TOP 10. ಒಂಟಿತನ ಕಾಡುತ್ತಿದೆಯಾ?-ಈ ದೇಶಕ್ಕೆ ಹೋದರೆ ‘ಪ್ರೀತಿ’ ಬಾಡಿಗೆಗೆ ಸಿಗುತ್ತದೆ!
ಎಲ್ಲವೂ-ಎಲ್ಲರೂ ಜತೆಗಿದ್ದಾಗಲೂ ಒಮ್ಮೊಮ್ಮೆ ಏಕಾಂಗಿ ಭಾವ (Feeling Lonely) ಕಾಡುತ್ತದೆ. ಅದು ಮನಸನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಪ್ರೀತಿ/ಪ್ರೇಮ/ ಪ್ರಿಯತಮ/ಪ್ರಿಯಕರ-ಇಂಥವೆಲ್ಲ ಇವೆಲ್ಲ ಬಾಡಿಗೆಗೆ ಸಿಗುವುದಾಗಿದ್ದರೆ? ಹೀಗೊಂದು ಯೋಚನೆ ನಮ್ಮ-ನಿಮ್ಮಲ್ಲಿ ಈಗಾಗಲೇ ಒಂದು ಸಲವಾದರೂ ಬಂದಿರಬಹುದು. ಈ ಅನಿಸಿಕೆಯನ್ನು ಜಪಾನ್ ಸಾಧ್ಯವಾಗಿಸಿದೆ..! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 9. Asian Games: ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಭಾರತ ಫುಟ್ಬಾಲ್ ತಂಡ
ಶ್ರೇಷ್ಠ ಪ್ರದರ್ಶನ ತೋರುತ್ತಿರುವ ಭಾರತೀಯ ಫುಟ್ಬಾಲ್ ತಂಡ(Indian Football Team) ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್(Asian Games) ಕ್ರೀಡಾಕೂಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕ್ರೀಡಾಕೂಟದಲ್ಲಿ ಭಾಗಿಯಾಗುವ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿರುವುದರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 8. Rehabilitation Centre : ಕುಡಿತದ ಚಟ ಬಿಡಿಸಲು ವ್ಯಸನ ಮುಕ್ತ ಕೇಂದ್ರದಲ್ಲಿ ಹೊಡಿಬಡಿ ಪನಿಶ್ಮೆಂಟ್!
ಕುಡಿತದ ಚಟ ಬಿಡಿಸಬೇಕೆಂದು (Alcohol addiction) ವ್ಯಸನ ಮುಕ್ತ ಕೇಂದ್ರಕ್ಕೆ (Rehabilitation Centre) ಸೇರಿಸುವ ಮುನ್ನ ಎಚ್ಚರವಾಗಿರಿ ಇಲ್ಲದಿದ್ದರೆ ಆಸ್ಪತ್ರೆ ಪಾಲಾಗುವುದು ಗ್ಯಾರಂಟಿ. ಪ್ರವೀಣ್ ಎಂಬಾತ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ. ಕುಡಿತದ ಚಟಕ್ಕೆ ಬಿದ್ದ ಪ್ರವೀಣ್‌ನನ್ನು ಕುಟುಂಬಸ್ಥರು ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಿದ್ದರು. ಆದರೆ ಸೇರಿದ ಎರಡೇ ದಿನಕ್ಕೆ ಪ್ರವೀಣ್ ಆಸ್ಪತ್ರೆ ಪಾಲಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 7. Nitin Gadkari : ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನಿಗೆ ಉಗ್ರನ ಪ್ರಚೋದನೆ?
ಹಿಂಡಲಗಾ ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ (Union Minister Nitin Gadkari) ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ (Life threat case) ಹೊಸ ಟ್ವಿಸ್ಟ್ ಸಿಕ್ಕಿದೆ. ಅವರ ಬೆದರಿಕೆ ಹಿಂದೆ ಲಷ್ಕರ್ ಇ ತೋಯ್ಬಾ ಸಂಘಟನೆಯ (Lashkar-e-Taiba) ಉಗ್ರನ ಪ್ರಚೋದನೆ ಇದೆಯೇ ಎಂಬ ಸಂಶಯ ಈಗ ಮೂಡಿದೆ. ಈ ನಿಟ್ಟಿನಲ್ಲಿ ತನಿಖೆ ಶುರುವಾಗಿದ್ದು, ಲಷ್ಕರ್ ಇ ತೋಯ್ಬಾ ಸಂಘಟನೆ ಜತೆಗೆ ನಂಟು ಹೊಂದಿದ್ದ ಅಫ್ಸರ್ ಪಾಷ (Afsar Pasha) ಎಂಬಾತನನ್ನು ಎನ್‌ಐಎ (National Investigation Agency) ವಶಕ್ಕೆ ಪಡೆದುಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 6. Tomato price : ಟೊಮ್ಯಾಟೊ ಹೋಲ್‌ಸೇಲ್ ದರವನ್ನು ಕೆ.ಜಿಗೆ 80 ರೂ.ಗೆ ಕಡಿತಗೊಳಿಸಿದ ಕೇಂದ್ರ ಸರ್ಕಾರ
ದೇಶದಲ್ಲಿ ಟೊಮ್ಯಾಟೊ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. (Tomato price) ಇದರ ಪರಿಣಾಮ ನಿರ್ದಿಷ್ಟ ನಗರಗಳಲ್ಲಿ ಟೊಮ್ಯಾಟೊ ದರ ಇಳಿಯಲಿದೆ. ಏಕೆಂದರೆ ಇದರ ಹೋಲ್‌ಸೇಲ್ ದರವನ್ನು ಕೇಂದ್ರ ಸರ್ಕಾರ ಪ್ರತಿ ಕೆ.ಜಿಗೆ 80 ರೂ.ಗೆ ಭಾನುವಾರ ಕಡಿತಗೊಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 5. Electricity load shedding : ಈ ಮಳೆಗಾಲ ಮುಗಿಯುವುದರೊಳಗೇ ಲೋಡ್ ಶೆಡ್ಡಿಂಗ್?
ರಾಜ್ಯದಲ್ಲಿ ಈ ಮಳೆಗಾಲ ಮುಗಿಯುವುದರೊಳಗೇ ವಿದ್ಯುತ್ ಲೋಡ್ ಶೆಡ್ಡಿಂಗ್ (Electricity load shedding) ಆರಂಭವಾಗಲಿದೆಯೇ? ಅಂಥದ್ದೊಂದು ಅನುಮಾನ ಈಗ ಹುಟ್ಟಿಕೊಂಡಿದೆ. ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಭೀತಿ ಎದುರಾಗಲು ಕಾರಣ ಈಗಿನ ಮಳೆ ಅಭಾವ! ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಜಲ ಮೂಲಗಳ ವಿದ್ಯುತ್ (Hydel power) ಕುಂಠಿತವಾಗಿದೆ. ಇದರ ಪರಿಣಾಮ ಈಗ ಕಲ್ಲಿದ್ದಲಿನಿಂದ ವಿದ್ಯುತ್ (Coal Power) ಉತ್ಪಾದಿಸುವ ಘಟಕಗಳ ಮೇಲಾಗುತ್ತಿದೆ. ಇವುಗಳ ಮೇಲೆ ಹೆಚ್ಚಿನ ವಿದ್ಯುತ್ ಉತ್ಪಾದನೆಯ (Power Generation) ತೀವ್ರ ಒತ್ತಡ ಎದುರಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 4. Shakti Scheme: ಶಕ್ತಿ ಜಾರಿಯಾದ ಒಂದೇ ತಿಂಗಳಿಗೆ 20 ಕೋಟಿ ಮಹಿಳೆಯರ ಪ್ರಯಾಣ!
ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ (free bus service) ಸೌಲಭ್ಯ ನೀಡುವ ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೂನ್ 11 ರಂದು ಯೋಜನೆಗೆ (Shakti Scheme) ಚಾಲನೆ ನೀಡಲಾಗಿತ್ತು. ಅಂದಿನಿಂದ ಈವರೆಗೆ ಬರೋಬ್ಬರಿ 20 ಕೋಟಿ ಮಹಿಳಾ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಇದರ ಟಿಕೆಟ್ ಮೌಲ್ಯ 476 ಕೋಟಿ ರೂ.ಗಳಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 3. BJP-JDS Coalition: ಕಮಲ-ದಳ ಮೈತ್ರಿ ಫಿಕ್ಸ್: ಬಿಜೆಪಿ ಶಾಸಕಾಂಗ ಪಕ್ಷಕ್ಕೆ ಎಚ್.ಡಿ. ಕುಮಾರಸ್ವಾಮಿ ನಾಯಕ?
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕದ ಮಟ್ಟಿಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗುವುದು (BJP-JDS Coalition) ಬಹುತೇಕ ಖಚಿತ ಎನ್ನಲಾಗುತ್ತಿದೆ. ಈಗಾಗಲೆ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ, ಲೋಕಸಭೆಯಲ್ಲೂ ಇದೇ ಫಲಿತಾಂಶ ಹೊರಬಂದರೆ ಎಂಬ ಆತಂಕ ಆರಂಭವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 2. Siddaramaiah: ಸಿದ್ದರಾಮಯ್ಯ ಕುಟುಂಬ ಹಸ್ತಕ್ಷೇಪ ಮುಂದುವರಿಕೆ?: ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಂಬಂಧಿಯ ವಿವಾದ
ಸಿಎಂ ಸಿದ್ದರಾಮಯ್ಯ (Siddaramaiah) ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸರ್ಕಾರದ ವಿವಿಧ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪದ ನಡುವೆಯೇ ಸಿಎಂ ಸಂಬಂಧಿಕರೊಬ್ಬರ ವಿಚಾರ ಇದೀಗ ವಿವಾದವಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸೊಸೆಯ ಸಂಬಂಧಿಯೊಬ್ಬರನ್ನು ಅರ್ಹತೆಗೂ ಮೀರಿದ ಹುದ್ದೆಗೆ ನೇಮಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 1. Opposition Meet: ನಾಳೆ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ; ಜೆಡಿಎಸ್, ಆಪ್ ಭಾಗಿ? ತಿರುಗೇಟಿಗೆ ಬಿಜೆಪಿ ಸಜ್ಜು
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಲೋಕಸಭೆ ಚುನಾವಣೆಗೆ ರಣತಂತ್ರ, ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವುದು ಸೇರಿ ಹಲವು ವಿಷಯಗಳ ಕುರಿತು ಬೆಂಗಳೂರಿನಲ್ಲಿ ಸೋಮವಾರದಿಂದ ಎರಡು ದಿನ (ಜುಲೈ 17 ಹಾಗೂ 18) ಪ್ರತಿಪಕ್ಷಗಳ ಸಭೆ (Opposition Meet) ನಡೆಯಲಿದೆ. ಪ್ರತಿಪಕ್ಷಗಳ ಸಭೆಗೆ ಯಾವ ಪಕ್ಷ ಹಾಜರಾಗುತ್ತವೆ, ಯಾವ ಪಕ್ಷಗಳು ಇಲ್ಲ ಎಂಬ ಕುರಿತು ಇನ್ನೂ ಅಂತಿಮವಾಗಿಲ್ಲ. ಇದರ ಬೆನ್ನಲ್ಲೇ, ಎನ್‌ಡಿಎ ಮೈತ್ರಿಕೂಟವೂ ಜುಲೈ 18ರಂದು ಸಭೆ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Opposition Meet: ಕೇಂದ್ರದ ‘ದಿಲ್ಲಿ ಸುಗ್ರೀವಾಜ್ಞೆ’ಗೆ ಕಾಂಗ್ರೆಸ್ ವಿರೋಧ; ಖುಷಿಯಾದ ಆಪ್!