1. Narendra Modi: ರಾತ್ರೋರಾತ್ರಿ ಮೋದಿ ಹೈವೋಲ್ಟೇಜ್ ಮೀಟಿಂಗ್, ‘ಲೋಕ’ ಚುನಾವಣೆಗೆ ಮಾಸ್ಟರ್ ಪ್ಲಾನ್
ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ ಸಕಲ ರೀತಿಯಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಲು ರಣತಂತ್ರ ರೂಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಬುಧವಾರ ರಾತ್ರೋರಾತ್ರಿ ಸಭೆ ನಡೆದಿದ್ದು, ಲೋಕಸಭೆ ಚುನಾವಣೆ, ಸಂಪುಟ ಪುನರ್ ರಚನೆ, ಪಕ್ಷದ ಬಲವರ್ಧನೆ ಸೇರಿ ಹಲವು ವಿಷಯಗಳನ್ನು ಚರ್ಚಿಸುವ ಜತೆಗೆ ಮಾಸ್ಟರ್ ಪ್ಲಾನ್ ಕೂಡ ರಚಿಸಲಾಗಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Opposition Meet: ಬಿಜೆಪಿ ವಿರುದ್ಧ ಒಂದಾದ ಪ್ರತಿಪಕ್ಷಗಳ ದಂಡು ಬೆಂಗಳೂರು ಕಡೆ; ಇಲ್ಲೇ ಮುಂದಿನ ಸಭೆ
2024ರ ಲೋಕಸಭೆ ಚುನಾವಣೆ (Lok Sabha Election 2024)ಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಹಠ ತೊಟ್ಟು ಒಂದಾಗಿರುವ ಪ್ರತಿಪಕ್ಷಗಳ ಎರಡನೇ ಸಭೆ (Opposition Meet) ಜು.13 ಮತ್ತು 14ರಂದು ಬೆಂಗಳೂರಿನಲ್ಲಿ (Opposition Meet in Bengaluru) ನಡೆಯಲಿದೆ. ಜೂ.23ರಂದು ಬಿಹಾರದ ಪಾಟ್ನಾದಲ್ಲಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದಲ್ಲಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಆರ್ಜೆಡಿ, ಜೆಡಿಯು, ಸಮಾಜವಾದಿ ಪಕ್ಷ ಸೇರಿ ಸುಮಾರು 17 ಪಕ್ಷಗಳ ಪ್ರಮುಖರೆಲ್ಲ ಸೇರಿ ಸಭೆ ನಡೆಸಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. BJP Karnataka: ರೇಣುಕಾಚಾರ್ಯ ಉಚ್ಚಾಟನೆ?: ʼಕತ್ತರಿʼ ಹೇಳಿಕೆಗೆ ಕಚೇರಿಯಿಂದಲೇ ಬಂತು ನೋಟಿಸ್
ರಾಜ್ಯ ಬಿಜೆಪಿ (BJP Karnataka) ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರದಲ್ಲಿ ಅಲ್ಲೋಲ ಕಲ್ಲೋಲವಾಗುವ ಬೆಳವಣಿಗೆಗಳು ನಡೆಯುತ್ತಿದ್ದು, ಪಕ್ಷದ ಸೋಲಿಗೆ ಬಹಿರಂಗವಾಗಿ ವಿಮರ್ಶೆ ಮಾಡುವವರಿಗೆ ಈಗಾಗಲೆ ಎಚ್ಚರಿಕೆ ನೀಡಲಾಗಿದೆ. ಸತತ ಮೂರು ದಿನಗಳಿಂದಲೂ ಬಿಜೆಪಿ ನಾಯಕರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯಗೆ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: BJP Karnataka: ಬಿಜೆಪಿ ಕಚೇರಿಯಲ್ಲಿ ಕತ್ತರಿ ಹಾಕುವವರಿದ್ದಾರೆ: ವಾಗ್ದಾಳಿ ಮುಂದುವರಿಸಿದ ಹೊನ್ನಾಳಿ ರೇಣುಕಾಚಾರ್ಯ
4. Lokayukta Raid : 1000 ಕೋಟಿ ಆಸ್ತಿಯ ಒಡೆಯ, ಭ್ರಷ್ಟ ತಹಸೀಲ್ದಾರ್ ಅಜಿತ್ ರೈ ಅರೆಸ್ಟ್!
ಕಂತೆ ಕಂತೆ ನೋಟು, ಹತ್ತಾರು ಮನೆಗಳು, ನೂರಾರು ಎಕರೆ ಆಸ್ತಿ, ಐಷಾರಾಮಿ ಕಾರುಗಳು, ಚಿನ್ನಾಭರಣ ಸಹಿತ ಲಂಚದ ಹಣದ ಹಣದಿಂದಲೇ ಸಾವಿರಾರು ಕೋಟಿ ಒಡೆಯನಾದ ಕೆ.ಆರ್. ಪುರದ ತಹಸೀಲ್ದಾರ್ ಅಜಿತ್ ರೈಯನ್ನು (Ajit Rai) ಪೊಲೀಸರು ಬಂಧಿಸಿದ್ದಾರೆ. ಬುಧವಾರ ಬೆಂಗಳೂರಿನ 10 ಸ್ಥಳಗಳಿಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು (Lokayukta Raid) ಅಜಿತ್ ರೈಯ ಸಮಸ್ತ ಅಕ್ರಮಗಳನ್ನು ಬಯಲಿಗೆ ಎಳೆದಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಜನರ ಕಣ್ಣೀರು ಒರೆಸಲು ಮಣಿಪುರಕ್ಕೆ ಹೋದ ರಾಹುಲ್ ಗಾಂಧಿ; ಅಶ್ರುವಾಯು ಪ್ರಯೋಗಿಸಿದ ಪೊಲೀಸ್
ಸಂಘರ್ಷ ಪೀಡಿತ ಮಣಿಪುರದಲ್ಲಿ (Manipur violence) ರಾಹುಲ್ ಗಾಂಧಿ (Rahul Gandhi) ಕಾಲಿಡುತ್ತಿದ್ದಂತೆ ಅಲ್ಲಿ ಪ್ರತಿಭಟನೆಯೂ ನಡೆದಿದೆ. ರಾಹುಲ್ ಗಾಂಧಿ ಇಂಫಾಲ್ ತಲುಪುತ್ತಿದ್ದಂತೆ (Rahul Gandhi Manipur Visit) ಒಂದಷ್ಟು ಜನರು ‘ಗೋ ಬ್ಯಾಕ್ ರಾಹುಲ್ ಗಾಂಧಿ’ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಇನ್ನು ರಾಹುಲ್ ಗಾಂಧಿಯವರು ಇಂಫಾಲ್ನಿಂದ ಚುರಾಚಾಂದ್ಪುರದಲ್ಲಿರುವ ಆಶ್ರಯ ಕೇಂದ್ರಗಳಿಗೆ ಹೊರಟಾಗ ಅವರನ್ನು ಬಿಷ್ಣುಪುರ ಎಂಬಲ್ಲಿ ಮಣಿಪುರ ಪೊಲೀಸರು ತಡೆದಿದ್ದಾರೆ. ಭದ್ರತೆಯ ಕಾರಣಕ್ಕೆ ರಾಹುಲ್ ಗಾಂಧಿ ಚುರಾಚಾಂದ್ಪುರಕ್ಕೆ (Rahul Gandhi Churachandpur Visit) ಹೋಗುವುದನ್ನು ತಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Video Viral : ಫ್ರೀ ಬಸ್ ಬಗ್ಗೆ ಉಗಿದು ಉಪ್ಪಿನಕಾಯಿ ಹಾಕಿದ ಮಹಿಳೆ! ಸಿದ್ದರಾಮಯ್ಯಗೆ ಏಕವಚನ ಪ್ರಯೋಗ
ರಾಜ್ಯಾದ್ಯಂತ ಶಕ್ತಿ ಯೋಜನೆಗೆ (Shakti Scheme) ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳೆಯರು ಭಾರಿ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಜೂನ್ 11ರಂದು ಯೋಜನೆ ಶುರುವಾಗಿ ಜೂನ್ 28ರವರೆಗೆ 222 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪ್ರಯಾಣವು ಮಹಿಳೆಯರಿಂದ ಆಗಿತ್ತು. ಆದರೆ, ಈ ಬಗ್ಗೆ ಈಗ ಮಹಿಳೆಯೊಬ್ಬರು ಕೆಂಡಾಮಂಡಲವಾಗಿದ್ದಾರೆ. ಯೋಜನೆ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಸಿಕ್ಕಾಪಟ್ಟೆ ಕೂಗಾಡಿದ್ದಾಳೆ. ಅಲ್ಲದೆ, ಬಸ್ಸಲ್ಲಿ ಉಚಿತವಾಗಿ ಓಡಾಡುವ ಮಹಿಳೆಯರ ವಿರುದ್ಧವೂ ಕಿಡಿಕಾರಿದ್ದಾಳೆ. ಈ ವಿಡಿಯೊ ಈಗ ವೈರಲ್ (Video Viral) ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. G Parameshwar : ಅಕ್ಕಿಯ ಬದಲು ಹಣ ಮೂರು ತಿಂಗಳು ಮಾತ್ರ ಎಂದ ಪರಮೇಶ್ವರ್
ರಾಜ್ಯದಲ್ಲಿ ಅನ್ನ ಭಾಗ್ಯದ (Anna Bhagya Scheme) ಐದು ಕೆಜಿ ಅಕ್ಕಿಯ ಬದಲು ಹಣ ಕೊಡುವ ಯೋಜನೆ ಕೇವಲ ಮೂರು ತಿಂಗಳು ಮಾತ್ರ ಇರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Bride Scarcity: ಈ ಸ್ಫುರದ್ರೂಪಿ ಹುಡುಗನಿಗೂ ಮದುವೆಯಾಗಲು ಹೆಣ್ಣು ಸಿಗಲಿಲ್ಲ; ಮನ ನೊಂದು ಆತ್ಮಹತ್ಯೆ
ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಇದ್ದೇ ಇದೆ ಎನ್ನುವ ನಾಣ್ಣುಡಿಯೇ ತಪ್ಪಾಗಿದೆಯೇ ಎಂದು ಯೋಚಿಸುವಷ್ಟರ ಮಟ್ಟಿಗೆ ವಧುಗಳ ಕೊರತೆ (Bride scarcity) ಕಾಡುತ್ತಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಂತೂ ಕೃಷಿಕರಿಗೆ, ಬಾಣಸಿಗರಿಗೆ, ಅರ್ಚಕರಿಗೆ, ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡಿರುವವರಿಗೆ ಮದುವೆಯೇ ಮರೀಚಿಕೆಯಾದಂತಿದೆ. ಇಂಥಹುದೇ ಪರಿಸ್ಥಿತಿಯನ್ನು ಎದುರಿಸಿದ ಯುವಕನೊಬ್ಬ ನೇಣು ಬಿಗಿದುಕೊಂಡು ಪ್ರಾಣ (Suicide case) ಕಳೆದುಕೊಂಡಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Kannada Serials TRP : ಮೂರನೇ ಸ್ಥಾನಕ್ಕೆ ಬಂದ ʻಅಮೃತಧಾರೆʼ; ಹೊಸ ಧಾರಾವಾಹಿ ಟಾಪ್ 5ಕ್ಕೆ ಎಂಟ್ರಿ!
ಈ ವಾರದ ಕನ್ನಡ ಕಿರುತೆರೆಯ ಟಿಆರ್‌ಪಿ (Kannada Serials TRP) ಹೊರಬಿದ್ದಿದೆ. ಕೆಲ ಧಾರಾವಾಹಿಗಳು (Kannada Serials TRP) ಕಳೆದ ವಾರಕ್ಕಿಂತ ಈ ವಾರ ಕಡಿಮೆ ಟಿಆರ್‌ಪಿ ಗಳಿಸಿವೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟನೆಯ ‘ಅಮೃತಧಾರೆ’ ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಮೂರನೇ ಸ್ಥಾನ ಪಡೆದುಕೊಂಡಿದೆ. ಆದರೆ ‘ಭಾಗ್ಯಲಕ್ಷ್ಮೀ’ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಇರುತ್ತಿತ್ತು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಆರನೇ ಸ್ಥಾನಕ್ಕೆ ಇಳಿದಿದೆ. ಈ ಎರಡೂ ಧಾರಾವಾಹಿಗಳ ಟಿಆರ್‌ಪಿ ಕೊಂಚ ತಗ್ಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Video Viral: ದೋಚಲು ಬಂದವರು ದಾನಿಗಳಾದರು; ವಿಚಿತ್ರ ದರೋಡೆಕೋರರು ಇವರು!
ದಾರಿಯಲ್ಲಿ ಹೋಗುತ್ತಿದ್ದ ದಂಪತಿ ಬಳಿ ಇದ್ದ ಹಣ-ಒಡವೆಯನ್ನು ಕದಿಯಲು ಬಂದ ದರೋಡೆಕೋರರು, ಆ ಕ್ಷಣದಲ್ಲೇ ದಾನಿಗಳಾಗಿ ಬದಲಾಗಿದ್ದಾರೆ. ದೆಹಲಿಯಲ್ಲಿ ನಡೆದ ಒಂದು ವಿಚಿತ್ರ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.