1. Karnataka Elections : ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್ ಮೆಗಾ ಪ್ಲ್ಯಾನ್, ಕೂಡಲಸಂಗಮದಲ್ಲಿ ರಾಹುಲ್ ನೇತೃತ್ವದಲ್ಲಿ ಬಸವ ಜಯಂತಿ
ಬಸವಣ್ಣನ ಐಕ್ಯ ಸ್ಥಳ ಕೂಡಲ ಸಂಗಮದಲ್ಲಿ ಬಸವ ಜಯಂತಿ ಆಚರಣೆಗಾಗಿ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿ ಅವರು ಭಾಗಿಯಾಗಲಿದ್ದಾರೆ. ಹಾಗಂತ ಇದು ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮವಲ್ಲ. ಆದರೆ, ಆಯೋಜಿಸುವವರು, ಭಾಗಿಯಾಗುವವರಲ್ಲಿ ಹೆಚ್ಚಿನವರೆಲ್ಲ ಕಾಂಗ್ರೆಸ್‌ನವರೇ ಆಗಿರುತ್ತಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Basavaraj Bommai: ಭಾನುವಾರದಿಂದ ಸಿಎಂ ಬೊಮ್ಮಾಯಿ ದಂಡಯಾತ್ರೆ ಆರಂಭ: ಅಭ್ಯರ್ಥಿಗಳ ಪರ ʼಜಯವಾಹಿನಿʼ ರೋಡ್ ಶೋ
ಚುನಾವಣಾ ನಾಮಪತ್ರ ಸಲ್ಲಿಕೆ ಹಾಗೂ ಅನುಮೋದನೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಚುನಾವಣಾ ಪ್ರಚಾರ ಯಾತ್ರೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಆರಂಭಿಸಲು ಸಜ್ಜಾಗಿದ್ದಾರೆ. ಭಾನುವಾರದಿಂದಲೇ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುವ ʼಜಯವಾಹಿನಿʼ ಯಾತ್ರೆಯನ್ನು ಬೆಂಗಳೂರಿನಿಂದ ಆರಂಭಿಸಲಿದ್ದಾರೆ. ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಶ್ರೀ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಯನ್ನು ಆರಂಭಿಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Karnataka Election 2023: ಜನರ ಮನಸ್ಸಿಗೆ ಭಾವನಾತ್ಮಕ ಬಾಣ; ವರುಣದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ
ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Election 2023) ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ, ಕೊನೆಗೆ ವರುಣ ಕ್ಷೇತ್ರಕ್ಕೆ ತೆರಳಿದ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಆರ್‌ಎಸ್‌ಎಸ್ ಕೂಡ ಇನ್ನಿಲ್ಲದ ಚಟುವಟಿಕೆಯಲ್ಲಿ ತೊಡಗಿದೆ. ಇನ್ನು ಸ್ವಪಕ್ಷದಲ್ಲೇ ಕೆಲವು ವಿರೋಧಿಗಳು ಸಿದ್ದರಾಮಯ್ಯ ಅವರನ್ನು ಸೋಲಿಸಲು ತಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಯು ವರುಣದಲ್ಲಿ ಭಾರಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಭಾವನಾತ್ಮಕ ಅಸ್ತ್ರವನ್ನೂ ಬಳಸಿಕೊಳ್ಳುತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election: ವರುಣದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಡಿ.ಕೆ. ಶಿವಕುಮಾರ್ ತಂತ್ರ: ಸಿಎಂ ಬೊಮ್ಮಾಯಿ ಆರೋಪ
4. M B Patil: ನಾನೂ ಸಿಎಂ ಆಗಲು ಸಮರ್ಥ, ಹೈಕಮಾಂಡ್ ಒಪ್ಪಿದರೆ ಆಗುವೆ; ಮನದಾಸೆ ಬಿಚ್ಚಿಟ್ಟ ಎಂ.ಬಿ.ಪಾಟೀಲ್
ಕರ್ನಾಟಕ ವಿಧಾನಸಭೆ ಚುನಾವಣೆ ಕಣ ದಿನೇದಿನೆ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಯಾಗಿ, ಅಭ್ಯರ್ಥಿಗಳು ಇನ್ನಿಲ್ಲದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಗೆದ್ದು ಶಾಸಕನಾಗುವ, ಸಚಿವನಾಗುವ ಕನಸು ಕಾಣುತ್ತಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (M B Patil) ಅವರು ಮುಖ್ಯಮಂತ್ರಿಯಾಗುವ ಕನಸನ್ನು ಬಿಚ್ಚಿಟ್ಟಿದ್ದಾರೆ. “ನಾನೂ ಮುಖ್ಯಮಂತ್ರಿ ಆಗಲು ಸಮರ್ಥನಿದ್ದೇನೆ. ಹೈಕಮಾಂಡ್ ಒಪ್ಪಿದರೆ ಆಗುವೆ” ಎಂದು ಮನದಾಸೆ ಹೇಳಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. BJP Karnataka: ಬಿಜೆಪಿಯಲ್ಲಿ ಮತ್ತೊಂದು ಬಂಡಾಯ: ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ
ಟಿಕೆಟ್ ಘೋಷಣೆಗಳ ನಂತರ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೆ ಮಾಜಿ ಸಿಎಂ, ಮಾಜಿ ಡಿಸಿಎಂ ಸೇರಿ ಅನೇಕರು ಪಕ್ಷ ತೊರೆದಿರುವ ಬೆನ್ನಿಗೇ, ಹಾಲಿ ಸಚಿವ ಆನಂದ ಸಿಂಗ್ ಸಹೋದರಿ ರಾಣಿ ಸಂಯುಕ್ತ ಕಾಂಗ್ರೆಸ್ ಸೇರಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ಉಗ್ರದಾಳಿ ಪ್ರಕರಣ; 12 ಮಂದಿ ವಶಕ್ಕೆ; ಸ್ಥಳದಲ್ಲಿ ಬೀಡುಬಿಟ್ಟ ಶ್ವಾನದಳ, ಡ್ರೋನ್
ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಏಪ್ರಿಲ್ 20ರಂದು ನಡೆದ ಉಗ್ರದಾಳಿಯಲ್ಲಿ (Poonch Terror Attack) ರಾಷ್ಟ್ರೀಯ ರೈಫಲ್ಸ್ನ ಐವರು ಯೋಧರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ 12 ಮಂದಿಯನ್ನು ಭದ್ರತಾ ಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ದಾಳಿ ಮಾಡಿದ ಉಗ್ರರ ಗುಂಪು ಕಳೆದ ಒಂದೂವರೆ ವರ್ಷಗಳಿಂದಲೂ ಈ ಸ್ಥಳದಲ್ಲಿ ಸಕ್ರಿಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. PM Modi: ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಪತ್ರ; ಕೇರಳದಲ್ಲಿ ಹೈಅಲರ್ಟ್!
ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಏಪ್ರಿಲ್ 24ರಂದು ಕೇರಳದ ಕೊಚ್ಚಿಗೆ ಭೇಟಿ ನೀಡಲಿದ್ದಾರೆ. ಆದರೆ ಈ ಬೆನ್ನಲ್ಲೇ ಕೇರಳದಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಬೆದರಿಕೆ ಪತ್ರವೊಂದು ಬಂದಿದೆ. ‘ಪ್ರಧಾನಿ ನರೇಂದ್ರ ಮೋದಿಯವರು ಕೊಚ್ಚಿಗೆ ಭೇಟಿ ನೀಡಿದ್ದೇ ಆದಲ್ಲಿ ಆತ್ಮಾಹುತಿ ದಾಳಿ ನಡೆಸುತ್ತೇನೆ’ ಎಂದು ಆ ಪತ್ರದಲ್ಲಿ ಬರೆಯಲಾಗಿದೆ. ಹಾಗೇ, ಪತ್ರದಲ್ಲಿ ವ್ಯಕ್ತಿಯೊಬ್ಬನ ಹೆಸರು, ಮತ್ತಿತರ ವಿವರಗಳನ್ನೂ ಉಲ್ಲೇಖಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Rahul Gandhi: ಸರ್ಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ; ಸತ್ಯ ಹೇಳಿದ್ದಕ್ಕೆ ಮನೆಬಿಡಬೇಕಾಯಿತು ಎಂದ ಕಾಂಗ್ರೆಸ್ ನಾಯಕ!
2019ರಲ್ಲಿ ಮೋದಿ ಉಪನಾಮಕ್ಕೆ ಮಾಡಿದ ಅಪಮಾನದ ಕೇಸ್ನಲ್ಲಿ ದೋಷಿಯಾಗಿ, ಸಂಸದ ಸ್ಥಾನದಿಂದಲೂ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ದೆಹಲಿಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾರೆ. ಲ್ಯುಟೆನ್ಸ್ ದೆಹಲಿಯಲ್ಲಿರುವ 12 ತುಘಲಕ್ ಲೇನ್ನಲ್ಲಿ ಇರುವ ಸರ್ಕಾರಿ ಬಂಗಲೆಯಲ್ಲಿ ರಾಹುಲ್ ಗಾಂಧಿ 2005ರಿಂದಲೂ ವಾಸವಾಗಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. IPL 2023: ಗುಜರಾತ್ ವಿರುದ್ಧ ವೀರೋಚಿತ ಸೋಲು ಕಂಡ ಲಕ್ನೋ ಸೂಪರ್ಜೈಂಟ್ಸ್
ಗುಜರಾತ್ ಟೈಟನ್ಸ್ ವಿರುದ್ಧದ ಅಲ್ಪ ಮೊತ್ತದ ಹೋರಾಟದಲ್ಲಿ ನಾಟಕೀಯ ಕುಸಿತ ಕಂಡ ಲಕ್ನೋ ಸೂಪರ್ ಜೈಂಟ್ಸ್ ತಂಡ 7 ರನ್ಗಳ ವೀರೋಚಿತ ಸೋಲು ಕಂಡಿದೆ. ಸೋಲುವ ಹಂತದಲ್ಲಿದ್ದ ಗುಜರಾತ್ ಫಿನಿಕ್ಸ್ನಂತೆ ಮೇಲೆದ್ದು ಗೆಲುವು ಸಾಧಿಸಿತು. ಮೋಹಿತ್ ಶರ್ಮ ಅವರ ಅಂತಿಮ ಓವರ್ನಲ್ಲಿ 4 ವಿಕೆಟ್ಗಳು ಉದುರಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Viral News : 58 ಲಕ್ಷ ರೂ. ಸಂಬಳವಿದ್ದರೂ ಗರ್ಲ್‌ಫ್ರೆಂಡ್ ಇಲ್ಲ; ಬೇಸರ ತೋಡಿಕೊಂಡ ಬೆಂಗಳೂರಿನ ಟೆಕ್ಕಿ!
ಹಣದಿಂದ ಸಂತೋಷವನ್ನು ಖರೀದಿಸಬಹುದೇ ಎನ್ನುವುದು ಸಾಕಷ್ಟು ಬಾರಿ ಚರ್ಚೆಗೆ ಬಂದ ವಿಚಾರ. ಅನೇಕ ಬಾರಿ ಜನರು ಹಣದಿಂದ ದುಬಾರಿ ವಸ್ತುಗಳನ್ನು ಖರೀದಿಸಿ, ಹಣದಿಂದ ಸಂತೋಷ ಸಾಧ್ಯ ಎಂದು ಹೇಳಿಕೊಂಡಿದ್ದಾರೆ. ಆದರೆ ಇದೀಗ ಬೆಂಗಳೂರಿನ 24 ವರ್ಷದ ಟೆಕ್ಕಿಯೊಬ್ಬರು ಲಕ್ಷಗಟ್ಟಲೆ ಹಣವಿದ್ದರೂ ಸಂತೋಷವಿಲ್ಲ, ಒಬ್ಬಂಟಿಯಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral News) ಆಗಿದೆ. ಮತ್ತಷ್ಟು ವೈರಲ್ ನ್ಯೂಸ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Weather Report: ರಾಜ್ಯಾದ್ಯಂತ ಇನ್ನೆರಡು ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
- ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ ಅಲ್ ಖೈದಾ; ಭಾರತದ ಮೇಲೆ ದಾಳಿ ಬೆದರಿಕೆ
- Eid Ul Fitr 2023: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಮುಸ್ಲಿಮರು; ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ
- Akshaya Tritiya 2023 : ಅಕ್ಷಯ ತೃತೀಯಕ್ಕೆ ಉಂಟು ಪುರಾಣದ ನಂಟು
- ಮಕ್ಕಳ ಕಥೆ: ಸ್ವೀಡನ್ ದೇಶದ ಜನಪದ ಕಥೆ: ಕಿನ್ನರಿಯ ಕುರಿಗಳು: ಭಾಗ 1
- ಸೈಬರ್ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ಸುರಕ್ಷತೆ: ಭಾಗ- 3: ಫೇಸ್‌ಬುಕ್, ಟ್ವಿಟರ್, ವಾಟ್ಸ್ಯಾಪ್ ಭದ್ರವಾಗಿರಿಸುವುದು ಹೀಗೆ!