ಬೆಂಗಳೂರು: ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ ಪ್ರಕರಣದಲ್ಲಿ ಇಲ್ಲಿವರೆಗಿನ ಅತ್ಯಂತ ದೊಡ್ಡ ಬೆಳವಣಿಗೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಶಾಲೆಯಲ್ಲಿ ಯೋಗ-ಧ್ಯಾನದ ವಿಚಾರ ಚಾಲ್ತಿಯಲ್ಲಿರುವಾಗಲೇ ಪದವಿ ಕಾಲೇಜುಗಳಿಗೂ ಯುಜಿಸಿ ಅನ್ವಯ ಮಾಡಿದೆ, ಭಾರತದ ಇತಿಹಾಸವನ್ನು ಮರೆಮಾಚಲಾಗಿದೆ ಎಂದು ಮೋದಿ ತಿಳಿಸಿದ್ದಾರೆ, ಮಂಗಳೂರು ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಶಿಫಾರಸು ಮಾಡುವ ಮುನ್ನವೇ ಎನ್‌ಐಎಗೆ ಕೇಂದ್ರ ಸರ್ಕಾರ ವಹಿಸಿದೆ ಎಂಬುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Voter data | 3 ಕ್ಷೇತ್ರಗಳಲ್ಲಿ ಡಿಲೀಟ್ ಆದ ಎಲ್ಲ ಹೆಸರುಗಳ ಮರುಪರಿಶೀಲನೆಗೆ ಚು.ಆಯೋಗ ಆದೇಶ, ಇಬ್ಬರು ಅಧಿಕಾರಿಗಳ ಸಸ್ಪೆಂಡ್
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ, ಬೆಂಗಳೂರಿನಲ್ಲಿ ನಡೆದಿದೆ (voter data) ಎಂದು ಆಪಾದಿಸಲಾದ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಸಮಗ್ರ ತನಿಖೆಗೆ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ. ಮಾತ್ರವಲ್ಲ, ಪರಿಷ್ಕರಣೆಯ ವೇಳೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾದ ಮತ್ತು ಸೇರಿಸಲಾದ ಎಲ್ಲ ಹೆಸರುಗಳ ಮರುಪರಿಶೀಲನೆಗೆ ಆರ್ಡರ್ ಮಾಡಿದೆ. ಮೂರು ಕ್ಷೇತ್ರಗಳ ಉಸ್ತುವಾರಿ ವಹಿಸಿದ್ದ ಇಬ್ಬರು ಐಎಎಸ್ ಅಧಿಕಾರಿಗಳನ್ನೂ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Yoga Education | ಧ್ಯಾನ ಶಾಲೆ, ಪಿಯುಗಳಿಗೆ ಸೀಮಿತವಲ್ಲ, ಕಾಲೇಜು ಕ್ಯಾಂಪಸ್‌ಗಳಿಗೂ ವಿಸ್ತರಿಸಿ ಯುಜಿಸಿ ಆದೇಶ
ರಾಜ್ಯದ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ದಿನದ ಆರಂಭದಲ್ಲಿ ಹತ್ತು ನಿಮಿಷ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಬೇಕು (Yoga Education) ಎಂದು ರಾಜ್ಯ ಶಿಕ್ಷಣ ಇಲಾಖೆ ಆದೇಶ ನೀಡಿದ ಬೆನ್ನಿಗೇ ಈಗ ವಿಶ್ವವಿದ್ಯಾಲಯ ಅನುದಾನ ಆಯೋಗವು ಇದನ್ನು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಮಂಗಳೂರು ಸ್ಫೋಟ | ರಾಜ್ಯದ ಶಿಫಾರಸಿಗೆ ಕಾಯದ ಕೇಂದ್ರ ಸರ್ಕಾರ; 1 ದಿನ ಮೊದಲೇ NIAಗೆ ವರ್ಗಾವಣೆ
ಮಂಗಳೂರಿನ ನಾಗುರಿ ಬಳಿ ನವೆಂಬರ್ 19ರಂದು ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಹಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಚ್ಚರಿ ಎಂದರೆ, ರಾಜ್ಯ ಸರ್ಕಾರವು ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ನಿರ್ಧಾರ ಮಾಡುವ ಒಂದು ದಿನ ಮೊದಲೇ ಕೇಂದ್ರ ಗೃಹ ಇಲಾಖೆ ನಿರ್ಧಾರ ಕೈಗೊಂಡು ಆಗಿತ್ತು ಎನ್ನುವ ವಿಚಾರ ಬಹಿರಂಗವಾಗಿದೆ. ರಾಜ್ಯ ಸರ್ಕಾರ ಶಿಫಾರಸು ಮಾಡುವ ಒಂದು ದಿನ ಮೊದಲೇ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಎನ್‌ಐಎಗೆ ವಹಿಸಿಕೊಳ್ಳುವಂತೆ ಸೂಚನೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. PM Modi | ಭಾರತದ ಇತಿಹಾಸವನ್ನು ತಿರುಚಲಾಗಿದೆ, ಅದನ್ನೀಗ ಪುನರ್ ರಚಿಸಬೇಕಾಗಿದೆ: ಪ್ರಧಾನಿ ಮೋದಿ
ಭಾರತದ ಇತಿಹಾಸವನ್ನು ಉದ್ದೇಶಪೂರ್ವಕವಾಗಿಯೇ ತಿರುಚಲಾಗಿದೆ, ಸತ್ಯಗಳನ್ನು ಮರೆಮಾಚಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು. 17ನೇ ಶತಮಾನದಲ್ಲಿ ಅಹೋಮ್ ಸಾಮ್ರಾಜ್ಯ (ಈಗಿನ ಅಸ್ಸಾಂ)ದ ಸೇನಾ ಮುಖ್ಯಸ್ಥರಾಗಿದ್ದು, ಮೊಘಲರನ್ನು ಸೋಲಿಸಿದ್ದ ಲಚಿತ್ ಬರ್ಫುಕನ್ ಅವರ 400ನೇ ಜನ್ಮದಿನೋತ್ಸವ ನಿಮಿತ್ತ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ಲಚಿತ್ ದಿವಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Heart Attack | ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿದ್ದಾಗಲೇ ಮಾಜಿ ಶಾಸಕ ಬಿದರೂರುಗೆ ಹೃದಯಾಘಾತ, ನಿಧನ
ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಗಳ ಸಭೆ ನಡೆಯುತ್ತಿರುವಾಗಲೇ ಗದಗ, ರೋಣ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು (61) ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಂತಾವರಿದ್ದ ಸಭೆಯಲ್ಲಿ ಭಾಗವಹಿಸಿದ್ದಾಗಲೇ ಹೃದಯಾಘಾತವಾಗಿದೆ. ಸ್ಥಳದಲ್ಲೇ ವೈದ್ಯರೊಬ್ಬರು ಸಿಪಿಆರ್ ಮಾಡಿದರಾದರೂ ಪ್ರಯೋಜನವಾಗಿಲ್ಲ. ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಮೃತಪಟ್ಟಿರುವುದಾಗಿ ಘೋಷಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Ola, uber tariff | ಓಲಾ, ಉಬರ್ ಆಟೋ ದರ ಫಿಕ್ಸ್: ಕನಿಷ್ಠ ದರಕ್ಕಿಂತ 5%+GST ಮಾತ್ರ ಹೆಚ್ಚು ಪಡೆಯಲು ಅವಕಾಶ
ರಾಜ್ಯ ಸರಕಾರ ಕೊನೆಗೂ ಓಲಾ ಮತ್ತು ಉಬರ್ ಅಗ್ರಿಗೇಟರ್ ಸಂಸ್ಥೆಗಳಿಗೆ ದರ ನಿಗದಿ ಮಾಡಿದೆ. ಹಾಲಿ ಕನಿಷ್ಠ ದರ + 10% ಪ್ಲಾಟ್‌ಫಾರಂ ಫೀಸ್ + ಜಿಎಸ್‌ಟಿ = ನೂತನ ದರ ಈ ಮಾದರಿಯಲ್ಲಿ ಅಗ್ರಿಗೇಟರ್‌ಗಳು ದರ ವಿಧಿಸಬಹುದು ಎಂದು ಸಾರಿಗೆ ಇಲಾಖೆ ತನ್ನ ದರವನ್ನು ಫೈನಲ್ ಮಾಡಿದೆ. ಅಂದರೆ, ಮೊದಲ ಎರಡು ಕಿ.ಮೀ.ಗೆ ಕನಿಷ್ಠ ದರ 2 ಕಿ.ಮೀ.ಗೆ 30ರಿಂದ 33 ರೂ.ಗೆ ಏರಿಕೆಯಾಗಲಿದೆ. ಈ ದರ ಪಟ್ಟಿಯನ್ನು ಸರಕಾರ ಕೋರ್ಟ್‌ಗೆ ಕಳುಹಿಸಬೇಕಾಗಿದೆ. ಹೈಕೋರ್ಟ್ ಇದನ್ನು ಗಮನಿಸಿ, ಅಗ್ರಿಗೇಟರ್‌ಗಳ ಅಭಿಪ್ರಾಯ ಪಡೆದು ತೀರ್ಮಾನ ಹೇಳಬೇಕಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Brand story | 1969ರಲ್ಲಿ 4 ಲಕ್ಷಕ್ಕೆ ಬಿಸ್ಲೇರಿ ಖರೀದಿಸಿದ್ದ ಥಮ್ಸ್ ಅಪ್ ಥಂಡರ್ ಮ್ಯಾನ್ ರಮೇಶ್ ಚೌಹಾಣ್!
ಬಿಸ್ಲೇರಿ ಮೂಲಕ ಕುಡಿಯುವ ನೀರಿನ ಬಾಟಲಿಗಳ ಮಾರಾಟವನ್ನು ಸಾವಿರಾರು ಕೋಟಿ ರೂ.ಗಳ ಬಿಸಿನೆಸ್ ಆಗಿ ಪರಿವರ್ತಿಸಬಹುದು ಎಂದು ತೋರಿಸಿಕೊಟ್ಟವರೇ ಪಾರ್ಲೆ ಸಮೂಹದ ಉದ್ಯಮಿ ರಮೇಶ್ ಚೌಹಾಣ್! ಬಹುರಾಷ್ಟ್ರೀಯ ಕಂಪನಿಗಳ ಸ್ಪರ್ಧೆಯ ಎದುರು ಸ್ವದೇಶಿ ಬಿಸ್ಲೇರಿಯನ್ನು ಕಟ್ಟಿದ ಸಾಹಸಿ ಇಳಿ ವಯಸ್ಸಿನಲ್ಲಿ ಕಂಪನಿಯನ್ನು ಮಾರಾಟ ಮಾಡುತ್ತಿದ್ದಾರೆ. ( Brand story) ಏಕೆ? ಇಲ್ಲಿದೆ ವಿವರ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Kantara Movie | ವರಾಹ ರೂಪಂ ಕೇಸಿನಲ್ಲಿ ಮೊದಲ ಯಶಸ್ಸು: ಹಾಡು ಬಳಸಲು ಅನುಮತಿ, ಆದರೆ ಷರತ್ತುಗಳು ಅನ್ವಯ!
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರದ (Kantara Movie) ʻವರಾಹಂ ರೂಪಂʼ ಹಾಡಿನ ಕೇಸಿನಲ್ಲಿ ಮೊದಲ ಯಶಸ್ಸು ಕಂಡಿದೆ. ತೈಕುಡಂ ಬ್ರಿಡ್ಜ್ ಮ್ಯೂಸಿಕ್ ತಂಡದ ಅರ್ಜಿಯನ್ನು ಕೇರಳದ ಕೋಳಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯವು ತಿರಸ್ಕರಿಸಿದೆ. ಈ ಹಿಂದಿನಂತೆಯೇ ಕಾಂತಾರ ಸಿನಿಮಾದಲ್ಲಿ ʻವರಾಹಂ ರೂಪಂʼ ಹಾಡನ್ನು ಬಳಕೆ ಮಾಡಬಹುದು ಎಂದು ಅನುಮತಿ ನೀಡಿದೆ. ಆದರೆ, ಮತ್ತೆ ಹಾಡನ್ನು ಹಾಕುವುದಕ್ಕೆ ಬೇರೊಂದು ತಾಂತ್ರಿಕ ತೊಡಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Vaishnavi Gowda | ನಿಶ್ಚಿತಾರ್ಥ ಮುರಿದುಕೊಂಡ ನಟಿ ವೈಷ್ಣವಿ ಗೌಡ : ನಟಿ ಹೇಳಿದ್ದೇನು?
ʻಅಗ್ನಿಸಾಕ್ಷಿʼ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಮತ್ತು ನಟ ವಿದ್ಯಾಭರಣ್ ಇಬ್ಬರ ನಿಶ್ಚಿತಾರ್ಥದ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನಟಿಯೊಬ್ಬರು ವಿದ್ಯಾಭರಣ್ ಮೇಲೆ ಆರೋಪದ ಆಡಿಯೊ ಹರಿಬಿಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ವಿದ್ಯಾಭರಣ್ ಅವರು ವೈಷ್ಣವಿಗೂ ತಮಗೂ ಎಂಗೇಜ್‌ಮೆಂಟ್ ಆಗಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ವೈಷ್ಣವಿ ಗೌಡ ಅವರು ʻತಾವು ಈ ವಿಚಾರವನ್ನು ಇಲ್ಲಿಗೇ ಮುರಿದುಕೊಂಡಿದ್ದೇವೆʼ ಎಂದು ಸೋಷಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Karnataka Election 2023 | ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಿದ್ದರಾಮಯ್ಯ ಆಸೆಗೆ ಡಿಕೆಶಿ ತಣ್ಣೀರು
ಕಳೆದ ವಿಧಾನಸಭೆ ಚುನಾವಣೆಯಂತೆಯೇ ಮುಂಬರುವ ಚುನಾವಣೆಯಲ್ಲೂ (Karnataka Election 2023) ಎರಡು ಕಡೆ ಸ್ಪರ್ಧೆ ಮಾಡುವ ಮಾಜಿ ಸಿಎಂ ಸಿದ್ದರಾಮಯ್ಯ ಕನಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಣ್ಣೀರೆರಚಿದ್ದಾರೆ. ಈ ಬಾರಿ ಯಾರಿಗೇ ಆದರೂ ಒಂದೇ ಕ್ಷೇತ್ರದಲ್ಲಿ ಟಿಕೆಟ್ ಎಂದು ಖಡಕ್ಕಾಗಿ ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- Love Marriage | ಹಂಪಿಯ ಆಟೋ ಚಾಲಕನ ಒಳ್ಳೆಯತನಕ್ಕೆ ಒಲಿದ ವಿದೇಶಿ ಕನ್ಯೆ: ಇಬ್ಬರೂ ನಡೆದರು ಸಪ್ತಪದಿ
- Union Budget 2023 | ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಘೋಷಣೆ ನಿರೀಕ್ಷೆ
- Artemis I Mission | ಚಂದ್ರನ ಅದ್ಭುತ ಫೋಟೋ ಕಳುಹಿಸಿದ ನಾಸಾದ ಆರ್ಟಿಮಿಸ್ I
- ಸುವಿಚಾರ ಅಂಕಣ | ಸಂಗೀತದಿಂದ ಸಂಸ್ಕಾರ
- ಧವಳ ಧಾರಿಣಿ ಅಂಕಣ | ಭೋಗ ಮೀರಿದ ದೊರೆತನದ ಯೋಗ ಕಾಣಿಸಿದವನು