1. PM Modi US Visit: ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದಲ್ಲಿ ಯೋಗ; ಇತಿಹಾಸ ಬರೆದ ದೇಶದ ಪ್ರಧಾನಿ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಯೋಗ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ (PM Modi US Visit) ಅವರು ಇತಿಹಾಸ ಸೃಷ್ಟಿಸಿದ್ದಾರೆ. ದೇಶದ ಇತಿಹಾಸದಲ್ಲೇ ವಿಶ್ವಸಂಸ್ಥೆಯ ಯೋಗ ಕಾರ್ಯಕ್ರಮದ ನೇತೃತ್ವ ವಹಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: PM Modi US Visit: ಯೋಗ ಎಂದರೆ ಒಗ್ಗಟ್ಟು, ಯೋಗ ಸಾರ್ವತ್ರಿಕ, ಇದು ಜೀವನ ವಿಧಾನ; ವಿಶ್ವಸಂಸ್ಥೆಯಲ್ಲಿ ಮೋದಿ ಮೋಡಿ
2. Congress Guarantee: ಜವಳಿ ಸಚಿವರಿಗೆ ಸಿಕ್ಕ ಗೋಯೆಲ್, ಆಹಾರ ಸಚಿವರು ಬಂದಾಗ ಗಾಯಬ್?: ಏನಂದ್ರು ಮುನಿಯಪ್ಪ?
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎನ್ನವ ಜಗಳ ಈಗ ನವದೆಹಲಿಯಲ್ಲಿಯೂ ಆರಂಭವಾಗಿದೆ. ಎಫ್‌ಸಿಐನಿಂದ ಅಕ್ಕಿ ಸಿಗುವುದಿಲ್ಲ ಎನ್ನುವುದು ತಿಳಿದ ನಂತರ ವಿವಿಧ ರಾಜ್ಯಗಳ ಬಳಿ ಕೇಳುತ್ತಿರುವ ಕರ್ನಾಟಕ ಸರ್ಕಾರ ಈಗ ಕೇಂದ್ರ ಸರ್ಕಾರದ ಜತೆಗೆ ಮಾತುಕತೆಗೂ ಮುಂದಾಗಿದೆ. ಆದರೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಮೂರು ದಿನಗಳಿಂದ ಭೇಟಿಗೇ ಅವಕಾಶ ನೀಡುತ್ತಿಲ್ಲ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Congress Guarantee: ಜುಲೈಗೆ 10 ಕೆ.ಜಿ. ಫ್ರೀ ಅಕ್ಕಿ ಸಿಗೋಲ್ಲ: ಕೇಂದ್ರ ಸರ್ಕಾರ ಡರ್ಟಿ ಪಾಲಿಟಿಕ್ಸ್ ಮಾಡ್ತಾ ಇದೆ ಎಂದ ಸಿದ್ದರಾಮಯ್ಯ
3. Power tariff hike: ವಿದ್ಯುತ್ ಏರಿಕೆ ವಿರುದ್ಧ ಹೆಚ್ಚಿದ ಜನಾಕ್ರೋಶ, ಕೆಲವೆಡೆ ಜೂನ್ 22ರಂದು ಬಂದ್
ವಿದ್ಯುತ್ ದರ ಏರಿಕೆಯ (Power tariff hike) ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿದ್ದು, ಹಲವು ಕಡೆ ಪ್ರತಿಭಟನೆಗಳು ನಡೆದಿವೆ. ಈ ನಡುವೆ, ಜೂನ್ 22ರಂದು ರಾಜ್ಯದ ಹಲವೆಡೆ ವಾಣಿಜ್ಯ ಸಂಘಟನೆಗಳು ಬಂದ್‌ಗೆ (trade bundh) ಕರೆ ನೀಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Brand Bengaluru: ನಿಮ್ಮ ಬೆಂಗಳೂರು ಹೇಗಿರಬೇಕು ನೀವೇ ತಿಳಿಸಿ: ಸರ್ಕಾರಕ್ಕೆ ಸಲಹೆ ನೀಡಲು ಇನ್ನು 9 ದಿನ ಮಾತ್ರ ಬಾಕಿ!
ರಾಜಧಾನಿ ಬೆಂಗಳೂರು ಇಡೀ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದ್ದರೂ ಇಲ್ಲಿನ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಮಳೆ ಬಂದರೆ ಸಾಕು ತುಂಬಿಕೊಳ್ಳುವ ನೀರು, ಸದಾ ಸಂಚಾರ ದಟ್ಟಣೆ, ರಿಯಲ್ ಎಸ್ಟೇಟ್ ಸಮಸ್ಯೆ ಸೇರಿ ಅನೇಕ ದೋಷಗಳಿಂದ ಜನರು ಬಸವಳಿದಿದ್ದಾರೆ. ಬೆಂಗಳೂರು ಹೇಗಿರಬೇಕು (Brand Bengaluru) ಎಂಬ ಮಾಸ್ಟರ್ ಪ್ಲಾನ್ ರೂಪಿಸುವ ಮುನ್ನ ಸಾರ್ವಜನಿಕರಿಂದ ಸಲಹೆಗಳನ್ನು ಸರ್ಕಾರ ಆಹ್ವಾನಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Milk Price Hike : ಕೆಎಂಎಫ್ ಅಧ್ಯಕ್ಷರಾಗಿ ಭೀಮಾ ನಾಯ್ಕ್, ಹಾಲಿನ ದರ 5 ರೂ. ಏರಿಕೆ ಸಾಧ್ಯತೆ
ಕರ್ನಾಟಕ ಹಾಲು ಮಹಾಮಂಡಲ (Karnataka Milk Federation-KMF)ದ ನೂತನ ಅಧ್ಯಕ್ಷರಾಗಿ ಭೀಮಾ ನಾಯ್ಕ್ (Bheema Naik) ಆಯ್ಕೆಯಾಗಿದ್ದಾರೆ. ಹೊಸ ಅಧ್ಯಕ್ಷ ಭೀಮಾ ನಾಯ್ಕ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಪಶು ಸಂಗೋಪನಾ ಖಾತೆ ಸಚಿವ ಕೆ. ವೆಂಕಟೇಶ್ ಎಲ್ಲರೂ ದರ ಏರಿಕೆ ಪರ ತಮ್ಮ ವಾದ ಮಂಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Education News : ಸ್ಕೂಲ್ ಬ್ಯಾಗ್ ತೂಕಕ್ಕೆ ಮಿತಿ ಹಾಕಿದ ಸರ್ಕಾರ; ಯಾವ ಕ್ಲಾಸಿನ ಮಕ್ಕಳಿಗೆ ಎಷ್ಟು ತೂಕ?
ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುತ್ತಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಅವರು ಮಣಭಾರದ ಪಾಠಿಚೀಲ (ಸ್ಕೂಲ್‌ಬ್ಯಾಗ್) ಹೊತ್ತುಕೊಂಡು ಶಾಲೆಗೆ ಹೋಗುವುದನ್ನು ನೋಡಿ ನೀವಿನ್ನು ಬೇಸರಪಡಬೇಕಾಗಿಲ್ಲ. ಏಕೆಂದರೆ ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳು ಎಷ್ಟು ತೂಕದ ಚೀಲವನ್ನು ಬಳಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯೇ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದೆ. ಇದನ್ನು ಎಲ್ಲ ಶಾಲೆಗಳೂ ಕಡ್ಡಾಯವಾಗಿ ಜಾರಿಗೆ ತರಬೇಕೆಂದು (Education News) ಸೂಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ICMR Report: ಕೋವಿಡ್ ವ್ಯಾಕ್ಸಿನ್‌ಗೂ ಹಾರ್ಟ್ ಅಟ್ಯಾಕ್‌ಗೂ ಇದ್ಯಾ ನಂಟು? ಐಸಿಎಂಆರ್ ಅಧ್ಯಯನ ವರದಿಯಲ್ಲಿ ಏನಿದೆ?
ಕೋವಿಡ್ (Covid-19) ಅಟ್ಟಹಾಸ ಬಹುತೇಕ ನಿತ್ರಾಣಗೊಂಡಿದೆ. ಈ ಕೋವಿಡ್ ಎದುರಿಸಲು ನೀಡಲಾದ ಲಸಿಕೆಗಳ (Covid Vaccine) ಅಡ್ಡ ಪರಿಣಾಮ ಕಾಣಿಸಿಕೊಳ್ಳುತ್ತಿದೆಯೇ? ಈ ಅನುಮಾನಕ್ಕೆ ಕಾರಣವಿದೆ. ಯಾಕೆಂದರೆ, ಕಳೆದ ಎರಡ್ಮೂರು ವರ್ಷದಲ್ಲಿ ಸಡನ್ ಹಾರ್ಟ್ ಅಟ್ಯಾಕ್ (Heart Attack) ಆಗಿ ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಲಸಿಕೆಯೇ ಇದಕ್ಕೆ ಕಾರಣ ಎಂಬ ಸಾಮಾನ್ಯ ಆರೋಪವಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಅಗ್ರ ಆರೋಗ್ಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಧ್ಯಯನ ಕೈಗೊಂಡಿದೆ. ಈ ಕೋವಿಡ್ ಲಸಿಕೆ ಹಾಗೂ ಹೃದಯಾಘಾತಗಳ ನಡುವೆ ಸಂಬಂಧವಿದೆಯೇ ಎಂದ ನಿಟ್ಟಿನಲ್ಲಿ ಐಸಿಎಂಆರ್ (ICMR Report) ಅಧ್ಯಯನ ಕೈಗೊಂಡಿದ್ದು, ಮುಂದಿನ ಎರಡು ವಾರದಲ್ಲಿ ವರದಿಯನ್ನು ಬಹಿರಂಗ ಮಾಡಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. PM Modi US Visit: ನಾನು ಮೋದಿ ಫ್ಯಾನ್, ಅವರು ಭಾರತಕ್ಕೆ ಒಳಿತು ಮಾಡಲಿದ್ದಾರೆ: ಎಲಾನ್ ಮಸ್ಕ್
ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫ್ಯಾನ್. ಅವರು ಭಾರತಕ್ಕೆ ಯಾವುದು ಒಳಿತೋ ಅದನ್ನು ಮಾಡಲು ಬಯಸಿದ್ದಾರೆ ಎಂದು ಟ್ವಿಟರ್ ಮಾಲಿಕ, ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ. ಇಂದು ಅಮೆರಿಕ ಭೇಟಿಯಲ್ಲಿರುವ (PM Modi US Visit) ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾದ ಬಳಿಕ ಅವರು ಹೀಗೆಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Sensex hits all time high : ಯೋಗ ದಿವಸ ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆಯ ಯೋಗಾಯೋಗ
ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಮಧ್ಯಂತರ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೆ ಏರಿಕೆಯಾಯಿತು. (Sensex hits all time high) 2022ರ ಡಿಸೆಂಬರ್‌ನಲ್ಲಿ ದಾಖಲಿಸಿದ್ದ ಎತ್ತರವನ್ನೂ ಹಿಂದಿಕ್ಕಿತು. ಸೆನ್ಸೆಕ್ಸ್ ಈ ಹಿಂದೆ 63,583 ಅಂಕ ಗಳಿಸಿತ್ತು. ಸೆನ್ಸೆಕ್ಸ್ 260 ಅಂಕ ಏರಿಕೊಂಡು 63,583ರ ಸಾರ್ವಕಾಲಿಕ ಎತ್ತರಕ್ಕೇರಿತು. ಬಳಿಕ ಸೆಲ್ಲಿಂಗ್ ಪ್ರೆಶರ್ ಪರಿಣಾಮ ಇಳಿಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ದೇಶದ ಪ್ರಧಾನಿ ಯಾರೆಂದು ಹೇಳದ ಗಂಡ; ಕೋಪದಲ್ಲಿ ಅವನ ತಮ್ಮನ ವಿವಾಹವಾದ ವಧು!
ಮಂಟಪದವರೆಗೆ ಹೋದ ‘ಮದುವೆ’ಗಳು ರದ್ದಾದ (Wedding Cancel) ಅದೆಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. ವರ ಕುಡಿದು ಮಂಟಪಕ್ಕೆ ಬಂದನೆಂದು, ವರನ ಕಡೆಯವರು ಕೊಟ್ಟ ಸೀರೆ ಚೆನ್ನಾಗಿಲ್ಲವೆಂದು..ಹೀಗೆ ಇತ್ಯಾದಿ ಕಾರಣಕ್ಕೆ ವಧು ಮದುವೆಯನ್ನು ನಿರಾಕರಿಸಿ ಎದ್ದುಹೋದಿದ್ದನ್ನು ಕೇಳಿದ್ದೇವೆ. ಆದರೆ ಈ ಘಟನೆ ವಿಭಿನ್ನ. ಇಲ್ಲೊಬ್ಬಳು ನವವಧು ಮದುವೆಯಾದ ಕೆಲವೇ ಗಂಟೆಯಲ್ಲಿ ಆ ಗಂಡನನ್ನು ಬಿಟ್ಟು, ಅವನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾಳೆ. ದೇಶದ ಪ್ರಧಾನಮಂತ್ರಿ (Prime Minister Of India) ಯಾರೆಂದು ಕೇಳಿದ ಪ್ರಶ್ನೆಗೆ ಪತಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಆ ಯುವತಿ ಹೀಗೆ ಮದುವೆ ಮುರಿದುಕೊಂಡಿದ್ದಾಳೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.