Site icon Vistara News

ವಿಸ್ತಾರ TOP 10 NEWS: ಮಂಡ್ಯ ಬಿಜೆಪಿಗೆ ಸುಮಲತಾ ಬಲದಿಂದ, H3N2ಗೆ ಹಾಸನದ ವ್ಯಕ್ತಿ ಮೃತ್ಯುವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-Sumalatha ambareesh supports BJP to Firtst death due to H3N2 and more news

#image_title

1. Sumalatha Ambareesh PC: ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನನ್ನ ಬೆಂಬಲ: ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಅಂಬರೀಶ್‌
ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಜಯಗಳಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆಯಾಗುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Sumalatha Ambareesh PC: ನಾನು ರಾಜಕೀಯದಲ್ಲಿ ಇರುವವರೆಗೂ ಅಭಿಷೇಕ್‌ ರಾಜಕೀಯ ಮಾಡಲ್ಲ: ಸುಮಲತಾ ಅಂಬರೀಶ್‌ ಘೋಷಣೆ

2. Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆ ರದ್ದು, ಎಕ್ಸಾಂ ನಡೆಸದಂತೆ ರಾಜ್ಯ ಹೈಕೋರ್ಟ್‌ ಆದೇಶ
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆ (Public Exam) ನಡೆಸುವ ರಾಜ್ಯ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಹೀಗಾಗಿ ಮಾರ್ಚ್‌ 13ರಿಂದ ಆರಂಭವಾಗಬೇಕಾಗಿದ್ದ ಪರೀಕ್ಷೆ ರದ್ದಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. BJP Karnataka: ಬಿ.ಎಸ್‌. ಯಡಿಯೂರಪ್ಪಗೆ ಇಲ್ಲ ಪ್ರಚಾರ ಸಮಿತಿ ಹೊಣೆ; ಮತ್ತೆ ರಾಜ್ಯ ರಾಜಕಾರಣಕ್ಕೆ ಶೋಭಾ ಕರಂದ್ಲಾಜೆ ಎಂಟ್ರಿ
ವಿಧಾನಸಭೆ ಚುನಾವಣೆಯ ಪ್ರಚಾರ ಉಸ್ತುವಾರಿಯನ್ನು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನೀಡುವ ಮೂಲಕ ವೀರಶೈವ ಲಿಂಗಾಯತರ ಅಸಮಾಧಾನ ತಣಿಸಲಾಗುತ್ತದೆ ಎಂಬ ಮಾತು ಸುಳ್ಳಾಗಿದ್ದು, ರಾಜ್ಯ ಬಿಜೆಪಿ (BJP Karnataka) ಪ್ರಚಾರ ಸಮಿತಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಅಧ್ಯಕ್ಷರಾಗಿ ಬಿಜೆಪಿ ನೇಮಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು
ಎಚ್‌3ಎನ್‌2 ಇನ್‌ಫ್ಲುಯೆಂಜಾ ಜ್ವರಕ್ಕೆ (H3N2 Virus) ಹಾಸನದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದು ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಎಚ್‌3ಎನ್‌2ಗೆ ಮೊದಲ ಬಲಿಯಾಗಿದೆ. ಈ ನಡುವೆ ಹರಿಯಾಣದಲ್ಲಿ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೆ ಮಾರಣಾಂತಿಕವಾಗದು ಎಂಬ ನಂಬಿಕೆ ಇದ್ದ ಈ ವೈರಸ್‌ ಈಗ ಜೀವ ಬಲಿಗೆ ಕಾರಣವಾಗಿದ್ದು ಆತಂಕ ಮೂಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌! ʻಕರ್ನಾಟಕ ಆರೋಗ್ಯ ಸಂಜೀವಿನಿʼ ಯೋಜನೆಯ ಕಾರ್ಯನೀತಿ ಪ್ರಕಟ
ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ʻಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆʼ (ಕೆಎಎಸ್‌ಎಸ್‌) (karnataka arogya sanjeevani) ಜಾರಿಗೆ ಸಂಬಂಧಿಸಿದಂತೆ ಪರಿಷ್ಕೃತ ಕಾರ್ಯನೀತಿಯನ್ನು ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. SC ST Reservation : ಎಸ್‌ಸಿ, ಎಸ್‌ಟಿ ಹೊಸ ಮೀಸಲಾತಿ ಜಾರಿ; ಸಮತಳ ಮೀಸಲಾತಿಯ ರೋಸ್ಟರ್‌ ಪ್ರಕಟ
ರಾಜ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ನೇಮಕಾತಿ ಹಾಗೂ ಹುದ್ದೆಗಳಲ್ಲಿ ಮೀಸಲಾತಿ (SC ST Reservation) ಹೆಚ್ಚಳ ಮಾಡಿ ಕಳೆದ ಅಕ್ಟೋಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರ ಈಗ ನಿಗದಿಪಡಿಸಲಾದ ಹೆಚ್ಚಿನ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ನೇರ ನೇಮಕಾತಿ ಮುಖಾಂತರ ಭರ್ತಿಮಾಡುವಾಗ ಅನುಸರಿಸಬೇಕಾದ ಸಮತಳ ಮೀಸಲಾತಿಯ (horizontal reservation) ರೋಸ್ಟರನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Modi visit to Mandya : 2 ಕಿ.ಮೀ ರೋಡ್‌ ಶೋ, 500 ಕಲಾ ತಂಡಗಳ ಪ್ರದರ್ಶನ, 2 ಲಕ್ಷ ಜನ
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗಾಗಿ ಮಾರ್ಚ್‌ 12ರ ಭಾನುವಾರ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ (Modi visit to Mandya) ಅವರು ಮಂಡ್ಯದಲ್ಲಿ ಸುಮಾರು ಎರಡು ಕಿ.ಮೀ. ರೋಡ್‌ ಶೋ ನಡೆಸಲಿದ್ದಾರೆ. ಮೋದಿ ಅವರು ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಂದುವರೆ ಲಕ್ಷ ಜನ ಭಾಗವಹಿಸಲಿದ್ದಾರೆ. ಈ ಮಾಹಿತಿಯನ್ನು ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು ಶುಕ್ರವಾರ ಮೈಸೂರಿನಲ್ಲಿ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Agniveers : ಮಾಜಿ ಅಗ್ನಿವೀರರಿಗೆ ಬಿಎಸ್ಎಫ್‌ನಲ್ಲಿ 10% ಉದ್ಯೋಗ ಮೀಸಲು ಘೋಷಿಸಿದ ಕೇಂದ್ರ ಸರ್ಕಾರ
ಕೇಂದ್ರ ಗೃಹ ಸಚಿವಾಲಯವು ಮಾಜಿ ಅಗ್ನಿವೀರರಿಗೆ ಗಡಿ ಭದ್ರತಾಪಡೆಯಲ್ಲಿ (Border Security Force -BSF) 10% ಮೀಸಲಾತಿಯನ್ನು ಘೋಷಿಸಿದೆ. ಗೃಹ ಸಚಿವಾಲಯವು ಈ ಮಾಜಿ ಅಗ್ನಿವೀರರಿಗೆ ಬಿಎಸ್‌ಎಫ್‌ ಸೇರಲು ಅನುಕೂಲ ಆಗುವಂತೆ ಗರಿಷ್ಠ ವಯೋಮಿತಿಯಲ್ಲಿ (Agniveers) ಕೂಡ 5 ವರ್ಷ ಸಡಿಲಗೊಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. BMTC Fire tragedy: ಕ್ಷಣಾರ್ಧದಲ್ಲಿ ಹೊತ್ತಿ ಉರಿವ ಬಸ್‌ಗಳು; ಬೆಂಗಳೂರಿನಲ್ಲಿ ಬಿಎಂಟಿಸಿ ಓಡಾಟ ಎಷ್ಟು ಸೇಫ್‌?
ಬಿಎಂಟಿಸಿ ಬಸ್‌ (Bmtc bus) ಅಗ್ನಿಗೆ (Bmtc Fire tragedy) ಆಹುತಿಯಾದ ಪರಿಣಾಮ ಬಸ್ಸಿನಲ್ಲಿ ಮಲಗಿದ್ದ ನಿರ್ವಾಹಕರೊಬ್ಬರು ಸಜೀವ ದಹನಗೊಂಡ ಘಟನೆ ಲಿಂಗಧೀರನಹಳ್ಳಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿತ್ತು. ನಗರದಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಮಾಮೂಲಿ ಆಗಿದೆ. ಈ ಹಿಂದೆಯೂ ಚಲಿಸುತ್ತಿದ್ದ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Jog Falls: ಬೇಸಿಗೆಯಲ್ಲೂ ಧುಮ್ಮಿಕ್ಕುತ್ತಿರುವ ಜೋಗ, ಏನು ಕಾರಣ?
ಮಳೆಗಾಲದ ನಾಲ್ಕು ತಿಂಗಳು ಮಾತ್ರ ಮೈತುಂಬಿಕೊಂಡು ಧುಮ್ಮಿಕ್ಕುವ, ಬೇಸಿಗೆಯಲ್ಲಿ ಸದಾ ಒಣಗಿರುವ ವಿಶ್ವವಿಖ್ಯಾತ ಜೋಗ ಜಲಪಾತ ಈ ಬಾರಿ ಬಿಸಿಲಕಾಲದಲ್ಲೂ ಸಾಕಷ್ಟು ತುಂಬಿಕೊಂಡೇ ಧುಮ್ಮಿಕ್ಕುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್‌ ನಂತರ ನೀರು ಕಡಿಮೆಯಾಗುತ್ತಾ ಹೋಗಿ ಮಾರ್ಚ್ ತಿಂಗಳ ಹೊತ್ತಿಗೆ ಜಲಪಾತ ಸೊರಗುತ್ತಿತ್ತು. ಆದರೆ ಈ ವರ್ಷ ರಾಜ, ರೋರರ್‌, ರಾಕೆಟ್‌, ರಾಣಿ ನಾಲ್ಕೂ ಜಲಧಾರೆಗಳಲ್ಲಿ ಸಾಕಷ್ಟು ನೀರು ಇದೆ. ಸುಮಾರು 200 ಕ್ಯೂಸೆಕ್ಸ್‌ನಷ್ಟು ನೀರು ಜಲಪಾತದಲ್ಲಿ ಹರಿಯುತ್ತಿದೆ. ಬಿರು ಬೇಸಿಗೆಯಲ್ಲಿಯೂ ನೀರು ಇರುವುದನ್ನು ಕಂಡು ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. IIP Growth : ಕೈಗಾರಿಕಾ ಬೆಳವಣಿಗೆ ಜನವರಿಯಲ್ಲಿ 5.2%ಕ್ಕೆ ಏರಿಕೆ, ಸತತ 3ನೇ ತಿಂಗಳಿಗೆ ವಿಸ್ತರಣೆ
  2. Naresh Pavitra Marriage: ಮೂರನೇ ಪತ್ನಿ ಡಿವೋರ್ಸ್‌ ಕೇಸ್‌ ನಡೆಯುತ್ತಿರುವಾಗಲೇ ನಾಲ್ಕನೇ ಮದುವೆ ಆದ ನರೇಶ್‌!
  3. ಹಿಂದೂ ದೇಗುಲಗಳ ಮೇಲೆ ದಾಳಿ: ಆಸ್ಟ್ರೇಲಿಯಾ ಪಿಎಂ ಭದ್ರತೆಯ ಭರವಸೆ ನೀಡಿದ್ದಾರೆ ಅಂದ್ರು ಪ್ರಧಾನಿ ಮೋದಿ
  4. Xi Jinping: 3ನೇ ಅವಧಿಗೆ ಕ್ಸಿ ಜಿನ್‌ಪಿಂಗ್ ಚೀನಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
  5. Child falls from Balcony: ಆಟವಾಡುತ್ತಾ ಬಾಲ್ಕನಿಯಿಂದ ಕೆಳಗೆ ಬಿದ್ದ 3 ವರ್ಷದ ಮಗು; ತಲೆಗೆ ಗಂಭೀರ ಗಾಯ
Exit mobile version