1. PM Modi Speech in Rajya Sabha: ರಾಜ್ಯಸಭೆಯಲ್ಲಿ ಖರ್ಗೆಯನ್ನೇ ಟಾರ್ಗೆಟ್ ಮಾಡಿದ ಪ್ರಧಾನಿ ಮೋದಿ
ನಾವು 60 ವರ್ಷಗಳಿಂದ ಏನೆಲ್ಲ ಕೆಲಸ ಮಾಡಿದ್ದೇವೆ. ಅದರ ಕ್ರೆಡಿಟ್ಅನ್ನು ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆಯವರು ಆಪಾದಿಸಿದ್ದಾರೆ. ಆದರೆ ನಾನು 2014ರಲ್ಲಿ ನೋಡಿದ್ದಾಗ ಎಲ್ಲಾ ಕಡೆ ಗುಂಡಿಗಳೇ ಬಿದ್ದಿದ್ದವು. ಪ್ರಪಂಚದ ಸಣ್ಣ ಸಣ್ಣ ದೇಶಗಳು ಉತ್ತುಂಗಕ್ಕೆ ಏರುತ್ತಿದ್ದರೆ, ಭಾರತ ಇಲ್ಲೇ ಉಳಿದುಕೊಂಡಿತ್ತು. ಪಂಚಾಯತ್ನಿಂದ ಮೇಲಿನವರೆಗೆ ಎಲ್ಲರೂ ಕಾಂಗ್ರೆಸ್ಸಿಗರಿಗೆ ಜೀ ಹುಜೂರ್ ಎನ್ನುತ್ತಿದ್ದರು. ಟೋಕನ್ ತೆಗೆದುಕೊಳ್ಳುವುದು ಕೆಲಸ ಮಾಡುವುದು ಆಗಿತ್ತು. ನಾವು ಒಂದೊಂದೇ ವಿಚಾರವನ್ನು ಇಟ್ಟುಕೊಂಡು ಶಾಶ್ವತ ಪರಿಹಾರ ಹುಡುಕುತ್ತಿದ್ದೇವೆ. ನಾವು ಬಂದಮೇಲೆ ಮೂರು ಕೋಟಿ ಮನೆಗೆ ನಲ್ಲಿ ಮೂಲಕ ನೀರು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: PM Modi Speech In Rajya Sabha: ನೆಹರು, ಇಂದಿರಾ, ಖರ್ಗೆ, ಅಭಿವೃದ್ಧಿ; ಮೇಲ್ಮನೆಯಲ್ಲಿ ಮೋದಿ ಮಾತಿನ ಚಾಟಿ
2. Veerendra Heggade speech in Rajya Sabha: ಮೋದಿ ಸರ್ಕಾರದಿಂದ ದೇಶದ ಅಭಿವೃದ್ಧಿ, ರಾಜ್ಯಸಭೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಪ್ರಶಂಸೆ
ಮೋದಿ ಸರ್ಕಾರದಿಂದ ದೇಶದಲ್ಲಿ ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಾನಾ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಯೋಗ, ಆಯುರ್ವೇದ ಈಗ ಆಕರ್ಷಣೀಯವಾಗಿದೆ ಎಂದು ರಾಜ್ಯಸಭೆಯ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ರಾಜ್ಯಸಭೆಯಲ್ಲಿ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Parliament Budget Session: ಅದಾನಿ ವಿಷಯ ಕೆಲಸಕ್ಕೆ ಬಾರದ ಚರ್ಚೆ, ಮೋದಿಯನ್ನು ಹೊಗಳಿ ಎಂದು ಕನ್ನಡದಲ್ಲೇ ಮಾತನಾಡಿದ ಜಗ್ಗೇಶ್
3. B.S. Yediyurappa: ರಾಜ್ಯದ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಕೊನೆಯ ಅಧಿವೇಶನ ಇದು: ಗೌರವದ ಬೀಳ್ಕೊಡುಗೆ ನೀಡುವುದೇ ವಿಧಾನ ಮಂಡಲ?
ನಾಡಿನ ಧೀಮಂತ ರಾಜಕೀಯ ಮುಖಂಡರಲ್ಲೊಬ್ಬರಾದ ಹಾಗೂ ರೈತ ನಾಯಕ, ಹೋರಾಟಗಾರ ಎಂದೇ ಪ್ರಸಿದ್ಧವಾದ ಬಿ.ಎಸ್. ಯಡಿಯೂರಪ್ಪ ಅವರ ಜೀವನದ ಅತ್ಯಂತ ಮಹತ್ವದ ಘಟ್ಟವೊಂದು ಶುಕ್ರವಾರದಿಂದ ಆರಂಭವಾಗಲಿದೆ. ಐದು ದಶಕಗಳಿಂದ ರಾಜ್ಯ ರಾಜಕಾರಣದ ಪ್ರಮುಖ ಬಿಂದುವಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಧಾನ ಮಂಡಲದಲ್ಲಿ ಭಾಗವಹಿಸುವ ಕೊನೆಯ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. SCST Reservation: 9ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆ ಆರಂಭ: ಸಿದ್ದರಾಮಯ್ಯ ಮಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು
ಎಸ್‌ಸಿಎಸ್‌ಟಿ ಸಮಾಜಕ್ಕೆ ನ್ಯಾಯ ದೊರಕಿಸುಕೊಡುವುದೇ ನಮ್ಮ ಸರ್ಕಾರದ ಏಕೈಕ ಗುರಿಯಾಗಿದ್ದು, ಎಸ್‌ಸಿಎಸ್‌ಟಿ ಮೀಸಲಾತಿ (SCST Reservation) ಹೆಚ್ಚಳವನ್ನು 9ನೇ ಪರಿಚ್ಛೇದದಲ್ಲಿ ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. UKG student fail: ಯುಕೆಜಿ ವಿದ್ಯಾರ್ಥಿನಿ ಫೇಲ್‌ಗೆ ಸ್ಪಷ್ಟೀಕರಣ ಕೊಟ್ಟ ಶಾಲೆ; ಟೀಚ್ ಮೆಟ್ ಆ್ಯಪ್ ನಿಷೇಧಕ್ಕೆ ಇಲಾಖೆ ಸೂಚನೆ
ಯುಕೆಜಿ ವಿದ್ಯಾರ್ಥಿನಿ ನಂದಿನಿಯನ್ನು (UKG student fail) ಫೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಗೆ ಶಿಕ್ಷಣ ಇಲಾಖೆ ಕಾರಣ ಕೇಳಿ ನೋಟಿಸ್ ನೀಡಿತ್ತು. ಇದೀಗ ಘಟನೆ ಸಂಬಂಧ ಅಕಾಡೆಮಿ ಸ್ಪಷ್ಟೀಕರಣ ಎಂದು ನೀಡಿದ್ದು, ಟೀಚ್ ಮೆಟ್ ಆ್ಯಪ್ ಎಡವಟ್ಟಿನಿಂದ ಹೀಗಾಗಿರುವುದಾಗಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Turkey Syria Earthquake: ಟರ್ಕಿ, ಸಿರಿಯಾದಲ್ಲಿ ಸಾವಿನ ಸಂಖ್ಯೆ 19,300ಕ್ಕೆ, ಇಂಡೋನೇಷ್ಯಾದಲ್ಲೂ ಭೂಕಂಪಕ್ಕೆ 4 ಸಾವು
ಎರಡು ಪ್ರಬಲ ಭೂಕಂಪಗಳ (Turkey Syria Earthquake) ಪರಿಣಾಮ ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾ ದೇಶದಲ್ಲಿ ಜನರ ಮಾರಣಹೋಮ ಮುಂದುವರಿದಿದ್ದು, ಮೃತರ ಸಂಖ್ಯೆ ೧೯,೩೦೦ ದಾಟಿದೆ. ಭದ್ರತಾ ಸಿಬ್ಬಂದಿ, ಪೊಲೀಸರು ಇನ್ನೂ ಜನರ ರಕ್ಷಣೆಗೆ ಹರಸಾಹಸಪಡುತ್ತಿದ್ದು, ಹಗಲು ರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಿದ್ದರೂ, ರಕ್ಷಣಾ ಕಾರ್ಯ ಮುಗಿಯುತ್ತಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Punjab: ಪಂಜಾಬ್‌ನಲ್ಲಿ ಸಿಖ್ಖರ ಪ್ರತಿಭಟನೆ, 7 ಪೊಲೀಸರಿಗೆ ಗಾಯ, 2 ಎಫ್ಐಆರ್ ದಾಖಲು
ಜೈಲಿನಲ್ಲಿರುವ ಸಿಖ್ಖರ ಬಿಡುಗಡೆಗೆ ಆಗ್ರಹಿಸಿ, ಖವಾಮಿ ಇನ್ಸಾಫ್ ಮೋರ್ಚಾ ತನ್ನ ಪ್ರತಿಭಟನೆಯನ್ನು ಮುಂದುವರಿಸಿದ್ದು, ಪಂಜಾಬ್‌ನ ಚಂಡೀಗಢ-ಮೊಹಾಲಿ ಗಡಿಯಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಿನ್ನೆ ಪ್ರತಿಭಟನಾಕಾರರು ಮತ್ತು ಪೊಲೀಸ್ ನಡುವೆ ನಡೆದ ಸಂಘರ್ಷದಲ್ಲಿ 7 ಏಳು ಪೊಲೀಸರು ಗಾಯಗೊಂಡಿದ್ದರು(Punjab). ಪ್ರತಿಭಟನಾನಿರತರ ವಿರುದ್ಧ ಎರಡು ಎಫ್ಐಆರ್ ದಾಖಲಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Aero India 2023 : ಏಷ್ಯಾದ ಅತಿ ದೊಡ್ಡ ಏರ್‌ಶೋ, ಏರೋ ಇಂಡಿಯಾಗೆ ಬೆಂಗಳೂರು ಸಜ್ಜು, ಇಲ್ಲಿದೆ ಡಿಟೇಲ್ಸ್
ಏಷ್ಯಾದ ಅತಿ ದೊಡ್ಡ ಏರ್ ಶೋ ಆಗಿರುವ ಏರೋ ಇಂಡಿಯಾ ಬೆಂಗಳೂರಿನಲ್ಲಿ ಫೆಬ್ರವರಿ 13-17ರಂದು ನಡೆಯಲಿದೆ. 1996ರಿಂದ ಯಲಹಂಕಾ ಏರ್‌ಫೋರ್ಸ್ ಸ್ಟೇಶನ್‌ನಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಫೆಬ್ರವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಷ್ಠಿತ ಏರ್ ಶೋಗೆ ಚಾಲನೆ ನೀಡಲಿದ್ದಾರೆ. (Aero India 2023) ಹಲವಾರು ದೇಶಗಳ ರಕ್ಷಣಾ ಸಚಿವರುಗಳು ಕೂಡ ಶೋದಲ್ಲಿ ಭಾಗವಹಿಸಲಿದ್ದಾರೆ. ಈ ಸಲದ ಏರ್ ಶೋ 14ನೇ ಆವೃತ್ತಿಯಾಗಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ವೀಕ್ಷಕರು ಆಸ್ವಾದಿಸಲು ಅವಕಾಶ ಸೃಷ್ಟಿಯಾಗಿದೆ. ಏರ್ ಶೋ ಸಂದರ್ಭ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಾಹನಗಳ ಪಾರ್ಕಿಂಗ್, ತ್ಯಾಜ್ಯ ನಿರ್ವಹಣೆ ಇತ್ಯಾದಿ ಸೌಕರ್ಯಗಳನ್ನು ಬಿಬಿಎಂಪಿ ಕಲ್ಪಿಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Brahmin CM: ಶಿವಾಜಿ, ಬುದ್ಧ, ಬಸವ, ಗಾಂಧಿಯನ್ನೇ ಬಿಡದವರು ನನ್ನನ್ನು ಬಿಡುತ್ತಾರ?: ಬಿಜೆಪಿ ಟೀಕೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ
ಪೇಶ್ವೆ ವಂಶಾವಳಿಯ ನಾಯಕರೊಬ್ಬರನ್ನು ಬಿಜೆಪಿ ಮುಂದಿನ ಮುಖ್ಯಮಂತ್ರಿ ಮಾಡಲು ಹೊರಟಿದೆ ಎಂಬ ತಮ್ಮ ಹೇಳಿಕೆಯ (Brahmin CM) ಬಗ್ಗೆ ನಡೆದಿರುವ ಚರ್ಚೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಾಜಿ, ಗೌತಮ ಬುದ್ಧ, ಮಹಾತ್ಮ ಗಾಂಧಿಯನ್ನೇ ಬಿಡದವರು ನನ್ನನ್ನು ಬಿಡುತ್ತಾರೆಯೇ? ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Viral Video : ʼಇವರೇ ನೋಡಿ ಫಾದರ್ ಆಫ್ ದಿ ಇಯರ್ʼ ಎನ್ನುತ್ತಿದ್ದಾರೆ ನೆಟ್ಟಿಗರು; ವೈರಲ್ ಆಗಿದೆ ವಿಡಿಯೊ
ಇದು ಎಲ್ಲ ಶಾಲೆಗಳಲ್ಲಿ ವಾರ್ಷಿಕೋತ್ಸವದ ಸಮಯ. ವಿದ್ಯಾರ್ಥಿಗಳ ಅಮ್ಮಂದಿರಿಗೆ ಮಕ್ಕಳಿಗೆ ನೃತ್ಯವನ್ನು ಅಭ್ಯಾಸ ಮಾಡಿಸುವುದರಿಂದ ಹಿಡಿದು, ಅವರನ್ನು ಸಿದ್ಧ ಮಾಡಿ, ವೇದಿಕೆಗೆ ಕಳುಹಿಸಿ ನೃತ್ಯ ಮಾಡಿಸುವವರೆಗೆ ಎಲ್ಲವೂ ಒಂದು ರೀತಿಯಲ್ಲಿ ಒತ್ತಡವೇ. ಅದೇ ರೀತಿ ಇಲ್ಲೊಂದು ಮಗು ವೇದಿಕೆ ಮೇಲೆ ನೃತ್ಯ ಮಾಡುತ್ತಿದೆ. ಆದರೆ ಜನರು ಮಗುವಿನ ನೃತ್ಯ ನೋಡುವ ಬದಲು ಅವಳ ಅಪ್ಪನನ್ನು ನೋಡಲಾರಂಭಿಸಿದ್ದಾರೆ. “ಇವರೇ ಫಾದರ್ ಆಫ್ ದಿ ಇಯರ್” ಎಂದೂ ಹೊಗಳಲಾರಂಭಿಸಿದ್ದಾರೆ. ವೈರಲ್ (Viral Video) ಆಗಿರುವ ಆ ವಿಡಿಯೊದಲ್ಲಿ ಏನಿದೆ ಎನ್ನುವುದನ್ನು ನೀವೇ ನೋಡಿ. ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- WhatsApp New Feature: ವಾಟ್ಸಾಪ್‌ನ ಚಾಟ್‌ನೊಳಗೇ 100 ಮೀಡಿಯಾ ಫೈಲ್ ಷೇರ್ ಮಾಡಬಹುದು!
- Karnataka Election : ಬಿಜೆಪಿ ವರಿಷ್ಠರು ಫುಲ್ ಆಕ್ಟಿವ್, ನಿದ್ದೆ ಮಾಡುತ್ತಿದೆಯಾ ಕಾಂಗ್ರೆಸ್ ಹೈಕಮಾಂಡ್?
- Kantara Movie: ‘ವರಾಹ ರೂಪಂ’ ವಿವಾದ: ರಿಷಬ್, ವಿಜಯ್ ಕಿರಗಂದೂರುಗೆ ನಿರೀಕ್ಷಣಾ ಜಾಮೀನು
- Areca News : ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಬರುವ ಅಮಿತ್ ಶಾ ಅಡಿಕೆ ಬೆಳೆಗಾರರಿಗೆ ನೀಡುವ ಸಿಹಿ ಸುದ್ದಿ ಏನು?
- Pakistan Financial Crisis : ಪಾಕಿಸ್ತಾನದಲ್ಲಿ ಪೆಟ್ರೋಲ್ ಖಾಲಿ! ಪ್ರಮುಖ ನಗರಗಳ ಪೆಟ್ರೋಲ್ ಬಂಕ್‌ಗಳೂ ಬಂದ್!