Site icon Vistara News

ವಿಸ್ತಾರ TOP 10 NEWS: ಶೆಟ್ಟರ್‌ ಸೋಲಿಸಲು ಕಣಕ್ಕಿಳಿದ ʼಪರಿವಾರʼದಿಂದ, ಶೇ.75 ವಿದ್ಯಾರ್ಥಿಗಳು PUC ತೇರ್ಗಡೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news sangh parivar eneters election ground against jagadish shettar to puc results and more news

#image_title

1. Karnataka Election 2023: ಶೆಟ್ಟರ್‌ ಮಣಿಸಲು ಬಿಜೆಪಿ ಮಾಸ್ಟರ್‌ ಪ್ಲ್ಯಾನ್‌; ನಾಗ್ಪುರದಿಂದ ಹುಬ್ಬಳ್ಳಿಗೆ 50 ಜನರ ತಂಡ
ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ ಸೇರ್ಪಡೆಯಾಗಿ ಸೆಡ್ಡು ಹೊಡೆದಿರುವ ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಲು (Karnataka Election 2023) ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ರಣತಂತ್ರ ರೂಪಿಸಿದೆ. ಶೆಟ್ಟರ್‌ ಅವರನ್ನು ಸೋಲಿಸಲು ನಾಗ್ಪುರದಿಂದ 50 ಜನರ ತಂಡವು ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರಕ್ಕೆ ಆಗಮಿಸುತ್ತಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Karnataka Congress: ಬಿಜೆಪಿ ಅಣೆಕಟ್ಟೆ ಒಡೆದಿದೆ; ವೀರಶೈವ ಲಿಂಗಾಯತರು ಕಾಂಗ್ರೆಸ್‌ ಸೇರುವುದನ್ನು ತಡೆಯಲಾಗದು: ಡಿಕೆಶಿ
ಬಿಜೆಪಿಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಅಣೆಕಟ್ಟೆ ಒಡೆದು ಹೋಗಿದ್ದು, ಆ ನೀರು ಕಾಂಗ್ರೆಸ್‌ಗೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ವಿವಿಧ ಪಕ್ಷದ ಮುಖಂಡರನ್ನು ಕಾಂಗ್ರೆಸ್‌ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Veerashaiva Lingayat: ಡಿ.ಕೆ. ಶಿವಕುಮಾರ್‌ ʼಅಣೆಕಟ್ಟೆʼ ಹೇಳಿಕೆ: ಸಿಎಂ ಬೊಮ್ಮಾಯಿ, ಸಿ.ಸಿ. ಪಾಟೀಲ್ ಆಕ್ರೋಶ

3. Karnataka Election 2023: ಅಡ್ಡ ಗೋಡೆ ಮೇಲಿರುವ 50 ಕ್ಷೇತ್ರಗಳೇ ಈಗ ಪಕ್ಷಗಳ ಟಾರ್ಗೆಟ್!
ಎರಡೂ ರಾಷ್ಟ್ರೀಯ ಪಕ್ಷಗಳು ವಿಧಾನಸಭೆ ಚುನಾವಣೆಯಲ್ಲಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತಿರುವ 50 ಕ್ಷೇತ್ರಗಳ ಗೆಲುವಿನತ್ತ ಹೆಚ್ಚಿನ ಗಮನ ಹರಿಸಿವೆ. ಈ ಕ್ಷೇತ್ರಗಳ ಕುರಿತ ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Elections 2023 : ಕೆ.ಎಸ್‌. ಈಶ್ವರಪ್ಪಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ ನರೇಂದ್ರ ಮೋದಿ, ಕುಟುಂಬ ಫುಲ್‌ ಖುಷ್‌
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮುಂಜಾನೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಕರೆ ಮಾಡಿ (Narendra Modi calls KS Eshwarappa) ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ. ಮುಂಜಾನೆಯೇ ಬಂದ ಕರೆ, ಮಾತನಾಡಿದ ರೀತಿಯಿಂದ ಈಶ್ವರಪ್ಪ ಅವರ ಕುಟುಂಬ ಫುಲ್‌ ಖುಷ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka Election 2023 : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಬಿಗ್‌ ರಿಲೀಫ್‌; ಕನಕಪುರದಲ್ಲಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಕನಕಪುರ ವಿಧಾನಸಭಾ ಕ್ಷೇತ್ರದಿಂದ (Karnataka Election 2023) ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಅಂಗೀಕರಿಸಿದ್ದಾರೆ. ನಾಮಪತ್ರ ಅಂಗೀಕಾರಗೊಳ್ಳುವ ಬಗ್ಗೆ ಆತಂಕ ಹೊಂದಿದ್ದ ಶಿವಕುಮಾರ್‌ ಇದರಿಂದ ನಿರಾಳರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Vinay Kulkarni: ಡಿಕೆಶಿಯಂತೆಯೇ ವಿನಯ್‌ ಕುಲಕರ್ಣಿ ಪ್ಲ್ಯಾನ್‌; ಪತ್ನಿಯಿಂದಲೂ ಕೊನೇ ಕ್ಷಣದಲ್ಲಿ ನಾಮಪತ್ರ

6. Karnataka Elections 2023 : ನಮ್ಮಲ್ಲಿ ಸಿಕ್ಕಾಪಟ್ಟೆ ಲೀಡರ್‌ಗಳಿದ್ದಾರೆ, ನಾನು ಯಾರಿಗೂ ಪ್ರತಿಸ್ಪರ್ಧಿ ಅಲ್ಲ ಎಂದ ಬಿ.ಎಲ್‌. ಸಂತೋಷ್‌
ʻನಮ್ಮಲ್ಲಿ ಸಿಕ್ಕಾಪಟ್ಟೆ ಲೀಡರ್‌ಗಳಾಗಿದ್ದಾರೆ. ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲʼʼ- ಹೀಗೊಂದು ಮಾರ್ಮಿಕ ಮಾತನ್ನು ಆಡಿದ್ದಾರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ. 74.67 ವಿದ್ಯಾರ್ಥಿಗಳು ಪಾಸ್‌; ವೆಬ್‌ಸೈಟ್‌ನಲ್ಲಿ ರಿಸಲ್ಟ್‌
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (kseeb) ದ್ವಿತೀಯ ಪಿಯುಸಿಯ ಫಲಿತಾಂಶ (2nd PUC Result 2023) ಪ್ರಕಟಿಸಿದೆ. ಈ ಬಾರಿ ಶೇ.74.67 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು 7,02,067 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ಶೇ. 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ. 61.88 ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿಯದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Kannadigas in Sudan: ಸುಡಾನ್‌ನಲ್ಲಿ ಕನ್ನಡಿಗರ ಸ್ಥಿತಿ ಗಂಭೀರ; ಊಟ, ನೀರಿಲ್ಲದೆ ಪರದಾಟ
ಸುಡಾನ್‌ನಲ್ಲಿ ಸಿಲುಕಿದ ಕನ್ನಡಿಗರ ಸ್ಥಿತಿ ಗಂಭೀರವಾಗಿದ್ದು, ಊಟ, ನೀರು ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸೇನೆ ಮತ್ತು ಅರೆ ಸೇನಾಪಡೆಗಳ ನಡುವಿನ ಸಂಘರ್ಷಕ್ಕೆ ಸುಡಾನ್‌ (Kannadigas in Sudan) ನಲುಗಿದ್ದು, ಈಗಾಗಲೇ ಭಾರತೀಯರು ಸೇರಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾರತದಿಂದ ಸಾವಿರಾರು ಜನರು ಅಲ್ಲಿಗೆ ವಲಸೆ ಹೋಗಿದ್ದು, ಈ ಪೈಕಿ ಚನ್ನಗಿರಿ ತಾಲೂಕಿನ 31 ಜನ ಗೃಹ ಬಂಧನದಲ್ಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Poonch Terror Attack: ಸೇನಾ ವಾಹನದ ಮೇಲೆ ದಾಳಿ ಮಾಡಿದ್ದು ಲಷ್ಕರೆ ತೊಯ್ಬಾದ 7 ಉಗ್ರರು; ಅರಣ್ಯದಲ್ಲಿ ಕಾದು ಕುಳಿತು ಅಟ್ಯಾಕ್​
ಜಮ್ಮು-ಕಾಶ್ಮೀರದ ಪೂಂಚ್​ನಲ್ಲಿ ನಿನ್ನೆ ನಡೆದ ಉಗ್ರದಾಳಿ (Poonch Terror Attack)ಯಲ್ಲಿ ರಾಷ್ಟ್ರೀಯ ರೈಫಲ್ಸ್​ ಪಡೆಯ ಐವರು ಯೋಧರು ದುರ್ಮರಣಕ್ಕೀಡಾಗಿದ್ದಾರೆ. ಒಬ್ಬ ಯೋಧ ಗಾಯಗೊಂಡಿದ್ದಾರೆ. ಈ ಕೃತ್ಯ ನಡೆಸಿದ್ದು ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ಏಳು ಮಂದಿ ಭಯೋತ್ಪಾದಕರು ಎಂಬುದು ಸ್ಪಷ್ಟವಾಗಿದೆ.  ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ChatGPT v/s Humans: ಚಾಟ್‌ಜಿಪಿಟಿ ಮಾನವರ ಸ್ಥಾನ ಪಡೆಯಲಿದೆಯಾ? ಇನ್ಫಿ ನಾರಾಯಣಮೂರ್ತಿ ಹೇಳುವುದೇನು?
ಟೆಕ್ ವಲಯದಲ್ಲಿ ಜಾಟ್‌ಜಿಪಿಟಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮಾನವ ಉದ್ಯೋಗಗಳನ್ನು ಈ ಚಾಟ್‌ಬಾಟ್ ಕಸಿದುಕೊಳ್ಳಬಹುದು ಎಂಬ ಭಯ ಆವರಿಸಿದೆ. ಹಾಗಾಗಿ, ಬಹಳಷ್ಟು ಉದ್ಯಮಿಗಳು, ತಂತ್ರಜ್ಞರು ಹಾಗೂ ಅನುಭವಿಗಳು ಚಾಟ್‌ಜಿಪಿಟಿ ಬಳಕೆಯ ಸಾಧ್ಯತೆಗಳು, ಅದು ಉಂಟು ಮಾಡಲಿರುವ ಪರಿಣಾಮ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ (Infosys Founder Narayana Murthy) ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ(ChatGPT v/s Humans). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Malleswaram Blast: ಮಲ್ಲೇಶ್ವರ ಬಾಂಬ್‌ ಸ್ಫೋಟ ಪ್ರಕರಣ; ಇಬ್ಬರಿಗೆ 7 ವರ್ಷ ಜೈಲು
  2. Celebrities: ಸಾಮಾನ್ಯರಂತಾದ ಸೆಲೆಬ್ರಿಟಿಗಳು; ರಾತ್ರೋ ರಾತ್ರಿ ಹೊಸ ರೂಲ್ಸ್‌ ತಂದ ಟ್ವಿಟರ್‌! ಏನದು?
  3. ಯುವ ಕಾಂಗ್ರೆಸ್ ರಾಷ್ಟ್ರೀಯ​ ಅಧ್ಯಕ್ಷ ಶ್ರೀನಿವಾಸ್​ ಬಿವಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಅಸ್ಸಾಂ ಕಾಂಗ್ರೆಸ್ ನಾಯಕಿ; ಕಿರುಕುಳದ ಆರೋಪ
  4. WhatsApp New Feature: ವಾಟ್ಸಾಪ್‌ನಿಂದ ಕೀಪ್ ಇನ್ ಚಾಟ್ ಹೊಸ ಫೀಚರ್; ಬಳಕೆದಾರರಿಗೆ ಏನು ಲಾಭ?
  5. Study Report: ಮೋದಿ ಸರ್ಕಾರದ ನೀತಿಗಳಲ್ಲಿ ತಾರತಮ್ಯ ಇಲ್ಲ, ಅಲ್ಪಸಂಖ್ಯಾತರಿಗೇ ಹೆಚ್ಚು ಲಾಭ!
Exit mobile version