Site icon Vistara News

ವಿಸ್ತಾರ TOP 10 NEWS |‌ ಮೀಸಲಾತಿ ಕುರಿತು ಅಚ್ಚರಿಯ ನಿರ್ಧಾರದಿಂದ, ಅಮಿತ್‌ ಶಾ ಕರ್ನಾಟಕ ಪ್ರವಾಸದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news panchamasali reservation to amit shah in karnataka and more news

1. Reservation | ಪಂಚಮಸಾಲಿ-ಒಕ್ಕಲಿಗರಿಗೆ 2D ವರ್ಗ ಸೃಜನೆ: 2A ಮೀಸಲಾತಿ ಕುರಿತು ಸರ್ಕಾರದ ಮಹತ್ವದ ನಿರ್ಧಾರ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬದಲಿಗೆ ಹೊಸದಾಗಿ 2ಡಿ ವರ್ಗವನ್ನು ಸೃಜಿಸಲು ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ. ಅದೇ ರೀತಿ ಒಕ್ಕಲಿಗ ಸಮುದಾಯಕ್ಕೆ 2ಸಿ ವರ್ಗಕ್ಕೆ ಸೇರ್ಪಡೆ ಮಾಡುವ ತೀರ್ಮಾನ ಮಾಡಲಾಗಿದೆ. ಇನ್ನು ಮುಂದೆ 3ಎ ಹಾಗೂ 3ಬಿ ವರ್ಗ ಇರುವುದಿಲ್ಲ ಎಂದು ಸಭೆಯ ನಂತರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಬೆಳಗಾವಿ ಅಧಿವೇಶನ | ಅಮಿತ್‌ ಶಾ ಆಮೇಲ್‌ ಬನ್ರಿ ಅಂತ ಹೇಳ್ಬೇಕಿತ್ತು? ಆ ದಮ್‌ ಇಲ್ಲ ಇವ್ರಿಗೆ: ಸದನ ಮೊಟಕಿಗೆ ಸಿದ್ದರಾಮಯ್ಯ ಕುಟುಕು
ಚಳಿಗಾಲದ ಅಧಿವೇಶನವನ್ನು ಒಂದು ದಿನ ಮೊದಲೇ ಮೊಟಕುಗೊಳಿಸುತ್ತಿರುವುದಕ್ಕೆ ಪ್ರತಿಪಕ್ಷ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಈಗ ಸದನ ನಡೆಯುತ್ತಿದೆ ಆಮೇಲೆ ಬನ್ನಿ ಅಂತ ಅಮಿತ್‌ ಅವರಿಗೆ ಹೇಳಲು ಬಿಜೆಪಿಯವರಿಗೆ ದಮ್‌ ಇಲ್ಲ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Kalasa Banduri | ಕಳಸಾ ಬಂಡೂರಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದ ಅನುಮತಿ: ಸಚಿವ ಪ್ರಲ್ಹಾದ್‌ ಜೋಷಿ ಮಾಹಿತಿ
ಕಿತ್ತೂರು ಕರ್ನಾಟಕ ಭಾಗದ ಜನತೆ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ, ಕುಡಿಯುವ ನೀರಿನ ಯೋಜನೆಯಾದ ಕಳಸಾ ಬಂಡೂರಿ (Kalasa Banduri) ನಾಲಾ ತಿರುವು ಯೋಜನೆಯ (ಮಹದಾಯಿ) ಅನುಷ್ಠಾನಕ್ಕೆ ಅಗತ್ಯವಾಗಿದ್ದ ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ. ಈ ವಿಷಯವನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ಪ್ರಕಟಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. NPS News | ಕಂಡಿಷನ್‌ ಒಪ್ಪಿ ಕೆಲಸಕ್ಕೆ ಸೇರಿ ಈಗ OPS ಕೇಳುವುದು ಸೌಜನ್ಯವಲ್ಲ: ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ
ಹೊಸ ಪಿಂಚಣಿ ಯೋಜನೆಯನ್ನು (NPS News) ರದ್ದುಗೊಳಿಸಿ, ಈ ಹಿಂದಿನಂತೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎಂಬ ಹೋರಾಟದ ಕುರಿತು ಸರ್ಕಾರ ನಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ೨೦೦೪ರಲ್ಲಿ ಕೇಂದ್ರ ಸರ್ಕಾರ ಪಿಂಚಣಿ ಕೊಡುವುದಕ್ಕೆ ಆಗುವುದಿಲ್ಲ ಎಂದು ಆದೇಶ ಹೊರಡಿಸಿತು. ಅದನ್ನು ಒಪ್ಪಿ ಕೆಲಸಕ್ಕೆ ಸೇರಿದವರು ಈಗ ಈ ರೀತಿ ಒತ್ತಾಯ ಮಾಡುವುದು ಸರಿಯಲ್ಲ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ‌ಹಳೆ ಮೈಸೂರಿನಲ್ಲಿ ಶೇ.50 ಸೀಟು ಗೆಲ್ಲುತ್ತದೆ ಬಿಜೆಪಿ ಎಂದ ಡಿ.ವಿ. ಸದಾನಂದಗೌಡ: ಶುಕ್ರವಾರ ಕರ್ನಾಟಕಕ್ಕೆ ಅಮಿತ್‌ ಶಾ ಆಗಮನ
ರಾಜ್ಯದಲ್ಲಿ ಸುಶಾಸನ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೀಡುವ ಬಿಜೆಪಿ ಸರ್ಕಾರ ಮುಂದುವರಿಯಬೇಕು ಎಂಬ ದೃಷ್ಟಿಯಿಂದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಅವರ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿ ರಿಪೋರ್ಟ್ ಕಾರ್ಡ್ ಮುಂದಿಟ್ಟು ಮತ ಕೇಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬೆಂಗಳೂರು ಉತ್ತರ ಸಂಸದ ಡಿ.ವಿ. ಸದಾನಂದಗೌಡ ಅವರು ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಪಾಕಿಸ್ತಾನದಲ್ಲಿ ಹಿಂದು ಮಹಿಳೆಯ ಭೀಕರ ಹತ್ಯೆ; ಗ್ಯಾಂಗ್​ರೇಪ್​ ಮಾಡಿ, ಆಕೆಯ ತಲೆ-ಸ್ತನಗಳನ್ನು ಕತ್ತರಿಸಿ ಕೊಂದ ಕಟುಕರು
ಪಾಕ್​​ನ ಸಿಂಧ್​ ಪ್ರಾಂತ್ಯದಲ್ಲಿರುವ ಶಿಂಜೋರೋ ಪಟ್ಟಣದಲ್ಲಿ 40 ವರ್ಷದ ಹಿಂದು ಮಹಿಳೆಯೊಬ್ಬರ ಮೃತದೇಹ ತಲೆ ಮತ್ತು ಸ್ತನಗಳನ್ನು ಕತ್ತರಿಸಿದ, ಚರ್ಮವನ್ನು ಸುಲಿದ ರೀತಿಯಲ್ಲಿ ಪತ್ತೆಯಾಗಿದೆ. ಈ ಮಹಿಳೆಯನ್ನು ದಿಯಾ ಎಂದು ಗುರುತಿಸಲಾಗಿದ್ದು, ಭೀಲ್​ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Indian drugs | ಭಾರತದಲ್ಲಿ ತಯಾರಾದ ಔಷಧ ಓವರ್‌ಡೋಸ್‌ನಿಂದ ಉಜ್ಬೆಕಿಸ್ತಾನದಲ್ಲಿ 18 ಮಕ್ಕಳ ಸಾವು
ಭಾರತದ ಕಂಪನಿಯೊಂದು ತಯಾರಿಸಿರುವ ಸಿರಪ್‌ ಸೇವಿಸಿದ ಬಳಿಕ ಉಜ್ಬೆಕಿಸ್ತಾನದಲ್ಲಿ 18 ಮಕ್ಕಳು ಮೃತಪಟ್ಟಿದ್ದಾರೆ. ಈ ಕುರಿತು ತನಿಖೆಗೆ ಭಾರತ ಸರ್ಕಾರ ಮುಂದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Election Reform | ಕ್ಷೇತ್ರದಿಂದ ದೂರ ಇರುವವರಿಗೂ ಮತದಾನದ ಅವಕಾಶ: RVM ಮೂಲಕ ಐತಿಹಾಸಿಕ ಪ್ರಯೋಗಕ್ಕೆ ಮುಂದಾದ ಚುನಾವಣಾ ಆಯೋಗ
ತಮ್ಮ ಮತ ಕ್ಷೇತ್ರದಿಂದ ವಿವಿಧ ಕಾರಣಕ್ಕೆ ದೂರ ಇರುವ ಮತದಾರರು, ತಮ್ಮದೇ ಮತಗಟ್ಟೆಗೆ ಆಗಮಿಸುವ ಅನಿವಾರ್ಯತೆ ಇಲ್ಲದೆಯೇ ಮತದಾನದ ಹಕ್ಕನ್ನು ಚಲಾಯಿಸಲು ದೂರ ಮತದಾನ ಯಂತ್ರವನ್ನು (Remote Voting Machine-RVM) ಕೇಂದ್ರ ಚುನಾವಣಾ ಆಯೋಗ ರೂಪಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ನಟಿ ತುನಿಶಾರದ್ದು ಕೊಲೆ ಎಂದ ಕಂಗನಾ; ​ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇಲ್ಲ ಎಂಬ ನೋವನ್ನು ಹೆಣ್ಣು ಸಹಿಸೋದಿಲ್ಲ ಎಂದು ಪೋಸ್ಟ್​
ನಟ ಸುಶಾಂತ್​ ಸಿಂಗ್​ ಮೃತಪಟ್ಟಾಗ ಅದು ಆತ್ಮಹತ್ಯೆಯಲ್ಲ, ಕೊಲೆ. ಸುಶಾಂತ್ ಸಿಂಗ್​ ರಜಪೂತ್​ ಸಾವಿಗೆ ಬಾಲಿವುಡ್​​ನಲ್ಲಿರುವ ನೆಪೋಟಿಸಂ (ಸ್ವಜನಪಕ್ಷಪಾತ) ಕಾರಣ ಎಂದು ಬಲವಾಗಿ ಪ್ರತಿಪಾದಿಸುತ್ತಿರುವ ಬಾಲಿವುಡ್​ ನಟಿ ಕಂಗನಾ ರಣಾವತ್,​ ಇದೀಗ ನಟಿ ತುನಿಶಾ ಶರ್ಮಾಳದ್ದೂ ಕೊಲೆ ಎಂದೇ ಹೇಳುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Heeraben Modi | ಪ್ರಧಾನಿ ಮೋದಿ ತಾಯಿ ಹೀರಾಬೆನ್‌ ಆರೋಗ್ಯ ಚೇತರಿಕೆ, ಆಸ್ಪತ್ರೆಯಿಂದ ಶೀಘ್ರ ಬಿಡುಗಡೆ ನಿರೀಕ್ಷೆ
ಅನಾರೋಗ್ಯದ ಪರಿಣಾಮ ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, 99 ವರ್ಷ ಇಳಿ ವಯಸ್ಸಿನ ಹೀರಾಬೆನ್‌ ಮೋದಿ ಅವರ ಆರೋಗ್ಯ ಚೇತರಿಸಿದ್ದು, (Heeraben Modi) ಇನ್ನು ಒಂದೆರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Anant Ambani | ಬಾಲ್ಯ ಸ್ನೇಹಿತೆ ರಾಧಿಕಾ ಮರ್ಚೆಂಟ್‌ ಜತೆ ಅನಂತ್‌ ಅಂಬಾನಿ ನಿಶ್ಚಿತಾರ್ಥ
  2. Hassan Blast | ಮಿಕ್ಸಿ ಬಾಂಬರ್‌ ಬಳಿ ಕೆಜಿಗಟ್ಟಲೆ ಚಿನ್ನ, ಕೋಟಿ ಹಣ? ಕಿರಾತಕ ಮಾಡಿದ ವಿಡಿಯೋಗಳ ಅಸಲಿಯತ್ತು ಇಲ್ಲಿದೆ ನೋಡಿ!
  3. Russia Ukraine War | ಉಕ್ರೇನ್‌ನ ನಗರಗಳ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ, ಕಗ್ಗತ್ತಲಿನತ್ತ ಕೀವ್‌, ಲ್ವಿವ್‌ ನಗರಗಳು
  4. ಭದ್ರತಾ ವೈಫಲ್ಯ ಆಗಿದ್ದಲ್ಲ, ರಾಹುಲ್​ ಗಾಂಧಿಯೇ ನಿಯಮ ಉಲ್ಲಂಘಿಸಿದ್ದಾರೆ; ಪ್ರತಿಕ್ರಿಯಾ ಪತ್ರ ಬರೆದ ಸಿಆರ್​ಪಿಎಫ್​​
  5. Santa Claus | ಸಾಂತಾ ಕ್ಲಾಸ್ ವೇಷದಲ್ಲಿ ದೈವ ಅಣಕಿಸುವ ವಿಡಿಯೊ; ನೆಟ್ಟಿಗರು ಗರಂ
  6. ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು
Exit mobile version