Site icon Vistara News

ವಿಸ್ತಾರ TOP 10 NEWS | ಬದುಕು ಮುಗಿಸಿ ʼಬಯಲಾದʼ ಸಂತ: ಸಿದ್ದೇಶ್ವರ ಶ್ರೀಗಳಿಗೆ ಬೀಳ್ಕೊಟ್ಟ ಕರ್ನಾಟಕ ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

vistara-top-10-news-siddheshwar swamiji last rites performed and more prominent news of the day

ಬೆಂಗಳೂರು: ನುಡಿ-ನಡೆಗೆ ವ್ಯತ್ಯಾಸವಿಲ್ಲದಂತೆ ಬಾಳಿ, ಬದುಕಿದ ಸಂತ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ, ಸಕಲ ಸಮಾಜದ ಗೌರವಗಳೊಂದಿಗೆ ನಡೆದಿದೆ. ಅಧ್ಯಾತ್ಮ ಸಾಧನೆಯ ಮೂಲಕ ವ್ಯಕ್ತಿಯು ತನ್ನನ್ನು ಲೀನವಾಗಿಸಿಕೊಳ್ಳುವ ʼಬಯಲನ್ನುʼ ಸೇರಿದ ಶ್ರೀಗಳನ್ನು ಇಡೀ ಕರುನಾಡು ಬೀಳ್ಕೊಟ್ಟಿದೆ. ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‌ ಬಸ್‌ ಯಾತ್ರೆಗೆ ಸಿದ್ಧವಾಗುತ್ತಿದೆ, ಅರವಿಂದ ಲಿಂಬಾವಳಿ ಪ್ರಕರಣವು ಕಾಂಗ್ರೆಸ್‌ಗೆ ಹೊಸ ಅಸ್ತ್ರವಾಗಿದೆ, ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ವಿವಾದಕ್ಕೀಡಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS ನಲ್ಲಿ.

1. ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ | ನಡೆದಾಡುವ ದೇವರು ಪಂಚಭೂತಗಳಲ್ಲಿ ಲೀನ; ಮಾತಿನ ಸಂತ ಇನ್ನು ಶಾಶ್ವತ ಮೌನ
ನಡೆದಾಡುವ ದೇವರೆಂದೇ ಭಕ್ತ ಜನರು ನಂಬಿದ್ದ ಆ ಮಹಾ ಸಂತ (ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ) ಇನ್ನು ನಮ್ಮ ನಡುವೆ ಓಡಾಡುವುದಿಲ್ಲ. ಮಾತಿನ ಮೂಲಕವೇ ಜಗವನ್ನು ಗೆದ್ದ ಆ ಧೀಮಂತ ಇನ್ನು ನಮ್ಮ ಜತೆ ಮಾತನಾಡುವುದಿಲ್ಲ. ಅವರು ತಮ್ಮಾಸೆಯಂತೆ, ತಾವು ಮೊದಲೇ ತೀರ್ಮಾನಿಸಿದಂತೆ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಇನ್ನು ಅವರ ಓಡಾಟವೇನಿದ್ದರೂ ಮಾನವ ನಿಗದಿತ ಪರಿಧಿಯ ಆಚೆಗಿನ ದಿವ್ಯಾಂತರಿಕ್ಷದಲ್ಲಿ. ಅಲ್ಲಿ ಅವರಾಡುವ ಮಾತುಗಳೆಲ್ಲ ದಿವ್ಯವಾಣಿ, ನಮ್ಮ ಪಾಲಿಗೆ ಅಶರೀರವಾಣಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Siddheshwar swamiji | 8 ವರ್ಷ ಮೊದಲೇ ಅಂತ್ಯಪತ್ರ: ಶ್ರಾದ್ಧ ಬೇಡ, ಸಮಾಧಿ ಬೇಡ, ದೇಹವನ್ನು ಅಗ್ನಿಗರ್ಪಿಸಿ ಸಾಕು ಎಂದಿದ್ದ ಸ್ವಾಮೀಜಿ
ಸರಳ ಜೀವನಕ್ಕೆ, ನೇರ ನಡೆನುಡಿಗಳಿಗೆ ಹೆಸರಾಗಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅವರು ತಮ್ಮ ಇಹದ ಬದುಕು ಮಾತ್ರವಲ್ಲ, ಮೃತ್ಯು ಆವರಿಸಿದ ನಂತರ ತನ್ನ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂದು ಕೂಡಾ ಮೊದಲೇ ಬರೆದಿಟ್ಟಿದ್ದರು. ೨೦೧೪ರ ಗುರುಪೂರ್ಣಿಮೆಯಂದು ಅವರು ಬರೆದಿಟ್ಟ ಅಭಿವಂದನ ಪತ್ರದಲ್ಲಿ ತನ್ನ ಅಂತ್ಯಕ್ರಿಯೆ ಹೇಗೆ ಮಾಡಬೇಕು ಎಂದೂ ಹೇಳಿದ್ದಾರೆ. ಅಚ್ಚರಿ ಎಂದರೆ, ಎಂಟು ವರ್ಷದ ಬಳಿಕ ೨೦೨೨ರ ವೈಕುಂಠ ಏಕಾದಶಿಯಂದು ಅವರು ದೇಹ ತ್ಯಾಗ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Siddheshwar Swamiji : ಕಾಣಿಸುವ ದೇವರೇ, ನೀನೂ ನಮಗೆ ಕಾಣದಂತಾದೆಯಾ?; ಕಣ್ಣೀರಿಟ್ಟ ಭಕ್ತೆ
ಸಿದ್ದೇಶ್ವರ ಸ್ವಾಮಿಗಳು (Siddheshwar Swamiji) ನಮಗೆ ತಂದೆ ಇದ್ದ ಹಾಗೆ. ಈಗ ಅವರಿಲ್ಲದ ಬದುಕು ನಮ್ಮನ್ನು ದುಃಖಕ್ಕೆ ತಂದಿದೆ. ನಮ್ಮ ಅಪ್ಪನನ್ನು ಬಿಟ್ಟು ಬದುಕುವುದು ಹೇಗೆ? ಅವರ ಪ್ರವಚನ ಕೇಳಲೆಂದೇ ಒಂದು ತಿಂಗಳು ನಾನಿದ್ದೆ. ಅವರು ನಡೆದಾಡುವ ದೇವರು. ಕಾಣಿಸದ ದೇವರು ಬೇರೆ ಇದ್ದರೆ, ಇವರು ಮಾತ್ರ ನಮಗೆಲ್ಲರಿಗೂ ಕಾಣಿಸುವ ದೇವರಾಗಿದ್ದರು. ಈಗ ಅವರೂ ಕಾಣಿಸದಾದರು ಎಂದು ಭಕ್ತೆಯೊಬ್ಬರು ಕಣ್ಣೀರಿಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Siddheshwar swamiji | ನಡೆದಾಡುವ ದೇವರ ಅಂತಿಮ ಯಾತ್ರೆ: ಶೋಕ ಸಾಗರದಲ್ಲಿ ಜನಸಾಗರ
ನಡೆದಾಡುವ ದೇವರು, ನಾಡು ಕಂಡ ಶ್ರೇಷ್ಠ ಪ್ರವಚನಕಾರ, ನಡೆ-ನುಡಿಗಳಿಂದ ಜಗತ್ತನ್ನೇ ಗೆದ್ದ ದಾರ್ಶನಿಕ ವಿಜಯಪುರದ ಶ್ರೀ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಇಹದ ಬದುಕಿನ ಅಂತಿಮ ಯಾತ್ರೆ ವಿಜಯಪುರದ ಮಹಾ ಬೀದಿಯಲ್ಲಿ ಸಾಗಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka Election | ಹಳೆ ಮೈಸೂರಿನಲ್ಲಿ ಬಿಜೆಪಿ ಅಬ್ಬರಕ್ಕೆ ಬೆದರಿದ ಕಾಂಗ್ರೆಸ್‌-ಜೆಡಿಎಸ್‌?: ಹೌದೆನ್ನುತ್ತವೆ ಘಟನಾವಳಿಗಳು
ವಿಧಾನಸಭೆ ಚುನಾವಣೆಗೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಲಗ್ಗೆ ಇಡುತ್ತಿರುವುದು ನಿಜವಾಗಿಯೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ವಲಯದಲ್ಲಿ ಆತಂಕ ಸೃಷ್ಟಿಸಿವೆ. ಇದಕ್ಕೆ ಕಾರಣಗಳೂ ಸಾಕಷ್ಟಿವೆ ಹಾಗೂ ಆ ಪಾಳೆಯಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಇವನ್ನು ಪುಷ್ಟೀಕರಿಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Prajadhwani Yatre | ಬಸ್‌ ಯಾತ್ರೆಗೆ ಎರಡು ತಂಡ ಪ್ರಕಟಿಸಿದ ಕಾಂಗ್ರೆಸ್‌; ʼಪ್ರಜಾಧ್ವನಿ ಯಾತ್ರೆʼ ಎಂದು ನಾಮಕರಣ?
ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರವಾಸಗಳಿಗೆ ಎರಡು ತಂಡಗಳನ್ನು ಪ್ರಕಟ ಮಾಡಲಾಗಿದೆ. ಯಾತ್ರೆಯ ಹೆಸರನ್ನು ಅಧಿಕೃತವಾಗಿ ಇನ್ನೂ ಪ್ರಕಟಿಸಲಾಗಿಲ್ಲ. ಆದರೆ ʼಪ್ರಜಾಧ್ವನಿ ಯಾತ್ರೆʼ ಎಂದು ನಾಮಕರಣ ಮಾಡಿರುವುದಾಗಿ ಮೂಲಗಳು ಹೇಳಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Suicide Case | ಅರವಿಂದ ಲಿಂಬಾವಳಿ ಬಂಧನಕ್ಕೆ ಪಟ್ಟು ಹಿಡಿದ ಕಾಂಗ್ರೆಸ್‌; ಕಾನೂನಿನ ಮುಂದೆ ಲಿಂಬಾವಳಿ ಬೇರೆಯಲ್ಲ ಎಂದ ಡಿ.ಕೆ. ಶಿವಕುಮಾರ್‌
ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಬಂಧಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್‌ ಪಟ್ಟು ಹಿಡಿದಿದೆ. ಪ್ರದೀಪ್‌ ಮನೆಗೆ ಭೇಟಿ ನೀಡಿ ಮಾತನಾಡಿದ್ದ ಸಿದ್ದರಾಮಯ್ಯ, ಸಾಕ್ಷಿ ನಾಶ ಮಾಡುವ ಅಪಾಯ ಇರುವುರಿಂದ ಶಾಸಕರನ್ನು ಬಂಧಿಸಬೇಕು ಎಂದಿದ್ದರು. ಈ ಕುರಿತು ಡಿ.ಕೆ. ಶಿವಕುಮಾರ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನಿನ ಮುಂದೆ ಲಿಂಬಾವಳಿ ಬೇರೆಯಲ್ಲ, ಶಿವಕುಮಾರ್ ಬೇರೆಯಲ್ಲ. ಆದರೆ ಈ ಸರ್ಕಾರ ಲಂಚ, ಮಂಚ, ಇಂತಹ ಕೊಲೆ ಪ್ರಕರಣಗಳಲ್ಲಿ ಆರೋಪಿಗಳ ರಕ್ಷಣೆ ಮಾಡಿಕೊಂಡು ಬಂದಿದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Supreme Court | ಸಚಿವರ ಹೇಳಿಕೆ ಸರ್ಕಾರದ ಹೇಳಿಕೆಯಲ್ಲ! ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧ ಇಲ್ಲ: ಸುಪ್ರೀಂ ಕೋರ್ಟ್
ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೆಚ್ಚಿನ ನಿರ್ಬಂಧ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ (Supreme Court) 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ. ಐವರು ನ್ಯಾಯಮೂರ್ತಿಗಳಿದ್ದ ಪೀಠದಲ್ಲಿ ಪೈಕಿ ಜಸ್ಟೀಸ್ ಬಿ.ವಿ. ನಾಗರತ್ನ ಅವರು ಮಾತ್ರ ಭಿನ್ನ ತೀರ್ಪು ನೀಡಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ”ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳಿಗೆ ಹೆಚ್ಚಿನ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಸಂವಿಧಾನದ ಆರ್ಟಿಕಲ್ 19(2) ಸೂಚಿಸಿದ ನಿರ್ಬಂಧಗಳಷ್ಟೇ ಅನ್ವಯವಾಗುತ್ತವೆ” ಎಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Karnataka Election | ರಸ್ತೆ, ಚರಂಡಿ ಸಮಸ್ಯೆಗಿಂತ ಲವ್ ಜಿಹಾದ್ ದೊಡ್ಡದು ಎಂದ ಬಿಜೆಪಿ ಅಧ್ಯಕ್ಷ ಕಟೀಲ್
ರಸ್ತೆ, ಚರಂಡಿಗಳಂಥ ಸಣ್ಣ ವಿಷಯಗಳ ಬಗ್ಗೆ ಕೇಳಬೇಡಿ. ಒಂದು ವೇಳೆ, ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರೇ ಮತ್ತು ಲವ್ ಜಿಹಾದ್ ನಿಲ್ಲಿಸಬೇಕಿದ್ದರೆ, ಅದಕ್ಕಾಗಿ ನಮಗೆ ಬಿಜೆಪಿ ಬೇಕು. ಈ ಲವ್ ಜಿಹಾದ್ ಸಮಸ್ಯೆಯಿಂದ ಹೊರಬರಲು ಬಿಜೆಪಿ ಬೇಕು ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೂತ್ ಲೇವಲ್ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Accident In Delhi | ಕಾರಿನಡಿಯಲ್ಲಿ ಸಿಲುಕಿ ಮೃತಪಟ್ಟ ಯುವತಿ ಮೇಲೆ ರೇಪ್​ ಆಗಿತ್ತಾ?-ಶವ ಪರೀಕ್ಷೆ ವರದಿಯಲ್ಲಿ ಹೊರಬಿತ್ತು ಸತ್ಯ
ದೆಹಲಿಯಲ್ಲಿ ಭೀಕರ ಅಪಘಾತಕ್ಕೆ ಒಳಗಾದ ಯುವತಿ ಮೇಲೆ ನಿಜಕ್ಕೂ ಲೈಂಗಿಕ ದೌರ್ಜನ್ಯ ಆಗಿದೆಯಾ? ಇದೀಗ ಬಂದಿರುವ ಶವಪರೀಕ್ಷೆ ವರದಿ ಈ ಪ್ರಶ್ನೆಗೆ ಉತ್ತರಿಸಿದೆ. ಯುವತಿಯ ಮೇಲೆ ಅತ್ಯಾಚಾರ ಆಗಿಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇನ್ನು ಈ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವುದು ಬಾಕಿ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Gold Price | ಚಿನ್ನದ ದರದಲ್ಲಿ 530 ರೂ. ಜಿಗಿತ, 55,630 ರೂ.ಗೆ ಏರಿಕೆ, ಬೆಳ್ಳಿಯ ದರದಲ್ಲಿ 1,000 ರೂ. ಹಚ್ಚಳ
  2. Russia-Ukrain War | ತನ್ನದೇ ಭೂಭಾಗದ ಮೇಲೆ ರಾಕೆಟ್​ ದಾಳಿ ನಡೆಸಿ, ರಷ್ಯಾದ 63 ಯೋಧರನ್ನು ಕೊಂದ ಉಕ್ರೇನ್​!
  3. ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆಯ ಸಾವು; ಹಡಗು ಬಂದರಿಗೆ ಬರುವಷ್ಟರಲ್ಲಿ ಈತನ ಜೀವ ಹೋಗಿತ್ತು
  4. ನನ್ನ ದೇಶ ನನ್ನ ದನಿ ಅಂಕಣ | ಎಲ್ಲಿಯ ರೂಸ್‌ವೆಲ್ಟ್, ಎಲ್ಲಿಯ ಭಾರತ ಸ್ವಾತಂತ್ರ್ಯ !
  5. ದಶಮುಖ ಅಂಕಣ | ನಲಿವುದಕೆ ಒಲಿವುದಕೆ ಹೊಸಹಾದಿ ಬೇಕು
Exit mobile version