Site icon Vistara News

ವಿಸ್ತಾರ TOP 10 NEWS: ಅಮೆರಿಕದಲ್ಲಿ ಮೋದಿ ಹವಾದಿಂದ, ಸುಪ್ರೀಂನಲ್ಲಿ ದೀದಿಗೆ ಮುಖಭಂಗದವರೆಗಿನ ಪ್ರಮುಖ ಸುದ್ದಿಗಳಿವು

observation about election violence and more news

#image_title

1. ಹಲೋ ಸಚಿವರೇ: ಸಾರಿಗೆ ಇಲಾಖೆಯಲ್ಲಿ ಶೀಘ್ರ ನೇಮಕಾತಿ, ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗೆ ಕಡಿವಾಣ: ಸಚಿವ ರಾಮಲಿಂಗಾ ರೆಡ್ಡಿ
ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದು, ಬೆಂಗಳೂರಿನಲ್ಲಿ ಕಾಡುತ್ತಿರುವ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗೆ ಕಡಿವಾಣ, ಲೋಕಲ್‌ ಬಸ್‌ ಆಗಿದ್ದರೂ ನಿಲ್ದಾಣಗಳಲ್ಲಿ ನಿಲ್ಲಸದೇ ಸಂಚಾರ ಮಾಡುವ ಬಸ್‌ಗಳಿದ್ದರೆ ನಂಬರ್‌ ಸಹಿತ ತಮಗೆ ಪತ್ರ, ದೂರವಾಣಿ ಕರೆ ಇಲ್ಲವೇ ವಾಟ್ಸಪ್‌ ಮೂಲಕ ದೂರು ನೀಡುವುದು, ಬಸ್ಸೇ ಹೋಗದ ಗ್ರಾಮಗಳಿಗೆ ಸೌಕರ್ಯ ನೀಡುವ ಭರವಸೆ, ಸಾರಿಗೆ ಇಲಾಖೆಯಲ್ಲಿ ಹಣದ ಅನಗತ್ಯ ಸೋರಿಕೆಗೆ ಪರಿಹಾರ ಸೇರಿದಂತೆ ಶಕ್ತಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ವಿಸ್ತಾರ ನ್ಯೂಸ್‌ನ “ಹಲೋ ಸಚಿವರೇ” ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜನರ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Narendra Modi: ನಾನು… ಮೊದಲ ಪ್ರಧಾನಿ; ಭಾರತ- ಅಮೆರಿಕ ನಡುವೆ ಅಭೂತಪೂರ್ವ ವಿಶ್ವಾಸ: ವಾಲ್‌ಸ್ಟ್ರೀಟ್‌ ಜರ್ನಲ್‌ ಸಂದರ್ಶನದಲ್ಲಿ ಮೋದಿ
ʼʼನಾನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ. ಹೀಗಾಗಿ ನನ್ನ ಚಿಂತನೆ ಹಾಗೂ ನಡೆಗಳು ಭಾರತೀಯ ಸಂಪ್ರದಾಯದಿಂದ ಪ್ರೇರಿತವಾಗಿವೆʼʼ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಗ ದಿನಾಚರಣೆ ಹಾಗೂ ಇತರ ದ್ವಿಪಕ್ಷೀಯ ಮಾತುಕತೆಗಳ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಪ್ರತಿಷ್ಠಿತ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಗೆ ಸಂದರ್ಶನ ನೀಡಿದ್ದು, ಅದರಲ್ಲಿ ಈ ವಿಚಾರ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: PM Modi US Visit: ಯುಎಸ್​ಗೆ ಪ್ರಧಾನಿ ಮೋದಿ; ಚೀನಾ ಹೊಟ್ಟೆಗೆ ಬಿತ್ತು ಬೆಂಕಿ!

3. Congress Protest: ಅಕ್ಕಿ ಕೊಡದ ಕೇಂದ್ರದ ವಿರುದ್ಧ ಕಾಂಗ್ರೆಸ್‌ ಗರಂ: ಮೇಕಪ್‌ ಲೆಕ್ಕಿಸದೆ ಮಳೆಯಲ್ಲಿ ಪ್ರತಿಭಟಿಸಿದ್ದಕ್ಕೆ ಡಿಸಿಎಂ ಖುಷ್‌ ಹುವಾ!
ಅನ್ನಭಾಗ್ಯ ಯೋಜನೆಯಲ್ಲಿ ಹಂಚುವ ಸಲುವಾಗಿ ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಸತಾಯಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಸರ್ಕಾರದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್‌ ಯೋಜನೆಯನ್ನು ವಿಫಲಗೊಳಿಸಲು ಹೀಗೆ ಮಾಡಲಾಗುತ್ತಿದೆ ಎಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಭಾಗವಹಿಸಿದರು. ಮಳೆಯಲ್ಲಿ ಮೇಕಪ್‌ ಹೋದರೂ ಪ್ರತಿಭಟನೆ ನಡೆಸಿದ ಕಾರ್ಯಕರ್ತರಿಗೆ ಡಿಸಿಎಂ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Congress Protest: ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಆಗ್ರಹ; ಕೇಂದ್ರದ ವಿರುದ್ಧ ಹಲವೆಡೆ ಕಾಂಗ್ರೆಸ್‌ ಪ್ರತಿಭಟನೆ

4. Weather Report: ರಾಜ್ಯದಲ್ಲಿ ಜೂ.25ರವರೆಗೆ ಭಾರಿ ಮಳೆ ಎಚ್ಚರಿಕೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌
ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯಾದ್ಯಂತ ಮುಂದಿನ ಐದು ದಿನಗಳು ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಈ ಕುರಿತು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Yoga Day 2023: ವಿಶ್ವವನ್ನೇ ಬೆರಗುಗೊಳಿಸುತ್ತಿರುವ ಯೋಗದ ಇತಿಹಾಸ, ಥೀಮ್, ಆಚರಣೆಯ ಹಿನ್ನೆಲೆ ಏನು?
ಯೋಗ (Yoga Day 2023) ಇಂದು ವಿಶ್ವವ್ಯಾಪಿ, ಸರ್ವವ್ಯಾಪಿಯಾಗಿದೆ. 2015ರಿಂದ ಇಡೀ ಜಗತ್ತೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿಕೊಂಡ ಬರುತ್ತದೆ. ಆ ಮೂಲಕ ಇಡೀ ಜಗತ್ತಿಗೆ ಭಾರತ (India) ನೀಡಿದ ಅದ್ಭುತ ಯೋಗ ಕಲೆಯಾಗಿದೆ. ಇದು ಕೇವಲ ದೇಹವನ್ನು ಸುಸ್ಥಿತಿಯಲ್ಲಿಡುವುದು ಮಾತ್ರವಲ್ಲದೇ ನಮ್ಮ ಮನಸ್ಸನ್ನೂ ಪ್ರಫುಲ್ಲಗೊಳಿಸುತ್ತದೆ. ಯೋಗದಿಂದ ಸಾಕಷ್ಟು ಪ್ರಯೋಜನಗಳಿರುವುದರಿಂದಲೇ ಇಂದು ಯಾವುದೇ ಭೇದ ಭಾವ ಇಲ್ಲದೇ ಎಲ್ಲರೂ ಅಪ್ಪಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಚುನಾವಣೆ ಎಂದರೆ ಹಿಂಸಾಚಾರಕ್ಕೆ ಲೈಸೆನ್ಸ್​ ಅಲ್ಲ; ಸುಪ್ರೀಂಕೋರ್ಟ್​ ಖಡಕ್​ ಸೂಚನೆ, ಮಮತಾ ಬ್ಯಾನರ್ಜಿಗೆ ಮುಖಭಂಗ
ಪಶ್ಚಿಮ ಬಂಗಾಳದಲ್ಲಿ (West Bengal) ಜು.8ರಂದು ನಡೆಯಲಿರುವ ಪಂಚಾಯಿತಿ ಚುನಾವಣೆ ಮತದಾನ/ಮತ ಎಣಿಕೆ (West Bengal Panchayat Polls) ಸಂದರ್ಭಗಳಲ್ಲಿ ರಾಜ್ಯಾದ್ಯಾಂತ ಕಾವಲಿಗೆ ಕೇಂದ್ರ ಸಶಸ್ತ್ರ ಪಡೆಗಳ ಯೋಜನೆಗೆ ಸುಪ್ರೀಂಕೋರ್ಟ್​ ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ಭದ್ರತೆ ಕಲ್ಪಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ಬಿಡಬೇಕು ಎಂದು ಮನವಿ ಮಾಡಿ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. MLC Bye Election: ಪರಿಷತ್‌ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ: ಕದನಕ್ಕೂ ಮುನ್ನವೇ ಕಣದಿಂದ ಹಿಂದೆ ಸರಿದ ಬಿಜೆಪಿ
ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿಧಾನಪರಿಷತ್‌ ಕಾರ್ಯದರ್ಶೀಯವರಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್‌, ಸಚಿವ ಎನ್‌.ಎಸ್‌. ಬೋಸರಾಜು ಹಾಗೂ ತಿಪ್ಪಣ್ಣ ಕಮಕನೂರು ನಾಮಪತ್ರ ಸಲ್ಲಿಕೆ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Cough Syrup: ಭಾರತದ 7 ಕಫ್‌ ಸಿರಪ್‌ಗಳು ವಿಷಪೂರಿತ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಬಿಸಿಸಿಐ ಮತ್ತು ಪಿಸಿಬಿ ನಡುವಿನ ಒಳಜಗಳದ ಅಧ್ಯಾಯ 3 ಹಂತಕ್ಕೆ ತಲುಪಿದ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಧ್ಯಪ್ರವೇಶದ ನಂತರ ಏಷ್ಯಾ ಕಪ್ 2023 ಅಂತಿಮವಾಗಿ ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿದೆ. 2023 ರ ವಿಶ್ವಕಪ್ ಆಯೋಜನೆ ಬಗ್ಗೆ ಇನ್ನೂ ಬಿಕ್ಕಟ್ಟು ಉಳಿದಿದ್ದರೂ ಪಾಕಿಸ್ತಾನ ತಂಡ ಬರಲು ಒಪ್ಪಿಗೆ ನೀಡಿದೆ. ಆದರೀಗ ಹೊಸ ಅಧ್ಯಾಯ 2025ರ ಚಾಂಪಿಯನ್ಸ್​ ಟ್ರೋಫಿ ಬಗ್ಗೆ. ಈ ಟೂರ್ನಿಯ ಆತಿಥ್ಯ ಆತಿಥ್ಯ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ನಿರಾಕರಿಸಿದೆ. ಸಹಿ ಹಾಕಬೇಕಿದ್ದರೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವುದಾಗಿ ಆರ್ಥಿಕ ಖಾತರಿ ನೀಡಬೇಕು ಎಂದು ಕೋರುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Congress Guarantee: ಕೇಂದ್ರ ಸರ್ಕಾರ ಗೃಹಲಕ್ಷ್ಮೀ ʼಆ್ಯಪ್ʼ ಹ್ಯಾಕ್‌ ಮಾಡಿದೆ: ಸಚಿವ ಸತೀಶ್‌ ಜಾರಕಿಹೊಳಿ ಗಂಭೀರ ಆರೋಪ
ಮನೆಯ ಮುಖ್ಯಸ್ಥೆಗೆ ಮಾಸಿಕ ತಲಾ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ಆ್ಯಪ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್‌ ಮಾಡಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸತಾಯಿಸುತ್ತಿದೆ ಎಂದು ಕಾಂಗ್ರೆಸ್‌ ಸರ್ಕಾರದಿಂದ ಪ್ರತಿಭಟನೆ ನಡೆಸುವ ವೇಳೆಯಲ್ಲಿ ಇನ್ನೊಂದು ಹೊಸ ಆರೋಪವನ್ನು ಜಾರಕಿಹೊಳಿ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Video Viral: ಇದು ನಾರಿ ಶಕ್ತಿಯ ಸೈಡ್‌ ಎಫೆಕ್ಟ್; ‌ಸೀಟ್‌ಗಾಗಿ ಬಸ್ಸಿನಲ್ಲೇ ಬಡಿದಾಡಿಕೊಂಡ ನಾರಿಯರು!
ಚುನಾವಣೆಗೂ ಮೊದಲು ಕಾಂಗ್ರೆಸ್‌ ಘೋಷಣೆ ಮಾಡಿದ್ದ ಐದು ಗ್ಯಾರಂಟಿಯಲ್ಲಿ (Congress Guarantee) ಮೊದಲಿಗೆ ಜಾರಿಗೆ ಬಂದಿರುವ “ಶಕ್ತಿ” ಯೋಜನೆಗೆ (Shakti Scheme) ರಾಜ್ಯಾದ್ಯಂತ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಉಚಿತ ಬಸ್‌ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆದಿದ್ದಾರೆ. ಹಾಗೇ ಈ ಶಕ್ತಿ ಯೋಜನೆಯ ಸೈಡ್‌ ಎಫೆಕ್ಟ್‌ ಸಹ ಕಾಣಲಾರಂಭಿಸಿದೆ. ನೂಕುನುಗ್ಗಲು, ಗಲಾಟೆಗಳು ಸಹ ನಡೆಯುತ್ತಿವೆ. ಈಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ (Chamundi Hill) ಹೋಗುವ ಮಾರ್ಗದಲ್ಲಿ ಹೋಗುವ ಬಸ್‌ನಲ್ಲಿ ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಅದೂ ಸೀಟ್‌ಗಾಗಿ ಎಂಬುದು ವಿಪರ್ಯಾಸವಾಗಿದೆ. ಈ ವಿಡಿಯೊ ಈಗ ವೈರಲ್‌ (Video Viral) ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version