1. D.K. Shivakumar : ಚುನಾವಣಾ ಅಫಿಡವಿಟ್‌ನಲ್ಲಿ ಡಿಕೆಶಿ ಘೋಷಿಸಿದ್ದೇನು? ದುಬೈ, ಲಂಡನ್ ಮನೆಗಳ ಉಲ್ಲೇಖವಿದೆಯೇ? ಕಂಟಕವಾಗುತ್ತ ಜಾರಕಿಹೊಳಿ ಆಡಿಯೊ?
ರಾಜ್ಯ ರಾಜಕಾರಣದಲ್ಲಿ ಇದೀಗ ಮತ್ತೊಂದು ಸುತ್ತಿನ ಆಡಿಯೊ, ವಿಡಿಯೊ, ಸಿಡಿ ಸಮರ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿರುವ 18 ಸೆಕೆಂಡ್ ವಿಡಿಯೋದಿಂದ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಮತ್ತಷ್ಟು ಸಂಕಷ್ಟ ಎದುರಾವಗುವ ಸಾಧ್ಯತೆಯಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಗ್ರಾಮೀಣ ಶಾಸಕಿ ಸಲುವಾಗಿ ರಾಜ್ಯವನ್ನು ಹಾಳು ಮಾಡಿದ್ದು ಡಿ.ಕೆ. ಶಿವಕುಮಾರ್ : ಸಿಡಿ ಪ್ರಕರಣ ಸಿಬಿಐಗೆ ನೀಡಲು ರಮೇಶ್ ಜಾರಕಿಹೊಳಿ ಆಗ್ರಹ
ಹೆಚ್ಚಿನ ಓದಿಗಾಗಿ: ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
2. Bharat Jodo Yatra: ಈ ಯಾತ್ರೆ ನನಗಾಗಿ, ಕಾಂಗ್ರೆಸ್‌ಗಾಗಿ ಅಲ್ಲ; ದೇಶದ ಜನರಿಗಾಗಿ ಎಂದ ರಾಹುಲ್ ಗಾಂಧಿ
ದೇಶದ ಉದಾರ ಮತ್ತು ಜಾತ್ಯಾತೀತ ತತ್ವಗಳನ್ನು ಕಾಪಾಡುವುದೇ ಈ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಮುಖ್ಯ ಉದ್ದೇಶವಾಗಿತ್ತು ಎಂದು ರಾಹುಲ್ ಗಾಂಧಿ (Rahul Gandhi) ಅವರು ಹೇಳಿದ್ದಾರೆ. ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆಯ ಸಮಾರೋಪದ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, ಯಾತ್ರೆಯುದ್ಧಕ್ಕೂ ತಮ್ಮ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ನಾನಾ ರೀತಿಯ ಪ್ರಹಾರ ನಡೆಸಿದವು ಎಂದು ಆರೋಪಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Bharat Jodo Yatra: ಸಹೋದರಿ ಪ್ರಿಯಾಂಕಾ, ಕಾರ್ಯಕರ್ತರ ಜತೆ ರಾಹುಲ್ ಗಾಂಧಿ ಹಿಮ ಎರಚಾಟ! Video Viral
3. Adani Group: ಅದಾನಿ ಷೇರು ಪತನದಿಂದ ಎಲ್‌ಐಸಿಗಿಲ್ಲ ಅಪಾಯ, ಹೂಡಿದ್ದು 28,000 ಕೋಟಿ ರೂ, ಗಳಿಸಿದ್ದು 56,000 ಕೋಟಿ ರೂ.
ಅದಾನಿ ಸಮೂಹದ (Adani Group) ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದರಿಂದ ತನಗೆ ಯಾವುದೇ ಅಪಾಯ ಇಲ್ಲ ಎಂದು ಸಾರ್ವಜನಿಕ ವಲಯದ ವಿಮೆ ಸಂಸ್ಥೆ ಎಲ್‌ಐಸಿ (LIC) ಸೋಮವಾರ ಸ್ಪಷ್ಟಪಡಿಸಿದೆ. ತನ್ನೆಲ್ಲ ಹೂಡಿಕೆಗಳ ಪೈಕಿ ಅದಾನಿ ಕಂಪನಿಗಳಲ್ಲಿ ಇರುವುದು ೧%ಕ್ಕಿಂತಲೂ ಕಡಿಮೆ (0.976%) ಎಂದು ಎಲ್‌ಐಸಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Adani stocks : ಅದಾನಿ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯ ನಷ್ಟ 5.5 ಲಕ್ಷ ಕೋಟಿ ರೂ.ಗೆ ಏರಿಕೆ
4. Teacher Recruitment :15 ಸಾವಿರ ಶಿಕ್ಷಕರ ನೇಮಕ; ಆಯ್ಕೆ ಪಟ್ಟಿ ರದ್ದುಪಡಿಸಿದ ಹೈಕೋರ್ಟ್
15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿಗೆ (Teacher Recruitment) ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು 1:1 ಅನುಪಾತದಲ್ಲಿ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹೈ ಕೋರ್ಟ್ ಸೋಮವಾರ ರದ್ದು ಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಬೆಂಗಳೂರಿನ ಕಾಲೇಜುಗಳಲ್ಲಿ ChatGPT Banned! ವಿದ್ಯಾರ್ಥಿಗಳು ಬಳಸುವಂತಿಲ್ಲ ಈ ಎಐ ಟೂಲ್
ಬೆಂಗಳೂರಿನ ಆರ್‌ವಿ ಯುನಿರ್ವಸಿಟಿಯು ಜಾಟ್‌ಜಿಪಿಟಿ ಟೂಲ್ ಬಳಸುದಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಈ ವಿವಿಯ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಡೀನ್ ಸಂಜಯ್ ಚಿಟ್ನಿಸ್ ಅವರು, ಕೃತಕ ಬುದ್ದಿಮತ್ತೆ ಟೂಲ್‌ಗಳಾದ ಚಾಟ್‌ಜಿಪಿಟಿ, ಜಿಟ್‌ಹಬ್ ಕೋಪಿಲಾಟ್, ಬ್ಲ್ಯಾಕ್‌ಬಾಕ್ಸ್‌ಗಳನ್ನು ಬಳಸುವುದನ್ನು ನಿಷೇಧಿಸಿ ಔಪಚಾರಿಕ ಸಲಹೆ ಹೊರಡಿಸಿದ್ದಾರೆ. ಲ್ಯಾಬ್ ಮತ್ತು ಬೋಧನಾ ಕ್ಲಾಸ್‌ಗಳಿಗೆ ಚಾಟ್‌ಜಿಪಿಟಿ ಅಕ್ಸೆಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜನವರಿ ಒಂದರಿಂದಲೇ ಆರ್ ವಿ ವಿಶ್ವವಿದ್ಯಾಲಯದಲ್ಲಿ ಈ ನಿಯಮ ಜಾರಿಗೆ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. BBC Documentary: ಬಿಬಿಸಿ ಹಿಂದು ವಿರೋಧಿ, ಮೋದಿ ವಿರೋಧಿ ಎಂದು ಆಪಾದಿಸಿ ಬ್ರಿಟನ್‌ನಾದ್ಯಂತ ಭಾರತೀಯರ ಪ್ರತಿಭಟನೆ
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಆಕ್ಷೇಪಾರ್ಹ ವಿಚಾರಗಳಿರುವ ಬಿಬಿಸಿಯ ಇಂಡಿಯಾ: ದಿ ಮೋದಿ ಕ್ವಶ್ಚನ್ (India: The Modi Question) ಡಾಕ್ಯುಮೆಂಟರಿ (BBC Documentary) ಕುರಿತು ಭಾರತದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಹಲವು ಸಂಸದರು ಕೂಡ ಡಾಕ್ಯುಮೆಂಟರಿ ವಿರುದ್ಧ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ, ಬ್ರಿಟನ್‌ನಲ್ಲಿರುವ ಸಾವಿರಾರು ಅನಿವಾಸಿ ಭಾರತೀಯರು ಭಾನುವಾರ (ಜನವರಿ 29) ಬ್ರಿಟನ್‌ನ ಹಲವು ನಗರಗಳಲ್ಲಿ ಬಿಬಿಸಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: BBC Documentary on Modi: ಬಿಬಿಸಿ ಸಾಕ್ಷ್ಯ ಚಿತ್ರ ನಿಷೇಧ ಪ್ರಶ್ನಿಸಿ ಪಿಐಎಲ್, ಫೆ.6ಕ್ಕೆ ವಿಚಾರಣೆ ಎಂದ ಸುಪ್ರೀಂ ಕೋರ್ಟ್
7. Peshawar Blast: ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ, 28 ಜನರ ಸಾವು, 150ಕ್ಕೂ ಅಧಿಕ ಮಂದಿಗೆ ಗಾಯ
ಎರಡು ದಶಕದಲ್ಲಿಯೇ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದ ಜನ ಪರದಾಡುತ್ತಿರುವ ಬೆನ್ನಲ್ಲೇ ಪೇಶಾವರದ ಮಸೀದಿಯಲ್ಲಿ ಆತ್ಮಾಹುತಿ ದಾಳಿ (Peshawar Blast) ನಡೆದಿದೆ. ಪೇಶಾವರದ ಮಸೀದಿಯಲ್ಲಿ ವ್ಯಕ್ತಿಯೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದು, ಸ್ಫೋಟದಿಂದಾಗಿ 28 ಜನ ಮೃತಪಟ್ಟರೆ, 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Budget Session 2023: ಜ.31ರಿಂದ ಬಜೆಟ್ ಅಧಿವೇಶನ, ಸರ್ವ ಪಕ್ಷಗಳ ಸಹಕಾರ ಕೋರಿದ ಕೇಂದ್ರ ಸರ್ಕಾರ
ಜನವರಿ 31ರಿಂದ ಬಜೆಟ್ ಅಧಿವೇಶನ (Budget Session 2023) ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆಯನ್ನು ಸೋಮವಾರ ದಿಲ್ಲಿಯಲ್ಲಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ 27 ಪಕ್ಷಗಳ 37 ನಾಯಕರು ಭಾಗವಹಿಸಿದ್ದರು. ಆದರೆ, ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Khalistan attack: ಆಸ್ಟ್ರೇಲಿಯದಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಿದವರ ಮೇಲೆ ಖಲಿಸ್ತಾನಿಗಳ ದಾಳಿ, ಐವರಿಗೆ ಗಾಯ
ಆಸ್ಟ್ರೇಲಿಯದ ಮೆಲ್ಬೋರ್ನ್‌ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ಖಲಿಸ್ತಾನಿಗಳು ಹಾನಿ ಎಸಗಿರುವ ಕೆಲವೇ ದಿನಗಳಲ್ಲಿ ಮತ್ತೊಂದು ಆಘಾತಕರ ಘಟನೆ ನಡೆದಿದೆ. ಭಾರತದ ತ್ರಿವರ್ಣ ಧ್ವಜ ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಖಲಿಸ್ತಾನಿಗಳು ರಾಡ್, ದೊಣ್ಣೆಗಳಿಂದ ದಾಳಿ ನಡೆಸಿದ್ದು, ಐವರನ್ನು ಗಾಯಗೊಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Pro Khalistan attack on Indians: ವಿಕ್ಟೋರಿಯಾ ಮುಖ್ಯಸ್ಥರನ್ನು ಭೇಟಿಯಾಗಿ ಖಲಿಸ್ತಾನಿ ಗುಂಪಿನ ಬಗ್ಗೆ ಚರ್ಚಿಸಿದ ಭಾರತೀಯ ಹೈಕಮಿಷನ್
10. Jon Peters Will: ಕೇವಲ 12 ದಿವಸದ ದಾಂಪತ್ಯ, ಪರಿತ್ಯಕ್ತ ಗಂಡನಿಂದ ನಟಿ ಪಮೇಲಾಗೆ ಸಿಕ್ಕಿತು 82 ಕೋಟಿ ರೂ. ಪರಿಹಾರ!
ಬಹುತೇಕ ಸೆಲೆಬ್ರಿಟಿಗಳ ದಾಂಪತ್ಯ ಜೀವನ ಅಪಥ್ಯವಾಗಿರುತ್ತದೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಅವರು ಬೇರೆ ಬೇರೆಯಾಗುತ್ತಾರೆ. ಅದರಲ್ಲೂ, ಹಾಲಿವುಡ್‌ನಲ್ಲಂತೂ ಇದು ಸಾಮಾನ್ಯ ಎಂಬಂತಾಗಿದ್ದು, ಕೆಲವೇ ವರ್ಷ, ತಿಂಗಳು ಬಿಡಿ, ಕೆಲವೇ ದಿನಗಳಲ್ಲಿ ದಾಂಪತ್ಯ ಅಂತ್ಯವಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ನಟಿ ಪಮೇಲಾ ಆ್ಯಂಡರ್ಸನ್ (55) ಹಾಗೂ ಖ್ಯಾತ ನಿರ್ಮಾಪಕ ಜಾನ್ ಪೀಟರ್ಸ್ (77) ಅವರ ದಾಂಪತ್ಯ ಜೀವನವು 2020ರಲ್ಲಿ ಕೇವಲ 12 ದಿನಗಳಿಗೆ ಅಂತ್ಯವಾಗಿತ್ತು. ಈಗ ಈ 12 ದಿನದ ದಾಂಪತ್ಯಕ್ಕಾಗಿ ಜಾನ್ ಪೀಟರ್ಸ್ (Jon Peters Will) ಅವರು ತಮ್ಮ ಮಾಜಿ ಪತ್ನಿಗೆ ಸುಮಾರು 82 ಕೋಟಿ ರೂ. (10 ದಶಲಕ್ಷ ಡಾಲರ್) ಪರಿಹಾರ ನೀಡಿದ್ದಾರೆ. ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.