1. ರಾಮ್ ಲಲ್ಲಾ ಹೆಸರು ಬದಲಾಯಿತು; ಇನ್ನಿವನು ಬಾಲಕ ರಾಮ
ಜನವರಿ 22ರಂದು ಪ್ರಾಣ ಪ್ರತಿಷ್ಠಾ (Pran Prathistha) ಸಮಾರಂಭದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪಿಸಲಾದ ಐದು ವರ್ಷದ ರಾಮ್ ಲಲ್ಲಾ (Ram lalla Idol) ಮೂರ್ತಿಯನ್ನು ಇನ್ನು ಮುಂದೆ “ಬಾಲಕ ರಾಮ” (Balak Ram) ಎಂದು ಕರೆಯಲಾಗುತ್ತದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ರಾಮ ಮಂದಿರ ಪ್ರವೇಶಕ್ಕೆ ಹೆಚ್ಚುವರಿ ಸಮಯಾವಕಾಶ; ಇಲ್ಲಿದೆ ಹೊಸ ವೇಳಾಪಟ್ಟಿ
2.ಮತ್ತೊಬ್ಬ ಕನ್ನಡಿಗ ಶಿಲ್ಪಿ ಗಣೇಶ್ ಭಟ್ ಕೆತ್ತಿದ ರಾಮನ ವಿಗ್ರಹ ಹೀಗಿದೆ ನೋಡಿ…
ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಮಾಡಲು ಒಟ್ಟು ಮೂವರು ಶಿಲ್ಪಿಗಳು ಬಾಲ ರಾಮನ ವಿಗ್ರಹವನ್ನು (Ram Lalla Idol) ಕೆತ್ತನೆ ಮಾಡಿದ್ದರು. ಈ ಪೈಕಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ರಾಮಲಲ್ಲಾ ಈಗ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಈಗ ಮತ್ತೊಬ್ಬ ಶಿಲ್ಪಿ, ಕನ್ನಡಿಗರೇ ಆದ ಗಣೇಶ್ ಭಟ್ (Ganesh Bhat) ಅವರ ಕೆತ್ತನೆಯ ಬಾಲಕ ರಾಮ ವಿಗ್ರಹದ ಫೋಟೋ ಬಹಿರಂಗವಾಗಿದೆ. ಈ ವಿಗ್ರಹವನ್ನೂ ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಶ್ರೀ ರಾಮನ ಮುಖದ ಮಂದಹಾಸದ ರಹಸ್ಯವೇನು?
3.ರಾಮನಿಂದ ಸೀತೆಯನ್ನು ದೂರ ಮಾಡಿದ ಬಿಜೆಪಿ; ಮತ್ತೆ ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ (Rama Mandira) ಲೋಕಾರ್ಪಣೆಯ ದಿನವೇ ಬೆಂಗಳೂರಿನಲ್ಲಿ ರಾಮ ಮಂದಿರವೊಂದನ್ನು ಉದ್ಘಾಟನೆ ಮಾಡಿ ಜೈ ಶ್ರೀರಾಮ್ ಎಂದು ಘೋಷಣೆ (Jai Shri Rama Slogan) ಕೂಗಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇದೀಗ ಮತ್ತೆ ಜೈ ಶ್ರೀರಾಮ್ ಎಂದು ಘೋಷಣೆ ಮೊಳಗಿಸಿದ್ದಾರೆ. ಜತೆಗೆ ಬಿಜೆಪಿಯವರು ರಾಮನಿಂದ ಸೀತೆಯನ್ನು ಬೇರ್ಪಡಿಸಿದ್ದಾರೆ (BJP divided between Rama and Seetha) ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ವಿವಾದ ಏನೇ ಇರ್ಲಿ; ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಿಸಲಿದೆ ಕರ್ನಾಟಕ!
ಈ ಸುದ್ದಿಯನ್ನೂ ಓದಿ: ರಾಮ ಮಂದಿರಕ್ಕೆ ವಿರೋಧ; ಸುಳ್ಳು ಸುದ್ದಿ ಹರಡಬೇಡಿ ಎಂದ ಶೃಂಗೇರಿ ಶ್ರೀಗಳು
4. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಸೀಟು ಹಂಚಿಕೆ ಇಲ್ಲ ಎಂದ ಟಿಎಂಸಿ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ʻಇಂಡಿಯಾ ಮೈತ್ರಿಕೂಟʼ ಒಗ್ಗಟ್ಟಾಗಿ ಬಿಜೆಪಿಯನ್ನು ಎದುರಿಸುವ ಕನಸಿಗೆ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ದೊಡ್ಡ ಹೊಡೆತ ಕೊಟ್ಟಿದ್ದಾರೆ. ಮಹತ್ವದ ಘೋಷಣೆ ಹೊರಡಿಸಿರುವ ಪಶ್ಚಿಮ ಮಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (Trinamool Congress) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಪಂಜಾಬ್‌ನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಇಲ್ಲ ಎಂದ ಆಪ್! ಇಂಡಿಯಾ ಕೂಟ ಛಿದ್ರ?
ಈ ಸುದ್ದಿಯನ್ನೂ ಓದಿ: ಮಮತಾ ಬ್ಯಾನರ್ಜಿ ಇಂಡಿಯಾ ಕೂಟದಿಂದ ದೂರ ಸರಿಯಲು ರಾಹುಲ್ ಕಾರಣ?
5. ಜ್ಞಾನವಾಪಿ ಮಸೀದಿಯ ಪುರಾತತ್ವ ಸರ್ವೆ ವರದಿ ಬಹಿರಂಗಕ್ಕೆ ಕೋರ್ಟ್ ಒಪ್ಪಿಗೆ
ಜ್ಞಾನವಾಪಿ ಮಸೀದಿ (Gyanvapi mosque case) ಸಂಕೀರ್ಣ ಕುರಿತಾದ ಭಾರತೀಯ ಪುರಾತತ್ವ ಸಮೀಕ್ಷೆ ವರದಿಯನ್ನು (ASI survey report) ಸಾರ್ವಜನಿಕಗೊಳಿಸಲು ಮತ್ತು ಹಿಂದೂ ಹಾಗೂ ಮುಸ್ಲಿಮ್ ಕಕ್ಷಿದಾರರಿಗೆ ಒದಗಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯವು (Varanasi District court) ಅವಕಾಶವನ್ನು ಕಲ್ಪಿಸಿದೆ ಎಂದು ಉಭಯ ಪಕ್ಷಗಳ ಕಕ್ಷಿದಾರರು ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಫೆ.16ಕ್ಕೆ ರಾಜ್ಯ ಬಜೆಟ್ ಬೇಡ: ಮುಂದಕ್ಕೆ ಹಾಕುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ
ಫೆಬ್ರವರಿ 16ರಂದು ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಇದೆ. ಈ ಚುನಾವಣೆ ದಿನದಂದು ಕಾಂಗ್ರೆಸ್ ಸರ್ಕಾರ ರಾಜ್ಯ ಬಜೆಟ್ (Karnataka Budget 2024) ಮಂಡಿಸುವುದು ಸರಿಯಲ್ಲ. ಇದು ಮಾದರಿ ನೀತಿಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ ಪ್ರಕಾರ ಇದು ನ್ಯಾಯಬದ್ಧವಲ್ಲ. ಹೀಗಾಗಿ ಬಜೆಟ್ ಮಂಡನೆ ದಿನಾಂಕವನ್ನು ಮುಂದಕ್ಕೆ ಹಾಕಬೇಕು ಎಂದು ರಾಜ್ಯ ಬಿಜೆಪಿಯು ರಾಜ್ಯಪಾಲರ ಕದ ತಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7.ಶಿಕ್ಷಕಿ ದೀಪಿಕಾ ಹಂತಕ ಅರೆಸ್ಟ್; ಸಂಗ ತೊರೆದ ಸಿಟ್ಟಿನಿಂದ ʼಅಕ್ಕʼನನ್ನೇ ಕೊಂದ!
ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ (Melukote private School Teacher), ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದ ಮಾಣಿಕ್ಯನ ಹಳ್ಳಿಯ ದೀಪಿಕಾ (Teacher Deepika) ಕೊಲೆ ಪ್ರಕರಣಕ್ಕೆ (Deepika Murder Case) ಸಂಬಂಧಿಸಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ (Killer Arrested). ಎಲ್ಲರ ಊಹೆಯಂತೆ ಕಳೆದ ಎರಡು ವರ್ಷಗಳಿಂದ ದೀಪಿಕಾ ಅವರಿಗೆ ಅತ್ಮೀಯನಾಗಿದ್ದು, ಆಕೆಯನ್ನು ʻಅಕ್ಕ ಅಕ್ಕʼ ಎಂದೇ ಕರೆಯುತ್ತಿದ್ದ ನಿತೇಶ್ ಎಂಬ ಯುವಕನೇ ಕೊಲೆಗಾರ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8.ಮನೆ ಬೆಳಗುವ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಸೌರಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನ (PM Suryodaya Yojana)ದಿಂದ 1 ಕೋಟಿ ಮನೆಗಳಿಗೆ ಲಾಭ ದೊರೆಯಲಿದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ
ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9.ಅಮೆರಿಕ ಅಧ್ಯಕ್ಷ ಚುನಾವಣೆ ರೇಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ (US President Election) ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಎರಡೂ ಪ್ರಮುಖ ಪಕ್ಷಗಳಲ್ಲಿ ನಡೆಯುತ್ತಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ರಿಪಬ್ಲಿಕನ್ ಪಕ್ಷದ ಆಂತರಿಕ ಮತದಾನಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಮಾಜಿ ಪ್ರಿಯಕರನ ವಶೀಕರಣ ಮಾಡಲು ಹೋಗಿ 8.36 ಲಕ್ಷ ಕಳೆದುಕೊಂಡ ಮುಸ್ಲಿಂ ಯುವತಿ!
ಇತ್ತೀಚಿನವರೆಗೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ಅಲ್ಲಿ ಇಲ್ಲಿ ಸುತ್ತಾಡುತ್ತಾ ಖುಷಿಯಾಗಿದ್ದರು. ಅದ್ಯಾರ ಕಣ್ಣು ಬಿತ್ತೋ ಅವನು ಅವಳಿಂದ ದೂರವಾದ. ಅವನನ್ನೇ ನಂಬಿಕೊಂಡಿದ್ದ ಆಕೆ ಈಗ ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಳು. ಅದರ ಜತೆಗೆ ಅವನು ದೂರವಾದ ವಿಷಯದಲ್ಲಿ ಮನೆಯಲ್ಲೂ ಜಗಳಗಳಾದವು. ಈ ಹೊತ್ತಿನಲ್ಲಿ ಕಳೆದುಹೋದ ಪ್ರೇಮಿಯನ್ನು ಮರಳಿ ಪಡೆಯಲು ಆಕೆ ಮುಂದಾಗಿದ್ದು ವಶೀಕರಣಕ್ಕೆ. ಆ ತಂತ್ರ ಬಳಸಲು ಹೋಗಿ ಈಗ ಆಕೆ 8.36 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಅವನೊಬ್ಬ ಕಪಟ ಜ್ಯೋತಿಷಿ (Fake Astrologer) ಆಕೆಯನ್ನು ಚೆನ್ನಾಗಿ ಮುಂಡಾ ಮೋಚಿದ್ದಾನೆ.ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ