Site icon Vistara News

ವಿಸ್ತಾರ TOP 10 NEWS : ಕೃಷ್ಣ, ಸುಧಾಮೂರ್ತಿ, ಭೈರಪ್ಪ ಸೇರಿ 108 ಸಾಧಕರಿಗೆ ಪದ್ಮ ಪ್ರಶಸ್ತಿಯ ಗೌರವ ಹಾಗೂ ದಿನದ ಇನ್ನಿತರ ಪ್ರಮುಖ ಸುದ್ದಿಗಳಿವು

vistara-top-10-news-padma awards announced to supreme court order in kannada and more news

1. Padma Awards 2023: ಎಸ್‌.ಎಂ.ಕೃಷ್ಣ ಪದ್ಮವಿಭೂಷಣ, ಸುಧಾಮೂರ್ತಿ, ಎಸ್ಎಲ್‌ ಭೈರಪ್ಪ ಪದ್ಮಭೂಷಣ; ಕರ್ನಾಟಕದ 8 ಹಾಗೂ ದೇಶದ 108 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಣೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಕೇಂದ್ರ ಸರ್ಕಾರವು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ (Padma Awards 2023) ಪ್ರಶಸ್ತಿ ಘೋಷಿಸಿದೆ. ಹಾಗೆಯೇ, ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಹಾಗೂ ಸರಸ್ವತಿ ಸಮ್ಮಾನ್‌ ಪುರಸ್ಕೃತ ಖ್ಯಾತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಒಟ್ಟು 106 ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಎರಡು ಜಂಟಿ ಪ್ರಶಸ್ತಿ ಸೇರಿ 108 ಸಾಧಕರಿಗೆ ಗೌರವ ಸಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Padma Awards 2023: ʼತಮಟೆಯ ತಂದೆʼ ಮುನಿವೆಂಕಟಪ್ಪಗೆ ಪದ್ಮಶ್ರೀ ಪ್ರಶಸ್ತಿ
ಹೆಚ್ಚಿನ ಓದಿಗಾಗಿ: Padma Awards 2023: ಲಕ್ಷಾಂತರ ಮಂದಿಯ ಜೀವ ಉಳಿಸಿದ ಡಾ. ದಿಲೀಪ್‌ ಮಹಲ್‌ ನಬೀಸ್‌ಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ
ಹೆಚ್ಚಿನ ಓದಿಗಾಗಿ: Padma Awards 2023: ಕರ್ನಾಟಕದ ರಾಣಿ ಮಾಚಯ್ಯ, ಮುನಿ ವೆಂಕಟಪ್ಪ, ಖಾದರ್‌ ವಲ್ಲಿ, ಶಾ ರಶೀದ್‌, ಸುಬ್ಬರಾಮನ್‌ಗೆ ಪದ್ಮಶ್ರೀ ಪ್ರಶಸ್ತಿ

2. Republic Day 2023 President Speech: ಜಿ20 ಪ್ರೆಸಿಡೆನ್ಸಿಯು ಪ್ರಜಾಪ್ರಭುತ್ವ, ಬಹುತ್ವ ಉತ್ತೇಜಿಸುವ ಅವಕಾಶ ಎಂದು ಬಣ್ಣಿಸಿದ ರಾಷ್ಟ್ರಪತಿ
ಜಿ20 ಅಧ್ಯಕ್ಷತೆಯು ಭಾರತದ ಪ್ರಜಾಪ್ರಭುತ್ವ, ಬಹುತ್ವವನ್ನು ಉತ್ತೇಜಿಸುವುದಕ್ಕೆ ದೊರೆತ ಅವಕಾಶವಾಗಿದೆ. ಇದು ಉತ್ತಮ ಜಗತ್ತು ಮತ್ತು ಅತ್ಯುತ್ತಮ ಭವಿಷ್ಯ ರೂಪಿಸುವ ಸೂಕ್ತ ವೇದಿಕೆಯಾಗಿದೆ. ಭಾರತದ ನಾಯಕತ್ವದಡಿಯಲ್ಲಿ ಜಿ20, ಸುಸ್ಥಿರ ಮತ್ತು ಸಮಾನ ಜಗತ್ತನ್ನು ಕ್ರಮವಾಗಿ ರೂಪಿಸುವ ಪ್ರಯತ್ನಗಳಿಗೆ ಇನ್ನಷ್ಟು ಬಲ ಸಿಗಲಿದೆ ಎಂಬ ನಂಬಿಕೆ ನನಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು(rashtrapati draupadi murmu) ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Employment Generation : 18,567 ಜನರಿಗೆ ಉದ್ಯೋಗ ಕೊಡುವ ಬೃಹತ್‌ ಹೂಡಿಕೆಗೆ ರಾಜ್ಯ ಸರ್ಕಾರ ಸಮ್ಮತಿ
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಯುವಕರ ಮನಗೆಲ್ಲಲು ಮುಂದಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, 18,567 ಜನರಿಗೆ ಉದ್ಯೋಗ ಸೃಷ್ಟಿ (Employment Generation) ಮಾಡುವ ಸಾಮರ್ಥ್ಯದ ಬೃಹತ್‌ ಮೊತ್ತದ ಹೂಡಿಕೆಗೆ ಅನುಮತಿ ನೀಡಿದೆ. ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿಯ (SLSWCC) 137ನೇ ಸಭೆಯಲ್ಲಿ ವಿವಿಧೆಡೆ ಕೈಗಾರಿಕೆ ಸ್ಥಾಪಿಸುವ 59 ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Ramesh Jarakiholi: ಡಿಕೆಶಿ ಆಪ್ತನ ಬಳಿ 110 ಸಿಡಿ ಸಿಕ್ಕಿವೆ; ಸಿಬಿಐ ತನಿಖೆಯಾದರೆ ಎಲ್ಲರ ಬಣ್ಣ ಬಯಲಾಗಲಿದೆ ಎಂದ ಜಾರಕಿಹೊಳಿ
ತಮ್ಮ ವಿರುದ್ಧದ ಸಿಡಿ ಕೇಸ್‌ಗೆ ಸಂಬಂಧಿಸಿದಂತೆ ಶಿರಾ ಹಾಗೂ ದೇವನಹಳ್ಳಿಯ ಪ್ರಮುಖ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದಾಗ 110 ಸಿಡಿಗಳು ಸಿಕ್ಕಿವೆ. ಇದು ಮಹಾ ನಾಯಕನ ಕುತಂತ್ರದಿಂದ ಆಗಿವೆ. ಇಡೀ ರಾಜ್ಯದ ಕೆಲವು ಪ್ರಮುಖರ ಸಿಡಿಗಳು ಅದರಲ್ಲಿವೆ. ಸಿಬಿಐ ತನಿಖೆಯಾದರೆ ಎಲ್ಲವೂ ಹೊರಗೆ ಬರಲಿದೆ. ಈ ಬಗ್ಗೆ ಮಾತನಾಡಿರುವ ಆಡಿಯೊ ಸಾಕ್ಷಿ ನನ್ನ ಬಳಿ ಇದೆ. ಇದನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarakiholi) ಹೇಳಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka Congress : ಡಾ. ಸುಧಾಕರ್‌ ಒಬ್ಬ ಪೆದ್ದ, ಅವನಿಗೆ ಸಿಎಜಿ ರಿಪೋರ್ಟ್‌ ಓದೋಕೆ ಬರಲ್ಲ: ಸಿದ್ದರಾಮಯ್ಯ ವಾಗ್ದಾಳಿ
ತಮ್ಮ ಸರ್ಕಾರದ ಅವಧಿಯಲ್ಲಿ 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಆರೋಗ್ಯ ಸಚಿವಡಾ. ಕೆ. ಸುಧಾಕರ್ ಒಬ್ಬ ಪೆದ್ದ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ (Karnataka Congress), ಸಿಎಜಿ ರಿಪೋರ್ಟ್ ಓದೋಕೆ, ಅರ್ಥ ಮಾಡಿಕೊಳ್ಳೋಕೆ ಬರೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Karnataka Election: ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ; ಭವಾನಿ ಅಗತ್ಯವಿದ್ದರೆ ನಾನೇ ಹೇಳುತ್ತಿದ್ದೆ: ಎಚ್.ಡಿ. ಕುಮಾರಸ್ವಾಮಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಹಾಸನ ಕ್ಷೇತ್ರದಲ್ಲಿ ತಾವೇ ನಿಲ್ಲುವುದಾಗಿ ಭವಾನಿ ರೇವಣ್ಣ (Bhavani Revanna) ಹೇಳಿಕೊಂಡಿರುವುದು ಜೆಡಿಎಸ್‌ನಲ್ಲಿ ಆಂತರಿಕ ತಿಕ್ಕಾಟಕ್ಕೆ ಕಾರಣವಾಗಿದೆ. ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಚುನಾವಣೆಗೆ ನಿಲ್ಲಬೇಕು ಎನ್ನುವ ಆಕಾಂಕ್ಷೆ ಇರುವುದು ತಪ್ಪಲ್ಲ. ಆದರೆ, ಈಗಾಗಲೇ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಭವಾನಿ ಅವರಿಗೆ ಟಿಕೆಟ್‌ ಕೊಡುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. BBC Documentary: ಬಿಬಿಸಿಯ ಗುಜರಾತ್ ದಂಗೆಯ ಡಾಕ್ಯುಮೆಂಟರಿ ಪ್ರಶ್ನಿಸಿದ್ದ ಕಾಂಗ್ರೆಸ್ ನಾಯಕ ಆ್ಯಂಟನಿ ಪುತ್ರ ಪಕ್ಷಕ್ಕೆ ರಾಜೀನಾಮೆ!
ಗುಜರಾತ್ ದಂಗೆ ಕುರಿತು ಬಿಬಿಸಿ ಸಾಕ್ಷ್ಯ ಚಿತ್ರವು (BBC Documentary) ಪೂರ್ವಗ್ರಹ ಪೀಡಿತವಾಗಿದೆ ಎಂದು ಹೇಳಿದ್ದ ಕೇರಳ ಕಾಂಗ್ರೆಸ್‌ನ ಯುವ ನಾಯಕ ಹಾಗೂ ಹಿರಿಯ ನಾಯಕ ಎ ಕೆ ಆ್ಯಂಟನಿ ಅವರ ಪುತ್ರ ಅನಿಲ್ ಕೆ ಆ್ಯಂಟನಿ (Anil K Antony) ಅವರು ಪಕ್ಷವನ್ನು ತೊರೆದಿದ್ದಾರೆ. ತಾವು ಮಾಡಿದ್ದ ಟ್ವೀಟ್ ವಾಪಸ್ ಪಡೆಯಲು ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದು, ಈ ಕಾರಣಕ್ಕಾಗಿಯೇ ಪಕ್ಷ ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BBC Documentary On Modi: ದೆಹಲಿಯ ಜಾಮಿಯಾ ವಿವಿಯಲ್ಲೂ ಡಾಕ್ಯುಮೆಂಟರಿ ಸ್ಕ್ರೀನಿಂಗ್‌ ವ್ಯವಸ್ಥೆ, ನಾಲ್ವರ ಸೆರೆ

8. Pathaan Movie: ವಿಶ್ವಾದ್ಯಂತ ಪಠಾಣ್‌ ಗರ್ಜನೆ: ಭಾರತದಲ್ಲಿ 300 ಪ್ರದರ್ಶನಗಳನ್ನು ಹೆಚ್ಚಿಸಿದ ಚಿತ್ರತಂಡ
ನಾಲ್ಕು ವರ್ಷಗಳ ನಂತರ ಶಾರುಖ್ ಖಾನ್ ಮತ್ತೆ ತೆರೆ ಮೇಲೆ ಬಂದಿದ್ದಾರೆ. ಪಠಾಣ್‌ ಸಿನಿಮಾ (Pathaan Movie ) ವಿಶ್ವಾದ್ಯಂತ ಬಿಡುಗಡೆಯಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದರು. ಸಿನಿಮಾಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಭಾರತದಾದ್ಯಂತ 300 ಪ್ರದರ್ಶನಗಳನ್ನು ಚಿತ್ರತಂಡ ಹೆಚ್ಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Verdicts in Scheduled Languages: ಗುರುವಾರದಿಂದ ಸುಪ್ರೀಂ ತೀರ್ಪುಗಳು ಕನ್ನಡ ಸೇರಿ ಪ್ರಾದೇಶಿಕ ಭಾಷೆಯಲ್ಲಿ ಲಭ್ಯ, ಸಿಜೆಐ ಘೋಷಣೆ
ಸುಪ್ರೀಂ ಕೋರ್ಟ್‌ (Supreme Court) ತೀರ್ಪುಗಳನ್ನು ಪ್ರಾದೇಶಿಕ ಭಾಷೆಯಲ್ಲೂ ಲಭ್ಯವಾಗುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ಗಣರಾಜ್ಯೋತ್ಸವದ ದಿನದಿಂದಲೇ (ಜನವರಿ 26) ಕನ್ನಡ ಸೇರಿ ಸಂವಿಧಾನ ಅನುಸೂಚಿತ 22 ಭಾಷೆಗಳ ಪೈಕಿ ಕೆಲವು ಭಾಷೆಗಳಲ್ಲಿ (Verdicts in Scheduled Languages) ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಲಭ್ಯವಾಗಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ (DY Chandrachud) ಅವರು ಐತಿಹಾಸಿಕ ನಿರ್ಧಾರ ಘೋಷಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Shooting : ಸಾಕಿದ್ದ ಮಾಲೀಕನಿಗೇ ಗುಂಡು ಹಾರಿಸಿ ಕೊಂದ ನಾಯಿ! ಅಮೆರಿಕದಲ್ಲೊಂದು ವಿಚಿತ್ರ ಘಟನೆ
ಆತ 30 ವರ್ಷದ ವ್ಯಕ್ತಿ. ಅಮೆರಿಕದ ಕನ್ಸಾಸ್‌ನ ನಿವಾಸಿಯಾಗಿರುವ ಆತ ಇತ್ತೀಚೆಗೆ ತನ್ನ ನಾಯಿಯೊಂದಿಗೆ ಭೇಟೆ ಆಡುವುದಕ್ಕೆ ಹೊರಟಿದ್ದ. ಜೀಪೊಂದರಲ್ಲಿ ಹೊರಟಿದ್ದ ಆತನನ್ನು ಆತನ ಸಾಕು ನಾಯಿಯೇ ಗುಂಡಿಟ್ಟು (Shooting) ಕೊಂದಿದೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version