Site icon Vistara News

ವಿಸ್ತಾರ TOP 10 NEWS: ಉಚಿತ ಕೊಡುಗೆ ಬೇಜವಾಬ್ದಾರಿ ಎಂದ ಜೈಶಂಕರ್‌ ಮಾತಿನಿಂದ, ಇಸ್ರೋ ಸಾಧನೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news S jaishankar against freebies to Isro reusable launch vehicle and more news

#image_title

1. S. Jaishankar: ಉಚಿತ ಕೊಡುಗೆಗಳು ಬೇಜವಾಬ್ದಾರಿ ಪ್ರಚಾರ ತಂತ್ರ: ಆಮ್‌ ಆದ್ಮಿ, ಕಾಂಗ್ರೆಸ್‌ ವಿರುದ್ಧ ಎಸ್‌. ಜೈಶಂಕರ್‌ ವಾಗ್ದಾಳಿ
ಉಚಿತ ಕೊಡುಗೆಗಣನ್ನು ನೀಡುವುದು ಜವಾಬ್ದಾರಿಯಿಲ್ಲದ ಹಾಗೂ ಬೇಗನೆ ಪ್ರಚಾರ ಪಡೆಯುವ ತಂತ್ರವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಯುವ ಮತದಾರರು, ವಾಯು ವಿಹಾರಿಗಳೊಂದಿಗೆ ಆಯೋಜನೆಗೊಂಡಿದ್ದ, Meet and Greet ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. JDS Hassan: ಭಾನುವಾರವೇ ಹಾಸನ ಜೆಡಿಎಸ್‌ ಟಿಕೆಟ್‌ ನಿರ್ಧಾರ: ಸಭೆಗೆ ಆಹ್ವಾನಿಸಿದ ಎಚ್‌.ಡಿ. ದೇವೇಗೌಡ
ಎಲ್ಲ ಪಕ್ಷಗಳಿಗಿಂತಲೂ ಮೊದಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಜೆಡಿಎಸ್‌ ಪಕ್ಷ ಹಾಸನ ಟಿಕೆಟ್‌ ಕಾರಣಕ್ಕೆ ಎರಡನೇ ಪಟ್ಟಿಯ ಘೋಷಣೆಯನ್ನು ತಡೆ ಹಿಡಿದಿದ್ದು, ಈ ಕುತೂಹಲಕ್ಕೆ ಭಾನುವಾರವೇ ತೆರೆ ಬೀಳಲಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸಭೆಯನ್ನು ಆಯೋಜಿಸಿದ್ದು, ಇದರಲ್ಲಿ ಎಚ್‌.ಡಿ. ರೇವಣ್ಣ, ಭವಾನಿ ರೇವಣ್ಣ, ಎಚ್‌.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Siddaramaiah: ನನ್ನ ಸ್ವಾರ್ಥ ಇಲ್ಲ; ಸಿದ್ದರಾಮಯ್ಯ ಕೋಲಾರಕ್ಕೆ ಬರದಿದ್ದರೆ ಕಾಂಗ್ರೆಸ್‌ ಮುಳುಗುತ್ತದೆ ಎಂದ ಕೆ. ಆರ್‌. ರಮೇಶ್‌ ಕುಮಾರ್‌
ಮಾಜಿ ಸಿಎಂ ಕೋಲಾರದಿಂದ ಸ್ಪರ್ಧೆ ಮಾಡುವ ಕುರಿತು ಮಾಜಿ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಮಾತನಾಡಿದ್ದು, ಸಿದ್ದರಾಮಯ್ಯ ಕೋಲಾರಕ್ಕೆ ಬರದಿದ್ದರೆ ಕಾಂಗ್ರೆಸ್‌ ಮುಳುಗಿಹೋಗುತ್ತದೆ ಎಂದಿದ್ದಾರೆ. ಕೋಲಾರದಲ್ಲಿ ಕುರುಬ ಸಮುದಾಯದ ಸಭೆಯೊಂದರಲ್ಲಿ ಮಾತನಾಡಿರುವ ರಮೇಶ್‌ ಕುಮಾರ್‌, ಸಿದ್ದರಾಮಯ್ಯರನ್ನ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇರೋದಿಲ್ಲ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. BJP Karnataka: ಹೊರವಲಯದ ರೆಸಾರ್ಟ್‌ನಲ್ಲಿ ದಿನಪೂರ್ತಿ ಟಿಕೆಟ್‌ ಸಭೆ: ಪ್ರಬಲ ಅಭ್ಯರ್ಥಿಗಳಿಗೆ ಬೇಡಿಕೆಯಿಟ್ಟ ಜಿಲ್ಲಾ ಕೋರ್‌ ಕಮಿಟಿ
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಜಿಲ್ಲಾ ಕೋರ್‌ ಕಮಿಟಿಗಳಿಂದ ದಿನಪೂರ್ತಿ ಅಭಿಪ್ರಾಯ ಸಂಗ್ರಹ ನಡೆಯಿತು. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿ ರಾಜ್ಯ, ರಾಷ್ಟ್ರೀಯ ನಾಯಕರು ಸಭೆಗಳಲ್ಲಿ ಭಾಗವಹಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ISRO: ಇಸ್ರೋದಿಂದ ರಿಯೂಸೆಬಲ್ ಲಾಂಚ್ ವೆಹಿಕಲ್‌ನ ಅಟಾನಮಸ್‍ ಲ್ಯಾಂಡಿಂಗ್ ಪರೀಕ್ಷೆ ಸಕ್ಸೆಸ್!
ಮರು ಬಳಕೆ ರಾಕೆಟ್‌ ವಿಷಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮತ್ತೊಂದು ಹಂತಕ್ಕೆ ಏರಿದೆ. ಚಿತ್ರದುರ್ಗದ ಇಸ್ರೋ ಏರೋನಾಟಿಕಲ್ ಟೆಸ್ಟ್ ರೇಂಜ್(ATR)ನಲ್ಲಿ ಮರುಬಳಕೆ ಮಾಡಬಹುದಾದ ವಾಹನ(RLV)ದ ಆಟಾನಮಸ್‍ ಲ್ಯಾಂಡಿಂಗ್ ಮಿಷನ್ ಯಶಸ್ವಿಯಾಗಿ ಭಾನುವಾರ ಬೆಳಗ್ಗೆ ಪರೀಕ್ಷೆ ಮಾಡಲಾಗಿದೆ. ಈ ವಿಷಯವನ್ನು ಇಸ್ರೋ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Rahul Gandhi: ಸ್ವಂತ ಮನೆ ಇಲ್ಲ ಎಂದ ರಾಹುಲ್‌ ಗಾಂಧಿಗೆ 4 ಅಂತಸ್ತಿನ ಮನೆ ಕೊಟ್ಟ ಕಾಂಗ್ರೆಸ್‌ ನಾಯಕಿ
ಕೆಲವು ದಿನಗಳ ಹಿಂದಷ್ಟೇ, “ನನಗೆ 52 ವರ್ಷವಾದರೂ ಸ್ವಂತ ಮನೆ ಇಲ್ಲ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದರು. ಅದರಲ್ಲೂ, ಮಾನಹಾನಿ ಪ್ರಕರಣದಲ್ಲಿ ಸಿಲುಕಿ, ಲೋಕಸಭೆಯಿಂದ ಅನರ್ಹರಾದ ಬಳಿಕ ಅವರಿಗೆ ನೀಡಿದ್ದ ಅಧಿಕೃತ ನಿವಾಸವನ್ನೂ ತೆರವುಗೊಳಿಸಬೇಕಿದೆ. ಸರ್ಕಾರದ ನಿವಾಸವನ್ನು ರಾಹುಲ್‌ ಗಾಂಧಿ ತೊರೆಯಬೇಕಾದ ಕಾರಣ ಕಾಂಗ್ರೆಸ್‌ ನಾಯಕಿಯೊಬ್ಬರು ರಾಹುಲ್‌ ಗಾಂಧಿ (Rahul Gandhi) ಅವರಿಗೆ ತಮ್ಮ ನಾಲ್ಕು ಅಂತಸ್ತಿನ ಮನೆಯನ್ನೇ ಬರೆದುಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Gold Price Outlook : ಚಿನ್ನದ ದರ 2023-24ರಲ್ಲಿ 68,000 ರೂ.ಗೆ ಏರಿಕೆಯಾಗುವ ಸಾಧ್ಯತೆ
ಬಂಗಾರದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತೀನ್‌ ತ್ರಿವೇದಿ (Gold Price Outlook) ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. WhatsApp New Feature: ಶೀಘ್ರವೇ ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಚಾಟ್‌ಗೆ ಲಾಕ್ ಫೀಚರ್!
ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಆ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಜತೆಗೆ, ಬಳಕೆದಾರರ ಬೇಡಿಕೆ ಮತ್ತು ಅನುಕೂಲತೆಗೆ ತಕ್ಕಂತೆ ಹೊಸ ವೈಶಿಷ್ಟ್ಯಗಳ್ನು ಜಾರಿ ಮಾಡುತ್ತದೆ. ಅದೇ ರೀತಿ, ವಾಟ್ಸಾಪ್ ಈಗ ಮತ್ತೊಂದು ಹೊಸ ಫೀಚರ್ ಲಾಂಚ್ ಮಾಡಲಿದೆ. ಈ ಹೊಸ ಫೀಚರ್ ಲಭ್ಯವಾದರೆ, ಬಳಕೆದಾರರು ತಮ್ಮ ಚಾಟ್‌ಗಳನ್ನು ಲಾಕ್ (Chat Lock) ಮಾಡಬಹುದು! ವಾಟ್ಸಾಪ್ ಈ ಫೀಚರ್ ಅಭಿವೃದ್ದಿ ಮಾಡುತ್ತಿದ್ದು, ಶೀಘ್ರವೇ ಬಳಕೆದಾರರಿಗೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Karnataka Election 2023: ಅರಸೀಕೆರೆ ಜೆಡಿಎಸ್‌ ಶಾಸಕತ್ವಕ್ಕೆ ಶಿವಲಿಂಗೇಗೌಡ ರಾಜೀನಾಮೆ; ಶೀಘ್ರ ಕಾಂಗ್ರೆಸ್‌ ಸೇರ್ಪಡೆ
ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹತ್ತಿರವಾಗುತ್ತಿದ್ದಂತೆ ರಾಜಿನಾಮೆ ಪರ್ವ ಆರಂಭವಾಗಿದ್ದು, ಅರಸಿಕೆರೆಯ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ (KM Shivalinge gowda) ಭಾನುವಾರ (ಏ. 2) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಮೊಸಳೆಗೆ ಗುಂಡು ಹಾರಿಸಿದಾಗ ಅದು ಉಗುಳಿದ್ದು 2ವರ್ಷದ ಮಗುವಿನ ಶವವನ್ನು!; ಪೊಲೀಸರಿಗೇ ಕಣ್ಣೀರು ತರಿಸಿದ ಸನ್ನಿವೇಶ ಇದು
ನಾಪತ್ತೆಯಾಗಿದ್ದ 2ವರ್ಷದ ಮಗುವೊಂದು ಬಳಿಕ ಮೊಸಳೆಯ ಬಾಯಿಯಲ್ಲಿ ಮೃತದೇಹವಾಗಿ ಪತ್ತೆಯಾದ ಭಯಾನಕ ಘಟನೆ ಯುಎಸ್​ನ ಫ್ಲೋರಿಡಾದಲ್ಲಿ ನಡೆದಿದೆ. ಈ ಪುಟಾಣಿ ಬಾಲಕನ ಹೆಸರು ಟೇಲೆನ್ ಮೊಸ್ಲಿ. ಇವನ ಅಮ್ಮ ಪೆಶುನ್ ಜೆಫ್ರಿ ಗುರುವಾರ ಮೃತಪಟ್ಟಿದ್ದಳು. ಆಕೆಯ ಶವ ಅಪಾರ್ಟ್​ಮೆಂಟ್​​ನ ಮನೆಯಲ್ಲಿ ಪತ್ತೆಯಾಗಿತ್ತು. ಮೈಮೇಲೆಲ್ಲ ಚಾಕುವಿನಿಂದ ಚುಚ್ಚಿದ ಗಾಯಗಳಿದ್ದವು. ಪೊಲೀಸರು ಅಲ್ಲಿಗೆ ಹೋಗುವಷ್ಟರಲ್ಲಿಯೇ ಮಗು ನಾಪತ್ತೆಯಾಗಿತ್ತು. ಹುಡುಕಾಟ ನಡೆಸಿದ ಬಳಿಕ ಟೇಲೆನ್ ಮೊಸ್ಲಿ ಶವ ಮೊಸಳೆಯ ಬಾಯಲ್ಲಿ ಸಿಕ್ಕಿದೆ ಎಂದು ಸೇಂಟ್​ ಪೀಟರ್ಸ್​ಬರ್ಗ್​ ಪೊಲೀಸ್ ಮುಖ್ಯಸ್ಥ ಅಂಥೋನಿ ಹ್ಯಾಲೋವೆ ಮಾಹಿತಿ ನೀಡಿದ್ದಾರೆ. ಪುಟ್ಟ ಬಾಲಕನ ತಂದೆ ಥಾಮಸ್​ ಮೊಸ್ಲಿಯೇ ಆರೋಪಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಸೇಂಟ್​ ಪೀಟರ್ಸ್​ಬರ್ಗ್​ ಪೊಲೀಸ್ ಡಿಪಾರ್ಟ್​ಮೆಂಟ್​​ನ ಫೇಸ್​ಬುಕ್ ಪೇಜ್​​ನಲ್ಲಿ ಬರೆಯಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Cow slaughter : ಗೋರಕ್ಷಕರ ಹೆಸರಲ್ಲಿ ಮುಸ್ಲಿಂ ವ್ಯಕ್ತಿಯ ಕೊಲೆ; ಪುನೀತ್‌ ಕೆರೆಹಳ್ಳಿ ಟೀಮ್‌ ಕೃತ್ಯ; ಮಂಡ್ಯದಲ್ಲಿ ಭಾರಿ ಪ್ರತಿಭಟನೆ
  2. Road Accident: ಚಳ್ಳಕೆರೆಯ ಹಿರೇಹಳ್ಳಿ ಬಳಿ ಕಾರು ಪಲ್ಟಿ; ತೊಗಲು ಗೊಂಬೆ ಕಲಾವಿದ ಬೆಳಗಲ್ಲು ವೀರಣ್ಣ ಸಾವು
Exit mobile version