Site icon Vistara News

ವಿಸ್ತಾರ TOP 10 NEWS | ಪ್ರಿಯಾಂಕಾ ಗಾಂಧಿ ʼಗೃಹ ಲಕ್ಷ್ಮೀʼ ಗ್ಯಾರಂಟಿಯಿಂದ, ದೆಹಲಿಯಲ್ಲಿ ಮೋದಿ ರೋಡ್‌ ಶೋವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-Priyanka gandhi free gift announcement to modi road show in delhi and more news

1. ನಾ ನಾಯಕಿ | ಮನೆಯ ಯಜಮಾನಿಗೆ ಕಾಂಗ್ರೆಸ್‌ನಿಂದ ಬಂಪರ್‌ ಘೋಷಣೆ; ಪ್ರತಿ ತಿಂಗಳು ₹2,000 ರೂ.
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತದೆ ಎಂದು ಈಗಾಗಲೆ ಘೊಷಣೆ ಮಾಡಿರುವ ಕಾಂಗ್ರೆಸ್‌, ಇದೀಗ ಮತ್ತೊಂದು ಘೋಷಣೆ ಮಾಡಿದೆ. ಕರ್ನಾಟಕದ ಪ್ರತಿ ಮನೆಯ ಒಡತಿಗೆ ಮಾಸಿಕ 2 ಸಾವಿರ ರೂ. ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ಕಾಂಗ್ರೆಸ್‌ನಿಂದ ಆಯೋಜಿಸಿರುವ ನಾ-ನಾಯಕಿ ಅಭಿಯಾನದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರ ಎದುರು ʼಗೃಹಲಕ್ಷ್ಮೀʼ ಯೋಜನೆಯ ಗ್ಯಾರಂಟಿ ಚೆಕ್‌ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಸಹಿ ಮಾಡಿ ಪ್ರಿಯಾಂಕಾ ಗಾಂಧಿಯವರಿಗೆ ನೀಡಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ನಾ ನಾಯಕಿ | ಉದ್ಯೋಗದ ಬದಲು ವಿವಾದ ಸೃಷ್ಟಿಸುತ್ತಿದೆ ಬಿಜೆಪಿ: ಬದಲಾವಣೆಯ ಅವಕಾಶ ನಿಮ್ಮಲಿದೆ ಎಂದ ಪ್ರಿಯಾಂಕಾ ಗಾಂಧಿ
ರಾಜ್ಯ ಸರ್ಕಾರವು ಕಳೆದ ಮೂರು ವರ್ಷದ ಆಡಳಿತದಲ್ಲಿ ಉದ್ಯೋಗವನ್ನು ಸೃಜನೆ ಮಾಡುವ ಬದಲಿಗೆ ಪಠ್ಯಪುಸ್ತಕದಲ್ಲಿ ಅನೇಕ ಬದಲಾವಣೆಗಳನ್ನು ಮಾಡುವಂತಹ ವಿವಾದ ಸೃಷ್ಟಿಯನ್ನು ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. BJP National Executive Meeting | ಕಾರ್ಯಕಾರಿಣಿ ಮುನ್ನ ದಿಲ್ಲಿಯಲ್ಲಿ ಮೋದಿಯಿಂದ ರೋಡ್ ಶೋ!
ಸೋಮವಾರದಿಂದ (ಜನವರಿ 16) ದೆಹಲಿಯಲ್ಲಿ ಎರಡು ದಿನ ಬಹು ನಿರೀಕ್ಷಿತ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (BJP National Executive Meeting) ನಡೆಯಲಿದ್ದು, ಹಲವು ವಿಷಯಗಳು ಚರ್ಚೆಗೆ ಬರಲಿವೆ. ಸೋಮವಾರ ಸಂಜೆ 4 ಗಂಟೆಗೆ ಆರಂಭವಾಗುವ ಕಾರ್ಯಕಾರಿಣಿಯು, ಮಂಗಳವಾರ ಸಂಜೆ ಮುಗಿಯಲಿದೆ. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಧ್ಯಾಹ್ನ ರೋಡ್ ಶೋ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. BJP Meeting | ಕಾರ್ಯಕಾರಿಣಿಯಲ್ಲಿ ಭಾಗವಹಿಸುವವರಿಗೆ ಮೋದಿಯ ಇಷ್ಟದ ತಿನಿಸು, ಮೈಸೂರು ಪಾಕ್‌, ಜೋಳದ ರೊಟ್ಟಿ ಭೋಜನ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಕಚೇರಿಗಳ ಪದಾಧಿಕಾರಿಗಳಿಗೆ ಮೋದಿ ಅವರ ಇಷ್ಟದ ತಿನಿಸುಗಳನ್ನು ಬಡಿಸಲಾಗುತ್ತದೆ. ಮೋದಿ ಅವರ ಇಷ್ಟದ ದಾಲ್‌-ಕಿಚ್ಡಿ, ಸೇವ್‌ ಟೊಮ್ಯಾಟೊ ಕರಿ, ಮಾರ್ವಾರಿ ಪವಾಲ್‌, ರವೆ ಮಸಾಲೆದೋಸೆ ಸೇರಿ ಹಲವು ತಿನಿಸುಗಳನ್ನು ಬಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. 40% Commission | ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಮೇಲೆ 15% ಕಮಿಷನ್‌ ಆರೋಪ: ದ್ವೇಷದ ಆರೋಪ ಎಂದ ಚಿತ್ರದುರ್ಗ ಶಾಸಕ
ರಾಜ್ಯದಲ್ಲಿ ೪೦% ಕಮಿಷನ್‌ (40% Commission) ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ನಡುವೆಯೇ ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾ ರೆಡ್ಡಿ ಅವರ ಮೇಲೆ ೧೫% ಕಮಿಷನ್‌ನ ನೇರ ಆರೋಪ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Santro Ravi case | ಅವಳು 2ನೇ ಪತ್ನಿಯಲ್ಲ, 10 ಲಕ್ಷ ರೂ. ಸಾಲ ಪಡೆದು ಮರಳಿಸದೆ ಸುಳ್ಳು ಆರೋಪ ಎಂದ ರವಿ ವಕೀಲರು
ವೇಶ್ಯಾವಾಟಿಕೆ ಕಿಂಗ್‌ಪಿನ್‌ ಸ್ಯಾಂಟ್ರೋ ರವಿಯ ವಿರುದ್ಧ ದಲಿತ ಮಹಿಳೆ ಮಾಡಿರುವ ಆರೋಪಗಳ ಬಗ್ಗೆ ರವಿ ಪರ ವಕೀಲ ಹರೀಶ್‌ ಪ್ರಭು ತಿರುಗೇಟು ನೀಡಿದ್ದಾರೆ. ಇದು ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿ ಬಂದಿರುವ ಮೊದಲ ಅಧಿಕೃತ ಪ್ರತಿಕ್ರಿಯೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಸಾಮರ್ಥ್ಯ ಸಾಬೀತು ಮಾಡಲು ಯುವಕನ ಕೊಲೆ ಮಾಡಿದ ಉಗ್ರರು; ಭಾರತದ ಹಿಂದು ಪ್ರಮುಖರ ಹತ್ಯೆಗೆ ಪಾಕ್​​ನಲ್ಲಿ ನಡೆದಿದೆ ಸಂಚು!
ಭಾರತದಲ್ಲಿ ಬಲಪಂಥೀಯ ಹಿಂದೂ ನಾಯಕರ ಹತ್ಯೆಗೆ ಪಾಕಿಸ್ತಾನದಲ್ಲಿ ಸಂಚು ನಡೆಯುತ್ತಿದೆಯಾ? ಹಿಂದು ಪ್ರಮುಖ ನಾಯಕರನ್ನು ಕೊಲ್ಲಲೆಂದೇ ತರಬೇತಿ ಕೊಡಲಾಗುತ್ತಿದೆಯಾ?-ಇದೀಗ ನಡೆದಿರುವ ಘಟನೆಯೊಂದು ಈ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದೆಹಲಿಯಲ್ಲಿ 21 ವರ್ಷದ ಯುವಕನೊಬ್ಬನನ್ನು ತಲೆ ಕತ್ತರಿಸಿ ಕೊಂದವರಿಬ್ಬರಿಗೆ ಪಾಕಿಸ್ತಾನದ ಐಎಸ್​ಐ ಜತೆ ಸಂಪರ್ಕ ಇರುವುದು ಗೊತ್ತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Team India | ತಮ್ಮ ಶತಕದ ಸಾಧನೆಯ ಹಿಂದೆ ಕುಮಟಾದ ಪ್ರತಿಭೆಯ ಪಾತ್ರವಿದೆ ಎಂದ ವಿರಾಟ್​ ಕೊಹ್ಲಿ; ಯಾರು ಅವರು?
ರನ್ ಮಷಿನ್​ ವಿರಾಟ್​ ಕೊಹ್ಲಿ ಜನವರಿ 15ರಂದು ನಡೆದ ಶ್ರೀಲಂಕಾ ವಿರುದ್ಧ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ 110 ಎಸೆತಗಳಲ್ಲಿ ಅಜೇಯ 166 ರನ್​ ಬಾರಿಸಿದ್ದಾರೆ. ಇದು ಏಕ ದಿನ ಮಾದರಿಯಲ್ಲಿ ಅವರ 45ನೇ ಶತಕ. ಅದೇ ರೀತಿ ಎರಡನೇ ಗರಿಷ್ಠ ಸ್ಕೋರ್​. ಭಾನುವಾರ ಪಂದ್ಯ ಮುಕ್ತಾಯಗೊಂಡ ಬಳಿಕ ತಮ್ಮ ಇತ್ತೀಚಿನ ಸಾಧನೆಗೆ ಕುಮಟಾ ಮೂಲದ ಥ್ರೋಡೌನ್​ ಸ್ಪೆಷಲಿಸ್ಟ್​ ಡಿ ರಾಘವೇಂದ್ರ ಮತ್ತು ಇತತರು ಕಾರಣ ಎಂದು ಹೇಳುವ ಮೂಲಕ ಅವರ ನೆರವನ್ನು ಸ್ಮರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer | ಉತ್ತರ ಭಾರತವೇಕೆ ಥರಗುಟ್ಟುತ್ತಿದೆ? ಈ ವರ್ಷದ ವಿಪರೀತ ಚಳಿಗೆ ಕಾರಣವೇನು?
ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ತಾಪಮಾನ ಮೈನಸ್ 4 ಡಿಗ್ರಿ ಸೆಲ್ಷಿಯಸ್‌ಗೆ ಕುಸಿಯುವ ಸಾಧ್ಯತೆಗಳಿವೆ. ಆದರೆ, ದಿಲ್ಲಿಯಲ್ಲಿ ಅಷ್ಟೇನೂ ತಾಪಮಾನ ಕುಸಿಯದಿದ್ದರೂ ವಿಪರೀತ ಚಳಿ ಏಕೆ ಇದೆ? ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ವಿಸ್ತಾರ Explainer | ಹಿಂದು ರಾಷ್ಟ್ರ ನೇಪಾಳದಲ್ಲಿ ಮತಾಂತರ ಮಹಾತ್ಮೆ: 1951ರಲ್ಲಿ ಒಬ್ಬನೇ ಒಬ್ಬ ಕ್ರೈಸ್ತ ಇರಲಿಲ್ಲ, ಈಗ 5.45 ಲಕ್ಷ ಕ್ರೈಸ್ತರು! ಒಂದು ದಶಕದಲ್ಲಿ ಶೇ.68 ಏರಿಕೆ
ನೇಪಾಳದಲ್ಲಿ ಕ್ರೈಸ್ತ ಮಿಷನರಿಗಳು ಮತಾಂತರದ ಉಪಟಳ ಹೆಚ್ಚಿಸಿದ್ದು, ಒಂದು ದಶಕದಲ್ಲಿ ಕ್ರೈಸ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Shani Gochar 2023 | ನಾಳೆ ಮಕರದಿಂದ ಕುಂಭಕ್ಕೆ ಶನಿ ಸಂಚಾರ; ಪುಣ್ಯ ಕಾಲ ಯಾವಾಗ?
  2. RRR Movie | ಮತ್ತೆ 2 ಪ್ರಶಸ್ತಿ | ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್‌ | ಅತ್ಯುತ್ತಮ ವಿದೇಶಿ ಚಿತ್ರ ಮತ್ತು ಅತ್ಯುತ್ತಮ ಹಾಡು
  3. Nirmala Sitharaman | 5 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ಹೊಸ ತೆರಿಗೆ ಇಲ್ಲ: ವಿತ್ತ ಸಚಿವೆ
  4. Women’s IPL | ಮಹಿಳೆಯರ ಐಪಿಎಲ್​ ನೇರ ಪ್ರಸಾರದ ಹಕ್ಕುಗಳು ರಿಲಯನ್ಸ್​ಪಾಲು, 951 ಕೋಟಿ ರೂಪಾಯಿಗಳಿಗೆ ಹಕ್ಕುಗಳ ಖರೀದಿ
  5. Startup Story | ಬೆಂಗಳೂರಿನ ʼಹೂವುʼ | ಅಕ್ಕತಂಗಿಯರ ವಿನೂತನ ಸ್ಟಾರ್ಟಪ್ ಯಶೋಗಾಥೆ!
  6. Oxfam Report | ಭಾರತದ 1% ಶ್ರೀಮಂತರ ಬಳಿ ದೇಶದ 40% ಸಂಪತ್ತು!
  7. BJP Karnataka | ಯತ್ನಾಳ್‌ಗೆ ಕೇಂದ್ರ ಬಿಜೆಪಿಯಿಂದ ಎಚ್ಚರಿಕೆ: ಫೋನ್‌ ಮಾಡಿ ಬಿಸಿ ಮುಟ್ಟಿಸಿದ ವರಿಷ್ಠರು
Exit mobile version