Site icon Vistara News

ವಿಸ್ತಾರ TOP 10 NEWS | ಎಲ್ಲೆಡೆ ಮಾಸ್ಕ್‌ ಕಡ್ಡಾಯದಿಂದ, ಸುಶಾಂತ್‌ ಸಿಂಗ್‌ರದ್ದು ಹತ್ಯೆ ಎಂಬ ಮಾಹಿತಿವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news New Covid Guidelnes to sushant death mystery and more news

ಬೆಂಗಳೂರು: ಕೋವಿಡ್‌ ತಡೆ ಕುರಿತು ಸಚಿವ ಸಂಪುಟ ಸಭೆ ಜತೆಗೆ ತಜ್ಞರ ಸಭೆಯನ್ನೂ ನಡೆಸಿದ ರಾಜ್ಯ ಸರ್ಕಾರ, ಕೋವಿಡ್‌ ನಿಯಮಾವಳಿಗಳನ್ನು ಜಾರಿ ಮಾಡಿದೆ. ಎಸ್‌ಸಿಎಸ್‌ಟಿ ಮೀಸಲಾತಿ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದೆ, ಗಡಿ ವಿವಾದಕ್ಕೆ ಮಹಾರಾಷ್ಟ್ರ ಮಾಜಿ ಸಿಎಂ ತುಪ್ಪ ಸುರಿದಿದ್ದಾರೆ, ಸುರತ್ಕಲ್‌ ಜಲೀಲ್‌ ಕೊಲೆ ಸಂಬಂಧ ಮೂವರು ಬಂಧನಕ್ಕೊಳಗಾಗಿದ್ದಾರೆ, ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಹೊಸ ಮಾಹಿತಿ ಹೊರಬಂದಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Coronavirus | ʼಬಾಯಿ ಮುಚ್ಚಿಕೊಂಡುʼ ಕೋವಿಡ್‌ ಮಾರ್ಗಸೂಚಿ ಪಾಲಿಸಿ !: ಹೊಸ ವರ್ಷದ ಸಂಭ್ರಮಕ್ಕೂ ಮಾಸ್ಕ್‌ ಕಡ್ಡಾಯ; ರಾಜಕೀಯ ರ‍್ಯಾಲಿಗಿಲ್ಲ ನಿರ್ಬಂಧ
ವರ್ಷಾಂತ್ಯಕ್ಕೆ ವಿವಿಧ ಸಂಭ್ರಮಾಚರಣೆಗೆ ಸಿದ್ಧವಾಗುತ್ತಿರುವ ನಾಗರಿಕರಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದು, ಕೋವಿಡ್‌ (Coronavirus) ನಿಯಂತ್ರಣ ಸಲುವಾಗಿ ಎಲ್ಲ ಕಡೆಗಳಲ್ಲೂ ಮಾಸ್ಕ್‌ ಧರಿಸಿಯೇ ಇರಬೇಕು ಎಂದು ತಿಳಿಸಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ನಡುವೆಯೇ ಕಂದಾಯ ಸಚಿವ ಆರ್‌. ಅಶೊಕ್‌ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ನೇತೃತ್ವದಲ್ಲಿ ಕೋವಿಡ್‌ ತಜ್ಞರೊಂದಿಗೆ ಸಭೆ ನಡೆಸಿ ಅನೇಕ ನಿರ್ಧಾರ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಕೋವಿಡ್‌ ಕುರಿತ ಸಮಗ್ರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

2. Coronavirus | ಕೋವಿಡ್‌ ಬಗ್ಗೆ ಓವರ್‌ ಆ್ಯಕ್ಟಿಂಗ್ ಮಾಡಬಾರದು ಎಂದ ಆರ್‌. ಅಶೋಕ್‌: ಹೀಗೆ ಹೇಳಿದ್ದು ಡಾ. ಸುಧಾಕರ್‌ ಅವರಿಗಾ?
ಕೋವಿಡ್‌ ಸೋಂಕು ಹರಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದಲ್ಲಿ ಕ್ರಮ ಕೈಗೊಳ್ಳುವ ಮುನ್ನವೇ ಇಬ್ಬರು ಸಚಿವರ ನಡುವೆ ಭಿನ್ನಾಭಿಪ್ರಾಯದ ಅನುಮಾನಗಳು ವ್ಯಕ್ತವಾಗುತ್ತಿವೆ. ಕಂದಾಯ ಸಚಿವ ಆರ್‌. ಅಶೋಕ್‌ ಅವರ ಮಾತಿನಿಂದ ಈ ಅನುಮಾನ ವ್ಯಕ್ತವಾಗಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಕುರಿತು ಈ ಮಾತು ಹೇಳಿದ್ದಾರೆಯೇ ಎಂಬ ಚರ್ಚೆಗಳೂ ನಡೆಯುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ‌SCST Reservation | ದಲಿತ ಮೀಸಲಾತಿ ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಒಪ್ಪಿಗೆ: ಬಿಜೆಪಿಯೇ ಮೀಸಲಾತಿ ಪರ ಎಂದ ಸರ್ಕಾರ
ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ಸುಗ್ರೀವಾಜ್ಞೆಯನ್ನು ಕಾಯ್ದೆಯಾಗಿ ಪರಿವರ್ತಿಸುವ ಪ್ರಸ್ತಾವನೆಗೆ ವಿಧಾನಸಭೆ ಸರ್ವಾನುಮತದ ಅಂಗೀಕಾರ ನೀಡಿದೆ. ಎಸ್‌ಸಿ ಸಮುದಾಯಕ್ಕೆ ಈ ಹಿಂದೆ ಇದ್ದ ಶೇ. 15 ಮೀಸಲಾತಿಯನ್ನು ಶೇ. 17 ಕ್ಕೆ ಹಾಗೂ ಎಸ್‌ಟಿ ಸಮುದಾಯಕ್ಕೆ ಈ ಹಿಂದೆ ಇದ್ದ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದ ಸರ್ಕಾರ, ಈ ಹಿಂದೆಯೇ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದೆ. ಇದೀಗ ಸುಗ್ರೀವಾಜ್ಞೆಯನ್ನು ಕಾಯ್ದೆಯನ್ನಾಗಿ ಪರಿವರ್ತಿಸುವ ಮಸೂದೆಗೆ ಒಪ್ಪಿಗೆ ದೊರಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ‌Talk War | ಸಿ.ಟಿ. ರವಿ ಕಳ್ಳಬಟ್ಟಿ ಕುಡಿದು ಮಾತಾಡುತ್ತಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್;‌ ನಾನು ಕೊತ್ವಾಲ್‌ ಶಿಷ್ಯ ಅಲ್ಲ ಎಂದ ರವಿ
ಮಾಜಿ ಸಚಿವ ಹಾಗೂ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಕ್ರಮ ಆಸ್ತಿ ಗಳಿಕೆ ಕುರಿತ ಮಾತು ಇದೀಗ ವಿಧಾನ ಪರಿಷತ್‌ ಪ್ರತಿಪಕ್ಷ ಬಿ.ಕೆ. ಹರಿಪ್ರಸಾದ್‌ ಹಾಗೂ ಸಿ.ಟಿ. ರವಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಸಿ.ಟಿ. ರವಿ ಚಿಕ್ಕಮಗಳೂರಿಂದ ಬೆಂಗಳೂರಿಗೆ ಬರಬೇಕಾದರೆ ಯಾರದರೂ ಲಿಫ್ಟ್ ಕೊಡಬೇಕಿತ್ತು. ಆದರೆ ಈಗ ಐಶಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ ಹರಿಪ್ರಸಾದ್‌ ಹೇಳಿದರೆ, ನಾನು ಇಲ್ಲಿಂದ ಬೆಳಗಾವಿಯವರೆಗೂ ಓಡಬಲ್ಲೆ, ಕೆಲವರಿಗೆ ನಡೆಯೋದಕ್ಕೂ ಸಾಧ್ಯವಿಲ್ಲ ಎಂದು ರವಿ ಟೀಕಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Border Dispute | ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ, ಉದ್ಧವ್‌ ಹೊಸ ಉಪಟಳ
ಕರ್ನಾಟಕ-ಮಹಾರಾಷ್ಟ್ರ ಗಡಿ ಬಿಕ್ಕಟ್ಟಿನ (Border Dispute) ವಿಷಯದಲ್ಲಿ ಏಕನಾಥ್‌ ಶಿಂಧೆ ಬಣದ ಶಿವಸೇನೆ ಹಾಗೂ ಬಿಜೆಪಿ ಮಧ್ಯೆಯೇ ಒಮ್ಮತದ ಅಭಿಪ್ರಾಯ ಇಲ್ಲ. ಇದರ ಬೆನ್ನಲ್ಲೇ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಹೊಸ ವರಸೆ ಆರಂಭಿಸಿದ್ದಾರೆ. “ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರಾಡಳಿತ ಪ್ರದೇಶ ಎಂಬುದಾಗಿ ಘೋಷಿಸಿ” ಎಂದು ಒತ್ತಾಯಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Surathkal Murder | ಸುರತ್ಕಲ್‌ನ ಜಲೀಲ್ ಕೊಲೆ ಪ್ರಕರಣ; ಮೂವರ ಬಂಧನ, ಹಿಂದು ಮಹಿಳೆ ಜತೆ ಅಕ್ರಮ ಸಂಬಂಧ ಕೊಲೆಗೆ ಕಾರಣ?
ಸುರತ್ಕಲ್‌ನ ಜಲೀಲ್ ಕೊಲೆ ಪ್ರಕರಣ ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೊಲೆಯ (Surathkal Murder) ನಿಜವಾದ ಉದ್ದೇಶ ಏನು ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Sushant Singh | ನಟ ಸುಶಾಂತ್​ ಸಿಂಗ್‌​ರದ್ದು ಆತ್ಮಹತ್ಯೆಯಲ್ಲ ಕೊಲೆ; ಮರಣೋತ್ತರ ಪರೀಕ್ಷೆ ಮಾಡಿದಾತ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ!
ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸುಶಾಂತ್ ಮೃತದೇಹ​ 2020ರ ಜೂನ್​ 14ರಂದು ಮುಂಬಯಿಯ ಬಾಂದ್ರಾದ ಅಪಾರ್ಟ್​​ಮೆಂಟ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ‘ಸುಶಾಂತ್​ ಸಿಂಗ್​ ರಜಪೂತ್​ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ’ ಎಂದು ಸುಶಾಂತ್​ ಸಿಂಗ್​ ಮರಣೋತ್ತರ ಪರೀಕ್ಷೆ ನಡೆದ ಕೂಪರ್ ಆಸ್ಪತ್ರೆಯ ಪೋಸ್ಟ್​ಮಾರ್ಟಮ್​ ವಿಭಾಗದ ಸಿಬ್ಬಂದಿ ರೂಪ್​ಕುಮಾರ್ ಶಾ ಎಂಬುವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Bellary Politics | ಜೀವದ ಗೆಳೆಯರು ದೂರ ದೂರವಾಗಲು ಅಹಂ ಕಾರಣವಾಯಿತೇ?
ಬಳ್ಳಾರಿಯ ರಾಜಕೀಯಕ್ಕೆ ಹೊಸ ತಿರುವು ನೀಡಿದ್ದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ದೂರ ದೂರವಾಗಲು ಕಾರಣವೇನು ಎಂಬುದರ ಕುರಿತು ಈಗ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಕುರಿತ ವಿಶ್ಲೇಷಣೆ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Smoking Zone | ಹೋಟೆಲ್​​​, ಬಾರ್‌ & ರೆಸ್ಟೋರೆಂಟ್‌ನಲ್ಲಿ ಸ್ಮೋಕಿಂಗ್ ಜೋನ್ ಕಡ್ಡಾಯ ವಿವಾದ; ಧೂಮಪಾನಕ್ಕೆ ಅವಕಾಶ ಏಕೆ ಎಂಬ ವಾದ
ನಗರದಲ್ಲಿರುವ ಹೋಟೆಲ್‌, ಬಾರ್‌ & ರೆಸ್ಟೋರೆಂಟ್‌, ಕಾಫಿ ಬಾರ್‌ಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್‌ ಜೋನ್‌ ನಿರ್ಮಿಸಬೇಕು ಎಂಬ ಬಗ್ಗೆ ಬಿಬಿಎಂಪಿ ಹೊರಡಿಸಿರುವ ಸುತ್ತೋಲೆ ಚರ್ಚೆಗೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ವಾಜಪೇಯಿ ಬ್ರಿಟಿಷರಿಗೆ ಮಾಹಿತಿ ನೀಡುತ್ತಿದ್ದರು ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್​ ಮುಖಂಡ; ಅಟಲ್​​ ಸಮಾಧಿಗೆ ನಮಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಪದಾಧಿಕಾರಿ ಗೌರವ್ ಪಾಂಡಿ ಅವರು, ಮಾಜಿ ಪ್ರಧಾನಮಂತ್ರಿ ಅಟಲ್​ ಬಿಹಾರಿ ವಾಜಪೇಯಿ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿ, ಬಳಿಕ ಡಿಲೀಟ್​ ಮಾಡಿದ್ದಾರೆ. ಅದರ ಬೆನ್ನಲ್ಲೇ ಇಂದು ರಾಹುಲ್ ಗಾಂಧಿ ಸದೈವ್​ ಅಟಲ್​​ಗೆ ಭೇಟಿ ಕೊಟ್ಟು ವಾಜಪೇಯಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. JDS Pancharatna | ಪಂಚರತ್ನ ಯಾತ್ರೆಗೆ ಬಂದವರಿಗೆ ರಾಶಿ ರಾಶಿ ಬಿಂದಿಗೆ ಗಿಫ್ಟ್‌ ಎಸೆತ!
  2. MLAs Poaching Case | ಆಪರೇಷನ್‌ ಕಮಲ ಆರೋಪ, ಸಿಬಿಐ ತನಿಖೆಗೆ ಕೇಸ್‌ ವರ್ಗ, ತೆಲಂಗಾಣ ಸಿಎಂ ಕೆಸಿಆರ್‌ಗೆ ಹಿನ್ನಡೆ
  3. Job News | ಸರ್ಕಾರದ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆ ಖಾಲಿ ಇವೆ?; ಇಲ್ಲಿದೆ ಸಂಪೂರ್ಣ ಮಾಹಿತಿ
  4. Videocon Chairman | ಸಿಬಿಐನಿಂದ ವಿಡಿಯೊಕಾನ್‌ ಚೇರ್ಮನ್‌ ವೇಣುಗೋಪಾಲ್‌ ಧೂತ್‌ ಅರೆಸ್ಟ್
  5. RSS Family Shakhas | ಭಾರತದಲ್ಲಿ ಕೌಟುಂಬಿಕ ಶಾಖೆ ಪದ್ಧತಿ ಜಾರಿಗೆ ಆರೆಸ್ಸೆಸ್‌ ಚಿಂತನೆ
  6. ವಿಸ್ತಾರ Money Guide | UIDAI | 10 ವರ್ಷ ಹಳೆಯ ಆಧಾರ್‌ ಅಪ್‌ಡೇಟ್‌ಗೆ ಸರ್ಕಾರದ ಸೂಚನೆ, ಪರಿಷ್ಕರಣೆ ಮಾಡುವುದು ಹೇಗೆ?
Exit mobile version