ಬೆಂಗಳೂರು: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಸೇರಿ 7 ಮಹನೀಯರ ಭಾವಚಿತ್ರ ಅನಾವರಣಗೊಂಡಿದ್ದು, ಕಾಂಗ್ರೆಸ್ ಬುದ್ಧಿವಂತಿಕೆಯ ನಡೆ ಇಟ್ಟಿದೆ. ವಿಧಾನಸಭೆ ಚುನಾವಣೆಗೆ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ಮಹಾಮೇಳಾವ್‌ಗೆ ಪೊಲೀಸರು ತಡೆ ಹಾಕಿದ್ದಾರೆ, ಬಿ.ಎಲ್. ಸಂತೋಷ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಬೆಳಗಾವಿ ಅಧಿವೇಶನ | ಸಾವರ್ಕರ್ ಸೇರಿ 7 ಮಹನೀಯರ ಫೋಟೊ ಅನಾವರಣ; ವಿರೋಧಿಸದ ಕಾಂಗ್ರೆಸ್ ಬುದ್ಧಿವಂತಿಕೆಯ ನಡೆ
ವಿಧಾನಸಭೆ ಚುನಾವಣೆಗೂ ಮುನ್ನ ಭಾರೀ ವಿವಾದ ಸೃಷ್ಟಿಸಬಹುದು ಎಂದು ಅಂದಾಜಿಸಲಾಗಿದ್ದ, ಬೆಳಗಾವಿ ಸುವರ್ಣ ಸೌಧದಲ್ಲಿ ಮಹನೀಯರ ಫೋಟೊ ಅನಾವರಣ ಕಾರ್ಯಕ್ರಮ ಸೋಮವಾರ ಬೆಳಗ್ಗೆ ನೆರವೇರಿದೆ. ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್‌ಚಂದ್ರ ಬೋಸ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳಿದ್ದರೆ ಸ್ಪೀಕರ್ ಕುರ್ಚಿಯ ಎಡಭಾಗದಲ್ಲಿ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಚಿತ್ರಗಳಿವೆ. ಸ್ಪೀಕರ್ ಕುರ್ಚಿಯ ಹಿಂದಿನ ಮೇಲ್ಭಾಗದಲ್ಲಿ ಜಗಜ್ಯೋತಿ ಬಸವೇಶ್ವರರ ಚಿತ್ರವನ್ನು ಅಳವಡಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Belagavi session | ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ: ಕಾಂಗ್ರೆಸ್ ಮೌನದ ಹಿಂದಿದ್ದಾರೆ ಸೋನಿಯಾ ಗಾಂಧಿ!
ಹೆಚ್ಚಿನ ಓದಿಗಾಗಿ: ಬೆಳಗಾವಿ ಅಧಿವೇಶನ | ಕಾಂಗ್ರೆಸನ್ನು ಹಿಂದುತ್ವದ ಚಕ್ರವ್ಯೂಹದಲ್ಲಿ ಸಿಲುಕಿಸಲು ಬಿಜೆಪಿ ತಯಾರಿ; ಸಾವರ್ಕರ್ ಭಾವಚಿತ್ರದಿಂದ ಆರಂಭ
2. DK Shivakumar | ಡಿಕೆಶಿ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ: ಶಿವಕುಮಾರ್ ಹೇಳಿದ್ದೇನು?
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಗೆ ತೆರಳಿದ್ದರೆ, ಇತ್ತ ಬೆಂಗಳೂರಿನಲ್ಲಿ ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೩. Border Dispute | ಎಂಇಎಸ್ ಮಹಾಮೇಳಾವ್‌ಗೆ ರಾಜ್ಯ ಸರ್ಕಾರ ಬ್ರೇಕ್; ನಿಪ್ಪಾಣಿ ಗಡಿಗೆ ಬಂದಿದ್ದ ಮಹಾ ನಾಯಕರ ಹಿಮ್ಮೆಟ್ಟಿದ ಪೊಲೀಸರು
ಪ್ರತಿ ಬಾರಿ ಚಳಿಗಾಲದ ಅಧಿವೇಶನದ ಸಮಯದಲ್ಲಿಯೇ ಮಹಾಮೇಳಾವ್ ಆಯೋಜನೆ ಮಾಡುತ್ತಾ ಬರುತ್ತಿದ್ದ ನಾಡದ್ರೋಹಿ ಎಂಇಎಸ್‌ಗೆ ಈ ಬಾರಿ ರಾಜ್ಯ ಸರ್ಕಾರ ತಿರುಗೇಟು ನೀಡಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಇರುವುದರಿಂದ ಶಾಂತಿ-ಸುವ್ಯವಸ್ಥೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮಕ್ಕೆ ತಡೆ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Protest at Belagavi | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು, ಗ್ರಾಪಂ ನೌಕರರ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸುವರ್ಣ ವಿಧಾನಸೌಧ ಸಮೀಪ ರೈತರು ಹಾಗೂ ಪಂಚಾಯಿತಿ ನೌಕರರು ಸೋಮವಾರ ಪ್ರತಿಭಟನೆ (Protest at Belagavi) ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Karnataka Election | 93 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ನಿಖಿಲ್‌ಗೆ ರಾಮನಗರ, ಇಬ್ರಾಹಿಂ ಪುತ್ರನಿಗೆ ಟಿಕೆಟ್
ಅನೇಕ ದಿನಗಳಿಂದಲೂ ಮುಂದೂಡಿಕೆಯಾಗುತ್ತಲೇ ಬಂದಿದ್ದ ಜನತಾದಳ ಜಾತ್ಯತೀತ ಪಕ್ಷದ 93 ಅಭ್ಯರ್ಥಿಗಳ ಪಟ್ಟಿಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಒಪ್ಪಿಗೆಯ ಮೇರೆಗೆ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಬಿಡುಗಡೆ ಮಾಡಿದ್ದಾರೆ.ಮುಖ್ಯವಾಗಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮನಗರದಲ್ಲಿ ಟಿಕೆಟ್ ನೀಡಲಾಗಿದ್ದರೆ, ಸ್ವತಃ ಕುಮಾರಸ್ವಾಮಿ ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. FIFA World Cup | ವಿಶ್ವ ಕಪ್ ಫೈನಲ್ನಲ್ಲಿ ಸೋಲು, ಫ್ರಾನ್ಸ್ನಲ್ಲಿ ಫುಟ್ಬಾಲ್ ಅಭಿಮಾನಿಗಳಿಂದ ದೊಂಬಿ
ಭಾನುವಾರ ರಾತ್ರಿ ನಡೆದ ಫಿಫಾ ವಿಶ್ವ ಕಪ್ (FIFA World Cup) ಫೈನಲ್ನಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಟ್ರೋಫಿ ಗೆದ್ದಿದೆ. ಇದೇ ವೇಳೆ ಹ್ಯೂಗೋ ಲೋರಿಸ್ ನೇತೃತ್ವದ ಫ್ರಾನ್ಸ್ ತಂಡ 4-2 ಗೋಲ್ಗಳ ಅಂತರದಿಂದ ಸೋಲು ಕಂಡಿದೆ. ಮಾಜಿ ಚಾಂಪಿಯನ್ ಫ್ರಾನ್ಸ್ ತಂಡ ಅತ್ತ ಸೋಲು ಅನುಭವಿಸುತ್ತಿದ್ದಂತೆ ಆ ದೇಶದ ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವೆಡೆ ಅಭಿಮಾನಿಗಳು ದೊಂಬಿ ಸೃಷ್ಟಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ:
7. NPS News | ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್ ಬೇಡ, ಒಪಿಎಸ್ ಬೇಕು ಎನ್ನಲು ಕಾರಣವಾದರೂ ಏನು?
ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು (NPS News) ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಪಿಂಚಣಿ ಯೋಜನೆಗೆ ವಿರೋಧ ಏಕೆ ಎಂಬ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಜೋಳಿಗೆ ಹಿಡಿದ ಮಹಾನುಭಾವ ಎಂದ HDK, ಏ ಪಂಚೆ ಎಂದ ಇಬ್ರಾಹಿಂ: ಬಿ.ಎಲ್. ಸಂತೋಷ್ ವಿರುದ್ಧ ದಳಪತಿಗಳು ಗರಂ
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಣ್ಣೀರು ಸುರಿಸುತ್ತಾ ಜನರ ಮುಂದೆ ಬರುತ್ತಾರೆ ಎಂದಿದ್ದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Student death | ಅತಿಥಿ ಶಿಕ್ಷಕನ ಹುಚ್ಚಾಟ: ಮನ ಬಂದಂತೆ ಥಳಿಸಿದ್ದರಿಂದ ಬಾಲಕ ಸಾವು, ಶಿಕ್ಷಕಿಯಾದ ತಾಯಿಗೂ ಹೊಡೆತ
ಅತಿಥಿ ಶಿಕ್ಷಕನೊಬ್ಬ ಹುಚ್ಚು ಹಿಡಿದವನಂತೆ, ಮನ ಬಂದಂತೆ ಥಳಿಸಿದ ಪರಿಣಾಮವಾಗಿ ಬಾಲಕನೊಬ್ಬ (Student death) ಮೃತಪಟ್ಟಿದ್ದಾನೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಭರತ್ ಬಾರಕೇರಿ (೯) ಎಂಬ ಬಾಲಕ ಅತಿಥಿ ಶಿಕ್ಷಕನ ರಾಕ್ಷಸೀ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಮುತ್ತು ಹದಲಿ ಎಂಬ ಅತಿಥಿ ಶಿಕ್ಷಕನೇ ಈ ರೀತಿ ಹಲ್ಲೆ ಮಾಡಿದವನು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಎಲೆಕ್ಷನ್ ಹವಾ | ಹೊನ್ನಾಳಿ | ಸದಾ ಸುದ್ದಿಯಲ್ಲಿರುವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾರು?
ಈ ಹಿಂದೆ ಸಚಿವರಾಗಿದ್ದ ರೇಣುಕಾಚಾರ್ಯ, ಸದ್ಯ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರು ಎಂದು ಗುರುತಿಸಿಕೊಂಡಿದ್ದು, ಈ ಬಾರಿಯೂ ಬಿಜೆಪಿ ಟಿಕೆಟ್ ಖಚಿತ ಎನ್ನಬಹುದು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- Conversion allegation | ಆಮಿಷ ಒಡ್ಡಿ ಮತಾಂತರ ಆರೋಪ: ಮೂವರು ಕ್ರೈಸ್ತ ಧರ್ಮದ ಪ್ರಚಾರಕರ ಬಂಧನ
- Mandya Bandh | ಕಬ್ಬು, ಭತ್ತ, ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಗಾಗಿ ಒತ್ತಾಯಿಸಿ ಮಂಡ್ಯ ಬಂದ್ ಯಶಸ್ವಿ; ರೈತರ ಅರೆಬೆತ್ತಲೆ ಪ್ರತಿಭಟನೆ
- Bus accident | ಮೂವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಪ್ರಾಣ ಕಸಿದ ವಿಧಿ: ಕಲಿಕೆ ಜತೆ ಗಳಿಕೆಗೆ ಹೋದವರು ಶವವಾದರು
- Terror Incidents In J&K | ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ 168% ಇಳಿಕೆ
- Suicide Case | ಮದುವೆ ಬ್ರೇಕಪ್‌ಗೆ ಬೇಸತ್ತು ಆರನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
- Rahul Gandhi | ಹಿಂದಿಯಿಂದಲ್ಲ, ಇಂಗ್ಲಿಷ್‌ನಿಂದ ಜಗತ್ತಿನೊಂದಿಗೆ ಸಂವಹನ ಸಾಧ್ಯ ಎಂದು ರಾಹುಲ್ ಗಾಂಧಿ
- Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್ ಅರೆಸ್ಟ್; ಇನ್ನಾದರೂ ಏರೀತೆ ಅಡಿಕೆಯ ಬೆಲೆ?
- Parenting tips | ಅಮ್ಮಂದಿರೇ, ನಿಮ್ಮ ಗಂಡುಮಕ್ಕಳು ಹೇಗಿರಬೇಕು, ಈಗಲೇ ಡಿಸೈಡ್ ಮಾಡಿ!