Site icon Vistara News

ವಿಸ್ತಾರ TOP 10 NEWS | ಮಾಂಸಾಹಾರ ವಿವಾದದಿಂದ ಮನೋರಂಜನ್‌ ವಿವಾಹದವರೆಗಿನ ಪ್ರಮುಖ ಸುದ್ದಿಗಳಿವು

vistara top 10, Amit Shah, jr ntr, latest, manoranjan marriage, mogasale column, non veg food, ravichandran son marriage, RSS Isue, savarkar issue, shankar singh waghela, Siddaramaiah, siddaramayya, waghela

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ವಿವಾದಕ್ಕೀಡಾಗಿದ್ದ ಮಾಂಸಾಹಾರ ವಿಚಾರ ಮತ್ತೆ ಭುಗಿಲೆದ್ದಿದೆ. ಅದೂ ಸಹ ಸಿದ್ದರಾಮಯ್ಯ ಅವರನ್ನೇ ಈ ಬಾರಿಯೂ ಈ ವಿವಾದ ಸುತ್ತಿಕೊಂಡಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್‌ ಹೈಕಮಾಂಡ್‌ ಕಂಗೆಟ್ಟಿದೆ. ತನ್ನ ತೆಕ್ಕೆಗೆ ಬರಬಹುದಾದ ಕರ್ನಾಟಕವನ್ನು ಇಂಥ ವಿವಾದಗಳಿಗೆ ತುತ್ತಾಗಿ ಕಳೆದುಕೊಳ್ಳಬಾರದು ಎಂಬ ಚಿಂತನೆ ನಡೆಸಿದೆ. ಶತಮಾನೋತ್ಸವಕ್ಕೂ ಮುನ್ನ ತನ್ನ ಶಕ್ತಿಯನ್ನು ದ್ವಿಗುಣಗೊಳಿಸಿಕೊಳ್ಳಲು ಆರ್‌ಎಸ್‌ಎಸ್‌ ಮುಂದಾಗಿದೆ. ರಾಜಕೀಯ ವಿಶ್ಲೇಷಣೆಯ ಹೊಸ ಅಂಕಣ ‘ಮೊಗಸಾಲೆʼ ಆರಂಭವಾಗಿದೆ. ನಟ ರವಿಚಂದ್ರನ್‌ ಪುತ್ರನ ವಿವಾಹ ಹಾಗೂ ದಿನದ ಇನ್ನಿತರ ಪ್ರಮುಖ ಸುದ್ದಿಗಳು ಇಲ್ಲಿವೆ.

1. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು?: ಸಮರ್ಥಿಸಿಕೊಂಡ ಸಿದ್ದರಾಮಯ್ಯ
ಮಾಂಸಾಹಾರ ಸೇವಿಸಿ ಕೊಡಗಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು ಎಂದಿದ್ದಾರೆ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬೇಡ ಅಂತ ಕೇಳುವುದಕ್ಕೆ ನೀನು ಯಾರು? ನಾನು ತಿನ್ನುವುದು ಮಾಂಸಾಹಾರ. ನಿನ್ನ ಹ್ಯಾಬಿಟ್‌ ನಿನಗೆ, ನನ್ನ ಹ್ಯಾಬಿಟ್‌ ನನಗೆ. ಅದನ್ನು ಕೇಳುವುದಕ್ಕೆ ನೀನು ಯಾರು? ಎಂದು ಸಿದ್ದರಾಮಯ್ಯ ಅವರು ತಮಗೆ ಪ್ರಶ್ನೆ ಕೇಳಿದ ವರದಿಗಾರನಿಗೆ ಪ್ರತಿಪ್ರಶ್ನೆ ಹಾಕಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಕೊಡಗಿನಲ್ಲಿ ಸಿದ್ದರಾಮಯ್ಯ ಅವರಿಗೆ ಆತಿಥ್ಯ ನೀಡಿದ್ದ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರು, ಅಂದು ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿಯೇ ಇರಲಿಲ್ಲ ಎಂದಿದ್ದಾರೆ. ಈ ನಡುವೆ, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ದಾಳಿ ವಿರೋಧಿಸಿ ಕೊಡಗು ಪಾದಯಾತ್ರೆ ನಡೆಸಲು ಕಾಂಗ್ರೆಸ್‌ ಮುಂದಾಗಿದೆ. ಬಿಜೆಪಿ ಕೂಡ ಆ ಜಿಲ್ಲೆಯಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದೆ. ಹಾಗಾಗಿ ಕೊಡಗಿನಲ್ಲಿ ರಾಜಕೀಯ ಬಿಸಿ ಏರುವಂತಾಗಿದೆ.

2. ಸಿದ್ದರಾಮಯ್ಯ ನಡೆಯಿಂದ ಲಿಂಗಾಯತ ಕೋಟೆಯಲ್ಲಿ ಕಂಪನ: ಡ್ಯಾಮೇಜ್‌ ಕಂಟ್ರೋಲ್‌ನತ್ತ ಕಾಂಗ್ರೆಸ್‌
ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ನಾಯಕರಾದರೂ ಅವರ ನಡೆ ಕಾಂಗ್ರೆಸ್‌ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗುತ್ತಿದೆ. ಒಟ್ಟಾರೆಯಾಗಿ ಹಿಂದು ಮತದಾರರಲ್ಲಿ ಹಾಗೂ ನಿರ್ದಿಷ್ಟವಾಗಿ ವೀರಶೈವ ಲಿಂಗಾಯತ ಮತದಾರರಲ್ಲಿ ಕಾಂಗ್ರೆಸ್‌ ಪಕ್ಷದ ಕುರಿತು ಮೂಡುತ್ತಿರುವ ನಕಾರಾತ್ಮಕತೆಗೆ ಅನ್ಯ ಮಾರ್ಗದಿಂದ ಪರಿಹಾರ ಕಂಡುಕೊಳ್ಳಲು ಹೈಕಮಾಂಡ್‌ ಮುಂದಾಗಿದೆ. ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮತ್ತೊಂದೆಡೆ ನೇರವಾಗಿ ಕಾಂಗ್ರೆಸ್‌ ಹೈಕಮಾಂಡ್‌ ನೇರವಾಗಿ ಕಾರ್ಯಾಚರಣೆಗೆ ಇಳಿದಿದೆ. ಸಂಪೂರ್ಣ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. RSS | ಶತಮಾನೋತ್ಸವಕ್ಕೆ ಮುನ್ನ ಸ್ವಯಂಸೇವಕರ ಸಂಖ್ಯೆ ಇಮ್ಮಡಿಗೊಳಿಸಲು ಆರೆಸ್ಸೆಸ್‌ ಸಜ್ಜು
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) 2025ರಲ್ಲಿ ತನ್ನ ಶತಮಾನೋತ್ಸವ ಆಚರಣೆಗೆ ಮುನ್ನ ತನ್ನ ಸ್ವಯಂಸೇವಕರ ಜಾಲವನ್ನು ಇಮ್ಮಡಿಗೊಳಿಸಲು ಉದ್ದೇಶಿಸಿದೆ ಎಂದು ವರದಿಯಾಗಿದೆ.
ಆರೆಸ್ಸೆಸ್‌ ದೇಶದ ಉದ್ದಗಲಕ್ಕೂ, ಪ್ರತಿಯೊಂದು ಜಿಲ್ಲೆಯಲ್ಲಿಯೂ ತನ್ನ ಸ್ವಯಂಸೇವಕರ ನೆಲೆಯನ್ನು ವಿಸ್ತರಿಸಲು ಉದ್ದೇಶಿಸಿದೆ. ಆರೆಸ್ಸೆಸ್‌ನಲ್ಲಿ ಸುಮಾರು ೩,೦೦೦ ಮಂದಿ ಪೂರ್ಣಕಾಲಿಕ ಪ್ರಚಾರಕರು ಇದ್ದು, ಸಂಘದ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮಾಜಿಕ ಸೇವೆ, ಶಿಕ್ಷಣ, ಸಂಘಟನೆ, ಗುಡ್ಡಗಾಡು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಶತಮಾನೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರೆಕಾಲಿಕ ಪ್ರಚಾರಕರು ಅಥವಾ ವಿಸ್ತಾರಕರ ಸಂಖ್ಯೆಯನ್ನು ಇಮ್ಮಡಿಗೊಳಿಸಲು ಸಂಕಲ್ಪಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. Savarkar Photo | ಸಾವರ್ಕರ್‌ ಗಣೇಶೋತ್ಸವ: ರಾಜ್ಯದೆಲ್ಲೆಡೆ ಹಬ್ಬುತ್ತಿದೆ ಕಾವು
ಸ್ವಾತಂತ್ರ್ಯ ಅಮೃತ ಮಹೋತ್ಸವ ವೇಳೆ ಸಾವರ್ಕರ್‌ ಫ್ಲೆಕ್ಸ್‌ ವಿಚಾರಕ್ಕೆ ಶಿವಮೊಗ್ಗದಲ್ಲಿ (Savarkar photo) ಹೊತ್ತಿಕೊಂಡ ಕಿಡಿ ಈಗ ಇತರೆ ಜಿಲ್ಲೆಗಳಿಗೂ ವ್ಯಾಪಿಸಿದೆ. ಸ್ವಾತಂತ್ರ್ಯವೀರ ಸಾವರ್ಕರ್‌ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಟಾಪಟಿ ನಡೆಯುತ್ತಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಕ್ಕರ್‌ ಕೊಡಲು ಶ್ರೀರಾಮಸೇನೆ ಸೇರಿ ವಿವಿಧ ಹಿಂದು ಸಂಘಟನೆಗಳು ತಯಾರಿ ನಡೆಸಿವೆ. ವಿಜಯಪುರದಲ್ಲಿ ಶ್ರೀರಾಮ ಸೇನೆ, ಬೆಳಗಾವಿಯಲ್ಲಿ ಶಾಸಕರ ಬೆಂಬಲದೊಂದಿಗೆ, ರಾಜ್ಯದ ವಿವಿಧೆಡೆ ಯುವ ಬ್ರಿಗೇಡ್‌ ಕಾರ್ಯಾಗಾರಗಳ ಮೂಲಕ ಕಾವು ಹೆಚ್ಚಾಗುತ್ತಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಸಾವರ್ಕರ್‌ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ಮುಂದುವರಿಸಿದೆ. ಬಿಡುಗಡೆಗಾಗಿ ಸಾವರ್ಕರ್‌ ಭಿಕ್ಷೆ ಬೇಡಿದ್ದರು ಎಂದು ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಆರೋಪಿಸಿದ್ದಾರೆ.

5. (ಹೊಸ ಅಂಕಣ) ಮೊಗಸಾಲೆ | ರಾಜಕಾರಣದ ತೆವಲಿಗೆ ತೆರಿಗೆ ಹಣದ ದುಂದು
ರಾಜ್ಯ ರಾಜಕಾರಣದ ಆಳ ಅಗಲಗಳನ್ನು ಬಹುವರ್ಷಗಳಿಂದ ವಿಶ್ಲೇಷಣೆ ಮಾಡುತ್ತಿರುವ ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್‌ ಅವರ ಹೊಸ ಅಂಕಣ ‘ಮೊಗಸಾಲೆʼ ಭಾನುವಾರದಿಂದ ಆರಂಭವಾಗಿದೆ. ಇಂದಿನ ರಾಜಕೀಯ ಸನ್ನಿವೇಶವನ್ನು ಹಿಂದಿನ ಘಟನೆಗಳಿಗೆ ಹೋಲಿಕೆ ಜತೆಗೆ ಭವಿಷ್ಯದ ದಿಕ್ಸೂಚಿ ನೀಡುವ ಅಂಕಣದಲ್ಲಿ, ಸರ್ಕಾರಗಳು ವಿವಿಧ ಸಂದರ್ಭಗಳಲ್ಲಿ ನೀಡುವ ಜಾಹೀರಾತುಗಳ ಹಿಂದಿರುವ ರಾಜಕಾರಣದ ಕುರಿತು ಬೆಳಕು ಚೆಲ್ಲಿದ್ದಾರೆ. ಅಂಕಣವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

6. ವಿಸ್ತಾರ Explainer | ಹೂಡಿಕೆಗೆ ಈಗ ಸಾವರಿನ್‌ ಗೋಲ್ಡ್‌ ಬಾಂಡ್‌ ಎಂಬ ಸುವರ್ಣಾವಕಾಶ!
ಬಂಗಾರದಲ್ಲಿ ನಾವು ಹಲವು ವಿಧದಲ್ಲಿ ಹೂಡಿಕೆ ಮಾಡಬಹುದು. ಆಭರಣಗಳು, ಚಿನ್ನದ ನಾಣ್ಯಗಳು, ಗಟ್ಟಿಗಳನ್ನು ಖರೀದಿಸಬಹುದು. ಆದರೆ ಇದಕ್ಕೆ ಅದರದ್ದೇ ಆದ ರಿಸ್ಕ್‌ಗಳು ಇವೆ. ಆಭರಣಗಳನ್ನು ಕೊಂಡಾಗ ತಯಾರಿಕಾ ಶುಲ್ಕ ಕೊಡಬೇಕಾಗುತ್ತದೆ. ಹೀಗಾಗಿ ಹೂಡಿಕೆಯ ದೃಷ್ಟಿಯಿಂದ ಆಭರಣ ಅಷ್ಟು ಸೂಕ್ತವಲ್ಲ. ಚಿನ್ನದ ನಾಣ್ಯ, ಗಟ್ಟಿಗಳನ್ನು ಖರೀದಿಸಿದರೆ ಜೋಪಾನವಾಗಿ ಇಡುವ ರಿಸ್ಕ್‌ ಇದ್ದೇ ಇರುತ್ತದೆ. ಆದರೆ ಈ ರೀತಿಯ ಯಾವುದೇ ಆತಂಕ ಇಲ್ಲದೆ ಬಂಗಾರದಲ್ಲಿ ಹೂಡಿಕೆ ಮಾಡಲು ಅತ್ಯಂತ ಸೂಕ್ತ ವಿಧಾನವೇ ಸ್ವತಃ ಕೇಂದ್ರ ಸರ್ಕಾರವೇ ಬಿಡುಗಡೆಗೊಳಿಸುವ ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದು! ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Manoranjan Ravichandran | ಸಂಗೀತಾಗೆ ಮಾಂಗಲ್ಯಧಾರಣೆ ಮಾಡಿದ ಮನೋರಂಜನ್
ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ರವಿಚಂದ್ರನ್ (Manoranjan Ravichandran) ಅವರು ಸಂಗೀತಾ ದೀಪಕ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನ ವೈಟ್‌ ಪೇಟಲ್ಸ್‌ನಲ್ಲಿ ವಿಜೃಂಭಣೆಯ ವಿವಾಹ ಕಾರ್ಯಕ್ರಮ ನೆರವೇರಿತು. ಆತ್ಮೀಯರಿಗಾಗಿ ಆಗಸ್ಟ್ 22ರಂದು ರವಿಚಂದ್ರನ್‌ ಅವರು ಮಗನ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಆ ಆರತಕ್ಷತೆಗೆ ದೊಡ್ಡ ಮಟ್ಟದಲ್ಲಿ ಜನರು ಬರುವ ನಿರೀಕ್ಷೆಯಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಇದನ್ನೂ ಓದಿ | Manoranjan Ravichandran | ಮನೋರಂಜನ್‌ ವಿವಾಹೋತ್ಸವ: ಹೇಗಿದೆ ಕ್ರೇಜಿ ಸ್ಟಾರ್‌ ಡ್ಯಾನ್ಸ್‌!

8. Jote Joteyali | ಆರ್ಯವರ್ಧನ್‌ ಪಾತ್ರದಲ್ಲಿ ಅನಿರುದ್ಧ್ ಇಲ್ಲದೇ ಸೀರಿಯಲ್‌ ನೋಡೋದಿಲ್ಲ: ಪ್ರೇಕ್ಷಕರ ಮುನಿಸು!
ಜೊತೆ ಜೊತೆಯಲಿ ಧಾರಾವಾಹಿ (Jote Joteyali) ಖ್ಯಾತಿಯ ನಟ ಅನಿರುದ್ಧ್‌ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಆಯ್ಕೆ ಮಾಡಿಕೊಳ್ಳದಿರಲು ತೀರ್ಮಾನಿಸಿರುವ ಬಗ್ಗೆ ವೀಕ್ಷಕ ವಲಯದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ʻಆರ್ಯವರ್ಧನ್‌ ಪಾತ್ರದಲ್ಲಿ ಅನಿರುದ್ಧ್ ಅವರು ಇಲ್ಲದೆ ಹೋದರೆ ಧಾರಾವಾಹಿಯನ್ನೇ ನೋಡುವುದಿಲ್ಲʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ‌ ಕೆಲವು ಪ್ರ್ರೇಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Jote Joteyali | ಧಾರಾವಾಹಿ‌ ಸಕ್ಸೆಸ್‌ಗೆ ನಾನೇ ಕಾರಣ ಎಂದುಕೊಂಡಿಲ್ಲ, ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದ ಅನಿರುದ್ಧ್‌

9. Shah-NTR Meeting | ಅಮಿತ್‌ ಶಾ, ಜೂ. ಎನ್‌ಟಿಆರ್‌ ಭೇಟಿ, ಏನಿದರ ಗುಟ್ಟು?
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ತೆಲುಗು ಖ್ಯಾತ ನಟ ಜೂನಿಯರ್‌ ಎನ್‌.ಟಿ.ಆರ್‌. ಅವರು (Shah-NTR Meeting) ಭೇಟಿಯಾಗಲಿದ್ದು, ರಾಜಕೀಯ ಬೆಳವಣಿಗೆಗಳ ಕುರಿತು ಕೂತೂಹಲ ಮೂಡಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರು ತೆಲಂಗಾಣಕ್ಕೆ ಆಗಮಿಸಿದ್ದು, ಸಂಜೆ ಎನ್‌.ಟಿ.ಆರ್‌ ಜತೆ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶಂಶಾಬಾದ್‌ನಲ್ಲಿರುವ ನೋವೊಟೆಲ್‌ ಹೋಟೆಲ್‌ನಲ್ಲಿ ಇಬ್ಬರೂ ಊಟ ಮಾಡಲಿದ್ದಾರೆ. ೧೫ ನಿಮಿಷದ ಭೇಟಿ ನಿಗದಿಯಾಗಿದ್ದು, ಅಮಿತ್‌ ಶಾ ಅವರೇ ವೈಯಕ್ತಿಕವಾಗಿ ಕರೆ ಮಾಡಿ ಭೇಟಿಯಾಗುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. Janshakti Democratic Party | ಹೊಸ ಪಕ್ಷ ಘೋಷಿಸಿದ ಎವರ್‌ಗ್ರೀನ್‌ ರಾಜಕಾರಣಿ ಶಂಕರ್‌ ಸಿಂಗ್‌ ವಘೇಲಾ!
ಗುಜರಾತ್‌ ಮಾಜಿ ಮುಖ್ಯಮಂತ್ರಿ, ರಾಜ್ಯದ “ಎವರ್‌ಗ್ರೀನ್‌ ರಾಜಕಾರಣಿ” ಎಂದೇ ಖ್ಯಾತಿಯಾಗಿರುವ ಶಂಕರ್‌ಸಿಂಗ್‌ ವಘೇಲಾ ಅವರು ನೂತನ ಪಕ್ಷ (Janshakti Democratic Party) ಘೋಷಿಸಿದ್ದಾರೆ. ಅಲ್ಲದೆ, ಗುಜರಾತ್‌ನಲ್ಲಿ ವರ್ಷಾಂತ್ಯದ ವೇಳೆಗೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ನೂತನ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಜನಶಕ್ತಿ ಡೆಮಾಕ್ರಟಿಕ್‌ ಪಾರ್ಟಿ (ಜೆಡಿಪಿ) ಎಂಬುದು ಅವರ ನೂತನ ಪಕ್ಷ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
Gujarat Cabinet |
ಗುಜರಾತ್‌ನಲ್ಲಿ ಇಬ್ಬರು ಸಚಿವರ ಖಾತೆ ವಾಪಸ್, ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಬಿಕ್ಕಟ್ಟು?

Exit mobile version