1. Karnataka Elections : ಕೋಲಾರ ಸೇಫಲ್ಲ ಎಂದ ರಾಹುಲ್; ಗೆಲ್ಲಿಸ್ತೀವಿ ಎಂದ ಕೈ ನಾಯಕರು, ಸೋಮವಾರ ಫೈನಲ್ ಎಂದ ಸಿದ್ದು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲು ಬಯಸಿರುವ (Karnataka Elections) ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತಲುಪಿದೆ. ಇದೇ ಕಾರಣಕ್ಕಾಗಿ ಅವರು ಕೋಲಾರದಿಂದ ವರುಣಾಗೆ ಶಿಫ್ಟ್ ಆಗಿ ಎಂಬ ಸಲಹೆ ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Siddaramaiah: ಕೋಲಾರದಿಂದ ಸ್ಪರ್ಧಿಸದಂತೆ ಹೈಕಮಾಂಡ್ ಹೇಳಿದೆ ಎಂದ ಡಾ. ಯತೀಂದ್ರ: ಆದರೆ ಸುರ್ಜೆವಾಲ ಹೇಳಿದ್ದೇ ಬೇರೆ
2. Tipu Sultan: ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್?: ಅಂತರ ಕಾಯ್ದುಕೊಂಡ ಕಟೀಲ್; ಚರ್ಚಿಸಲು ಮುನಿರತ್ನಗೆ ಚುಂಚಶ್ರೀ ಆಹ್ವಾನ
ಟಿಪ್ಪು ಸುಲ್ತಾನನನ್ನು ಹತ್ಯೆ ಮಾಡಿದವರು ಎಂದು ಬಿಜೆಪಿ ಹೇಳುತ್ತಿರುವ ಉರಿಗೌಡ ಹಾಗೂ ನಂಜೇಗೌಡ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕ ಹಾಗೂ ಬಿಜೆಪಿ ಶಾಸಕ ಮುನಿರತ್ನ ಪ್ರಯತ್ನಕ್ಕೆ ಹಿನ್ನಡೆ ಆಗುವ ಸಾಧ್ಯತೆಯಿದೆ. ಸಿನಿಮಾ ನಿರ್ಮಾಣ ಮಾಡುವ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅಂತರ ಕಾಯ್ದುಕೊಂಡಿದ್ದರೆ ಇತ್ತ ಸಿನಿಮಾ ಕುರಿತು ಚರ್ಚೆ ನಡೆಸಲು ಆಗಮಿಸುವಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಹ್ವಾನ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Narendra Modi: ಒಂದು ದಿನದಲ್ಲಿ ಮೂರು ಜಿಲ್ಲೆಗಳ ಪ್ರವಾಸ; ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ
ಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜ್ಯದ ಮೂರು ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಚಾರದ ಅಂಗವಾಗಿ ದಾವಣಗೆರೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Bengaluru Auto Bandh: ಬೈಕ್ ಟ್ಯಾಕ್ಸಿಗೆ ವಿರೋಧ; ಇಂದು ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ
ಅನಧಿಕೃತ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿಯಿಂದಾಗಿ ಆಟೋರಿಕ್ಷಾ ಚಾಲಕರ ದುಡಿಮೆಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರು ಆಟೋ ಚಾಲಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಮಾ.20ರಂದು ಇಡೀ ದಿನ ಬೆಂಗಳೂರಲ್ಲಿ ಆಟೋ ಸೇವೆಯನ್ನು (Bengaluru Auto Bandh) ಬಂದ್ ಮಾಡಿ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಇಡೀ ದಿನ ನಗರದಲ್ಲಿ ಆಟೋ ಸೇವೆ ಇರುವುದಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Rahul Gandhi: ರಾಹುಲ್ ನಿವಾಸದಲ್ಲಿ ಹೈಡ್ರಾಮಾ, ಪೊಲೀಸರಿಗೆ ಮಾಹಿತಿ ನೀಡಲು ಸಮಯ ಕೇಳಿದ ರಾಗಾ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಿವಾಸದಲ್ಲಿ ಹೈಡ್ರಾಮಾ ನಡೆದಿದೆ. ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ, ಅತ್ಯಾಚಾರಕ್ಕೀಡಾದ ಮಹಿಳೆಯರ ಜತೆ ನಾನು ಮಾತನಾಡಿದೆ ಎಂಬುದಾಗಿ ರಾಹುಲ್ ಗಾಂಧಿ ಅವರು ಶ್ರೀನಗರದಲ್ಲಿ ಮಾಡಿದ ಭಾಷಣದ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಪೊಲೀಸರು ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆದರೆ, ಇದೇ ವೇಳೆ, ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದು ಹೈಡ್ರಾಮಾಕ್ಕೆ ಕಾರಣವಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Amritpal Singh: ಪಂಜಾಬ್ ಪೊಲೀಸರೇ ಸುಳ್ಳು ಹೇಳ್ತಿದ್ದಾರೆ, ಅಮೃತ್ಪಾಲ್ ಸಿಂಗ್ ಬಂಧನವಾಗಿದೆ ಎಂದ ಸಹಚರ
ಖಲಿಸ್ತಾನಿ ಯುವ ನಾಯಕ, ವಾರಿಸ್ ಪಂಜಾಬ್ ದೆ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ (Amritpal Singh) ಬಂಧನವಾಗಿದ್ದಾನಾ? ಅಥವಾ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನಾ? ನಿನ್ನೆಯಿಂದಲೂ ಈ ವಿಷಯದಲ್ಲಿ ಗೊಂದಲ ಏರ್ಪಟ್ಟಿದೆ. ಮಾ.18ರ ಮಧ್ಯಾಹ್ನದ ಹೊತ್ತಿಗೆ ಅಮೃತ್ಪಾಲ್ ಸಿಂಗ್, ಪಂಜಾಬ್ನ ನಕೋಡರ್ ಬಳಿ ಅರೆಸ್ಟ್ ಆಗಿದ್ದಾನೆ ಎಂಬ ಸುದ್ದಿಬಂತು. ಆದರೆ ಕೆಲವೇ ಹೊತ್ತಲ್ಲಿ, ಆತನ ಬಂಧನವಾಗಿಲ್ಲ. ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅವನ ಸಹಚರರನ್ನು ಮಾತ್ರ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರೇ ಪ್ರಕಟಣೆ ಹೊರಡಿಸಿದ್ದರು. ಆದರೆ ಈಗ ಮತ್ತೊಂದು ವರದಿ ಬಂದಿದೆ. ಅಮೃತ್ಪಾಲ್ ಸಿಂಗ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವನು ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ನೀಡಿದ ಹೇಳಿಕೆಯೇ ಸುಳ್ಳೆಂದು ಅಮೃತ್ಪಾಲ್ ಸಿಂಗ್ನ ಸಹಚರನೊಬ್ಬ ಹೇಳಿದ್ದಾಗಿ ಮಾಹಿತಿ ಲಭ್ಯವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. CBSE Warning: ಏಪ್ರಿಲ್ 1ಕ್ಕೂ ಮೊದಲು ಶಾಲೆಗಳ ಆರಂಭ ಬೇಡ, ಸಿಬಿಎಸ್‌ಇ ಖಡಕ್ ಎಚ್ಚರಿಕೆ
ಸಿಬಿಎಸ್‌ಇ ಶಾಲೆಗಳಿಗೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE)ಯು (CBSE Warning) ಮಹತ್ವದ ಎಚ್ಚರಿಕೆ ನೀಡಿದೆ. “ಯಾವುದೇ ಕಾರಣಕ್ಕೂ ಏಪ್ರಿಲ್ 1ಕ್ಕೂ ಮೊದಲು ಶೈಕ್ಷಣಿಕ ವರ್ಷವನ್ನು ಆರಂಭಿಸಬಾರದು. ತರಗತಿಗಳನ್ನು ಆರಂಭಿಸಬಾರದು” ಎಂದು ಶಾಲೆಗಳಿಗೆ ಸಿಬಿಎಸ್‌ಇ ಸೂಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Swami Koragajja Temple: ಹಿಂದು ವಿರೋಧಿ ಕೃತ್ಯ ದೂರಾಗಲು ಕೊರಗಜ್ಜನ ಆದಿಕ್ಷೇತ್ರಕ್ಕೆ ವಿಹಿಂಪ ಪಾದಯಾತ್ರೆ
ಹಿಂದು ವಿರೋಧಿ ಕೃತ್ಯಗಳು ಮಾಯವಾಗಿ ಸಮಾಜದಲ್ಲಿ ಐಕ್ಯತೆ ಮೂಡಬೇಕು ಎಂಬ ಕಾರಣಕ್ಕಾಗಿ ವಿಶ್ವ ಹಿಂದು ಪರಿಷತ್ ವತಿಯಿಂದ ವಿವಿಧ ಹಿಂದು ಕಾರ್ಯಕರ್ತರು ಜತೆಗೂಡಿ ಕೊರಗಜ್ಜನ ಆದಿಕ್ಷೇತ್ರಕ್ಕೆ (Swami Koragajja Temple) ಪಾದಯಾತ್ರೆ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. INDvsAUS : ಆಸ್ಟ್ರೇಲಿಯಾ ವಿರುದ್ಧದ 2ನೇ ಏಕ ದಿನ ಪಂದ್ಯದಲ್ಲಿ ಭಾರತ ತಂಡಕ್ಕೆ 10 ವಿಕೆಟ್ ಹೀನಾಯ ಸೋಲು
ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಕಂಡ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ 10 ವಿಕೆಟ್ ಹೀನಾಯ ಸೋಲಿಗೆ ಒಳಗಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇತ್ತಂಡಗಳು 1-1 ಸಮಬಲದ ಸಾಧನೆ ಮಾಡಿವೆ. ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ಗಳಾದ ಮಿಚೆಲ್ ಮಾರ್ಷ್ (ಅಜೇಯ 66) ಹಾಗೂ ಟ್ರಾವಿಡ್ ಹೆಡ್ (ಅಜೇಯ 51) ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 72 ಎಸೆತಗಳಲ್ಲಿ ಭಾರತ ತಂಡ ನೀಡಿದ್ದ 118 ರನ್ಗಳ ಗುರಿ ಬೆನ್ನಟ್ಟಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Viral Video: ತನ್ನ ಮರಿಯನ್ನು ಹಿಡಿದ ಹಾವಿನೊಂದಿಗೆ ಸೆಣೆಸಾಟಕ್ಕೆ ನಿಂತ ಹಲ್ಲಿ; ಕಚ್ಚಿದರೂ, ಕುಕ್ಕಿದರೂ ಫಲಿಸಲಿಲ್ಲ ಯತ್ನ
ಹಾವೊಂದು ಹಲ್ಲಿ ಮರಿಯನ್ನು ಬೇಟೆಯಾಡಿದ ಮತ್ತು ಅದನ್ನು ಕಾಪಾಡಲು ತಾಯಿ ಹಲ್ಲಿ ಪ್ರಯತ್ನಿಸಿದ ವಿಡಿಯೊ ವೈರಲ್ ಆಗುತ್ತಿದೆ. ಸರೀಸೃಪವಾದ ಹಾವು, ಮತ್ತೊಂದು ಪ್ರಬೇಧದ ಸರೀಸೃಪ ಹಲ್ಲಿ ಮರಿಯನ್ನು ತಿನ್ನಲೆಂದು ಹಿಡಿದುಕೊಂಡಿದೆ. ಅದನ್ನು ಗಟ್ಟಿಯಾಗಿ ಸುತ್ತಿಕೊಂಡಿದೆ. ಅಲ್ಲೇ ಗೋಡೆ ಮೇಲಿದ್ದ ದೊಡ್ಡದಾದ ಹಲ್ಲಿ ಆ ಹಾವಿನ ಹಿಡಿತದಿಂದ ತನ್ನ ಮರಿಯನ್ನು ಬಿಡಿಸಿಕೊಳ್ಳಲು ಪ್ರಯತ್ನ ಮಾಡುವುದನ್ನು ನೋಡಬಹುದು. ಅದು ಹಾವಿನ ತಲೆಗೆ ಕಚ್ಚುತ್ತದೆ. ಕುಕ್ಕುತ್ತದೆ. ಆದರೆ ಅದರ ಪ್ರಯತ್ನ ವಿಫಲವಾಗುತ್ತದೆ. ಮರಿಯನ್ನು ಹಾವು ಬಿಡುವುದಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.