ಬೆಂಗಳೂರು: ಮೂಗಿನ ಮೂಲಕ ಲಸಿಕೆ ನೀಡಿಕೆ ಆರಂಭವಾಗುತ್ತಿದ್ದು, ಕೋವಿಡ್ ಆತಂಕದ ನಡುವೆಯೇ ಹೊಸ ಭರವಸೆ ಮೂಡಿಸಿದೆ. ಐಪಿಎಲ್ ಆಟಗಾರರ ಭರ್ಜರಿ ಹರಾಜು ನಡೆದಿದೆ, ಒಕ್ಕಲಿಗ ಸಮುದಾಯ ಮೀಸಲಾತಿಗೆ ಒತ್ತಾಯಿಸಿದೆ, ಸೇನಾ ವಾಹನ ಪಲ್ಟಿಯಾಗಿ 16 ಯೋಧರು ಪ್ರಾಣ ಬಿಟ್ಟಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Coronavirus | 18 ವರ್ಷ ಮೇಲ್ಪಟ್ಟವರಿಗೆ ಮೂಗಿನ ಮೂಲಕ ಕೋವಿಡ್ ಲಸಿಕೆ, ಮೊದಲು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ
ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ ಲಸಿಕೆಯು ( iNCOVACC ಅಥವಾ BBV154 ) ಶುಕ್ರವಾರ ಸಂಜೆಯಿಂದಲೇ, ಮೊದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯಲಿದೆ. ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿಯೂ (Coronavirus ) ಸಿಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Coronavirus | ತಪಾಸಣೆ, ಪತ್ತೆ, ಚಿಕಿತ್ಸೆ, ಲಸಿಕೆ, ಸೋಂಕು ನಿಗ್ರಹಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರ ನಾಲ್ಕು ಸೂತ್ರ
ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ (Coronavirus) ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸೋಂಕಿನ ನಿಗ್ರಹಕ್ಕೆ ನಾಲ್ಕು ಸೂತ್ರ ಪಾಲಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. “ಆಯಾ ರಾಜ್ಯಗಳು ಕೊರೊನಾ ತಪಾಸಣೆ, ಪತ್ತೆ, ಚಿಕಿತ್ಸೆ ಹಾಗೂ ಕ್ಷಿಪ್ರವಾಗಿ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಬೇಕು” ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Coronavirus | ತಪಾಸಣೆ, ಪತ್ತೆ, ಚಿಕಿತ್ಸೆ, ಲಸಿಕೆ, ಸೋಂಕು ನಿಗ್ರಹಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರ ನಾಲ್ಕು ಸೂತ್ರ
3. Coronavirus | ಕೊರೊನಾ 4ನೇ ಅಲೆ ಭೀತಿ; ಮತ್ತೆ ಶುರುವಾಗುತ್ತಾ ಆನ್‌ಲೈನ್ ಕ್ಲಾಸ್?
ಕೊರೊನಾ 4ನೇ ಅಲೆಯ ಭೀತಿ ಇರುವುದರಿಂದ ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಈ ಮಧ್ಯೆ ಪೋಷಕರಲ್ಲಿ ಸೋಂಕು ಹರಡುವಿಕೆ ಭೀತಿ ಹೆಚ್ಚಾಗಿದ್ದು, ಶಾಲಾ ಮುಖ್ಯಸ್ಥರಿಗೆ ನಿತ್ಯ ನೂರಾರು ಕರೆಗಳು ಬರುತ್ತಿವೆಯಂತೆ. ಹೆಚ್ಚಿನವರ ಪ್ರಶ್ನೆ ಮತ್ತೆ ಆನ್‌ಲೈನ್ ಕ್ಲಾಸ್ ಶುರುವಾಗುತ್ತದೆಯಾ ಎನ್ನುವುದು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Coronavirus | ಕೋವಿಡ್ ನೆಪದಲ್ಲಿ ಹೋಟೆಲ್ ಬಂದ್ ಮಾಡಬೇಡಿ: ಹೋಟೆಲ್ ಉದ್ಯಮಿಗಳ ಮನವಿ
4. IPL Auction 2023 | ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರರ ಪಟ್ಟಿ ಇಲ್ಲಿದೆ
ಐಪಿಎಲ್ ಹರಾಜು ಪ್ರಕ್ರಿಯೆ ಶುಕ್ರವಾರ (ಡಿಸೆಂಬರ್ 23) ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದೆ. ಇಂಗ್ಲೆಂಡ್ ಬೌಲಿಂಗ್ ಅಲ್ರೌಂಡರ್ ಸ್ಯಾಮ್ ಕರ್ರನ್ ಅವರು 18.8 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡ ಸೇರುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ಅಂತೆಯೇ ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರರ ಪಟ್ಟಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Vokkaliga Reservation | ಒಕ್ಕಲಿಗ ಮೀಸಲಾತಿ ಕುರಿತು ಶೀಘ್ರ ವರದಿ ಲಭಿಸಲಿದೆ: ಸಿಎಂ ಬೊಮ್ಮಾಯಿ
ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ (Vokkaliga Reservation) ಹೆಚ್ಚಳಕ್ಕೆ ಆದಷ್ಟು ಶೀಘ್ರವಾಗಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿ ಪ್ರಮಾಣವನ್ನು ಶೇಕಡಾ 12ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರದಲ್ಲಿರುವ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರಿಂದ ಮನವಿ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಸಿಕ್ಕಿಂನಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ 16 ಯೋಧರು ಹುತಾತ್ಮ
ಸಿಕ್ಕಿಂನಲ್ಲಿ ಸೇನೆಯ ವಾಹನ ಕಂದಕಕ್ಕೆ ಉರುಳಿ (16 Jawans Martyred) 16 ಯೋಧರು ಹುತಾತ್ಮರಾಗಿದ್ದು, ನಾಲ್ವರಿಗೆ ಗಾಯಗಳಾಗಿವೆ. ಉತ್ತರ ಸಿಕ್ಕಿಂನ ಲಾಚೆನ್ ಪಟ್ಟಣದ ಬಳಿ ಶುಕ್ರವಾರ ಬೆಳಗ್ಗೆ ಲಾಚೆನ್ ಪಟ್ಟಣದ ಬಳಿ ಭಾರಿ ಅಪಘಾತ ಸಂಭವಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಎಲೆಕ್ಷನ್ ಹವಾ | ದಾವಣಗೆರೆ ದಕ್ಷಿಣ | 90ರ ಸೇನಾನಿ ಶಾಮನೂರು ಶಿವಶಂಕರಪ್ಪ ಕೋಟೆಯನ್ನು ಭೇದಿಸುವುದು ಸಾಧ್ಯವೇ?
ಕ್ಷೇತ್ರದಲ್ಲಷ್ಟೆ ಅಲ್ಲದೇ ವೀರಶೈವ ಲಿಂಗಾಯತ ಸಮುದಾಯದಲ್ಲೂ ಅತ್ಯುನ್ನತ ನಾಯಕರೆನಿಸಿಕೊಂಡಿರುವ ಶಾಮನೂರು ಶಿವಶಂಕರಪ್ಪ ಅವರನ್ನು ಸೋಲಿಸುವುದು ಅಸಾಧ್ಯ ಎನ್ನುವ ಮಾತೂ ಇದೆ. ಆದರೂ ಪ್ರಯತ್ನ ಜಾರಿಯಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Vladimir Putin | ಉಕ್ರೇನ್ ಜತೆಗಿನ ಯುದ್ಧ ಸ್ಥಗಿತಕ್ಕೆ ಸಿದ್ಧ ಎಂದು ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಉಕ್ರೇನ್‌ನೊಂದಿಗೆ ಯುದ್ಧವನ್ನು ಕೊನೆಗಾಣಿಸಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಘೋಷಿಸಿದ್ದಾರೆ. ಎಲ್ಲ ಸಶಸ್ತ್ರ ಸಂಘರ್ಷಗಳು ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಅಂತ್ಯವಾಗಿವೆ ಎಂದು ಅವರು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Hombale Films | 5 ವರ್ಷದಲ್ಲಿ ಚಿತ್ರೋದ್ಯಮಕ್ಕೆ 3 ಸಾವಿರ ಕೋಟಿ ರೂ. ಬಂಡವಾಳ ಹೂಡಲಿದೆಯಂತೆ ಹೊಂಬಾಳೆ!
ಭಾರತಿಯ ಚಿತ್ರರಂಗದಲ್ಲಿ ಅತ್ಯುತ್ತಮ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ (Hombale Films) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಚಿತ್ರೋದ್ಯಮಕ್ಕೆ 3000 ಕೋಟಿ ರೂ. ಬಂಡವಾಳ ಹೂಡಲಿದೆಯಂತೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Vistara News Impact | ಕ್ಲಾಸ್‌ಗೆ ಚಕ್ಕರ್ ಹಾಕಿ ಎಣ್ಣೆ ಪಾರ್ಟಿ ಮಾಡ್ತಿದ್ದ ನಾಲ್ವರು ಶಿಕ್ಷಕರು ಸಸ್ಪೆಂಡ್, HM ವಿರುದ್ಧ ಶಿಸ್ತುಕ್ರಮ
ಮಕ್ಕಳಿಗೆ ಪಾಠ ಮಾಡೋದನ್ನು ಬಿಟ್ಟು, ಪ್ರತಿನಿತ್ಯ ಬಾರ್‌ಗೆ, ಡಾಬಾಕ್ಕೆ ಹೋಗಿ ಪಾರ್ಟಿ ಮಾಡುತ್ತಾ ಮೈಮರೆಯುತ್ತಿದ್ದ ಶಿಕ್ಷಕರಿಗೆ ಕೊನೆಗೂ ಪಾಠ ಕಲಿಸಲಾಗಿದೆ. ವಿಸ್ತಾರ ನ್ಯೂಸ್ ವರದಿ ಮಾಡುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಇವರಲ್ಲಿ ನಾಲ್ವರನ್ನು ಅಮಾನತು ಮಾಡಿದೆ (Vistara News Impact), ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
1 Sensex crash | ಸೆನ್ಸೆಕ್ಸ್ ಕುಸಿತದಿಂದ ಹೂಡಿಕೆದಾರರಿಗೆ ಶುಕ್ರವಾರ ಒಂದೇ ದಿನ 5.5 ಲಕ್ಷ ಕೋಟಿ ರೂ. ನಷ್ಟ
2. ಗೋ ಸಂಪತ್ತು | ಪ್ರಪಂಚಕ್ಕೆ ಭಾರತ ನೀಡಿದ ದಿವ್ಯ ಔಷಧ ಪಂಚಗವ್ಯ
3. Sania Mirza | ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಾನಿಯಾ ಮಿರ್ಜಾ
4. Corruption charge | ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ಕೋರ್ಟ್
5. Parliament Winter Session | 6 ದಿನ ಮೊದಲೇ ಸಂಸತ್ ಅಧಿವೇಶನ ಅಂತ್ಯ, ಪಾಸಾಗಲಿಲ್ಲ 16 ವಿಧೇಯಕ