Site icon Vistara News

ವಿಸ್ತಾರ TOP 10 NEWS: ದ್ವಿತೀಯ ಪಿಯು ಪರೀಕ್ಷೆ ಆರಂಭಕ್ಕೆ ಕ್ಷಣಗಣನೆಯಿಂದ, ಉಡುಪಿ ಕೃಷ್ಣಮಠದ ಭೂಮಿ ವಿಚಾರದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news second PU exams to udupi mutha land issue and more news

#image_title

1. 2nd PU Exam 2023 : ನಾಳೆಯಿಂದ 1,109 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ, ಹಿಜಾಬ್‌ಗೆ ಅವಕಾಶ ಇಲ್ಲವೇ ಇಲ್ಲ
ಮಾರ್ಚ್‌ 9ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ (2nd PU Exam 2023)ಗಾಗಿ ಎಲ್ಲ 1109 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ರಾಜ್ಯದ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಪರೀಕ್ಷೆ ಮಾರ್ಚ್‌ 9ರಿಂದ ಮಾರ್ಚ್‌ 29ರವರೆಗೆ ನಡೆಯಲಿದ್ದು, ಈ ಮೊದಲೇ ತಿಳಿಸಿದಂತೆ ಹಿಜಾಬ್‌ ಧರಿಸಿ ಬಂದವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Bandh: ಪಿಯು ಪರೀಕ್ಷೆಯ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ ವಾಪಸ್‌ ಪಡೆದ ಕಾಂಗ್ರೆಸ್‌

2. Women’s Day 2023 : ಮುಟ್ಟಿನ ದಿನಗಳಲ್ಲಿ ರಜೆ ಕೊಡುವುದು ಸೂಕ್ತ
ಹಿಂದಿನಿಂದ ಈ ಮುಟ್ಟು ಎನ್ನುವ ನೈಸರ್ಗಿಕ ಸಹಜ ಕ್ರಿಯೆಗೆ ಬಹಳ ಮಹತ್ವ ಕೊಟ್ಟು ಇದನ್ನೊಂದು ಅಸಹಜ ಕ್ರಿಯೆಯೆನೋ ಎನ್ನುವಂತೆ ಬಿಂಬಿಸಲಾಗುತ್ತಿತ್ತು. ಧೈರ್ಯವಾಗಿ ಹೆಣ್ಣುಮಕ್ಕಳು ತಮ್ಮ ಮನದ ಮಾತನ್ನು ಹೇಳಲು ಕಷ್ಟಸಾಧ್ಯವಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಅಂತಾರಾಷ್ಟ್ರೀಯ ಮಹಿಳಾ ದಿನದಂದು ವಿಶೇಷ ಲೇಖನಗಳು
1. Women’s Day 2023: ಎರಡು-ಮೂರು ದಿನ ಮುಟ್ಟಿನ ರಜೆ ಕೊಡುವುದು ಅಗತ್ಯ
2. Women’s Day 2023: ಪ್ರವಾಸ ಮಾಡುವ ಮಹಿಳೆಯರಿಗಾಗಿ ಇಲ್ಲಿವೆ ಟಾಪ್ 10 ಸ್ಥಳಗಳು
3. Women’s Day 2023: ಮಹಿಳೆಯರನ್ನು ಸದ್ದಿಲ್ಲದೆ ಕಾಡುವ 5 ಕಾಯಿಲೆಗಳಿವು
4. International Women’s Day 2023: ಮಹಿಳಾ ದಿನದ ಶುಭಾಶಯ ಕೋರಿದ ಮೋದಿ, ನಾರಿಶಕ್ತಿಗೆ ಮೆಚ್ಚುಗೆ, ವಿಶೇಷ ವಿಡಿಯೊ ಶೇರ್
5. International Women’s Day: ಕೊರೊನಾ ಕಾಲದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದು ಹೋರಾಡಿದ ಮಹಿಳೆಯರಿವರು

3. Lokayukta Raid: ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು; ವಕೀಲರ ಸಂಘ ಆಕ್ಷೇಪ, ಸಿಜೆಐಗೆ ಪತ್ರ
ಲಂಚ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿರುವುದಕ್ಕೆ ಬೆಂಗಳೂರಿನ ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ಉಚ್ಚ ನ್ಯಾಯಾಲಯದ (Lokayukta Raid) ಈ ನಡೆಯಿಂದ ದಿಗ್ಭ್ರಮೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ,ಚಂದ್ರಚೂಡ್‌ ಅವರಿಗೆ ಪತ್ರ ಬರೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Lokayukta Raid: ಇಂದು ಲೋಕಾಯುಕ್ತ ಮುಂದೆ ಹಾಜರಾಗ್ತಾರಾ ಶಾಸಕ ಮಾಡಾಳು?

4. Krishna Mutt politics : ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ನೀಡಿದ್ದರೇ? ಚರ್ಚೆಗೆ ಕಾರಣವಾದ ಡಿಕೆಶಿ ಆಪ್ತ ಮಿಥುನ್‌ ರೈ ಹೇಳಿಕೆ
ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠ ನಿರ್ಮಾಣಕ್ಕೆ ಮುಸ್ಲಿಂ ರಾಜರೊಬ್ಬರು ಜಾಗ ನೀಡಿದ್ದಾರೆ ಎಂಬ ಕಾಂಗ್ರೆಸ್‌ ನಾಯಕ, ಡಿ.ಕೆ. ಶಿವಕುಮಾರ್‌ ಆಪ್ತ ವಲಯದಲ್ಲಿರುವ ಮಿಥುನ್‌ ರೈ ಅವರ ಹೇಳಿಕೆ (Krishna Mutt politics) ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಚುನಾವಣೆಯ ಹೊತ್ತಿನಲ್ಲಿ ನೀಡಿದ ಈ ಹೇಳಿಕೆ ವಿರುದ್ಧ ಹಿಂದುಗಳು ತಿರುಗಿಬಿದ್ದಿದ್ದಾರೆ. ಉಡುಪಿ ಶಾಸಕರಾಗಿರುವ ರಘುಪತಿ ಭಟ್‌ ಅವರು ಕೂಡಾ ಇದರ ಬಗ್ಗೆ ಪ್ರತಿಕ್ರಿಯೆ ನೀಡಿ ಮಿಥುನ್‌ ರೈ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Krishna Mutt politics : ಮುಸ್ಲಿಂ ರಾಜ ಜಾಗ ನೀಡಿದ್ದು ಉಡುಪಿಯಲ್ಲಿ ಅಲ್ಲ, ಗಂಗಾ ತೀರದಲ್ಲಿ: ವಿವಾದಕ್ಕೆ ತೆರೆ ಎಳೆದ ಪೇಜಾವರ ಶ್ರೀ

5. HD Revanna: ಎಚ್‌.ಡಿ. ರೇವಣ್ಣ ಜತೆ ಎಚ್‌.ಪಿ. ಸ್ವರೂಪ್‌ ಗೌಪ್ಯ ಚರ್ಚೆ; ಬಗೆಹರಿಯಲಿದೆಯಾ ಟಿಕೆಟ್‌ ಗೊಂದಲ?
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಈ ಮಧ್ಯೆ ಹಾಸನ ವಿಧಾನಸಭಾ ಕ್ಷೇತ್ರವು ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಅದರಲ್ಲೂ ಜೆಡಿಎಸ್‌ ಟಿಕೆಟ್‌ ಬಗ್ಗೆ ಕಳೆದ ಒಂದೆರೆಡು ತಿಂಗಳಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕ ಎಚ್.ಎಸ್.‌ ಪ್ರಕಾಶ್‌ ಅವರ ಪುತ್ರ ಎಚ್‌.ಪಿ. ಸ್ವರೂಪ್‌ ಹಾಗೂ ಮಾಜಿ ಸಚಿವ ಎಚ್‌.ಡಿ. ರೇವಣ್ಣ (HD Revanna) ಗೌಪ್ಯ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಕೆರಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Holi Celebration: ಪಾಕ್‌ನ ಕರಾಚಿಯಲ್ಲಿ ಬಚ್ಚನ್ ಹಾಡಿಗೆ ಹೋಳಿ ಡ್ಯಾನ್ಸ್, ಸಂಭ್ರಮ
ನಮ್ಮ ನೆರೆಯ ಪಾಕಿಸ್ತಾನದಲ್ಲಿನ ಹಿಂದೂ ಅಲ್ಪಸಂಖ್ಯಾತರು ಹೋಳಿ ಹಬ್ಬವನ್ನು ಆಚರಿಸಿ ಸಂಭ್ರಮಪಟ್ಟಿದ್ದಾರೆ(Holi Celebration). ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದೂಗಳು ಹೋಳಿ ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ. ಹಿಂದೂಗಳ ಹೋಳಿಯ ವಿಡಿಯೋವೊಂದನ್ನು ಅಸೋಸಿಯೇಟೆಡ್ ಪ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದು, ಅದರಲ್ಲಿ ಜನರು, ಸಿಲ್‌ಸಿಲಾ ಚಿತ್ರದ ಅಮಿತಾಭ್ ಬಚ್ಚನ್ ಅವರ ಐಕಾನಿಕ್ ಸಾಂಗ್ ರಂಗ್ ಬರ್ಸೆ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Holi 2023: ಬಣ್ಣಗಳ ಹಬ್ಬವೆಂದರೆ ತಿನಿಸುಗಳ ಸಂಭ್ರಮವೂ ಹೌದು!

7. Vehicle Insurance : ವಿಸ್ತಾರ Money Guide: ಅಪಘಾತದ ಬಳಿಕ ಬೈಕ್‌ ಇನ್ಷೂರೆನ್ಸ್‌ ಕ್ಲೇಮ್‌ ಮಾಡಿಕೊಳ್ಳುವುದು ಹೇಗೆ?
ಅಕಸ್ಮಾತ್‌ ನಿಮ್ಮ ಬೈಕ್‌ಗೆ ಏನಾದರೂ ಅಪಘಾತ ಸಂಭವಿಸಿ ಹಾನಿಯಾದರೆ, ಹವಾಮಾನ ವೈಪರೀತ್ಯ ಅಥವಾ ಬೈಕ್‌ ಕಳ್ಳತನವಾದರೆ ನೀವು ಇನ್ಷೂರೆನ್ಸ್‌ ಪರಿಹಾರವನ್ನು ಕ್ಲೇಮ್‌ ಮಾಡಿಕೊಳ್ಳಬಹುದು. (Vehilce Insurence) ಆದರೆ ವಿಮೆ ಪರಿಹಾರವನ್ನು ಯಾವುದೇ ಅಡಚಣೆ ಇಲ್ಲದೆ ಸುಲಭವಾಗಿ ಪಡೆಯುವುದು ಹೇಗೆ? ಇಲ್ಲಿದೆ ವಿವರ. ಅಪಘಾತ ಅಥವಾ ಇತರ ಕಾರಣಗಳಿಂದ ವಾಹನ ವಿಮೆ ಪಡೆಯಲು ಬಯಸುವುದಿದ್ದರೆ, ಕ್ಲೇಮ್‌ ಮಾಡಿಕೊಳ್ಳುವುದು ಮುಖ್ಯ.. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Delhi Excise Policy Case: ದೆಹಲಿ ಅಬಕಾರಿ ಕೇಸ್‌, ತೆಲಂಗಾಣ ಸಿಎಂ ಕೆಸಿಆರ್‌ ಪುತ್ರಿ ಕವಿತಾಗೆ ಸಮನ್ಸ್‌
ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ (Delhi Excise Policy Case:) ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಈಗಾಗಲೇ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರನ್ನು ಬಂಧಿಲಾಗಿದ್ದು, ಮಾರ್ಚ್‌ 20ರ ವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕೆ. ಕವಿತಾ ಅವರಿಗೆ ಸಮನ್ಸ್‌ ಜಾರಿಗೊಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IND VS AUS: ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್​ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ
ಬೋರ್ಡರ್‌-ಗವಸ್ಕರ್‌ ಟೆಸ್ಟ್‌ ಸರಣಿಯ ಮೊದಲ 3 ಪಂದ್ಯಗಳು ಮೂರೇ ದಿನಗಳಲ್ಲಿ ಮುಕ್ತಾಯ ಕಂಡ ಕಾರಣ ಅಹಮದಾಬಾದ್(Ahmedabad)​ ಟ್ರ್ಯಾಕ್‌ ಹೇಗೆ ವರ್ತಿಸೀತು ಎಂಬ ತೀವ್ರ ಕುತೂಹಲದ ಮಧ್ಯೆ ಭಾರತ(IND VS AUS) ಮತ್ತು ಆಸ್ಟ್ರೇಲಿಯಾ ತಂಡಗಳು ಇಲ್ಲಿ ಅಂತಿಮ ಟೆಸ್ಟ್​ ಪಂದ್ಯವನ್ನಾಡಲು ಸಜ್ಜಾಗಿವೆ. ಉಭಯ ತಂಡಗಳ ಈ ಪಂದ್ಯ ಗುರುವಾರ(ಮಾರ್ಚ್​ 9)ದಿಂದ ಆರಂಭವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Alia Bhatt: 2023ರ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮಹಿಳಾ ಪಟ್ಟಿಯಲ್ಲಿ ಏಕೈಕ ಭಾರತೀಯ ನಟಿ ಆಲಿಯಾ ಭಟ್
ಬಾಲಿವುಡ್‌ ನಟಿ ಆಲಿಯಾ ಭಟ್‌ಗೆ (Alia Bhatt) ಮತ್ತೊಂದು ಗರಿ ಸೇರಿದೆ. 2023ರ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮಹಿಳಾ ಪಟ್ಟಿಯಲ್ಲಿ (Variety’s list of Impactful International Women of 2023 list.) ಆಲಿಯಾ ಹೆಸರು ಸೇರಿದೆ. ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ನಟಿಯಾಗಿ ಆಲಿಯಾ ಭಟ್ ಹೊರಹೊಮ್ಮಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version