Site icon Vistara News

Vistara Top 10 News: ರಾಜ್ಯ ರಾಜಧಾನಿಯಲ್ಲಿ ಪ್ರತಿಪಕ್ಷ ಸದನದಿಂದ, ಡ್ರಗ್ಸ್‌ ವಿರುದ್ಧ ಕೇಂದ್ರ ಸಮರದವರೆಗೆ ಪ್ರಮುಖ ಸುದ್ದಿಗಳಿವು

vistara top 10 news opposition meet in bengaluru to major drugs seizure and more news

TOP 10. ಕೊರೊನಾ ವೇಳೆ 19 ವರ್ಷದವನ ಹವ್ಯಾಸವು ಕೋಟ್ಯಧೀಶನನ್ನಾಗಿ ಮಾಡಿತು; ಚಾಕೊಲೇಟ್‌ ಬಾಯ್ ಕತೆ
ಕೊರೊನಾ ಮೊದಲ ಹಾಗೂ ಎರಡನೇ ಅಲೆಯ ವೇಳೆ ಲಾಕ್‌ಡೌನ್‌ ಜಾರಿಯಾದ ಕಾರಣ ಜನ ಮನೆಯಲ್ಲೇ ಕಾಲ ಕಳೆಯುವಂತಾಯಿತು. ವರ್ಕ್‌ ಫ್ರಂ ಹೋಮ್‌ನಿಂದಾಗಿ ವರ್ಷಾನುಗಟ್ಟಲೆ ಜನ ಆಫೀಸನ್ನೇ ನೋಡಲಿಲ್ಲ. ಇನ್ನೂ ಒಂದಷ್ಟು ಜನ ಕೊರೊನಾ ಬಿಕ್ಕಟ್ಟಿನಲ್ಲಿ ಓದುವುದು, ಪೇಂಟಿಂಗ್‌, ಹಾಡು, ರೀಲ್ಸ್‌, ಯುಟ್ಯೂಬ್‌ ಸೇರಿ ಹಲವು ಹವ್ಯಾಸಗಳಿಗೆ ಇಂಬು ಕೊಟ್ಟರು. ನಿತ್ಯ ಕೆಲಸದ ಒತ್ತಡದ ಮಧ್ಯೆ ಹವ್ಯಾಸವನ್ನೇ ಮರೆತವರು ಮತ್ತೆ ಹವ್ಯಾಸಗಳ ಮೊರೆ ಹೋದರು. ಹೀಗೆ, ಕೊರೊನಾ ಬಿಕ್ಕಟ್ಟಿನ ವೇಳೆ ಚಾಕೊಲೇಟ್‌ ತಯಾರಿಸುವ ಹವ್ಯಾಸ ರೂಢಿಸಿಕೊಂಡ ರಾಜಸ್ಥಾನದ ಉದಯಪುರದ 19 ವರ್ಷದ ಯುವಕನೀಗ ಕೋಟಿ ರೂ. ಮೌಲ್ಯದ ಬ್ಯುಸಿನೆಸ್‌ ಹೊಂದಿದ್ದಾನೆ. ಆ ಮೂಲಕ ನಮ್ಮ ಒಳ್ಳೆಯ ಹವ್ಯಾಸಗಳು ಒಂದಲ್ಲ ಒಂದು ರೀತಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 9. Weather Report : ಕರಾವಳಿ, ಮಲೆನಾಡಲ್ಲಿ ಇನ್ನೆರಡು ದಿನ ಭಾರಿ ಮಳೆ
ರಾಜ್ಯದಲ್ಲಿ ಭಾನುವಾರ ನೈರುತ್ಯ ಮುಂಗಾರು (Southwest monsoon) ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ 10 ಸೆಂ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಇನ್ನೆರಡು ದಿನಗಳು ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕ (Rain Alert) ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಸಾಧಾರಣ ಮಳೆಯಾಗುವ (Weather report) ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 8. Wimbledon 2023 : ಟೆನಿಸ್​ ಲೋಕದ ಯುವತಾರೆ ಅಲ್ಕರಾಜ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ
ವಿಂಬಲ್ಡನ್ 2023ರ (Wimbledon 2023) ಫೈನಲ್​​ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ ನಂತರ ಟೆನಿಸ್ ಜಗತ್ತಿನ ಗಮನ ಸೆಳೆಯ ಯುವ ಸೆನ್ಸೇಷನ್ ಕಾರ್ಲೋಸ್ ಅಲ್ಕರಾಜ್ ಗ್ರಾಫಿಯಾ ಅವರ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಅಲ್ಕರಾಜ್ 1-6, 7-6 (6), 6-1, 3-6, 6-4 ಸೆಟ್​​ಗಳಿಂದ 23 ಗ್ರ್ಯಾನ್​ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ಜೊಕೊವಿಕ್ ಅವರ 34 ಪಂದ್ಯಗಳ ಗೆಲುವಿನ ಸರಣಿಯನ್ನು ಕೊನೆಗೊಳಿಸಿದರು. ಕೇವಲ 20 ವರ್ಷ ವಯಸ್ಸಿನ ಸ್ಪೇನ್ ಆಟಗಾರ ಈಗಾಗಲೇ ವಿಶ್ವದ ನಂ.1 ಸ್ಥಾನದಲ್ಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 7. Amit Shah: ಡ್ರಗ್ಸ್‌ ವಿರುದ್ಧ ಸಮರ; ಅಮಿತ್‌ ಶಾ ನೇತೃತ್ವದಲ್ಲಿ 2,400 ಕೋಟಿ ರೂ. ಮೌಲ್ಯದ ಮಾದಕವಸ್ತು ನಾಶ
ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ನೇತೃತ್ವದಲ್ಲಿ ದೇಶಾದ್ಯಂತ ಸುಮಾರು 2,416 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ಅನ್ನು ನಾಶಪಡಿಸಲಾಗಿದೆ. ದೆಹಲಿಯಲ್ಲಿ ಅಮಿತ್‌ ಶಾ ನೇತೃತ್ವದಲ್ಲಿ “ಮಾದಕವಸ್ತು ಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ” ಕುರಿತ ಪ್ರಾದೇಶಿಕ ಸಭೆ ನಡೆಸಿದರು. ಇದೇ ವೇಳೆ ಅವರು ದೇಶಾದ್ಯಂತ 1.44 ಲಕ್ಷ ಕೆ.ಜಿ ಮಾದಕವಸ್ತು ನಾಶಪಡಿಸುವುದನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವೀಕ್ಷಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 6. Pakistan: ದೇಗುಲ ಧ್ವಂಸ ಬೆನ್ನಲ್ಲೇ 30 ಪಾಕ್ ಹಿಂದೂಗಳ ಅಪಹರಣ! ನೆರವಿಗೆ ಮನವಿ ಮಾಡಿದ ಆಯೋಗ
ನೆರೆಯ ಪಾಕಿಸ್ತಾನದ (Pakistan) ಸಿಂಧ್ (Sindh) ಪ್ರಾಂತದಲ್ಲಿ ಡಕಾಯಿತ ತಂಡವೊಂದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಹಿಂದೂಗಳನ್ನು (Hindus) ಒತ್ತೆಯಾಳುಗಳನ್ನಾಗಿಸಿಕೊಂಡಿದೆ ಎಂದು ಪಾಕಿಸ್ತಾದ ಮಾನವ ಹಕ್ಕಗಳು ಆಯೋಗ(Human Rights Commission of Pakistan – HRCP) ಹೇಳಿದೆ. ಸಿಂಧ್‌ನ ಕಾಶ್ಮೋರ್ ಮತ್ತು ಘೋಟ್ಕಿ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ವರದಿಗಳಿಂದ ಎಚ್‌ಆರ್‌ಸಿಪಿ ಆತಂಕಕ್ಕೊಳಗಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಅಲ್ಲಿನ ಸುಮಾರು 30 ಹಿಂದೂ ಸಮುದಾಯದವರನ್ನು ಸಂಘಟಿತ ಕ್ರಿಮಿನಲ್ ಗ್ಯಾಂಗ್‌ ಒತ್ತೆಯಾಳುಗಳನ್ನಾಗಿಸಿಕೊಂಡಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಟ್ವೀಟ್ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 5. Mobile Ban : ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆ ನಿಷೇಧ; ಇನ್ನು ರೀಲ್ಸ್‌ ಕಷ್ಟ!
ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಮುಜರಾಯಿ ದೇವಾಲಯಗಳಲ್ಲಿ (Muzrai Temples) ಮೊಬೈಲ್ ಬಳಕೆ ನಿಷೇಧಿಸಿ (Mobile Ban) ಸರ್ಕಾರ ಆದೇಶ ಹೊರಡಿಸಿದೆ. ಭಕ್ತರು ದೇವಾಲಯದಲ್ಲಿ ಮೊಬೈಲ್ ಬಳಸದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ (Muzrai department) ಹೊರಡಿಸಿದೆ. ತಮಿಳುನಾಡಿನ ದೇವಾಲಯಗಳಲ್ಲಿ ಈಗಾಗಲೇ ಇದು ಜಾರಿಯಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 4. Covid-19 Scam: 8.6 ಕೋಟಿ ಉಳಿತಾಯ ಮಾಡಿದ್ದಾಗಿ ಸುಳ್ಳು ಹೇಳಿದ ಆರೋಗ್ಯ ಇಲಾಖೆ: ಕೋವಿಡ್‌ ಹಗರಣ ಬೆಳಕಿಗೆ
ಕೋವಿಡ್‌-19 ಸಾಂಕ್ರಾಮಿಕದ ಸಂದರ್ಭದಲ್ಲಿ ತುರ್ತು ಅಗತ್ಯವಿದ್ದ ಔಷಧೋಪಕರಣಗಳ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ (Covid-19 Scam) ನಡೆದಿದೆ ಎಂಬ ಸಾಮಾನ್ಯ ಮಾತುಗಳಿಗೆ ಈಗ ಪುಷ್ಠಿ ಸಿಕ್ಕಿದೆ. ರಾಜ್ಯಸರ್ಕಾರಕ್ಕೆ 19 ಕೋಟಿ ರೂ. ನಷ್ಟ ಮಾಡಿದ್ದಷ್ಟೆ ಅಲ್ಲದೆ, 8.6 ಕೋಟಿ ರೂ. ಉಳಿತಾಯ ಮಾಡಿದ್ದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 3. HD Kumaraswamy: ಕಾಸಿಗಾಗಿ ಹುದ್ದೆಯಲ್ಲಿ 500 ಕೋಟಿ ರೂ. ಕೈ ಬದಲು: ಎಚ್.ಡಿ.ಕುಮಾರಸ್ವಾಮಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸತತ ಎರಡು ತಿಂಗಳಿಂದ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಅವಧಿಯಲ್ಲಿ ಕಾಸಿಗಾಗಿ ಹುದ್ದೆ ವ್ಯವಹಾರದಲ್ಲಿ 500 ಕೋಟಿ ರೂ.ಗಳಿಗೂ ಮೀರಿ ಕೈ ಬದಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 2. Farm Act: ಮೋದಿ ಸರ್ಕಾರ ಜಾರಿ ಮಾಡಿದ್ದ ಕೃಷಿ ಕಾಯ್ದೆ ರಾಜ್ಯದಲ್ಲೂ ವಾಪಸ್‌: ʼನುಡಿದಂತೆ ನಡೆದʼ ಕಾಂಗ್ರೆಸ್‌ ಸರ್ಕಾರ!
ಕಾಂಗ್ರೆಸ್‌ ಪಕ್ಷವು ಚುನಾವಣೆಗೂ ಮುನ್ನ ಅನೇಕ ಸಂದರ್ಭದಲ್ಲಿ ಹಾಗೂ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕೃಷಿ ಕಾಯ್ದೆಗಳು (Farm Act) ಎಂದೇ ಪ್ರಸಿದ್ಧವಾದ ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ಹಿಂಪಡೆದಿದೆ. ಕೇಂದ್ರದ ನರೇಂದ್ರ ಮೋದಿ ನೇತೃಥ್ವದ ಎನ್‌ಡಿಎ ಸರ್ಕಾರ ಜಾರಿಗೆ ತಂದು ಹಿಂಡೆದ ಕಾಯ್ದೆಗಳನ್ನು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮುಂದುವರಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 1. Opposition Meet: ದೇಶದಲ್ಲಿ ತ್ರಿಶಂಕು ರಾಜಕಾರಣ ಖತಮ್; JDSಗೆ ದಮ್‌ ಇದ್ದರೆ ಸಭೆಗೆ ಬರುತ್ತದೆ ಎಂದ ಕಾಂಗ್ರೆಸ್‌‌
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಒಟ್ಟಾಗುತ್ತಿರುವ ಪ್ರತಿಪಕ್ಷಗಳ ಸಭೆಗೆ (Opposition Meet) ಧೈರ್ಯ ಇರುವವರು ಮಾತ್ರ ಬರುತ್ತಾರೆ ಎಂದು ಎಚ್‌.ಡಿ. ದೇವೇಗೌಡರ ಜೆಡಿಎಸ್‌ ಪಕ್ಷಕ್ಕೆ ಕಾಂಗ್ರೆಸ್‌ ಪರೋಕ್ಷ ಚಾಟಿ ಬೀಸಿದೆ. ಹಾಗೂ, ದೇಶದಲ್ಲಿ ತ್ರಿಶಂಕು ರಾಜಕಾರಣ ಮುಕ್ತಾಯವಾಗಿದ್ದು, ಈ ಕಡೆ ಅಥವಾ ಆ ಕಡೆ ಸೇರಿಕೊಳ್ಳಲೇಬೇಕು ಎಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Opposition Meet: ಅಣಬೆಗಳು, ದರೋಡೆಕೋರರು, ಒಡೆದ ಮಡಕೆ, ಎತ್ತು-ಕೋಣ: ಪ್ರತಿಪಕ್ಷ ಸಭೆ ಬಗ್ಗೆ ಬಿಜೆಪಿ ನಾಯಕರ ನುಡಿಮುತ್ತುಗಳಿವು

Exit mobile version