1.15 ದಿನ ತಮಿಳ್ನಾಡಿಗೆ ನೀರು ಹರಿಸಲು ಒಪ್ಪಿದ ಸಿದ್ದು ಸರ್ಕಾರ : ಕಾವೇರಿ ಸುಪ್ರೀಂ ವಿಚಾರಣೆ ಬುಧವಾರಕ್ಕೆ
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ಸಂಬಂಧ ಪ್ರಕರಣದ ವಿಚಾರಣೆ ಸೆ.1, ಶುಕ್ರವಾರ ನಡೆಯುವುದೇ ಅನುಮಾನವಾಗಿತ್ತು. ಹಾಗಿದ್ದೂ, ವಿಚಾರಣೆ ನಡೆದು ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿತ್ತಲ್ಲದೇ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದಕ್ಕೆ ಹಾಕಿತು. ಈ ಮಧ್ಯೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸಿರುವುದಾಗಿ ಕರ್ನಾಟಕ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2.ಲೋಕಸಭೆ ಚುನಾವಣೆ ಹೊತ್ತಲ್ಲೇ ಜೆಡಿಎಸ್‌ಗೆ ಮರ್ಮಾಘಾತ-ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್‌ಗೆ ದೊಡ್ಡ ಆಘಾತ ಉಂಟಾಗಿದೆ. ಪ್ರಜ್ವಲ್ ರೇವಣ್ಣ ಅವರ (Prajwal Revanna) ಸಂಸತ್ ಸದಸ್ಯತ್ವ ಅನರ್ಹಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಇದರಿಂದ ಇನ್ನು 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಸೂರ್ಯ ಶಿಕಾರಿ: ಶನಿವಾರ ಆದಿತ್ಯ ಎಲ್-1 ಉಡಾವಣೆ
ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ (ISRO) ಕೈಗೊಳ್ಳುತ್ತಿರುವ ಆದಿತ್ಯ ಎಲ್ 1 ಮಿಷನ್ (Aditya L1 Mission) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೆ. 2ರಂದು ಬೆಳಗ್ಗೆ 11.50ಕ್ಕೆ ಉಡಾವಣೆ ಮಾಡಲಾಗುತ್ತದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಮಸಾಲೆ ದೋಸೆ, ಫಿಲ್ಟರ್ ಕಾಫಿ ಚಂದ್ರಯಾನ 3 ಯಶಸ್ಸಿನ ಹಿಂದಿರುವ ರಹಸ್ಯ ಸೂತ್ರ!
4. ನಮೋ ಸರ್ಕಾರ ಉರುಳಿಸಲು I.N.D.I.A ಒಗ್ಗಟ್ಟಿನ ಸೂತ್ರ: 3ನೇ ಸಭೆಯಲ್ಲೂ ಫೈನಲಾಗದ ಪ್ರಧಾನಿ ಅಭ್ಯರ್ಥಿ
ಮುಂಬೈ ‘ಇಂಡಿಯಾ’ ಹೆಸರಿನಡಿ ಒಂದಾಗಿರುವ ಪ್ರತಿಪಕ್ಷಗಳ ಮೂರನೇ ಸಭೆ (INDIA bloc Meeting) ಶುಕ್ರವಾರ ಮುಂಬೈನಲ್ಲಿ ಮುಕ್ತಾಯವಾಗಿದ್ದು, ಹಲವು ಸಮಿತಿಗಳನ್ನು ರಚಿಸಲಾಗಿದೆ. ಗುರುವಾರ ಮತ್ತು ಶುಕ್ರವಾರ ನಡೆದಿರುವ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಸಾಧ್ಯವಾದಷ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ. ಇನ್ನೂ ಪ್ರಧಾನಿ ಅಭ್ಯರ್ಥಿ ಫೈನಲ್ ಆಗಿಲ್ಲ ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ನಾಳೆ ಭಾರತ-ಪಾಕ್ ಮುಖಾಮುಖಿ- ಹೈವೋಲ್ಟೇಜ್ ಪಂದ್ಯಕ್ಕೆ ಕಾಡುತ್ತಿದೆ ಮಳೆ ಆತಂಕ
ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯುವ ಏಷ್ಯಾಕಪ್ನ(Asia Cup 2023) ಭಾರತ ಹಾಗೂ ಪಾಕಿಸ್ತಾನ(ind vs pak) ನಡುವಿನ ಹೈವೋಲ್ಟೆಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಜನರು ಮಾತ್ರವಲ್ಲ, ಜಗತ್ತೇ ಕಾಯುತ್ತಿದೆ. ಆದರೆ ಈ ಪಂದ್ಯ ನಡೆಯುವುದು 99 ಪ್ರತಿಶತ ಅನುಮಾನ ಎಂದು ಹವಾಮಾನ ಇಲಾಖೆ(weather forecast kandy) ಮೂರು ದಿನಗಳ ಹಿಂದೆಯೇ ಎಚ್ಚರಿಕೆ ನೀಡಿದೆ. ಒಂದು ರದ್ದೇ ಆಗಿಬಿಟ್ಟರೆ ಏನಾಗುತ್ತದೆ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ- ಖ್ಯಾತ ಗೀತ ಸಾಹಿತಿ ಸೇರಿ 8 ಜನರು ಗುಂಡಿಗೆ ಬಲಿ
ಮಣಿಪುರದಲ್ಲಿ ಕೆಲ ದಿನಗಳಿಂದ ತಹಬಂದಿಗೆ ಬಂದಿದ್ದ ಪರಿಸ್ಥಿತಿ ಈಗ ಮತ್ತೆ ಬಿಗಡಾಯಿಸಿದೆ. ಮಣಿಪುರದ ಹಲವೆಡೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕುಕಿ ಖ್ಯಾತ ಗೀತಸಾಹಿತಿ ಸೇರಿ ಎಂಟು ಜನ ಮೃತಪಟ್ಟಿದ್ದಾರೆ. ಹಾಗೆಯೇ, 18 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ, ಮಣಿಪುರದಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಆ.2, 3ಕ್ಕೆ ಬೆಂಗಳೂರು, ರಾಮನಗರ ಸೇರಿ 8 ಜಿಲ್ಲೆಗಳಲ್ಲಿ ರಣಮಳೆ ಫಿಕ್ಸ್!
ಬೆಂಗಳೂರು: ರಾಜಧಾನಿ ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಲಿದೆ. ನೈರುತ್ಯ ಮುಂಗಾರು (Southwest Monsoon) ಚುರುಕಾಗಿದ್ದು ಮುಂದಿನ 48 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನ (Rain News) ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (weather report) ಸಾಧ್ಯತೆ ಇದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಗಾನ್ ಸಿನಿಮಾ ನಿರ್ದೇಶಕರ ಸಿನಿಮಾಗೆ ರಿಷಬ್ ಶೆಟ್ಟಿ ಹೀರೊ?
ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಬೇರೆ ಸಿನಿಮಾ ರಂಗದಿಂದ ರಿಷಬ್ ಶೆಟ್ಟಿಗೆ ಆಫರ್ ಬರುತ್ತಿದೆ. ‘ಕಾಂತಾರ’-2 ಚಿತ್ರೀಕರಣ ಮುಗಿದ ಬಳಿಕ ‘ಲಗಾನ್’, ‘ಸ್ವದೇಶ್’, ‘ಜೋಧಾ ಅಕ್ಬರ್’, ‘ಪಾಣಿಪತ್’ ರೀತಿಯ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಅಶುತೋಷ್ ಗೌರೀಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9.ಸೆ.11ರಂದು ಬೆಂಗಳೂರು ಬಂದ್; ಸ್ಕೂಲ್ ಬಸ್ ಇರಲ್ಲ, ಆಟೊ, ಟ್ಯಾಕ್ಸಿ, ಓಡಾಡಲ್ಲ
ಕಾಂಗ್ರೆಸ್ ಗ್ಯಾರಂಟಿ ಎಫೆಕ್ಟ್‌ನಿಂದ ಕಂಗಾಲಾಗಿರುವ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟವು ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಹೀಗಾಗಿ ಅಂದು ಸ್ಕೂಲ್ ಬಸ್, ಆಟೊ, ಟ್ಯಾಕ್ಸಿಗಳು ಇರುವುದಿಲ್ಲ ಎಂದು ತಿಳಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
1೦.ಜೈಲರ್ ಯಶಸ್ವಿಗೆ ರಜನಿಗೆ 100 ಕೋಟಿ ರೂ. ಚೆಕ್; ತಲೈವಾ ಪಾಲಾದ ಒಟ್ಟು ಹಣ ಎಷ್ಟು?
ಬೆಂಗಳೂರು: ಜೈಲರ್ ಸಿನಿಮಾದ ಅದ್ಭುತ ಯಶಸ್ಸಿನ ಬಳಿಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿ ರಜನಿಕಾಂತ್ ಹೊರಹೊಮ್ಮಿದ್ದಾರೆ. ಜೈಲರ್ ಐತಿಹಾಸಿಕ ಯಶಸ್ಸನ್ನು ಗಳಿಸುತ್ತಿದ್ದಂತೆ, ಸನ್ ಪಿಕ್ಚರ್ಸ್‌ನ ನಿರ್ಮಾಪಕ ಕಲಾನಿಧಿ ಮಾರನ್ ರಜನಿಕಾಂತ್ ಅವರನ್ನು ಭೇಟಿಯಾಗಿ ಬರೋಬ್ಬರಿ 100 ಕೋಟಿ ರೂ. ಚೆಕ್ ನೀಡಿದ್ದಾರೆ. ರಜನಿಕಾಂತ್ ಅವರು ‘ಜೈಲರ್’ ಚಿತ್ರಕ್ಕಾಗಿ 110 ಕೋಟಿ ರೂಪಾಯಿ ಸಂಭಾವನೆ ಮೊದಲೇ ಪಡೆದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ