ಬೆಂಗಳೂರು: ಅನೇಕ ಬಾರಿ ಹೆಚ್ಚಳ ಮಾಡಲು ಮುಂದಾಗಿದ್ದರೂ ತಡೆ ಹಿಡಿಯಲಾಗಿದ್ದ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಏರಿಕೆ ಮಾಡಲು ಕೆಎಂಎಫ್ ನಿರ್ಧಾರ ಮಾಡಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗಡಿ ಗ್ರಾಮಗಳ ಕುರಿತು ಬಾಯಿ ಹರಿಬಿಟ್ಟಿದ್ದಾರೆ, ಟಿ.ಎನ್. ಶೇಷನ್‌ರಂಥ ಚುನಾವನಾ ಆಯುಕ್ತರು ಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನ್ಯ ಮತೀಯರು ಮಾರಾಟ ಮಾಡಲು ಅವಕಾಶ ಬೇಡ ಎಂದು ಹಿಂದು ಜಾಗರಣ ವೇದಿಕೆ ಹೇಳಿದೆ. ಮಾಜಿ ಸಿಎಂ ಸಿದ್ದರಾಮಯ್ಯ 400 ಕೋಟಿ ರೂ. ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಟಿಪ್ಪು ಸುಲ್ತಾನನ ಕುರಿತು ಬಿಡುಗಡೆಯಾಗಿದ್ದ ʼಟಿಪ್ಪು ನಿಜ ಕನಸುಗಳುʼ ಕೃತಿಯ ಮಾರಾಟಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎನ್ನುವವರೆಗೆ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Nandini Milk Price | ನಂದಿನಿ ಹಾಲು, ಮೊಸರಿನ ದರ ಏರಿಕೆ: ಗುರುವಾರ ಬೆಳಗ್ಗೆ 11 ಗಂಟೆ ನಂತರ ಅನ್ವಯ
ರಾಜ್ಯದ ಅತಿ ದೊಡ್ಡ ಹಾಲು ಉತ್ಪಾದಕರ ಸಂಘವಾದ ಕೆಎಂಎಫ್ ತನ್ನ ಬ್ರ್ಯಾಂಡ್ ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ ಪ್ರತಿ ಲೀಟರ್‌ಗೆ ತಲಾ 2 ರೂ. ಏರಿಕೆ ಮಾಡಿದೆ. ಉತ್ಪಾದಕರಿಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ರಾಜ್ಯದ ಗಡಿ ಪ್ರದೇಶಗಳಲ್ಲಿ ನೆರೆ ರಾಜ್ಯಗಳ ಹಾಲು ಉತ್ಪಾದಕ ಸಂಸ್ಥೆಗಳತ್ತ ರಾಜ್ಯದ ರೈತರು ವಾಲುತ್ತಿರುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದೆ. ಬುಧವಾರ 19 ನಿರ್ದೇಶಕರೊಂದಿಗೆ ಸಭೆ ನಡೆಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ನೇರವಾಗಿ ರೈತರಿಗೆ ಈ ಹಣವನ್ನು ನೀಡಲಾಗುತ್ತದೆ. ಗ್ರಾಹಕರು ನಮಗೆ ಸಹಕರಿಸಬೇಕು ಎಂದರು. ಗುರುವಾರ ಬೆಳಗ್ಗೆ ಹಾಲಿನ ದರ ಈಗಿನಷ್ಟೇ ಇರಲಿದೆ. ಆದರೆ ಬೆಳಗ್ಗೆ 11 ಗಂಟೆಯ ನಂತರ ಹೊಸ ದರ ಅನ್ವಯ ಆಗಲಿದೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ಒಂದೇ ಒಂದು ಹಳ್ಳಿಯನ್ನು ಬಿಟ್ಟುಕೊಡಲ್ಲ, ಫಡ್ನವಿಸ್ ಬಾಯ್ಮಾತಿನ ಪ್ರತಾಪ
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣಾರ್ಹತೆ ಕುರಿತು ಸುಪ್ರೀಂ ಕೋರ್ಟ್ ಇನ್ನೂ ತೀರ್ಮಾನವನ್ನೇ ಕೈಗೊಂಡಿಲ್ಲ. ಆಗಲೇ, ಮಹಾರಾಷ್ಟ್ರದ ಕೋಪ-ತಾಪ ಶುರುವಾಗಿದೆ. ಇದರ ಭಾಗವಾಗಿಯೇ, “ನಾವು ಮಹಾರಾಷ್ಟ್ರದ ಒಂದೇ ಒಂದು ಹಳ್ಳಿಯನ್ನು ಬಿಟ್ಟುಕೊಡುವುದಿಲ್ಲ” ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
“ಮಹಾರಾಷ್ಟ್ರದ ಒಂದೇ ಒಂದು ಹಳ್ಳಿಯು ಕರ್ನಾಟಕದ ಜತೆ ವಿಲೀನಗೊಳ್ಳಲು ಬಿಡುವುದಿಲ್ಲ. ಕರ್ನಾಟಕ ಸರ್ಕಾರವು ಮೊದಲು ಮರಾಠಿ ಮಾತನಾಡುವ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯು ಮಹಾರಾಷ್ಟ್ರದೊಂದಿಗೆ ವಿಲೀನವಾಗುವುದನ್ನು ತಡೆಯಲು ಹೋರಾಟ ನಡೆಸುವ ತಾಕತ್ತು ಬೆಳೆಸಿಕೊಳ್ಳಲಿ” ಎಂದು ವ್ಯಂಗ್ಯ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೩. Supreme Court | ಟಿ ಎನ್ ಶೇಷನ್‌ರಂಥ ದಿಟ್ಟ ಚುನಾವಣಾ ಆಯುಕ್ತರ ಅಗತ್ಯ ಇದೆ ಎಂದ ಸುಪ್ರೀಂ ಕೋರ್ಟ್
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಾಸ್ತವದಲ್ಲಿ ಆತಂಕಕಾರಿ ಪರಿಸ್ಥಿತಿಗಳಿವೆ. ಟಿ ಎನ್ ಶೇಷನ್ (TN Seshan) ರೀತಿಯ ನಡವಳಿಕೆ ಹೊಂದಿರುವಂಥ ವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತರ ನೇಮಕದಲ್ಲಿ ಸುಧಾರಣೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸುತ್ತಿರವ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು, ಸಂವಿಧಾನವು ಮುಖ್ಯ ಚುನಾವಣಾ ಆಯುಕ್ತ ಹಾಗೂ ಇಬ್ಬರು ಆಯುಕ್ತರೆಂಬ ದುರ್ಬಲ ಭುಜಗಳ ಮೇಲೆ ಅಗಾಧ ಅಧಿಕಾರವನ್ನು ಹೊರಿಸಿದೆ. ಹಾಗಾಗಿ, ಚುನಾವಣಾ ಮುಖ್ಯ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನೂ ಸೇರಿಸುವ ಮೂಲಕ, ತಟಸ್ಥತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Arun Goel | ಚುನಾವಣೆ ಆಯುಕ್ತರಾಗಿ ಅರುಣ್ ಗೋಯಲ್ ನೇಮಕ
೪. ಮಂಗಳೂರು ಸ್ಫೋಟ | ಶಾರಿಕ್ ತಂಗಿದ್ದ ಕೊಯಮತ್ತೂರಿನ ಎಂವಿಎಂ ಲಾಡ್ಜ್ ಸೀಲ್, ಅಲ್ಲೂ ಪ್ಲ್ಯಾನ್ ಆಗಿತ್ತಾ ಕುಕ್ಕರ್ ಬ್ಲಾಸ್ಟ್?
ಮಂಗಳೂರಿನ ನಾಗುರಿಯಲ್ಲಿ ನವೆಂಬರ್ ೧೯ರ ಸಂಜೆ ೪.೩೦ರ ಹೊತ್ತಿಗೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ರೂವಾರಿ ಶಾರಿಕ್ ಕೆಲವು ತಿಂಗಳ ಹಿಂದೆ ಕೊಯಮತ್ತೂರಿನಲ್ಲಿ ತಂಗಿದ್ದ ಲಾಡ್ಜನ್ನು ತಮಿಳುನಾಡು ಪೊಲೀಸರು ಸೀಲ್ ಮಾಡಿದ್ದಾರೆ. ಕೊಯಮತ್ತೂರಿನ ಗಾಂಧಿಪುರಂನಲ್ಲಿರುವ ಎಂವಿಎಂ ಲಾಡ್ಜ್‌ನಲ್ಲಿ ಶಾರಿಕ್ ತಂಗಿದ್ದ ಎನ್ನುವುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಕಾಮರಾಜು ಎಂಬಾತನ ಒಡೆತನದಲ್ಲಿರುವ ಲಾಡ್ಜ್‌ಗೆ ಈಗ ಪೊಲೀಸರು ಬೀಗ ಹಾಕಿದ್ದು, ಮಾಲೀಕನನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಮಂಗಳೂರು ಸ್ಫೋಟ | ಗಾಯಾಳು ಆಟೋ ಚಾಲಕಗೆ 50,000 ರೂ. ಸಹಾಯ, ಶಾರಿಕ್ ಮುಖ ನೋಡದ ಆರಗ ಜ್ಞಾನೇಂದ್ರ
5. Kukke subrahmanya | ಕುಕ್ಕೆ ಕ್ಷೇತ್ರದಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧ: ಜಾಗರಣ ವೇದಿಕೆ ಮನವಿ
ರಾಜ್ಯದ ದೇವಾಲಯಗಳಲ್ಲಿ ಅನ್ಯಮತೀಯರಿಗೆ ವ್ಯವಹಾರ ಮಾಡಲು ಅವಕಾಶ ನೀಡಬಾರದು ಎಂಬ ಕೂಗು ಮತ್ತೆ ಜೀವಪಡೆದಿದೆ. ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅನ್ಯ ಮತೀಯರಿಗೆ ವ್ಯಾಪಾರ ನಿರ್ಬಂಧ ವಿಧಿಸಬೇಕು ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದೆ. ಈ ಹಿಂದೆ ಹಲವು ಬಾರಿ ದೇವಸ್ಥಾನದ ನಿಗದಿತ ಅಂಗಡಿಗಳ ಏಲಂನಲ್ಲಿ ಅನ್ಯ ಧರ್ಮೀಯರು ಪಾಲ್ಗೊಳ್ಳಲು ಅವಕಾಶವಿರಬಾರದು ಎಂದು ಆಗ್ರಹಿಸಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Dress code in temple | ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ವಸ್ತ್ರಸಂಹಿತೆ ಸದ್ದು! ಹಿಂದು ಜಾಗೃತಿ ವೇದಿಕೆ ಮನವಿ
6. ಸರ್ಕಾರದ ₹400 ಕೋಟಿ ಮೌಲ್ಯದ ಭೂಮಿ ಪರರ ಪಾಲು?: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸುಮಾರು 400 ಕೋಟಿ ರೂ. ಮೌಲ್ಯದ ಸರ್ಕಾರದ ಭೂಮಿಯನ್ನು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಖಾಸಗಿಯವರಿಗೆ ನೀಡಲು ಸಹಕರಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಎನ್. ಆರ್. ರಮೇಶ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಜತೆಗೆ ಬಿಡಿಎ, ನಗರಾಭಿವೃದ್ಧಿ ಅಧಿಕಾರಿಗಳು, ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡ ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸಿದ್ಧ, ಅಂಥ ಯಾವುದೇ ಆದೇಶ ಬಂದರೂ ನಾವು ರೆಡಿ ಎಂದ ಸೇನಾ ಜನರಲ್ ದ್ವಿವೇದಿ
ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ವಾಪಸ್ ಭಾರತಕ್ಕೆ ಪಡೆಯಬೇಕು ಎಂಬ ಆದೇಶ ಬಂದರೆ, ಅದನ್ನು ಕಾರ್ಯಗತಗೊಳಿಸಲು ನಮ್ಮ ಸೇನೆ ಸಜ್ಜಾಗಿದೆ. ಕೇವಲ ಇದು ಅಂತಲ್ಲ, ಇಂಥ ಅದೆಷ್ಟೇ ಆದೇಶಗಳನ್ನು ಭಾರತೀಯ ಸೇನೆ ನೀಡಿದರೂ ನಾವು ಅದನ್ನು ಪಾಲಿಸುತ್ತೇವೆ ಎಂದು ಸೇನೆಯ ಉತ್ತರವಲಯದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಕಳೆದ ತಿಂಗಳು ಶೌರ್ಯ ದಿವಸ್ ಆಚರಣೆ ವೇಳೆ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್, ‘ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಸಂಪೂರ್ಣವಾಗಿ ಭಾರತದ ವಶಕ್ಕೆ ಪಡೆದ ಬಳಿಕವಷ್ಟೇ, 2019ರ ಆಗಸ್ಟ್ 5ರಂದು ಪ್ರಾರಂಭ ಮಾಡಿರುವ ಜಮ್ಮು-ಕಾಶ್ಮೀರ ಏಕೀಕರಣ ಮಿಷನ್ ಪೂರ್ಣಗೊಳ್ಳಲಿದೆ’ ಎಂಬಂಥ ಒಂದು ಮಹತ್ವದ ಮಾತುಗಳನ್ನಾಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. FIFA World Cup | ಜಾಕೀರ್ ನಾಯ್ಕ್ಗೆ ನಾವು ಆಹ್ವಾನ ಕೊಟ್ಟಿಲ್ಲ, ಅನ್ಯ ದೇಶದ ಪಿತೂರಿ ಇರಬಹುದು; ಸಿಟ್ಟಾದ ಭಾರತಕ್ಕೆ ಸ್ಪಷ್ಟನೆ ಕೊಟ್ಟ ಕತಾರ್
ಕತಾರ್ ಆಡಳಿತ ಈಗ ಸ್ಪಷ್ಟನೆ ನೀಡಿದೆ. ‘ಫಿಫಾ ವರ್ಲ್ಡ್ಕಪ್ ಉದ್ಘಾಟನಾ ಸಮಾರಂಭಕ್ಕೆ ನಾವು ಜಾಕೀರ್ ನಾಯ್ಕ್ನನ್ನು ಆಹ್ವಾನಿಸಿರಲಿಲ್ಲ’ ಎಂದು ಭಾರತಕ್ಕೆ ತಿಳಿಸಿದೆ. ಅಷ್ಟೇ ಅಲ್ಲ, ‘ಕತಾರ್-ಭಾರತದ ದ್ವಿಪಕ್ಷೀಯ ಸಂಬಂಧವನ್ನು ಹಾಳುಗೆಡವಲು ಯಾವುದೋ ಅನ್ಯದೇಶಗಳು ಮಾಡಿದ ಕುತಂತ್ರ ಇದು. ಬೇಕೆಂತಲೇ ತಪ್ಪು ಮಾಹಿತಿಗಳನ್ನು ಹಬ್ಬಿಸಲಾಗುತ್ತಿದೆ’ ಎಂದೂ ಹೇಳಿದೆ. ಕತಾರ್ ಈ ಬಗ್ಗೆ ಭಾರತಕ್ಕೆ ರಾಜತಾಂತ್ರಿಕ ಸಂದೇಶವನ್ನು ನೀಡಿದೆ. ಜಾಕೀರ್ ನಾಯ್ಕ್ ಬಹುಶಃ ಖಾಸಗಿಯಾಗಿ ಫಿಫಾ ವರ್ಲ್ಡ್ಕಪ್ಗೆ ಭೇಟಿ ಕೊಟ್ಟಿದ್ದಿರಬಹುದು’ ಎಂದೂ ಹೇಳಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ಟಿಪ್ಪು ವಿವಾದ | ಟಿಪ್ಪು ನಿಜ ಕನಸುಗಳು ಕೃತಿಯ ಮಾರಾಟಕ್ಕೆ ಕೋರ್ಟ್‌ನಿಂದ ತಾತ್ಕಾಲಿಕ ತಡೆ
ಟಿಪ್ಪು ಸುಲ್ತಾನ್ ಕುರಿತು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚಿಸಿರುವ ನಾಟಕ ʼಟಿಪ್ಪು ನಿಜ ಕನಸುಗಳುʼ ಪುಸ್ತಕ ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ ವಿಧಿಸಿದೆ. ರಫೀಉಲ್ಲ ಬಿ.ಎಸ್. ಎನ್ನುವವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿರುವ ಬೆಂಗಳೂರಿನ 14ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಡೆ ನೀಡಿದೆ.
ಆನ್‌ಲೈನ್ ಸೇರಿ ಎಲ್ಲಿಯೂ ಮಾರಾಟ ಮಾಡದಂತೆ ತಡೆ ನೀಡಲಾಗಿದೆ. ಪುಸ್ತಕದಲ್ಲಿ ಅಜಾನ್ ಅನ್ನು ಅವಮಾನಿಸಲಾಗಿದೆ ಹಾಗೂ ಅನೇಕ ತಪ್ಪು ಮಾಹಿತಿಗಳನ್ನು ನೀಡಲಾಗಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತದೆ ಎಂದು ಅರ್ಜಿದಾರರು ದೂರಿದ್ದರು. ನ್ಯಾಯಾಲಯವು ಕೃತಿಯ ಲೇಖಕರು ಹಾಗೂ ಪ್ರಕಾಶಕರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Shraddha Murder Case | ಪೀಸ್ಪೀಸ್ ಮಾಡುವುದಾಗಿ ಶ್ರದ್ಧಾಗೆ 2020ರಲ್ಲೇ ಬೆದರಿಕೆ ಹಾಕಿದ್ದ ಅಫ್ತಾಬ್; ಪತ್ರ ಬಿಚ್ಚಿಟ್ಟ ಸತ್ಯಗಳಿವು!
ಶ್ರದ್ಧಾ ವಾಳ್ಕರ್ ಆಕೆಯ ಲಿವ್ ಇನ್ ಸಂಗಾತಿ ಅಫ್ತಾಬ್ನಿಂದಲೇ ಹತ್ಯೆಯಾಗಿ, 35 ತುಂಡುಗಳಾಗಿ ಹೋಗಿದ್ದಾಳೆ. 2022ರ ಮೇ 18ರಂದು ಈಕೆಯ ಕೊಲೆಯಾಗಿದ್ದರೂ, ಅದು ಈಗೊಂದು ಎಂಟು ದಿನಗಳ ಹಿಂದೆ ಬೆಳಕಿಗೆ ಬಂದಿದೆ. ಶ್ರದ್ಧಾಳ ತಲೆ ಭಾಗ ಪತ್ತೆಯಾಗಿದ್ದು, ತನಿಖೆಯೂ ವೇಗವಾಗಿ ನಡೆಯುತ್ತಿದೆ. ಇನ್ನು ಶ್ರದ್ಧಾ ಮತ್ತು ಅಫ್ತಾಬ್ ನಡುವೆ ಪದೇಪದೆ ಜಗಳವಾಗುತ್ತಿತ್ತು. 2020ರಲ್ಲೂ ಒಮ್ಮೆ ಶ್ರದ್ಧಾ ಮೇಲೆ ಅಫ್ತಾಬ್ ಭಯಾನಕವಾಗಿ ಹಲ್ಲೆ ಮಾಡಿದ್ದ ಎಂಬ ವಿಷಯ ಈಗಾಗಲೇ ಬೆಳಕಿಗೆ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಗುಜರಾತ್ ಚುನಾವಣೆ ವಿಶೇಷ
1. Gujarat election 2022 | ಬಿಜೆಪಿ ಯಾತ್ರೆಗೆ ಬ್ರೇಕ್ ಹಾಕಲಿದೆಯಾ ಆಪ್ ಸ್ಪರ್ಧೆ, ಬುಡಕಟ್ಟು ಜನರ ಸಿಟ್ಟು?
2. Gujarat Election 2022 | ಅಸ್ಮಿತೆ ಹಾದಿಯಲ್ಲಿ ಬಿಜೆಪಿ, ಮಾರ್ಗ ಬದಲಿಸಿದ ಕೈ, ರೋಡ್ ಬ್ರೇಕರ್ ಆಪ್!
ಮತ್ತಷ್ಟು ಪ್ರಮುಖ ಸುದ್ದಿಗಳು
- DK Shivakumar | ಕೆಪಿಸಿಸಿ ಅಧ್ಯಕ್ಷನಾಗಿದ್ದಕ್ಕೆ ನಾನಾ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ಎಂದ ಡಿ.ಕೆ ಶಿವಕುಮಾರ್
- WhatsApp Calls Tab | ಡೆಸ್ಕ್‌ಟಾಪ್ ವಾಟ್ಸ್ಆ್ಯಪ್‌ಗೆ ಕಾಲ್ಸ್ ಟ್ಯಾಬ್ ಫೀಚರ್, ಇದರಿಂದ ಏನು ಲಾಭ?
- Kantara Movie | ನಟ ಚೇತನ್ ಅಹಿಂಸಾ ವಿರುದ್ಧದ ಕೇಸ್ ವಜಾಗೊಳಿಸಲು ಹೈಕೋರ್ಟ್ ನಕಾರ
- Video | ಜೈಲಲ್ಲಿ ಸರಿಯಾಗಿ ಊಟ ಕೊಡದೆ 28 ಕೆಜಿ ತೂಕ ನಷ್ಟವಾಯಿತು ಎಂದಿದ್ದ ದೆಹಲಿ ಸಚಿವ ಸತ್ಯೇಂದ್ರ ಜೈನ್; ಆದರೆ ವಾಸ್ತವ ಏನು?
- HD Kumaraswamy | ರಮೇಶ್ ಕುಮಾರ್ ವಿರುದ್ಧದ ʼಅವಾಚ್ಯʼ ಶಬ್ದವನ್ನು ಹಿಂಪಡೆದ ಮಾಜಿ ಸಿಎಂ
- ನಗ್ನ ಜೋಡಿ ಮೇಲೆ ಮಂತ್ರವಾದಿ ಫೆವಿಕ್ವಿಕ್ ಸುರಿದು ದೇಹಗಳನ್ನು ಅಂಟಿಸಿದ, ಬಳಿಕ ಕತ್ತು ಸೀಳಿ ಕೊಂದ