ಬೆಂಗಳೂರು: ನಾಡಿನೆಲ್ಲೆಡೆ ಕಂಪನ ಸೃಷ್ಟಿಸಿದ್ದ ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಭಾನುವಾರ ಅನೇಕ ತಿರುಗವುಗಳನ್ನು ಪಡೆದಿದೆ. ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆದಿದ್ದು, ತನಿಖೆ ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದ್ದು, ಅಪಾರ ಹಾನಿ ಸಂಭವಿಸಿದೆ. ಅಕ್ರಮವಾಗಿ ನಿರ್ಮಾಣವಾಗಿದ್ದ ನೊಯ್ಡಾದ ಅವಳಿ ಕಟ್ಟಡಗಳು ಕೇವಲ ಒಂಭತ್ತು ಸೆಕೆಂಡ್‌ಗಳಲ್ಲಿ ನೆಲಸಮವಾಗಿವೆ ಎಂಬುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Murugha Shri | ಬಾಲಕಿಯರ ಮೆಡಿಕಲ್ ಟೆಸ್ಟ್, ಸೋಮವಾರ ಜಡ್ಜ್ ಮುಂದೆ ಹೇಳಿಕೆ; ಮುರುಘಾಶ್ರೀ ಬಂಧನ ಆಗುತ್ತಾ?
ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ (Murugha Shri) ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿರುವ ಸಂತ್ರಸ್ತ ಬಾಲಕಿಯರನ್ನು ಭಾನುವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅವರ ಹೇಳಿಕೆಯನ್ನು ದಾಖಲಿಸಲು ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ. ಈ ವೇಳೆ, ಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಸಂತ್ರಸ್ತ ಬಾಲಕಿಯರು ಹೇಳಿಕೆಯನ್ನು ದಾಖಲಿಸಿದರೆ ಶ್ರೀಗಳ ಬಂಧನ ನಡೆಯುವ ಸಾಧ್ಯತೆ ಇರುತ್ತದೆ. ಶ್ರೀಗಳ ವಿರುದ್ಧ ಪ್ರಕರಣವು ಶನಿವಾರ ದಾಖಲಾಗುತ್ತಿದ್ದಂತೆ ಭಾರೀ ಸಂಚನಲನ ಸೃಷ್ಟಿಸಿದ ಈ ಪ್ರಕರಣವು ಅನೇಕ ತಿರುವುಗಳನ್ನು ಪಡೆದುಕೊಂಡಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ | ಮುರುಘಾ ಶ್ರೀಗಳ ವಿರುದ್ಧದ ಪ್ರಕರಣದಲ್ಲಿ ವಿಚಾರಣೆ ದಾರಿ ತಪ್ಪುತ್ತಿದೆ ಎಂದ ದೂರುದಾರರು
2. Heavy Rain | ರಾಜ್ಯದಲ್ಲಿ ಮುಂದುವರಿದ ʻಮಳೆ ರಗಳೆʼ; ತ್ವರಿತ ಪರಿಹಾರಕ್ಕೆ ಸಿಎಂ ಬೊಮ್ಮಾಯಿ ಸೂಚನೆ
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ (Heavy Rain) ಜನರು ನಲುಗಿ ಹೋಗಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಸೇತುವೆಗಳೆಲ್ಲವೂ ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಮಳೆ ಬಂದರೂ ಕಷ್ಟ, ಬರದೇ ಇದ್ದರೆ ನಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಳೆದೆರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಬೆಳೆ ನಾಶವಷ್ಟೇ ಅಲ್ಲ, ಬದಲಾಗಿ ಮನೆಯ ಚಾವಣಿ ಕುಸಿತದ ಜತೆಗೆ ಹಲವು ಮನೆಗಳು ಮುಳುಗಡೆಯಾಗಿವೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ | Rain News | ಬೆಂಗಳೂರು-ಮೈಸೂರು ದಶಪಥ ಅಸ್ತವ್ಯಸ್ತ: ತೋಟಕ್ಕೆ ನುಗ್ಗಿದ ನೀರು, ಹೋಟೆಲ್ ನಾಶ
3. Twin Towers Demolition | 9 ಸೆಕೆಂಡ್‌ಗಳಲ್ಲಿ 70 ಕೋಟಿ ವೆಚ್ಚದ ನೋಯ್ಡಾದ ಅವಳಿ ಕಟ್ಟಡ ನೆಲಸಮ!
ಸೆಕ್ಟರ್ ೯೩ ಎಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಅವಳಿ ಕಟ್ಟಡಗಳನ್ನು (Twin Towers Demolition) ಸುಪ್ರೀಂ ಕೋರ್ಟ್ ಆದೇಶದಂತೆ ಭಾನುವಾರ ಮಧ್ಯಾಹ್ನ ೨.೩೧ಕ್ಕೆ ನೆಲಸಮಗೊಳಿಸಲಾಗಿದೆ. ಸುಮಾರು ೭೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಎರಡೂ ಗಗನಚುಂಬಿ ಕಟ್ಟಡಗಳನ್ನು ೨೦ ಕೋಟಿ ರೂ. ವ್ಯಯಿಸಿ, ೩,೭೦೦ ಕೆಜಿ ಸ್ಫೋಟಕಗಳನ್ನು ಬಳಸಿ ಧರೆಗುರುಳಿಸಲಾಗಿದೆ.
೨೦೦೫ರಲ್ಲಿ ನಿರ್ಮಾಣಗೊಂಡಿದ್ದ ಅಪೆಕ್ಸ್ ಹಾಗೂ ಸೆಯೇನ್ ಬಹುಮಹಡಿ ಕಟ್ಟಡಗಳು ಇತಿಹಾಸದ ಪುಟ ಸೇರಿದಂತಾಗಿವೆ. ಅಪೆಕ್ಸ್ ಕಟ್ಟಡವು ೧೦೨ ಮೀಟರ್ ಎತ್ತರ ಹಾಗೂ ೩೨ ಫ್ಲೋರ್‌ಗಳನ್ನು ಹೊಂದಿತ್ತು. ಸೆಯೇನ್ ಕಟ್ಟಡವು ೯೫ ಮೀಟರ್ ಎತ್ತರ ಹಾಗೂ ೨೯ ಫ್ಲೋರ್‌ಗಳನ್ನು ಹೊಂದಿತ್ತು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಕಟ್ಟಡಗಳನ್ನೇನೋ ಸುರಕ್ಷಿತವಾಗಿ ಕೆಡವಲಾಯಿತು. ಮುಂದಿನ ಪ್ರಕ್ರಿಯೆ ಏನು, ಕಟ್ಟಡಗಳೇನೋ ನೆಲಸಮವಾದವು, ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ. ಮುಂದಿನ ಪ್ರಮುಖ ಬೆಳವಣಿಗೆಗಳು ಹೀಗಿವೆ.
4. Mann ki Baat 2022 | ಕೋಲಾರದ ಬೃಹತ್ ರಾಷ್ಟ್ರಧ್ವಜ, ಬಾಗಲಕೋಟೆ ಕೆರೆಗೆ ಪ್ರಧಾನಿ ಮೋದಿ ಪ್ರಶಂಸೆ
ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ ಬೃಹತ್ ರಾಷ್ಟ್ರಧ್ವಜ ಪ್ರಧಾನಿ ಮೋದಿಯವರ ಗಮನ ಸೆಳೆದಿದೆ. ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಎಲ್ಲೆಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು ಎಂಬುದನ್ನು ತಮ್ಮ ಆಕಾಶವಾಣಿಯ ಮಾಸಿಕ ಕಾರ್ಯಕ್ರಮ “ಮನ್ ಕಿ ಬಾತ್ʼ (Mann ki Baat 2022)ನಲ್ಲಿ ವಿವರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೋಲಾರದ, ಲಿಮ್ಕಾ ದಾಖಲೆ ಬರೆದ ಬೃಹತ್ ರಾಷ್ಟ್ರಧ್ವಜದ ಪ್ರದರ್ಶನವನ್ನು ಉಲ್ಲೇಖಿಸಿದ್ದಾರೆ. (ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ) ಅದೇ ರೀತಿ ಕೇಂದ್ರ ಸರಕಾರದ ‘ಅಮೃತ ಸರೋವರ’ ಯೋಜನೆಯಲ್ಲಿ ಬಾಗಲಕೋಟ ಜಿಲ್ಲೆಯ ಬಿಳೆಕೆರೂರ್ ಗ್ರಾಮಸ್ಥರ ಪರಿಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. (ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ).
ಹೆಚ್ಚಿನ ಓದಿಗಾಗಿ: Mann Ki Baat 2022 | ಸಿರಿಧಾನ್ಯ ಬೆಳೆದು ಆದಾಯ ಗಳಿಸಿ: ರೈತರಿಗೆ ಪ್ರಧಾನಿ ಮೋದಿ ಸಲಹೆ
5. Congress President Election | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್ 17ಕ್ಕೆ; ಮತ ಎಣಿಕೆ 19ಕ್ಕೆ
ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಎಐಸಿಸಿ) ಅಧ್ಯಕ್ಷನ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 17ಕ್ಕೆ ಚುನಾವಣೆ ನಡೆಯಲಿದ್ದು, ಅದಾಗಿ ಎರಡು ದಿನಗಳ ನಂತರ ಅಂದರೆ ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ. ಈ ಸಂಬಂಧ ಸೆಪ್ಟೆಂಬರ್ 22ರಂದು ಅಧಿಸೂಚನೆ ಬಿಡುಗಡೆಯಾಗಲಿದ್ದು, ಸೆಪ್ಟೆಂಬರ್ 24ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹಾಗೇ, ನಾಮಪತ್ರ ಸಲ್ಲಿಸಲು ಕೊನೇ ದಿನಾಂಕ ಸೆಪ್ಟೆಂಬರ್ 30. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಕರ್ನಾಟಕದಲ್ಲಿ ʼಭಾರತ್ ಜೋಡೊʼ ಹೆಸರು ಬದಲು: ಲೋಗೊ ಬಿಡುಗಡೆ ಮಾಡಿದ ಕಾಂಗ್ರೆಸ್
ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಪ್ರಯುಕ್ತ ಕಾಂಗ್ರೆಸ್ ವತಿಯಿಂದ ದೇಶಾದ್ಯಂತ ಆಯೋಜಿಸಲಾಗಿರುವ ಭಾರತ್ ಜೋಡೊ ಯಾತ್ರಾ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಎಂದು ಹೆಸರು ಬದಲಿಸಲಾಗಿದೆ. ಅಕ್ಟೋಬರ್ 3ರಿಂದ ಕರ್ನಾಟಕದಲ್ಲಿ ಯಾತ್ರೆ ನಡೆಯಲಿದ್ದು, ಅಕ್ಟೋಬರ್ 19ರವರೆಗೆ 21 ದಿನ ಸಾಗಲಿದೆ. ಈ ಕುರಿತು ಹೊಸ ಲೋಗೊವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಭಾರತ ಒಗ್ಗೂಡಿಸಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದ ಐಕ್ಯತೆ ಯಾತ್ರೆ ನಡೆಯಲಿದೆ. ಈ ಪಾದಯಾತ್ರೆ ಜವಾಬ್ದಾರಿಯನ್ನು ಕಾಂಗ್ರೆಸ್ ವಹಿಸಿದ್ದರೂ ಇದು ಪಕ್ಷಾತೀತ ಯಾತ್ರೆಯಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಾತ್ರೆಯ ಸಂಚಾಲಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಉಪಸ್ಥಿತರಿದ್ದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. UPI Payment | ಆ್ಯಪ್ ಮೂಲಕ ಪೇಮೆಂಟ್ಸ್ ಮಾಡುವಾಗ ಎಚ್ಚರ ವಹಿಸಿ, ಇಲ್ಲದಿದ್ದರೆ ನಷ್ಟ ತಪ್ಪಿದ್ದಲ್ಲ!
ಭಾರತದಲ್ಲಿ ಈಗ ಆನ್‌ಲೈನ್ ಹಣ ಪಾವತಿ ಗರಿಷ್ಠ ಮಟ್ಟದಲ್ಲಿ ಬಳಕೆಯಾಗುತ್ತಿದೆ. ಈ ಎಲೆಕ್ಟ್ರಾನಿಕ್ ಪೇಮೆಂಟ್ ಸಿಸ್ಟಮ್‌ಗೆ ಯುಪಿಐ ಜೀವಾಳ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI)ನಿಂದಾಗಿ ದೇಶದಲ್ಲಿ ಡಿಜಿಟಲ್ ವ್ಯವಾಹಾರ ಸರಾಗವಾಗಿದೆ. ಇದರಿಂದ ಪೇಮೆಂಟ್ಸ್ ತುಂಬ ಸುಲಭವಾಗಿದೆ ಮತ್ತು ಎಲ್ಲರೂ ಅಂದರೆ ಡಿಜಿಟಲ್ ಅನಕ್ಷರಸ್ಥರೂ ಬಳಸುವಂತಾಗಲು ಸಾಧ್ಯವಾಗಿದೆ. ತಂತ್ರಜ್ಞಾನದಿಂದ ನಮ್ಮ ಬದುಕು ತುಂಬ ಸುಲಭವಾಗಿದೆ. ಆದರೆ, ಹಾಗೆಯೇ ಒಂದಿಷ್ಟು ಸವಾಲುಗಳೂ, ಅಪಾಯಗಳೂ ಇವೆ. ಒಂಚೂರು ಯಾಮಾರಿದರೂ ನಾವು ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. ವಿಸ್ತಾರ ವಿಶ್ಲೇಷಣೆ | ಕಟೀಲ್‌ಗೆ ಶುಭಾಶಯಗಳ ಮಹಾಪೂರ: ಮುಂದುವರಿಕೆಗೋ ಬೀಳ್ಕೊಡುಗೆಗೋ?
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿರುವ ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಗೆ ಭಾನುವಾರ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ವಿವಿಧ ಪತ್ರಿಕೆಗಳಲ್ಲಿ ಪೂರ್ಣಪುಟ ಜಾಹೀರಾತು ನೀಡುವುದರ ಜತೆಗೆ ಇಲ್ಲಿಯವರೆಗೆ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಮಗುಮ್ಮಾಗಿದ್ದವರೂ ಬಿಚ್ಚುಮನಸ್ಸಿನಿಂದ ಶುಭಾಶಯ ಕೋರಿದ್ದಾರೆ. ಈ ಅಚ್ಚರಿಯ ಶುಭಾಶಯ ಕೋರಿಕೆ ಹಿಂದಿನ ಚರ್ಚೆ, ಸಾಧ್ಯಾಸಾಧ್ಯತೆ ಕುರಿತ ಸಂಪೂರ್ಣ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ.
9. ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್: ಕೆ.ಎಚ್.ಮುನಿಯಪ್ಪ ಮನೆಗೆ ಸುರ್ಜೇವಾಲಾ ಭೇಟಿ
ದೇಶದಾದ್ಯಂತ ಹಿರಿಯ ನಾಯಕರು ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದಾರೆ. ಈ ನಡುವೆ ರಾಜ್ಯದ ಕೆಲ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡುವರೆಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಸಂಜಯ್ ನಗರದಲ್ಲಿರುವ ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷ ತ್ಯಜಿಸುವ ತೀರ್ಮಾನ ಮಾಡದಂತೆ ಮನವಿ ಮಾಡಿ, ಅಸಮಾಧಾನ ಶಮನಗೊಳಿಸುವ ಪ್ರಯತ್ನ ನಡೆಸಿದರು.
ಕೆ.ಎಚ್. ಮುನಿಯಪ್ಪ ಜತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ರಣಜಿತ್ ಸಿಂಗ್ ಸುರ್ಜೇವಾಲಾ ಅವರು, ಮುನಿಯಪ್ಪ ಅವರು ನನ್ನ ಹಿರಿಯ ಸಹೋದರ ಇದ್ದಂತೆ. ಅವರ ಮನೆ ನೋಡಬೇಕು ಎಂದು ಆಸೆಪಟ್ಟಿದ್ದೆ, ಹೀಗಾಗಿ ಮನೆಗೆ ಭೇಟಿ ನೀಡಿದ್ದೇನೆ ಎಂದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ | ರಾಹುಲ್ ಗಾಂಧಿ ಹೇಗೆಲ್ಲ ವರ್ತಿಸಿದ್ದಾರೆ ಎಂದು ಹೇಳಲಾಗದು; ಕಾಂಗ್ರೆಸ್ ಬಿಟ್ಟ ಮತ್ತೊಬ್ಬ ಹಿರಿಯ ನಾಯಕ !
10. Sunday Read | ಸಾನಿಚರ್ ಮೌಗ್ಲಿಯಾದನೇ? ಇದು ʼಜಂಗಲ್ ಬುಕ್ʼ ಹಿಂದಿನ ಸ್ಫೂರ್ತಿ ಕಥೆ!
ಬಹಳಷ್ಟು ಮಂದಿಗೆ ದೀನಾ ಸಾನಿಚರ್ ಹೆಸರು ಕೇಳಿ ಗೊತ್ತಿರಲಿಕ್ಕಿಲ್ಲ, ಯಾಕೆಂದರೆ ಯಾರೇ ಆದರೂ ಬಹಳ ಸುಲಭವಾಗಿ ಮರೆತುಬಿಡುವಂಥವನು ಅವನು. ಆದರೆ, ಬಹಳಷ್ಟು ಮಂದಿ ರುಡ್ಯಾರ್ಡ್ ಕಿಪ್ಲಿಂಗ್ ಬರೆದ ʻದಿ ಜಂಗಲ್ ಬುಕ್ʼ ಕಾದಂಬರಿಯ ಮೌಗ್ಲಿಯನ್ನು ಮರೆಯಲು ಸಾಧ್ಯವಿಲ್ಲವಲ್ಲ!
ಅರೆ, ಈ ಮೌಗ್ಲಿಗೂ ದೀನಾ ಸಾನಿಚರ್‌ಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎನ್ನುವಿರಾ? ದೀನಾ ಸಾನಿಚರ್ ಎಂಬ ಸಾಮಾನ್ಯರಲ್ಲಿ ಸಾಮಾನ್ಯನ ಹೆಸರನ್ನು ಇಲ್ಲಿ ಹೇಳಲು ಕಾರಣವಿದೆ. ಇದೇ ದೀನಾ ಸಾನಿಚರ್ ಎಂಬಾತನೇ ಮೌಗ್ಲಿ ಎಂಬ ಪಾತ್ರಕ್ಕೆ ಕಿಪ್ಲಿಂಗ್‌ಗೆ ಪ್ರೇರಣೆ ಎಂದರೆ ನಂಬುತ್ತೀರಾ? ಸಂಪೂರ್ಣ ಓದಿಗೆ ಇಲ್ಲಿ ಕ್ಲಿಕ್ ಮಾಡಿ.