1. Modi in Karnataka: ದೇಶದಲ್ಲೀಗ 3,167 ಹುಲಿ; ಹತ್ತು ವರ್ಷದಲ್ಲಿ ಡಬಲ್: IBCAಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ಭಾರತದಲ್ಲಿ 50 ವರ್ಷದ ಹಿಂದೆ ಆರಂಭಿಸಿದ ಹುಲಿ ಸಂರಕ್ಷಣೆ ಕಾರ್ಯಕ್ರಮ ಫಲಪ್ರದವಾಗಿದ್ದು, ಕಳೆದ ಹತ್ತು ವರ್ಷದಲ್ಲೇ ಹುಲಿಗಳ ಸಂಖ್ಯೆ ಡಬಲ್ ಆಗಿದೆ. ಈ ವರ್ಷದ ಹುಲಿ ಅಂಕಿ ಅಂಶವನ್ನು ಪ್ರಧಾನಿ ಘೋಷಣೆ ಮಾಡಿದರು. 2006ರಲ್ಲಿ 1,411 ಹುಲಿಗಳಿದ್ದವು. ಈ ಸಂಖ್ಯೆ 2010ರಲ್ಲಿ 1,706, 2014ರಲ್ಲಿ 2,967 ಆಗಿತ್ತು. 2022ರ ಸಮೀಕ್ಷೆಯಂತೆ ಇದೀಗ ಭಾರತದಲ್ಲಿ 3,167 ಹುಲಿಗಳಿವೆ ಎಂದು ತಿಳಿಸಿದರು. 2010ರಲ್ಲಿ ರಷ್ಯಾದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ಟೈಗರ್ ಫೋರಂನಲ್ಲಿ, ಮುಂದಿನ 10 ವರ್ಷದಲ್ಲಿ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಸಂಕಲ್ಪವನ್ನು ರಾಷ್ಟ್ರಗಳು ಮಾಡಿದ್ದವು. ಸಮಯಕ್ಕೂ ಮೊದಲೇ ಭಾರತ ಗುರಿ ಸಾಧಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Narendra Modi: ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ-ಬೆಳ್ಳಿ ದಂಪತಿ ಜತೆ ಮೋದಿ ಮಾತು, ಆನೆ ಸಂರಕ್ಷಣೆಗೆ ಮೆಚ್ಚುಗೆ
2. Karnataka Politics: ಆರ್‌ಎಸ್‌ಎಸ್ ಮತ್ತು ಹಿಂದು ಮಹಾಸಭಾ ನಿಯಂತ್ರಣದಲ್ಲಿ ಬಿಜೆಪಿ: ಸಿದ್ದರಾಮಯ್ಯ ಹೇಳಿಕೆ
ಸಮಸಮಾಜ ನಿಯಂತ್ರಣವಾದರೆ ಶೋಷಣೆಗೆ ಅವಕಾಶ ಇರುವುದಿಲ್ಲ ಎಂದು ಬಿಜೆಪಿಯವರು ಚಿಂತನೆ ನಡೆಸಿದ್ದು, ಬಿಜೆಪಿಯನ್ನು ಆರ್‌ಎಸ್‌ಎಸ್ ಮತ್ತು ಹಿಂದು ಮಹಾಸಭಾ ನಿಯಂತ್ರಿಸುತ್ತವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Save Nandini: ಕನ್ನಡ ಬಳಸುತ್ತಿರುವುದಕ್ಕೇ ನಂದಿನಿಯನ್ನು ನಾಶಪಡಿಸಲು ಬಿಜೆಪಿ ಮುಂದಾಗಿದೆ: ಎಐಸಿಸಿ ವಕ್ತಾರ ಗೌರವ್ ವಲ್ಲಭ್
ನಂದಿನಿ ಉತ್ಪನ್ನದಲ್ಲಾಗಲಿ, ಸರಬರಾಜಿನಲ್ಲಾಗಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಬರೆಯಲಾಗಿದೆ ಎನ್ನುವುದೇ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಇದನ್ನು ನಾಶಪಡಿಸಲು ಮುಂದಾಗಿರುವುದಕ್ಕೆ ಪ್ರಮುಖ ಕಾರಣ ಎಂದು ಎಐಸಿಸಿ ವಲ್ತಾರ ಗೌರವ್ ವಲ್ಲಭ್ ಆರೋಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Nandini vs Amul: ಅಮುಲ್ ಜತೆ ನಂದಿನಿ ವಿಲೀನ ಪ್ರಸ್ತಾಪವೇ ಇಲ್ಲ: ಸಚಿವ ಎಸ್.ಟಿ. ಸೋಮಶೇಖರ್
4. Sachin Pilot: ಭ್ರಷ್ಟಾಚಾರ ವಿರುದ್ಧ ಸತ್ಯಾಗ್ರಹಕ್ಕೆ ಪೈಲಟ್ ಸಿದ್ಧತೆ; ರಾಜಸ್ಥಾನದಲ್ಲಿ ಮತ್ತೆ ಗೆಹ್ಲೋಟ್-ಸಚಿನ್ ಜಟಾಪಟಿ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಕಾಂಗ್ರೆಸ್‌ನ ಯುವ ನಾಯಕ ಸಚಿನ್ ಪೈಲಟ್ (Sachin Pilot) ನಡುವಿನ ಮುಸುಕಿನ ಗುದ್ದಾಟ ನಿಲ್ಲುವಂತಿಲ್ಲ ಕಾಣುತ್ತಿಲ್ಲ. ಈ ಇಬ್ಬರೂ ನಾಯಕರು ಪರಸ್ಪರ ಆಗಾಗ ವಾಗ್ವಾದಲ್ಲಿ ತೊಡಗಿಕೊಳ್ಳುತ್ತಾರೆ. ಈಗ ಸಚಿನ್ ಪೈಲಟ್ ಅವರು, ಭ್ರಷ್ಟಾಚಾರದ ವಿರುದ್ದ ಸತ್ಯಾಗ್ರಹ ನಡೆಸುವುದಾಗಿ ಹೇಳುವ ಮೂಲಕ ಸಿಎಂ ಗೆಹ್ಲೋಟ್ ವಿರುದ್ಧ ತೊಡೆ ತೊಟ್ಟಿದ್ದಾರೆ. ಮಂಗಳವಾರ ಅವರು ಒಂದು ದಿನ ಸತ್ಯಾಗ್ರಹ ನಡೆಸಲಿದ್ದಾರೆ. ಈ ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ನಡೆಸಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಗೆಹ್ಲೋಟ್ ಸರ್ಕಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. IPL 2023 : ಮಿಂಚಿದ ರಿಂಕು ಸಿಂಗ್; ಚಾಂಪಿಯನ್ ಗುಜರಾತ್ ವಿರುದ್ಧ ಕೆಕೆಆರ್ ಬಳಗಕ್ಕೆ ರೋಚಕ ಗೆಲುವು
ಚಾಂಪಿಯನ್ ಗುಜರಾತ್ ತಂಡದ ವಿರುದ್ಧದ ಗೆಲುವಿಗೆ ಕೊನೇ ಓವರ್ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡಕ್ಕೆ 29 ರನ್ ಬೇಕಾಗಿತ್ತು. ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ (ಅಜೇಯ 48 ರನ್, 21 ಎಸೆತ, 6 ಸಿಕ್ಸರ್, 1 ಫೋರ್) ಕೊನೇ ಐದು ಎಸೆತಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ 30 ರನ್ ತಂದುಕೊಟ್ಟರು. ಅಲ್ಲದೆ, ಇನಿಂಗ್ಸ್ನ ಕೊನೇ ಓವರ್ನಲ್ಲಿ ಒಟ್ಟು 31 ರನ್ ಬಾರಿಸಿದ ಕೆಕೆಆರ್ ತಂಡ ಮೂರು ವಿಕೆಟ್ ರೋಚಕ ವಿಜಯ ದಾಖಲಿಸಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಗ್ಯಾಂಗ್ಸ್ಟರ್ಗಳ ಪ್ಯಾಂಟ್ ಒದ್ದೆಯಾಗುತ್ತಿದೆ, ಜೀವ ಉಳಿಸಿಕೊಳ್ಳಲು ಓಡುತ್ತಿದ್ದಾರೆ: ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದಲ್ಲಿ ಗ್ಯಾಂಗ್ಸ್ಟರ್ಗಳು ಕೋರ್ಟ್ನಿಂದ ಶಿಕ್ಷೆ ಪಡೆದ ಬೆನ್ನಲ್ಲೇ ತಮ್ಮ ಪ್ಯಾಂಟ್ ಒದ್ದೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಕಾನೂನಿನ ಹೆದರಿಕೆ ಇಲ್ಲದೆ ಜನರನ್ನು ಸುಲಿಗೆ ಮಾಡುತ್ತಿದ್ದವರು, ಬೆದರಿಕೆಯೊಡ್ಡಿ ಅವರನ್ನ ಅಪಹರಣ ಮಾಡುತ್ತಿದ್ದವರೆಲ್ಲ ಈಗ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ ಮತ್ತು ಅವರ ಪ್ಯಾಂಟ್ ಒದ್ದೆಯಾಗುತ್ತಿರುವುದು ಕಾಣುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Weather Report: ರಾಜ್ಯದ ಹಲವೆಡೆ ತಗ್ಗಿದ ಮಳೆ; ಮುಂದಿನ 48 ಗಂಟೆಯಲ್ಲಿ ಈ ಜಿಲ್ಲೆಯಲ್ಲಷ್ಟೇ ಆರ್ಭಟ
ರಾಜ್ಯಾದ್ಯಂತ ಹಲವೆಡೆ ಮಳೆಯ (Rain updates) ಅಬ್ಬರ ತಗ್ಗಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿವ ವರದಿ ಆಗಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಣಹವೆಯಿಂದ (Weather Report) ಕೂಡಿತ್ತು. ಧಾರವಾಡ 2 ಹಾಗೂ ಬೆಳಗಾವಿಯ ಲೋಂಡಾದಲ್ಲಿ 1 ಸೆಂ.ಮೀ ಮಳೆಯಾಗಿದ್ದು, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 37.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Triple Talaq: ಆನ್‌ಲೈನ್‌ನಲ್ಲಿ 1.5 ಲಕ್ಷ ರೂ. ಕಳೆದುಕೊಂಡ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ
ದೇಶದಲ್ಲಿ ಎಂತಹದ್ದೇ ಕಾನೂನು ಬರಲಿ, ಆ ಕಾನೂನು ಎಷ್ಟೇ ವೈಜ್ಞಾನಿಕವಾಗಿರಲಿ, ನ್ಯಾಯಪರವಾಗಿರಲಿ, ಕೆಲವು ಕುತ್ಸಿತ ಮನಸ್ಸುಗಳು ಮಾತ್ರ ಕಾನೂನಿಗೆ ಬೆಲೆ ಕೊಡುವುದಿಲ್ಲ. ಕಾನೂನಿಗೆ ಬೆಲೆ ಕೊಡುವುದು ಬಿಡಿ ಕನಿಷ್ಠ ಮಾನವೀಯತೆಯನ್ನೂ ತೋರುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಒಡಿಶಾದಲ್ಲಿ ಮಹಿಳೆಯೊಬ್ಬರು ಆನ್‌ಲೈನ್ ವಂಚನೆ ಜಾಲಕ್ಕೆ ಸಿಲುಕಿ 1.5 ಲಕ್ಷ ರೂ. ಕಳೆದುಕೊಂಡರು ಎಂದು ಪತಿಯು ತ್ರಿವಳಿ ತಲಾಕ್ (Triple Talaq) ನೀಡಿದ್ದಾನೆ. ಆ ಮೂಲಕ ಮಹಿಳೆಯೊಬ್ಬರ ವಿರುದ್ಧ ವಿಕೃತಿ ಮೆರೆದಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. CNG PNG Price: ದೇಶಾದ್ಯಂತ ಸಿಎನ್‌ಜಿ, ಪಿಎನ್‌ಜಿ ಬೆಲೆ 7 ರೂ.ವರೆಗೆ ಇಳಿಕೆ, ಕರ್ನಾಟಕದಲ್ಲಿ ಎಷ್ಟು ಕಡಿಮೆ?
ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬಹುಪಾಲು ಹೊಸ ಬೆಲೆ ಕಾರ್ಯವಿಧಾನ(APM)ವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ (CNG PNG Price) ದೇಶಾದ್ಯಂತ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಬೆಲೆಯು ಒಂದು ಕೆ.ಜಿಗೆ ಏಳು ರೂಪಾಯಿವರೆಗೆ ಇಳಿಕೆಯಾಗಿದೆ. ಭಾನುವಾರ ಗೇಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ಸಿಎನ್‌ಜಿ ಹಾಗೂ ಪಿಎನ್‌ಜಿ ಬೆಲೆಯನ್ನು ಇಳಿಕೆ ಮಾಡಿದೆ. ಇದರಿಂದಾಗಿ ಸಿಎನ್‌ಜಿ ವಾಹನಗಳು ಹಾಗೂ ಪಿಎನ್‌ಜಿ ಸೌಲಭ್ಯ ಇರುವ ಗ್ರಾಹಕರಿಗೆ ಭಾರಿ ಅನುಕೂಲವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Govt Doctors Shortage: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ; ನೇಮಕಾತಿಗೆ ಬೇಕಿದೆ ಭರ್ತಿ 2 ತಿಂಗಳು
ಇಡೀ ರಾಜ್ಯದಲ್ಲಿ ಜೆನರಲ್ ಆಸ್ಪತ್ರೆ, ಪಿಎಚ್‌ಸಿ, ಟ್ರಯಾಜ್ ಸೆಂಟರ್, ನಮ್ಮ ಕ್ಲಿನಿಕ್, ಮೆಟರ್ನಿಟಿ ಹೋಂ ಎಂದು ಸಾವಿರಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ ಅಲ್ಲಿ ಸಿಗಬೇಕಾದ ಮೂಲ ಸೌಕರ್ಯಗಳೇ ಇತ್ತೀಚೆಗೆ ಸಿಗದಂತಾಗಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ (Govt Doctors Shortage) ಎದುರಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Kiccha Sudeep: ಸುದೀಪ್‌ಗೆ ಬೆದರಿಕೆ ಪತ್ರ; ಸ್ವಿಫ್ಟ್ ಕಾರಲ್ಲಿ ಬಂದು ಲೆಟರ್ ಪೋಸ್ಟ್, ಇದೆಲ್ಲವೂ ಪ್ರಿ ಪ್ಲಾನ್ಡ್?
- D ಕೋಡ್ ಅಂಕಣ: ರಾಜಕೀಯ ಹವಾಮಾನ ವರದಿ: ಕಾಂಗ್ರೆಸ್ ಕಡೆಗೆ ಬೀಸುವಂತಿದೆ ತಂಗಾಳಿ; ಪಕ್ಷಾಂತರಿಗಳಿಗೆ ತಿಳಿದಿದೆಯೇ ಒಳಸುಳಿ?
- ಬಿಸಿಯೂಟಕ್ಕಾಗಿ ಶಾಲೆಗೆ ಬಂದಿದ್ದ 100 ಕೆಜಿ ಗೋಧಿ, ಬೇಳೆಯನ್ನು ಮನೆಗೆ ಸಾಗಿಸುತ್ತಿದ್ದ ಇಬ್ಬರು ಶಿಕ್ಷಕರು; ಚೆಕ್‌ಪೋಸ್ಟ್ ತಪಾಸಣೆಯಲ್ಲಿ ಸಿಕ್ಕಿಬಿದ್ದರು!