Site icon Vistara News

Vistara Top 10 News: ಸಿದ್ದರಾಮಯ್ಯ 14ನೇ ಬಜೆಟ್‌ ಕ್ಷಣಗಣನೆಯಿಂದ, 14ಕ್ಕೆ ಚಂದ್ರಯಾನ ಮುಹೂರ್ತವರೆಗಿನ ಪ್ರಮುಖ ಸುದ್ದಿಗಳಿವು

1. Karnataka Budget 2023: 14ನೇ ಬಜೆಟ್‌ ಮಂಡಿಸಲು ಸಿದ್ದರಾಮಯ್ಯ ಸಿದ್ಧ: ಗ್ಯಾರಂಟಿಯಿಂದ ಜನರಿಗೆ ಎಷ್ಟು ಹೊರೆ?
ರಾಜ್ಯದ ಇತಿಹಾಸದಲ್ಲೆ ಅತಿ ಹೆಚ್ಚು ಬಾರಿ ಬಜೆಟ್‌ (Karnataka Budget 2023) ಮಂಡಿಸಿದ ಖ್ಯಾತಿಗೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಪಾತ್ರವಾಗಲಿದ್ದಾರೆ. ಈಗಾಗಲೆ 13 ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಇದೀಗ 14ನೇ ಬಜೆಟ್‌ ಮಂಡಿಸಲಿದ್ದಾರೆ. (vistara top 10 news) ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. H.D. Kumaraswamy: ಏನು ಶಿಕ್ಷೆ ಅಂತ ಹೇಳಲಿ, ಆಮೇಲೆ ಸಾಕ್ಷಿ ಬಿಡುಗಡೆ: ಪೆನ್‌ಡ್ರೈವ್‌ ಹಿಡಿದು ಸರ್ಕಾರಕ್ಕೆ HDK ಸವಾಲು
ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಲಿ, ನನ್ನ ಬಳಿಯಿರುವ ಪೆನ್‌ಡ್ರೈವ್‌ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (H.D. Kumaraswamy) ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Assembly Session: ಡ್ರೈವರ್‌ ಪ್ರಕರಣದಲ್ಲಿ ಎಚ್‌ಡಿಕೆ-ಚೆಲುವರಾಯಸ್ವಾಮಿ ಏಕವಚನದಲ್ಲಿ ಜಗಳ: ತನಿಖೆಗೆ ಸರ್ಕಾರ ಒಪ್ಪಿಗೆ
ನಾಗಮಂಗಲ ಡಿಪೊ ಕೆಎಸ್‌ಆರ್‌ಟಿಸಿ ಚಾಲಕ ಜಗದೀಶ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಚಿವ ಚೆಲುವರಾಯಸ್ವಾಮಿ ಏಕವಚನದಲ್ಲೇ ಪರಸ್ಪರ ಬೈದುಕೊಂಡರು. ಸಾಕಷ್ಟು ಹೊತ್ತು ಮಾತಿನ ಚಕಮಕಿ ನಂತರ ಸ್ಪೀಕರ್‌ ಕಚೇರಿಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಯಿತು. ಸಾರಿಗೆ ಇಲಾಖೆಯ ಪ್ರಕರಣವನ್ನು ಹಿರಿಯ ಪೊಲೀಸ್‌ ಅಧಿಕಾರಿಯಿಂದ ಕೂಲಂಕಶ ತನಿಖೆ ನಡೆಸುವುದಾಗಿ ಗೃಹಸಚಿವ ಡಾ. ಜಿ. ಪರಮೇಶ್ವರ್‌ ಘೊಷಿಸಿದರು. ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಕುಮಾರಸ್ವಾಮಿ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Chandrayaan 3: ಚಂದ್ರಯಾನ-3 ಮಿಷನ್ ಜುಲೈ 13ಕ್ಕಲ್ಲ, 14ಕ್ಕೆ ಲಾಂಚ್! ದಿನಾಂಕ ಬದಲಿಸಿದ ಇಸ್ರೋ
ಬಹು ನಿರೀಕ್ಷೆಯ ಚಂದ್ರಯಾನ-3 (Chandrayaan 3) ಉಡಾವಣೆಯ ದಿನಾಂಕ ಮತ್ತು ಸಮಯವನ್ನು ಪರಿಷ್ಕರಿಸಲಾಗಿದೆ. ಹೊಸ ವೇಳಾ ಪಟ್ಟಿ ಪ್ರಕಾರ ಚಂದ್ರಯಾನ ಮಿಷನ್‌ಗೆ ಜುಲೈ 14 ಶುಕ್ರವಾರ ಮಧ್ಯಾಹ್ನ 2.35ಕ್ಕೆ ಚಾಲನೆ ದೊರೆಯಲಿದೆ. ಈ ಮೊದಲು ಜುಲೈ 13ಕ್ಕೆ ಲಾಂಚ್ ನಿಗದಿಯಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation – ISRO) ಟ್ವಿಟರ್ ಮೂಲಕ ಮಾಹಿತಿ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Rain News : ಶುರುವಾಯ್ತು ಮಳೆ ಅವಘಡ; 6 ಅಂತಸ್ತಿನಿಂದ ಕುಸಿದ ಚಾವಣಿ, ಮುಳುಗಿದ ಸೇತುವೆಗಳು
ರಾಜ್ಯದಲ್ಲಿ ಮಳೆ ಅವಘಡ (Rain Damage) ಶುರುವಾಗಿದ್ದು, ವರುಣಾರ್ಭಟಕ್ಕೆ (Rain News) ಎಲ್ಲರೂ ಗಡಗಡ ನಡುಗುವಂತಾಗಿದೆ. ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮಂಗಳೂರು ಹೊರವಲಯದ ತಲಪಾಡಿಯ ಶಾರದಾ ಕಾಲೇಜಿನಲ್ಲಿ ಗಾಳಿ ಮಳೆಗೆ ಬೃಹತ್‌ ಚಾವಣಿಯೇ ಹಾರಿ ಬಿದ್ದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. MP Urinating Case: ಮೂತ್ರ ವಿಸರ್ಜನೆ ಕೇಸ್;‌ ಆದಿವಾಸಿ ವ್ಯಕ್ತಿಯ ಕಾಲು ತೊಳೆದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್;‌ ವಿಡಿಯೊ ವೈರಲ್
ಮಧ್ಯಪ್ರದೇಶದಲ್ಲಿ ಆದಿವಾಸಿ ಕಾರ್ಮಿಕ ದಶಮತ್‌ ರಾವತ್‌ ಎಂಬುವರ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ (MP Urinating Case) ವಿಕೃತಿ ಮೆರೆದ ಪ್ರವೇಶ್‌ ಶುಕ್ಲಾನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಲ್ಲದೆ, ಆತನ ಮನೆಯನ್ನು ಕೂಡ ಧ್ವಂಸ ಮಾಡಲಾಗಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಆದಿವಾಸಿ ಕಾರ್ಮಿಕ ದಶಮತ್‌ ರಾವತ್‌ ಅವರ ಕಾಲು ತೊಳೆದಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Rain News: ಕರಾವಳಿ, ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ, ಶಾಲೆಗಳಿಗೆ ಇಂದೂ ರಜೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ನದಿಗಳು ತುಂಬಿಕೊಂಡಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. 1ರಿಂದ 12ನೇ ತರಗತಿವರೆಗೆ ಎಲ್ಲ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Salaar Movie: ಕೆಜಿಎಫ್ 2 ಚಿತ್ರದ ಮುಂದುವರಿದ ಭಾಗವೇ ಸಲಾರ್‌? ಟ್ಯಾಂಕರ್‌ ನೀಡಿದ ಸುಳಿವು!
ಪ್ರಭಾಸ್‌ ನಟನೆಯ ಬಹು ನಿರೀಕ್ಷಿತ ʼಸಲಾರ್‌ʼ ಸಿನಿಮಾದ (Salaar Movie) ಟೀಸರ್‌ ಜುಲೈ 6ರ ಮುಂಜಾನೆ 05.12ಕ್ಕೆ ರಿಲೀಸ್‌ ಮಾಡಲಾಗಿದೆ. ಟೀಸರ್ ರಿಲೀಸ್ ಆಗಿ 15 ನಿಮಿಷಕ್ಕೇ 1 ಲಕ್ಷಕ್ಕೂ ಅಧಿಕ ವ್ಯೂಸ್‌ ಕಂಡುಬಂದಿದೆ. ವಿಶೇಷ ಎಂದರೆ ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ ಚಿತ್ರಕ್ಕೂ ಟೀಸರ್​ನಲ್ಲಿ ಲಿಂಕ್ ನೀಡಲಾಗಿದೆ. ಇದನ್ನು ಗಮನಿಸಿದ ಅನೇಕರು ಥ್ರಿಲ್ ಆಗಿದ್ದಾರೆ. ಓಹ್! ಇದು ಕೆಜಿಎಫ್‌ 2 ಚಿತ್ರದ ಮುಂದುವರಿದ ಭಾಗವೇ ಎಂದು ಉದ್ಗರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer: Thread Launch: ಟ್ವಿಟರ್‌ನಂತೆ ಥ್ರೆಡ್‌ ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಟ್ವಿಟರ್‌ಗೆ ಪ್ರತಿಸ್ಪರ್ಧಿ ಎಂದೇ ಭಾವಿಸಲಾಗಿರುವ ಮೆಟಾದ ನೂತನ ಸೋಶಿಯಲ್‌ ಮೀಡಿಯಾ ವೇದಿಕೆ ಥ್ರೆಡ್‌ (Thread) ನಿನ್ನೆ ಅನಾವರಣಗೊಂಡಿದೆ (Thread Launch). ಪ್ರಾರಂಭವಾದ ಕೇವಲ 7 ಗಂಟೆಗಳಲ್ಲಿ 1 ಕೋಟಿ ಸೈನ್ ಅಪ್‌ಗಳನ್ನು ಕಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News : ಮಳೆ ನೀರು ತುಂಬಿದ್ದ ರಸ್ತೆಯಲ್ಲಿ ಕೆಟ್ಟು ನಿಂತ ಕಾರು, ರಿಪೇರಿಗೆ ಬೇಕಾಯ್ತು 40 ಲಕ್ಷ ರೂಪಾಯಿ!
ಮಾನ್ಸೂನ್ ಮಳೆಗೆ ಭಾರತದ ನಗರಗಳಲ್ಲಿ ರಸ್ತೆ ಮೇಲೆ ನೀರು ತುಂಬಿಕೊಳ್ಳುವುದು ಮಾಮೂಲಿ. ಅಧಿಕಾರಿಗಳು ಪ್ರತಿ ವರ್ಷ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಭರವಸೆ ಕೊಟ್ಟು ಮರೆತುಬಿಡುತ್ತಾರೆ. ಹೀಗಾಗಿ ಸಮಸ್ಯೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಅಂತೆಯೇ ಹೈದರಾಬಾದ್​ನಲ್ಲಿ ಇತ್ತೀಚೆಗೆ ನೀರು ತುಂಬಿದ್ದ ರಸ್ತೆಯಲ್ಲಿ ಸಾಗುತ್ತಿದ್ದ ಬಿಎಂಡಬ್ಲ್ಯು 5 ಸೀರಿಸ್ ಸೆಡಾನ್ ಕಾರು ನೀರು ನುಗ್ಗಿ ಕೆಟ್ಟು ಹೋಗಿತ್ತು. ಕಾರಿನಲ್ಲಿದ್ದ ದಂಪತಿ ಬೇರೆ ವಾಹನದ ಮೂಲಕ ಮನೆಗೆ ತಲುಪಿ ಕಾರನ್ನು ಶೋರೂಮ್​ಗೆ ದುರಸ್ತಿಗೆ ಕಳುಹಿಸಿದ್ದರು. ಆದರೆ ಅವರು ಕಳುಹಿಸಿದ ಬಿಲ್​ ನೋಡಿ ಅವರಿಗೆ ಗಾಬರಿ ಬಿದ್ದಿದ್ದಾರೆ. 40 ಲಕ್ಷ ರೂಪಾಯ ವೆಚ್ಚವಾಗಿದೆ ಎಂದು ಕಂಪನಿ ಬಿಲ್​ ಕಳುಹಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version