1. Nepal Plane Crash | ನೇಪಾಳದಲ್ಲಿ 72 ಜನರಿದ್ದ ವಿಮಾನ ಪತನ; ಹಲವರು ಮೃತಪಟ್ಟಿರುವ ಶಂಕೆ
ನೇಪಾಳದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇದಲ್ಲಿ ಪ್ರಯಾಣಿಕರ ವಿಮಾನವೊಂದು ಪತನಗೊಂಡಿದೆ. ಬಿದ್ದ ರಭಸಕ್ಕೆ ವಿಮಾನಕ್ಕೆ ಬೆಂಕಿ ಹೊತ್ತಿ ಉರಿದಿದೆ. ಈ ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಮತ್ತು 68 ಪ್ರಯಾಣಿಕರು ಇದ್ದರು. ಸದ್ಯ ಇವರೆಲ್ಲರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ವಿಸ್ತಾರ Explainer | ನೇಪಾಳದಲ್ಲಿ ಪದೇಪದೆ ವಿಮಾನ ದುರಂತ ಸಂಭವಿಸುವುದೇಕೆ? ಇದುವರೆಗಿನ ಭೀಕರ ದುರಂತ ಯಾವವು?
2. Santro Ravi Case | ಸ್ಯಾಂಟ್ರೋ ರವಿಗೆ ತಲೆಮರೆಸಿಕೊಳ್ಳಲು ಹಣ ಕೊಟ್ಟು ಸಹಕರಿಸಿದ್ದು ಪೊಲೀಸ್ ಅಧಿಕಾರಿಗಳೇ?
ತಲೆಮರೆಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿ (Santro Ravi Case) ಬಂಧನವಾಗಿ ಜೈಲಿನಲ್ಲಿದ್ದಾನೆ. ಆದರೆ, ಕೇಸ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಳ್ಳಲು ಈತನಿಗೆ ಹಣಕಾಸಿನ ಸಹಾಯ ಮಾಡಿದವರು ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳೆಂಬುವುದು ಬೆಳಕಿಗೆ ಬಂದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Santro Ravi : ಪಿಂಪ್‌ಗಳಿಂದ ಹಣ ಮಾಡಿಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ: ಆರಗ ಜ್ಞಾನೇಂದ್ರ
3. Nitin Gadkari : ನಿತಿನ್ ಗಡ್ಕರಿಗೆ ಜೀವ ಬೆದರಿಕೆ: ಹಿಂಡಲಗಾದಲ್ಲಿ ಕೈದಿ ಜಯೇಶ್ ಪೂಜಾರಿ ವಶಕ್ಕೆ; ವಿಚಾರಣೆ ತೀವ್ರ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮೊಬೈಲ್ ನಂಬರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಪ್ರಾಣ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದ್ದು, ಹಿಂಡಲಗಾ ಜೈಲಿನಲ್ಲಿ ಕೈದಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Nitin Gadkari : ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಗಡ್ಕರಿಗೆ ಜೀವ ಬೆದರಿಕೆಯೊಡ್ಡಿದ್ದು ಕೊಲೆ ಅಪರಾಧಿ; ಡೈರಿ ವಶ
4. ʼ200 ಯುನಿಟ್ ಉಚಿತ ವಿದ್ಯುತ್ʼ ಶಾಕ್‌ನಲ್ಲಿ ಬಿಜೆಪಿ: ಸೋಮವಾರ ನಡೆಯುವ ʼಪ್ರಿಯಾಂಕಾ ಗಾಂಧಿʼ ಸಮಾವೇಶದ ಮೇಲೆ ಎಲ್ಲರ ಕಣ್ಣು
ದಿನಕಳೆದಂತೆ ವಿವಿಧ ಸಮಾವೇಶಗಳು ಹಾಗೂ ಸರ್ಕಾರದ ವಿರುದ್ಧ ಆರೋಪಗಳ ಮೂಲಕ ಅಬ್ಬರ ಮಾಡುತ್ತಿರುವ ಕಾಂಗ್ರೆಸ್ ಇತ್ತೀಚೆಗೆ ಘೋಷಣೆ ಮಾಡಿದ ʼ200 ಯೂನಿಟ್ ಉಚಿತ ವಿದ್ಯುತ್ʼ ಘೋಷಣೆಯಿಂದ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೀಗ ನೆಹರೂ ಕುಟುಂಬದ ಪ್ರಿಯಾಂಕಾ ಗಾಂಧಿ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದು, ಮತ್ತೆ ಯಾವ ಘೋಷಣೆ ಮಾಡಬಹುದು ಎಂಬ ಕುತೂಹಲದಲ್ಲಿ ಪ್ರಮುಖವಾಗಿ ಆಡಳಿತಾರೂಢ ಬಿಜೆಪಿ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Adi Yogi | ನೀವೇ ನಿರ್ಮಿಸಿಕೊಂಡ ಬೇಲಿಗಳಿಂದ ಹೊರಬನ್ನಿ; ಸದ್ಗುರು: ಚಿಕ್ಕಬಳ್ಳಾಪುರದಲ್ಲಿ ಆದಿ ಯೋಗಿ ಪ್ರತಿಮೆ
ಬೆಂಗಳೂರು: ಮಾನವರು ಹುಟ್ಟುತ್ತ ಯಾವುದೇ ಬೇಲಿಗಳಿಲ್ಲದೇ ಇರುತ್ತಾರೆ. ಆದರೆ ನಂತರದಲ್ಲಿ ತಮ್ಮ ಸುತ್ತಲೇ ಬೇಲಿಗಳನ್ನು ನಿರ್ಮಿಸಿಕೊಳ್ಳುತ್ತ ಅದನ್ನೇ ನಿಜವಾದ ಪ್ರಪಂಚ ಎಂದು ಭಾವಿಸುತ್ತಾರೆ. ಅದರಿಂದ ಹೊರಬರಬೇಕು ಎಂದು ಈಶ ಫೌಂಡೇಷನ್‌ನ ಸದ್ಗುರು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದ ಅವಲಗುರ್ಕಿಯಲ್ಲಿ ನಿರ್ಮಾಣವಾಗಿರುವ 112 ಅಡಿ ಎತ್ತರದ ಆದಿಯೋಗಿ (Adi Yogi) ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. INDvsSL ODI | ಶ್ರೀಲಂಕಾ ವಿರುದ್ಧ ಭಾರತ ತಂಡಕ್ಕೆ ವಿಶ್ವ ದಾಖಲೆಯ 317 ರನ್ ವಿಜಯ; ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ
ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ (INDvsSL ODI) ಮೂರನೇ ಪಂದ್ಯದಲ್ಲಿ ಭಾರತ ತಂಡ 317 ರನ್ಗಳ ಬೃಹತ್ ಅಂತರದ ವಿಜಯ ಸಾಧಿಸಿದೆ. ಏಕ ದಿನ ಮಾದರಿಯಲ್ಲಿ ಇದು ವಿಶ್ವ ದಾಖಲೆಯ ರನ್ಗಳ ಅಂತರದ ಗೆಲುವಾಗಿದೆ. ಭಾರತ ತಂಡದ ಬ್ಯಾಟ್ಸ್ಮನ್ಗಳು ಹಾಗೂ ಬೌಲರ್ಗಳು ಗೆಲುವಿನ ಶ್ರೇಯಸ್ಸನ್ನು ಸಮಾನವಾಗಿ ಹಂಚಿಕೊಂಡರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Karnataka Politics | ರಾಜಕೀಯ ತಿರುವು ಪಡೆದ ʼಯತ್ನಾಳ್ ಕಾರು ಚಾಲಕನ ಕೊಲೆʼ ಪ್ರಕರಣ: ಕಾಂಗ್ರೆಸ್‌ನಿಂದ ದೂರು, CBIಗೆ ಕೊಡಿ ಎಂದ ಯತ್ನಾಳ್
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಹೋರಾಟ ನಡೆಸುತ್ತಿದ್ದರಿಂದ ಆರಂಭವಾದ ಸಚಿವ ಮುರುಗೇಶ್ ನಿರಾಣಿ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ನಡುವಿನ ವಾಗ್ಯುದ್ಧ ಇದೀಗ ರಾಜ್ಯ ರಾಜಕೀಯದಲ್ಲಿ (Karnataka Politics) ಹೊಸ ತಿರುವು ಪಡೆದಿದೆ. ನಿರಾಣಿ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದ ಯತ್ನಾಳ್ ವಿರುದ್ಧ ಶನಿವಾರ ಹರಿಹಾಯ್ದಿದ್ದ ನಿರಾಣಿ, ಯತ್ನಾಳ್ ಕಾರು ಚಾಲಕನ ಕೊಲೆ ವಿಚಾರವನ್ನು ತನಿಖೆ ನಡೆಸಿದರೆ ಅನೇಕ ಸತ್ಯಾಂಶ ಹೊರಬರುತ್ತದೆ ಎಂದಿದ್ದರು. ಈ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Army Day In Bengaluru | ಬೆಂಗಳೂರಿನಲ್ಲಿ ಸೇನಾ ದಿನಾಚರಣೆ ಹೇಗಿತ್ತು? ಸೇನೆ ಬಗ್ಗೆ ಹೆಮ್ಮೆ ಮೂಡಿಸುವ ಫೋಟೊಗಳು ಇಲ್ಲಿವೆ
ರಾಜ್ಯ ರಾಜಧಾನಿಯಲ್ಲಿ 75ನೇ ಸೇನಾ ದಿನಾಚರಣೆಯು (Army Day In Bengaluru) ಅದ್ಧೂರಿಯಾಗಿ ನಡೆದಿದೆ. ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದೆಹಲಿ ಹೊರತುಪಡಿಸಿ ಬೇರೆ ಕಡೆ ಸೇನಾ ದಿನ ಆಚರಿಸಲಾಗಿದೆ. ಸೈನಿಕರ ಕವಾಯತು, ಸಾಹಸ ಚಟುವಟಿಕೆಗಳು, ವಿಮಾನಗಳ ಹಾರಾಟವು ಸೇನಾ ದಿನಾಚರಣೆಗೆ ಹೊಸ ಮೆರುಗು ತಂದವು. ಸೇನಾ ದಿನಾಚರಣೆಯ ಪ್ರಮುಖ ಫೋಟೊಗಳು ಇಲ್ಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Makar Sankranti 2023 | ರಾಜ್ಯದೆಲ್ಲೆಡೆ ಮನೆಮಾಡಿದ ಸಂಕ್ರಾಂತಿ ಸಂಭ್ರಮ; ದೇಗುಲದಲ್ಲಿ ನಡೆದ ವಿಶೇಷ ಪೂಜೆ ಪುನಸ್ಕಾರ
ನಾಡಿನೆಲ್ಲೆಡೆ ಮಕರ ಸಂಕ್ರಾಂತಿ (Makar Sankranti 2023) ಸಂಭ್ರಮ ಮನೆಮಾಡಿದ್ದು, ವರ್ಷದ ಮೊದಲ ಹಬ್ಬವನ್ನು ಜನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಎಳ್ಳು-ಬೆಲ್ಲವನ್ನು ಹಂಚಲು ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿಯಲ್ಲಿ ತೊಡಗಿದ್ದರೆ, ಇತ್ತ ವಿವಿಧ ಜಿಲ್ಲೆಗಳ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಪುನಸ್ಕಾರ ನೆರವೇರಿದ್ದು, ಭಕ್ತರ ದಂಡು ಹರಿದು ಬಂತು. ಯಾವ್ಯಾವ ಜಿಲ್ಲೆಯಲ್ಲಿ ಏನೆಲ್ಲ ವಿಶೇಷತೆಗಳು ಜರುಗಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Yogthon | ಬೆಂಗಳೂರು ಸೇರಿ ರಾಜ್ಯಾದ್ಯಂತ ದಾಖಲೆಯ ಯೋಗಥಾನ್
ಬೆಂಗಳೂರು ಸೇರಿದಂತೆ ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ವಿಶ್ವದ ಅತಿದೊಡ್ಡ ಯೋಗಥಾನ್ (Yogthon) ಕಾರ್ಯಕ್ರಮವನ್ನು ಭಾನುವಾರ ಬೆಳಗ್ಗೆ ಆಯೋಜಿಸಲಾಗಿದೆ. ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಯೋಗಥಾನ್ ನಡೆಯುತ್ತಿದ್ದು, ರಾಜ್ಯಾದ್ಯಂತ ಏಕಕಾಲದಲ್ಲಿ ಈ ಯೋಗಥಾನ್‌ಗೆ ಚಾಲನೆ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗಾಗಿ: Yoga Day : 2023 ಜೂನ್ 21ರ ಯೋಗ ದಿನಕ್ಕೆ ಮೈಸೂರಿಗೆ ಬಾಬಾ ರಾಮದೇವ್: ಎಸ್.ಎ. ರಾಮದಾಸ್
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Miss Universe 2022 | ಈ ಸಲ ಭುವನ ಸುಂದರಿ ಪಟ್ಟ ಯುಎಸ್ ಚೆಲುವೆ ಬೋನಿ ಗೇಬ್ರಿಯಲ್ ಪಾಲಿಗೆ; ಮಂಗಳೂರು ಮೂಲದ ದಿವಿತಾ ರೈಗೆ ಎಷ್ಟನೇ ಸ್ಥಾನ?
- Viral Video | ‘ನನ್ನ ತಂಗಿ ಕೆಳಗೆ ಬೀಳದಿರಲಿ’; ಈ ಪುಟ್ಟ ಅಣ್ಣನ ಕಾಳಜಿಗೆ ಸೋಲದೆ ಇರದು ಹೃದಯ
- Vishveshwar Hegde Kageri | ಉತ್ತರ ಕನ್ನಡದಲ್ಲಿ ಪರಿಸರ ವಿಶ್ವವಿದ್ಯಾಲಯ ಘೋಷಣೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ
- Farmers Suicide | ಕಳೆದ ವರ್ಷ ಮಹಾರಾಷ್ಟ್ರದ ಮರಾಠವಾಡದಲ್ಲಿ 1023 ರೈತರ ಆತ್ಮಹತ್ಯೆ!
- ಪೋಸ್ಟ್ ಬಾಕ್ಸ್ 143 | ಕೊಲ್ಲುವುದಾದರೆ ಕೊಂದುಬಿಡು, ಹೀಗೆ ಕಾಡಬೇಡ!