Site icon Vistara News

ವಿಸ್ತಾರ TOP 10 NEWS: ಸಿದ್ದರಾಮಯ್ಯಗೆ ʼಲಿಂಗಾಯತʼ ಸಂಕಷ್ಟದಿಂದ, ರಾಜ್ಯಕ್ಕೆ ಅಮಿತ್‌ ಶಾ ಆಗಮನದವರೆಗಿನ ಪ್ರಮುಖ ಸುದ್ದಿಗಳಿವು

vistara top 10 news siddaramaiah again in lingayat controversy to amit shah tour to karnataka and more news

#image_title

1. Karnataka Election: ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ; ಅದು ಸಾಧ್ಯವಿಲ್ಲ ಗೊತ್ತಾಯ್ತಾ?: ಸಿದ್ದರಾಮಯ್ಯ ಗರಂ
ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಅದು ಸಾಧ್ಯ ಇಲ್ಲ ಗೊತ್ತಾಯ್ತಾ? ನಾನು ಲಿಂಗಾಯತರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದೇನೆ. ಲಿಂಗಾಯತ ಸಮಾಜ, ಧರ್ಮದ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಚುನಾವಣಾ (Karnataka Election) ಪ್ರಚಾರಕ್ಕಾಗಿ ಕೂಡಲಸಂಗಮಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election: ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ; ಅದು ಸಾಧ್ಯವಿಲ್ಲ ಗೊತ್ತಾಯ್ತಾ?: ಸಿದ್ದರಾಮಯ್ಯ ಗರಂ
ಹೆಚ್ಚಿನ ಓದಿಗಾಗಿ: ಕುಲಗಳ ನಡುವೆ ಬಡಿದಾಟ ಉಂಟುಮಾಡುವವರಿಗೆ ದೇವರು ಸದ್ಬುದ್ಧಿ ಕೊಡಲಿ: ಸಿದ್ದರಾಮಯ್ಯರನ್ನು ಟೀಕಿಸಿದ ಸಿಎಂ ಬೊಮ್ಮಾಯಿ

2. Basava Jayanti: ಸಮಾಜದ ಎದುರು ಸತ್ಯ ಹೇಳಲು ಅನೇಕರು ಹೆದರುತ್ತಿದ್ದಾರೆ: ಕೂಡಲಸಂಗಮದಲ್ಲಿ ರಾಹುಲ್‌ ಗಾಂಧಿ ಮಾತು
ತಮ್ಮನ್ನು ತಾವು ಪ್ರಶ್ನೆ ಮಾಡಿಕೊಂಡು ಸತ್ಯವನ್ನು ತಿಳಿದ ನಂತರವೂ ಅನೇಕರು ಭಯದ ಕಾರಣಕ್ಕೆ ಆ ಸತ್ಯವನ್ನು ಸಮಾಜದ ಮುಂದೆ ಹೇಳುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿಳಿಸಿದ್ದಾರೆ. ಕೂಡಲಸಂಗಮದಲ್ಲಿ ಆಯೋಜನೆ ಮಾಡಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Amit Shah: ಇಂದು ರಾಜ್ಯಕ್ಕೆ ಮತ್ತೆ ಅಮಿತ್‌ ಶಾ; ಮೈಸೂರು, ಚಾಮರಾಜನಗರದಲ್ಲಿ ರಣತಂತ್ರ
ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬಿಜೆಪಿ ಭಾರಿ ಪ್ರಚಾರ ತಂತ್ರದಲ್ಲಿ ನಿರತವಾಗಿದೆ. ಈಗಾಗಲೇ ಕೇಂದ್ರ ನಾಯಕರು ಅನೇಕ ಬಾರಿ ರಾಜ್ಯಕ್ಕೆ ಭೇಟಿ ನೀಡಿ ಸಭೆ, ಸಮಾರಂಭಗಳನ್ನು ನಡೆಸಿದ್ದಾರೆ. ಶುಕ್ರವಾರವಷ್ಟೇ (ಏಪ್ರಿಲ್‌ 21) ರಾಜ್ಯಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಭಾನುವಾರ (ಏಪ್ರಿಲ್‌ 23) ಮತ್ತೆ ಆಗಮಿಸುತ್ತಿದ್ದು, ರಾತ್ರಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Election 2023: ಡಿಕೆಶಿ ಭದ್ರಕೋಟೆ ಕನಕಪುರದಲ್ಲಿ ಆರ್‌.ಅಶೋಕ್‌ ಭಾಷಣಕ್ಕೆ ವಿರೋಧ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣ ಕ್ಷೇತ್ರದಲ್ಲಿ ಎರಡು ದಿನಗಳ ಹಿಂದಷ್ಟೇ ಸಂಸದ ಪ್ರತಾಪ್‌ ಸಿಂಹ ಅವರನ್ನು ಸಿದ್ದರಾಮಯ್ಯ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಏಕೆ, ವರುಣದಲ್ಲಿಯೇ ಸಚಿವ ವಿ.ಸೋಮಣ್ಣ ಅವರ ಕಾರಿಗೂ ಜನ ಮುತ್ತಿಗೆ ಹಾಕಿದ್ದರು. ಇದರ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಕ್ಷೇತ್ರವಾದ ಕನಕಪುರದಲ್ಲಿ (Karnataka Election 2023) ಬಿಜೆಪಿ ಅಭ್ಯರ್ಥಿ, ಸಚಿವ ಆರ್‌. ಅಶೋಕ್‌ ಅವರ ಭಾಷಣಕ್ಕೆ ವಿರೋಧ ವ್ಯಕ್ತವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election 2023: ವರುಣದಲ್ಲಿ ಸೋಮಣ್ಣಗೆ ಕಾಂಗ್ರೆಸ್‌ ಕಾರ್ಯಕರ್ತರ ಮುತ್ತಿಗೆ; ಸಿದ್ದರಾಮಯ್ಯ ಪರ ಘೋಷಣೆ

5. Karnataka Election 2023: ಕೇಸರಿ ಧ್ವಜ ಹಿಡಿದು ಬಂದವರಿಗೆ ನಮಸ್ತೆ, ನಾನೂ ಹಿಂದು; ಡಿಕೆಶಿ ಹಿಂದುತ್ವ ಮಂತ್ರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಚುನಾವಣೆ (Karnataka Election 2023) ಪ್ರಚಾರದ ಮಧ್ಯೆಯೇ ಸಾಲು ಸಾಲು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಶನಿವಾರವಷ್ಟೇ ಅವರು ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮಾಡಿದ್ದರು. ವಿಶೇಷ ಪೂಜೆಯನ್ನೂ ಮಾಡಿದ್ದರು. ಭಾನುವಾರ ಶೃಂಗೇರಿಯ ಶಾರದಾ ಪೀಠದಲ್ಲಿ ಚಂಡಿಕಾ ಯಾಗ ಮುಗಿಸಿ ಬೈಂದೂರಿಗೆ ತೆರಳಿದ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿ ಪರ ಪ್ರಚಾರ ಮಾಡುವ ಜತೆಗೆ ಹಿಂದುತ್ವ ಮಂತ್ರ ಪಠಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Amritpal Singh: ಇದು ಅಂತ್ಯವಲ್ಲ ಎನ್ನುತ್ತ ಪೊಲೀಸರ ಎದುರು ಬಂದ ಅಮೃತ್​ಪಾಲ್​ ಸಿಂಗ್​; ಆತ ಶರಣಾಗಿದ್ದು ಯಾರ ಹುಟ್ಟೂರಲ್ಲಿ?
ಖಲಿಸ್ತಾನಿ ನಾಯಕ, ವಾರಿಸ್ ಪಂಜಾಬ್​ ದೆ ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್​ ಸಿಂಗ್ (Amritpal Singh) ಇಂದು ಪಂಜಾಬ್​​ನ ಮೊಗಾ ಜಿಲ್ಲೆಯ ರೊಡೆ ಎಂಬ ಗ್ರಾಮದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್​ಐನ ಕೈಗೊಂಬೆಯಾಗಿದ್ದುಕೊಂಡು, ಭಾರತದಲ್ಲಿ ಅಶಾಂತಿ ಸೃಷ್ಟಿಸುತ್ತ, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಅಮೃತ್​ಪಾಲ್​ ಸಿಂಗ್​​ ಮಾರ್ಚ್​ 18ರಂದು ಒಮ್ಮೆ ಪೊಲೀಸರಿಗೆ ಸಿಕ್ಕೇಬಿಟ್ಟ ಎಂದಾಗಿತ್ತು. ಆದರೆ ಅಂದು ಕ್ಷಣದಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದವನ ಸುಳಿವೇ ಇರಲಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Tumkur Siddaganga Mutt: ತುಮಕೂರಿನ ಸಿದ್ದಗಂಗಾ ಮಠ ಸೇರಿ ಶಾಖಾ ಮಠಗಳ ಉತ್ತರಾಧಿಕಾರಿಗಳಿಗೆ ಪಟ್ಟಾಭಿಷೇಕ
ತುಮಕೂರಿನ ಸಿದ್ದಗಂಗಾ ಮಠ (Tumkur Siddaganga Mutt), ರಾಮನಗರ ಜಿಲ್ಲೆ‌ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠ ಹಾಗೂ ವಿಜಯಪುರ ಬಸವಕಲ್ಯಾಣ ಮಠದ ಉತ್ತರಾಧಿಕಾರಿಗಳನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಅವರಿಗೆ ಭಾನುವಾರ (ಏಪ್ರಿಲ್‌ 23) ನಿರಾಭಾರಿ ನಿರಂಜನ ಜಂಗಮಪಟ್ಟಾಧಿಕಾರ ಮಹೋತ್ಸವವನ್ನು ಇಲ್ಲಿನ ಸಿದ್ದಗಂಗಾ ಮಠದಲ್ಲಿ ನೆರವೇರಿಸಿ, ಪಟ್ಟಾಭಿಷೇಕ ನೆರವೇರಿಸಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Weather Report: ಕರಾವಳಿಯಲ್ಲಿ ತಗ್ಗಿದ ಮಳೆ ಅಬ್ಬರ; ಬೆಂಗಳೂರು, ಮೈಸೂರು ಗುಡುಗು ಸಹಿತ ಮಳೆ ಸಾಧ್ಯತೆ
ರಾಜ್ಯದ ಹಲವೆಡೆ ಮಳೆ ಅಬ್ಬರ (Weather Report) ಮುಂದುವರಿದಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು ಸೇರಿ ಕೋಲಾರ, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. IPL 2023: ಪಂದ್ಯ ಸೋತರು ನೂತನ ದಾಖಲೆ ಬರೆದ ರೋಹಿತ್​ ಶರ್ಮ
5 ಬಾರಿಯ ಐಪಿಎಲ್​ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತಂಡ ಶನಿವಾರ ನಡೆದ ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ 13 ರನ್​ಗಳ ಸೋಲಿಗೆ ತುತ್ತಾಗಿದೆ. ಆದರೆ ಈ ಪಂದ್ಯ ಸೋತರೂ ಮುಂಬೈ ನಾಯಕ ರೋಹಿತ್​ ಶರ್ಮಾ ಅವರು ಐಪಿಎಲ್​ನಲ್ಲಿ ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Water Metro: ಏ.25ಕ್ಕೆ ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋ ಲಾಂಚ್, ಫೋಟೊಗಳು ಇಲ್ಲಿವೆ
ದೇಶದ ಮೊದಲ ವಾಟರ್ ಮೆಟ್ರೋಗೆ (Water Metro) ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 25ರಂದು ಚಾಲನೆ ನೀಡಲಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಾಟರ್ ಮೆಟ್ರೋಗೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಟ್ವಿಟರ್‌ನಲ್ಲಿ ಸಖತ್ ವೈರಲ್ ಆಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version