿಕೆ, ಪರಿಹಾರಕ್ಕೆ ಭಾರತದಿಂದ 5 ವಿಮಾನ ರವಾನೆ
ಎರಡು ಪ್ರಬಲ ಭೂಕಂಪಗಳ (Turkey Earthquake) ಪರಿಣಾಮ ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾ ದೇಶಗಳಲ್ಲಿ ವಿನಾಶ ತಾಂಡವವಾಡಿದೆ. ದುರಂತದ ಪ್ರಮಾಣ ಈಗಷ್ಟೇ ಸ್ಪಷ್ಟವಾಗುತ್ತಿದ್ದು, ಸಾವಿನ ಸಂಖ್ಯೆ 11,000 ಮೀರಿದೆ. ಅವಶೇಷಗಳ ನಡುವಿನಿಂದ ಬದುಕುಳಿದಿರಬಹುದಾದವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹೆಣಗಾಡುತ್ತಿದ್ದಾರೆ. ಈ ಪೈಕಿ ಟರ್ಕಿಯೊಂದರಲ್ಲೇ 8500 ಜನರು ಮೃತಪಟ್ಟಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Turkey Earthquake: ಭೂಕಂಪದಲ್ಲಿ ಮೃತಪಟ್ಟ ಟರ್ಕಿಯ ಫುಟ್ಬಾಲ್ ಆಟಗಾರ
10. Viral Video: ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್ ಪತ್ನಿ
ಯುಎಸ್ ಅಧ್ಯಕ್ಷ ಜೋ ಬೈಡೆನ್ ಪತ್ನಿ, ಪ್ರಥಮ ಮಹಿಳೆ (US First Lady) ಜಿಲ್ ಬೈಡೆನ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪತಿ ಡೌಗ್ ಎಂಹಾಫ್ ಅವರ ತುಟಿಗೆ ಮುತ್ತಿಟ್ಟಿದ್ದಾರೆ (Jill Biden kissed Doug Emhoff). ಈ ವಿಡಿಯೊವನ್ನು ಬೆನ್ನಿ ಜಾನ್ಸನ್ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Shivarajkumar: ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ: ಸಮಾಧಾನ ಮಾಡಿದ ಬಾಲಯ್ಯ
- Parliament Budget Session: 50 ಸಾವಿರ ರೂ. ಮೌಲ್ಯದ ದುಬಾರಿ ಸ್ಕಾರ್ಫ್ ಧರಿಸಿದ ಖರ್ಗೆ, ಬಿಜೆಪಿ ತೀವ್ರ ವಾಗ್ದಾಳಿ
- Sidharth Kiara Wedding: ಸಾರ್ವಜನಿಕವಾಗಿ ಕಾಣಿಸಿಕೊಂಡ ನವದಂಪತಿ ಕಿಯಾರಾ-ಸಿದ್ಧಾರ್ಥ್
- BIFFES 2023: ಮಾರ್ಚ್ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂದ ಸಚಿವ ಆರ್. ಅಶೋಕ್
- PFI Threat: ಮೇಲುಕೋಟೆ ಯತಿರಾಜ ಸ್ವಾಮೀಜಿಗೆ PFIನಿಂದ ಜೀವ ಬೆದರಿಕೆ: ಕೇಂದ್ರ ಸರ್ಕಾರದಿಂದ Y ಶ್ರೇಣಿ ಭದ್ರತೆ
- Nagpur Pitch: ಭಾರಿ ಚರ್ಚೆಗೆ ಗ್ರಾಸವಾದ ನಾಗ್ಪುರ ಪಿಚ್
- Geetha Bharathi Bhat: 30 ಕೆಜಿ ತೂಕ ಇಳಿಸಿಕೊಂಡ ʻಬ್ರಹ್ಮಗಂಟುʼ ಗುಂಡಮ್ಮ