Site icon Vistara News

ವಿಸ್ತಾರ TOP 10 NEWS: ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್‌ನಿಂದ, ಕಾಂಗ್ರೆಸ್‌ 4ನೇ ಗ್ಯಾರಂಟಿ ಘೋಷಣೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news seer stops urigowda nanjegowda cinema to congress fourth guarantee and more news

#image_title

1. Tippu sultan: ಉರಿಗೌಡ, ನಂಜೇಗೌಡ ಕುರಿತ ಚರ್ಚೆ ತಕ್ಷಣ ನಿಲ್ಲಿಸಿ: ನಿರ್ಮಲಾನಂದನಾಥ ಸ್ವಾಮೀಜಿ ಫರ್ಮಾನು
ಟಿಪ್ಪು ಸುಲ್ತಾನನನ್ನು ಕೊಂದಿದ್ದು ಉರಿ ಗೌಡ ಮತ್ತು ನಂಜೇಗೌಡರೆಂಬ (Uri gowda and Nanjegowda) ಒಕ್ಕಲಿಗ ಯೋಧರು ಎಂಬ ಬಿಜೆಪಿ ನಾಯಕರ ಪ್ರಚಾರಕ್ಕೆ ಹಿನ್ನಡೆಯುಂಟಾಗಿದೆ. ಇಂಥ ಕಾಲ್ಪನಿಕವಾದ, ಇದುವರೆಗೆ ಯಾವುದೇ ದಾಖಲೆಗಳು ಸಿಗದ ವಾದವನ್ನು ಮುಂದಿಟ್ಟುಕೊಂಡು ಒಕ್ಕಲಿಗ ಯೋಧರ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂಬ ಸ್ಪಷ್ಟ ಸಂದೇಶವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Tipu sultan: ನನಗೆ ಮಾಜಿ ಪ್ರಧಾನಿ ದೇವೇಗೌಡ ಗೊತ್ತಿದೆ; ಉರಿಗೌಡ, ನಂಜೇಗೌಡ ಯಾರೆಂದು ಗೊತ್ತೇ ಇಲ್ಲ: ಡಾ.ಕೆ. ಸುಧಾಕರ್‌

2. Congress Guarantee: ಯುವಕರಿಗೆ ಕಾಂಗ್ರೆಸ್‌ನ 4 ನೇ ಗ್ಯಾರಂಟಿ: ಪದವೀಧರರಿಗೆ ʼಯುವ ನಿಧಿʼ; ಮಾಸಿಕ 3 ಸಾವಿರ ರೂ.
ಚುನಾವಣೆ ಸಮೀಪವಾಗುತ್ತಿರುವಂತೆ ತನ್ನ ನಾಲ್ಕನೇ ಗ್ಯಾರಂಟಿ ಯೋಜನೆಯನ್ನು (Congress Guarantee) ಕಾಂಗ್ರೆಸ್‌ ಘೋಷಣೆ ಮಾಡಿದೆ. ಯುವ ಕ್ರಾಂತಿ ಸಮಾವೇಶದಲ್ಲಿ ನಾಲ್ಕನೇ ಗ್ಯಾರಂಟಿ ಯೋಜನೆ ʼಯುವ ನಿಧಿʼಯನ್ನು ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲ ಕಾಂಗ್ರೆಸ್‌ ನಾಯಕರೂ ಘೋಷಿಸಿದರು. ಈ ಗ್ಯಾರಂಟಿ ಯೋಜನೆಯ ಪ್ರಕಾರ ಕರ್ನಾಟಕದ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ. ನೀಡುವುದಾಗಿ ಘೋಷಣೆ ಮಾಡಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆ ಗ್ರೀನ್‌ ಸಿಗ್ನಲ್‌ ವಿರುದ್ಧ ಸುಪ್ರೀಂಗೆ ಮೇಲ್ಮನವಿ; 27ಕ್ಕೆ ವಿಚಾರಣೆ, ತಡೆ ನೀಡುವುದು ಡೌಟ್‌?
ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ರಾಜ್ಯ ಮಟ್ಟದ ಮೌಲ್ಯಾಂಕನ (ಪಬ್ಲಿಕ್‌ ಪರೀಕ್ಷೆ-Public Exam) ನಡೆಸಲು ಅವಕಾಶ ನೀಡಿರುವ ರಾಜ್ಯ ಹೈಕೋರ್ಟ್‌ನ ಆದೇಶದ ವಿರುದ್ಧ ಸುಪ್ರಿಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಸೋಮವಾರ ಸಲ್ಲಿಸಲಾದ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ಪೀಠ ವಿಚಾರಣೆಗೆ ಸ್ವೀಕರಿಸಿದೆ. ಎರಡೂ ತರಗತಿಗಳಿಗೆ ಪರೀಕ್ಷೆ ಆರಂಭವಾಗಲಿರುವ ಮಾರ್ಚ್‌ 27ರಂದೇ ಇದರ ವಿಚಾರಣೆಯನ್ನೂ ನಿಗದಿ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. PM Narendra Modi: ಚೀನಿಯರಿಗೂ ಮೋದಿ ಇಷ್ಟ, ಅವರನ್ನು ಯಾವ ಅಡ್ಡ ಹೆಸರಿನಿಂದ ಕರೆಯುತ್ತಾರೆ?
ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ನರೇಂದ್ರ ಮೋದಿ(PM Narendra Modi) ಅವರು, ಚೀನಾದ ಜನರಿಗೂ ಇಷ್ಟ. ವಿಶೇಷವಾಗಿ ನೆಟಿಜನ್ಸ್‌ಗೆ ಮೋದಿ ಅಂದರೆ ಅಚ್ಚುಮೆಚ್ಚು. ಚೀನಾ ಮತ್ತು ಭಾರತದ ನಡುವೆ ಗಡಿ ಗಲಾಟೆಯ ನಡುವೆಯೂ ಚೀನಿ ನೆಟಿಜನ್ಸ್‌ಗೆ ಮೋದಿ ಇಷ್ಟವಾಗಿದ್ದಾರೆ. ಅಮೆರಿಕ ಮೂಲದ ಸ್ಟ್ರಾಟೆಜಿಕ್ ಅಫೇರ್ಸ್ ಮ್ಯಾಗ್‌ಜಿನ್ ದಿ ಡಿಪ್ಲೋಮ್ಯಾಟ್ (The Diplomat) ಪ್ರಕಟಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ. ಚೀನಿ ನೇಚಿಜನ್ಸ್ ಅವರು ಮೋದಿ ಅವರನ್ನ ಮೋದಿ ಲಾವೋಕ್ಸಿಯನ್ (Modi Laoxian) ಎಂದು ಕರೆಯುತ್ತಾರೆ. ಅಂದರೆ, ಮೋದಿ ಅಮರ ಎಂದಾಗುತ್ತದೆ! ಇದು ಚೀನಿಯರು ಮೋದಿಗೆ ಇಟ್ಟಿರುವ ನಿಕ್ ನೇಮ್. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Cyber Crime : ಯುಪಿಐ ಮೂಲಕ ಹಣ ಕಳಿಸಿ, ಬ್ಯಾಂಕ್‌ ಖಾತೆಗೇ ಕನ್ನ! ಹೊಸ ಮಾದರಿ ವಂಚನೆ ಬಗ್ಗೆ ಇರಲಿ ಎಚ್ಚರ
ಹೊಸ ಬಗೆಯ ಸೈಬರ್‌ ಅಪರಾಧ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಜನತೆ ಇದರ ಪರಿಣಾಮ ಲಕ್ಷಾಂತರ ರೂ. ಕಳೆದುಕೊಂಡು ಪರದಾಡುತ್ತಿದ್ದಾರೆ. ವಂಚಕರು ಮೊದಲಿಗೆ ನಿಮ್ಮ ಗೂಗಲ್‌ ಪೇ, ಫೋನ್‌ ಪೇ ಇತ್ಯಾದಿ ಯುಪಿಐ ಖಾತೆಗೆ ಹಣ ಕಳಿಸುತ್ತಾರೆ. ಬಳಿಕ ತಪ್ಪಾಗಿ ನಿಮ್ಮ ಖಾತೆಗೆ ಹಣ ಜಮೆಯಾಗಿದ್ದು, ಹಿಂತಿರುಗಿಸುವಂತೆ ಕೋರುತ್ತಾರೆ. ನೀವು ಅದನ್ನು ನಂಬಿ ನಿಮ್ಮ ಖಾತೆಯಿಂದ ಅವರು ಕಳಿಸಿದ ಲಿಂಕ್‌ ಒತ್ತಿ ಹಣ ಕಳಿಸಿದರೆ, ಕೆಲ ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್‌ ಖಾತೆಯಿಂದಲೇ ಹಣ ವಿತ್‌ ಡ್ರಾ ಆಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ
ಆಟೋ ಚಾಲಕರ ರ‍್ಯಾಲಿಗೆ ಪೊಲೀಸರು ಅವಕಾಶ ನೀಡದ ಕಾರಣಕ್ಕೆ ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶವನ್ನು ಹೊರಹಾಕಿದ್ದಾರೆ. ಅನಧಿಕೃತ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಯಿಂದಾಗಿ ಆಟೋರಿಕ್ಷಾ ಚಾಲಕರ (Auto Strike In Bengaluru) ದುಡಿಮೆಗೆ ಮಾರಕವಾಗಿದೆ ಎಂದು ಆಕ್ರೋಶ ಹೊರಹಾಕಿರುವ ಬೆಂಗಳೂರು ಆಟೋ ಚಾಲಕರ ಸಂಘಗಳ ಒಕ್ಕೂಟವು ಮಾ.20ರಂದು ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಕರೆ ಕೊಟ್ಟಿದ್ದವು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Attack on Indian Consulate: ಸ್ಯಾನ್‌ ಫ್ರಾನ್ಸಿಸ್ಕೋದ ಇಂಡಿಯನ್ ಕಾನ್ಸುಲೇಟ್ ಕಚೇರಿ ಮೇಲೆ ಖಲಿಸ್ತಾನಿಯರಿಂದ ದಾಳಿ
ಲಂಡನ್‌ನಲ್ಲಿರುವ ಇಂಡಿಯನ್ ಹೈ ಕಮಿಷನ್ ಕಟ್ಟಡದಲ್ಲಿನ ತ್ರಿವರ್ಣ ಧ್ವಜವನ್ನು ಖಲಿಸ್ತಾನಿ ಪರ ಹೋರಾಟಗಾರರು ಕೆಳಗಿಳಿಸಿದ ಬೆನ್ನಲ್ಲೇ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ (San Francisco) ಇಂಡಿಯನ್ ಕಾನ್ಸುಲೇಟ್(Indian Consulate) ಮೇಲೆ ದಾಳಿ ನಡೆಸುವ ವಿಡಿಯೋ ವೈರಲ್ ಆಗಿದೆ. ಜತೆಗೆ, ಕಟ್ಟಡದ ಗೋಡೆಯೊಂದರ ಮೇಲೆ ಅಮೃತ್‌ಪಾಲ್ ಬಿಡುಗಡೆ ಮಾಡಿ ಎಂದು ಗೀಚಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. KMF TUMUL Recruitment 2023 : ಹಾಲು ಒಕ್ಕೂಟದಲ್ಲಿ 219 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಖಾಲಿ ಇರುವ (KMF TUMUL Recruitment 2023 ) ವಿವಿಧ 219 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Viral News: ಕೇರಳಕ್ಕೀಗ ಮೊದಲನೇ ತೃತೀಯ ಲಿಂಗಿ ನ್ಯಾಯವಾದಿ; ಮಾಹಿತಿ ಹಂಚಿಕೊಂಡ ಸಚಿವರು
ದೇವರ ನಾಡು ಎಂದೇ ಪ್ರಖ್ಯಾತವಾಗಿರುವ ಕೇರಳ ಇದೀಗ ತನ್ನ ಮೊದಲನೇ ತೃತೀಯ ಲಿಂಗಿ ನ್ಯಾಯವಾದಿಯನ್ನು ಕಂಡಿದೆ. ತೃತೀಯ ಲಿಂಗಿಯಾಗಿರುವ ಪದ್ಮ ಲಕ್ಷ್ಮೀ ಅವರು ಬಾರ್‌ ಕೌನ್ಸಿಲ್‌ನಲ್ಲಿ ನ್ಯಾಯವಾದಿಯಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯ ಹೆಮ್ಮೆ (Viral News) ಪಡುವಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Ugadi 2023: ಯುಗಾದಿ ಹಬ್ಬದಂದು ಬಾಯಿ ಚಪ್ಪರಿಸುವುದಕ್ಕೆ ಮಾಡಿ ಈ ವಿಶೇಷ ಅಡುಗೆ
ಯುಗಾದಿ ಹಬ್ಬ (Ugadi 2023) ಇನ್ನೇನು ಬಂದೇ ಬಿಟ್ಟಿತು. ಹಿಂದೂಗಳ ಹೊಸ ವರ್ಷವಾದ ಈ ದಿನ ಎಲ್ಲೆಡೆ ಮಾವಿನ ತೋರಣ ಕಟ್ಟಿ, ಬೇವು ಬೆಲ್ಲ ಸೇವಿಸಿ, ಜೀವನದಲ್ಲಿ ಸಿಹಿ ಕಹಿ ಎರಡನ್ನೂ ಸಮಾನವಾಗಿ ಎದುರಿಸೋಣ ಎನ್ನುತ್ತಾ ಖುಷಿಹಂಚಿಕೊಳ್ಳುವುದು ಸಂಪ್ರದಾಯ. ಹಿಂದೂಗಳ ಹಬ್ಬವೆಂದ ಮೇಲೆ ಅಲ್ಲಿ ತರೇವಾರು ತಿನಿಸುಗಳು ಇರಲೇಬೇಕು. ಸಂಭ್ರಮಕ್ಕೆ ಮೆರಗು ನೀಡುವುದೇ ನಮ್ಮ ವಿಶೇಷ ಊಟ. ಈ ಹಬ್ಬಕ್ಕೆ ವಿಶೇಷವಾಗಿ ಏನು ಮಾಡುವುದು ಎನ್ನುವ ಯೋಚನೆಯಲ್ಲಿ ನೀವಿದ್ದರೆ ಇಲ್ಲಿದೆ ನಿಮಗಾಗಿ ಸ್ಪೆಷಲ್‌ ಮೆನು.‌ ಯುಗಾದಿ ಕುರಿತ ಎಲ್ಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. KPSC Recruitment 2023 : ಹೈಕದ ಗ್ರೂಪ್‌ ಸಿ ಹುದ್ದೆಗಳಿಗೆ ಪರೀಕ್ಷೆ; ಕೀ ಉತ್ತರ ಪ್ರಕಟ
  2. Gold rate : ಬ್ಯಾಂಕಿಂಗ್‌ ಬಿಕ್ಕಟ್ಟಿನ ಪರಿಣಾಮ 60,000 ರೂ.ಗೆ ಜಿಗಿದ ಬಂಗಾರ ದರ, ಮತ್ತಷ್ಟು ಏರಿಕೆ ಸಂಭವ
  3. Aadhaar card : ಕಾರ್ಡ್‌ದಾರ ಮೃತಪಟ್ಟಾಗ ಆಧಾರ್‌ ಕೂಡ ನಿಷ್ಕ್ರಿಯ ಶೀಘ್ರ
  4. Ramadan 2023 : ರಮ್ಜಾನ್ ಹಬ್ಬಕ್ಕೆ ದಿನಗಣನೆ: ಏನಿದರ ವಿಶೇಷತೆ? ಏಕಾಗಿ ಈ ಉಪವಾಸ?
  5. Urfi Javed: ಬೀದಿ ನಾಯಿಯನ್ನು ಮುದ್ದಿಸಿದ ಉರ್ಫಿ, ವಿಚಿತ್ರ ಸ್ಟೈಲಿಂಗ್ ಮಾಡಲು ತಲೆ ಹೇಗೆ ವರ್ಕ್‌ ಆಗುತ್ತೆ ಅಂದ್ರು ನೆಟ್ಟಿಗರು?
Exit mobile version