1. Karnataka Cabinet expansion : 24 ನೂತನ ಸಚಿವರ ಸೇರ್ಪಡೆ: ಭರ್ತಿ ಸಂಪುಟದೊಂದಿಗೆ ಅಗ್ನಿ ಪರೀಕ್ಷೆಗಿಳಿದ ಸಿದ್ದರಾಮಯ್ಯ!
ಸರಳ ಬಹುಮತದೊಂದಿಗೆ ಗದ್ದುಗೆ ಏರಿರುವ, ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ, ಪೂರ್ಣ ಸಂಪುಟವನ್ನು ಭರ್ತಿ ಮಾಡುವ ಮೂಲಕ ಹೊಸ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಇದೀಗ 24 ಸಚಿವರ ಪ್ರಮಾಣದೊಂದಿಗೆ 34 ಸ್ಥಾನ ಭರ್ತಿಯಾಗಿದೆ. 2003ರಲ್ಲಿ ನಡೆದ ಸಂವಿಧಾನ ತಿದ್ದುಪಡಿ ನಂತರದಲ್ಲಿ ಕರ್ನಾಟಕಕ್ಕೆ 34 ಸಚಿವರನ್ನಷ್ಟೆ ನೇಮಿಸುವ ಅಧಿಕಾರವಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜತೆಗೆ 8 ಸಚಿವರು ಈ ಮೊದಲು ಪ್ರಮಾಣವಚನ ಸ್ವೀಕರಿಸಿದ್ದರು. ಹೊಸ ಸಚಿವರ ಸೇರ್ಪಡೆ ಬೆನ್ನಲ್ಲೇ, ಸ್ಥಾನ ಸಿಗದವರ ಅಸಮಾಧಾನ ಹೊಗೆಯಾಡಲು ಆರಂಭಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Karnataka Cabinet: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್ ಪ್ರಹಾರ
2. Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ
ಸಂಪುಟ ರಚನೆ ವೇಳೆಯಲ್ಲಿ ತಮ್ಮ ಆಪ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವಲ್ಲಿ ಹಾಗೂ ಸ್ವತಃ ಸಿಎಂ ಸ್ಥಾನ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಇದೀಗ ಖಾತೆ ಹಂಚಿಕೆ ವೇಳೆಗೆ ತಮ್ಮ ಕೈ ಮೇಲಾಗಿಸಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Karnataka Cabinet expansion: ಮೊದಲ, 2ನೇ ಬಾರಿಗೇ ಸಚಿವಗಿರಿ ಪಡೆದ ಬೆಳಗಾವಿ ಶಾಸಕಿಯರಿವರು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬೆಳಗಾವಿಯಿಂದ ಮಹಿಳಾ ಕೋಟಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವರಾಗಿದ್ದಾರೆ. ಇವರು ಎರಡನೇ ಬಾರಿಗೆ ಆಯ್ಕೆಯಾದರೂ ಮಂತ್ರಿಗಿರಿಯ ಅದೃಷ್ಟ ಒಲಿದಿದೆ. ಇದೇ ರೀತಿ ಈ ಹಿಂದೆ ಇನ್ನೂ ಇಬ್ಬರು ಶಾಸಕಿಯರಿಗೆ ಮೊದಲ ಇಲ್ಲವೇ ಎರಡನೇ ಬಾರಿಗೆ ಮಂತ್ರಿ ಪಟ್ಟ ಸಿಕ್ಕಿದೆ. ಅವರ ಬಗ್ಗೆ ವಿವರವನ್ನು ನೋಡೋಣ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ (Karnataka Cabinet expansion) ಆಗಿದ್ದು, ಶನಿವಾರ (ಮೇ 27) 24 ಮಂದಿ ಸೇರ್ಪಡೆಯಾಗುವ ಮೂಲಕ ಎಲ್ಲ 34 ಸ್ಥಾನಗಳೂ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದ ಹಿರಿಯ ನಾಯಕರು ಸೇರಿದಂತೆ ಹಲವು ಕಾರಣಗಳಿಂದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜಭವನದ ಮುಂದೆ ಹಲವು ರಾಜಕೀಯ ನಾಯಕರ ಬೆಂಬಲಿಗರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಎಂ ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯಕ್ಕಂತೂ ಯಾರಿಗೂ ಸ್ಥಾನ ಸಿಗುವುದಿಲ್ಲ ಎಂಬುದು ಪಕ್ಕಾ ಆಗಿದ್ದು, ಇವರನ್ನು ಸಮಾಧಾನ ಪಡಿಸುವ ಪ್ರಯತ್ನಗಳೂ ಕಾಣುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಹಳೇ ಬೇರು, ಹೊಸ ಚಿಗುರು: ಮೊದಲಿನ ಸಂಸತ್, ನೂತನ ಸಂಸತ್ ಭವನದ ನಡುವಿನ ವ್ಯತ್ಯಾಸ ಹೀಗಿದೆ ನೋಡಿ
ನೂತನ ಹಾಗೂ ಭವ್ಯ ಸಂಸತ್ ಭವನದ ಉದ್ಘಾಟನೆಗೆ ಕ್ಷಣಗಣನೆ (May 28) ಆರಂಭವಾಗಿದೆ. ಪ್ರತಿಪಕ್ಷಗಳ ಬಹಿಷ್ಕಾರದ ಮಧ್ಯೆಯೂ ಅದ್ಧೂರಿಯಾಗಿ ನೂತನ ಸಂಸತ್ ಭವನದ ಉದ್ಘಾಟನೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದರ ಮಧ್ಯೆಯೇ, ಹಳೆಯ ಹಾಗೂ ನೂತನ ಸಂಸತ್ ಭವನದ ನಡುವಿನ ವ್ಯತ್ಯಾಸ, ತಂತ್ರಜ್ಞಾನದ ಅಳವಡಿಕೆ, ವಿನ್ಯಾಸ ಸೇರಿ ಹಲವು ದಿಸೆಯಲ್ಲಿ ಹೋಲಿಕೆ ಮಾಡಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಮೊದಲಿನ ಹಾಗೂ ನೂತನ ಸಂಸತ್ ಭವನಗಳ ನಡುವಿನ ವ್ಯತ್ಯಾಸವನ್ನು ಚಿತ್ರಗಳಲ್ಲಿ ನೋಡಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Praveen Nettaru: ಹೊಸ ಸರ್ಕಾರ ಅಸ್ತಿತ್ವದ ಬೆನ್ನಲ್ಲೇ ಪ್ರವೀಣ್ ನೆಟ್ಟಾರ್ ಪತ್ನಿ ಕೆಲಸಕ್ಕೆ ಕೊಕ್
ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಪ್ರವೀಣ್ ನೆಟ್ಟಾರ್ (Praveen Nettaru) ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವ ಮೋರ್ಚಾ (BJP Yuva Morcha) ಪದಾಧಿಕಾರಿ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಬಿಜೆಪಿ ಸರ್ಕಾರವು ಮಾನವೀಯತೆ ಆಧಾರದ ಮೇಲೆ ಉದ್ಯೋಗ ನೀಡಿ ಆದೇಶ ಹೊರಡಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. NITI Aayog Meeting: ನೀತಿ ಆಯೋಗದ ಸಭೆಗೆ ಸಿದ್ದು ಸೇರಿ 10 ಸಿಎಂಗಳು ಗೈರು; ರಾಜ್ಯಗಳಿಗೆ ನಷ್ಟವೇನು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಎಂಟನೇ ಗವರ್ನಿಂಗ್ ಸಮಿತಿ ಸಭೆ (Governing Council Meeting) ನಡೆದಿದ್ದು, ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧದ ಆಕ್ರೋಶ, ಮುನಿಸಿನಿಂದಾಗಿ 10 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದಾರೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದಿರುವ ಸಭೆಗೆ ಸಿಎಂಗಳು ಗೈರಾಗಿರುವುದು ಆಯಾ ರಾಜ್ಯಗಳಿಗೇ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. IPL 2023 : ಫೈನಲ್ ಪಂದ್ಯದಲ್ಲಿ ಸೃಷ್ಟಿಯಾಗಲಿರುವ ಕೆಲವು ದಾಖಲೆಗಳ ವಿವರ ಹೀಗಿದೆ ನೋಡಿ
70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಮುಖಾಮುಖಿಗಳ ನಂತರ ಎಲ್ಲರ ಗಮನ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2023) ಮೆಗಾ ಫೈನಲ್ ಕಡೆಗೆ ನೆಟ್ಟಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾನುವಾರ (ಮೇ 28ರಂದು) ಫೈನಲ್ ಹಣಾಹಣಿ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯದ ವೇಳೆ ಕೆಲವು ಆಟಗಾರರ ವೈಯಕ್ತಿಕ ದಾಖಲೆಗಳನ್ನು ಹಾಗೂ ಮೈಲುಗಲ್ಲುಗಳನ್ನು ಸೃಷ್ಟಿಸಲಿದ್ದಾರೆ. ಅವುಗಳು ಇಂತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Weather Report: ಈ ವಾರ ಕರಾವಳಿಯಲ್ಲಿ ಮಳೆ ಅಬ್ಬರ; ಉಳಿದೆಡೆ ಬಿಸಿಲಿಗೆ ಜನ ತತ್ತರ
ರಾಜ್ಯಾದ್ಯಂತ ಮಳೆ ತೀವ್ರತೆ ಕಡಿಮೆ ಆಗಿದ್ದು, ಇನ್ನೊಂದು ವಾರ ತಾಪಮಾನದಲ್ಲಿ (Heat wave) ಏರಿಳಿತ ಆಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆಯಾದರೂ ಹಲವು ಕಡೆ ಬಿಸಿಲು ಝಳಪಿಸಲಿದ್ದು, ನಾಗರಿಕರು ಮತ್ತಷ್ಟು ಹೈರಾಣಾಗಬಹುದು ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. 96 ಸಾವಿರ ರೂ.ಮೌಲ್ಯದ ಮೊಬೈಲ್ಗಾಗಿ 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಸರ್ಕಾರಿ ಅಧಿಕಾರಿ
ಈಗಿನ ಕಾಲದಲ್ಲಿ ಮನುಷ್ಯನಿಗೆ ಮೊಬೈಲ್ನಷ್ಟು ‘ಅಮೂಲ್ಯ’ ವಸ್ತು ಇನ್ನೊಂದು ಇರಲಿಕ್ಕೆ ಇಲ್ಲ ಬಿಡಿ !. ಏನಿರತ್ತದೆಯೋ ಬಿಡುತ್ತದೆಯೋ ಕೈಯಲ್ಲಿ ಮೊಬೈಲ್ ಅಂತೂ ಇರಲೇಬೇಕು. ಅದು ಕಳೆದು ಹೋದರೆ, ಕೆಟ್ಟು ಹೋದರೆ ಆಗುವ ಚಡಪಡಿಕೆ ಅಷ್ಟಿಷ್ಟಲ್ಲ. ಒಟ್ನಲ್ಲಿ ಮೊಬೈಲ್ ಅನ್ನೋದು ಜೀವನದ ಬೇಸಿಕ್ ಅವಶ್ಯಕತೆ ಎಂಬಂತಾಗಿದೆ. ಅಂಥ ಅಮೂಲ್ಯವಾದ ಮೊಬೈಲ್ನ್ನು ಕಳೆದುಕೊಂಡ ಛತ್ತೀಸ್ಗಢ ಸರ್ಕಾರಿ ಆಸ್ಪತ್ರೆ ಅಧಿಕಾರಿಯೊಬ್ಬ, ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿ (Drains 21 Lakh Litres Water), ಈಗ ಅಮಾನತುಗೊಂಡಿದ್ದಾರೆ ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.