1. ಸಲಿಂಗ ಸಂಬಂಧ ಓಕೆ, ವಿವಾಹ ನಾಟ್ ಓಕೆ ಎಂದ ಸುಪ್ರೀಂಕೋರ್ಟ್; ಮದುವೆ ಮಾನ್ಯತೆ ವಿಚಾರ ಸಂಸತ್ತಿಗೆ
ದೇಶದಲ್ಲಿ ಸಲಿಂಗ ವಿವಾಹಕ್ಕೆ ಸಮಾನ ಮಾನ್ಯತೆಯ ಕುರಿತು ಸುಪ್ರೀಂ ಕೋರ್ಟ್ನ ಪಂಚಸದಸ್ಯ ಸಾಂವಿಧಾನಿಕ ನ್ಯಾಯಪೀಠ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಕಾರಣದಿಂದ ವಿಶೇಷ ವಿವಾಹ ಕಾಯಿದೆ ರದ್ದತಿ ಸಾಧ್ಯವಿಲ್ಲ. ಸಲಿಂಗ ವಿವಾಹ ಮಾನ್ಯತೆಯ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು ಎಂದು ಸಿಜೆಐ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ 1: ಸಲಿಂಗ ವಿವಾಹ ಮಾನ್ಯತೆ; ಇಲ್ಲಿವೆ ಸುಪ್ರೀಂ ಕೋರ್ಟ್ ಅಣಿಮುತ್ತುಗಳು
ಪೂರಕ ವರದಿ 2: ವಿಸ್ತಾರ Explainer: Same Sex Marriage: ಸಲಿಂಗ ಸಂಬಂಧ ಓಕೆ, ವಿವಾಹ ನಾಟ್ ಓಕೆ!
2. ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಡೈರಿ ಕಂಪನ- ಐಟಿ ದಾಳಿ ವೇಳೆ ಡೈರಿಯಲ್ಲಿ ಯಾರ ಹೆಸರಿದೆ?
ಒಂದು ವಾರದಿಂದ ನಡೆಯುತ್ತಿರುವ ಐಟಿ ದಾಳಿಯಲ್ಲಿ (IT raid in Bangalore) ಈಗಾಗಲೇ 92 ಕೋಟಿ ರೂ. ನಗದು ಪತ್ತೆಯಾಗಿರುವುದು ಒಂದು ಸುದ್ದಿಯಾದರೆ, ಇನ್ನೊಂದು ಕಡೆ ದಾಳಿ ವೇಳೆ ಡೈರಿಯೊಂದು ಪತ್ತೆಯಾಗಿರುವುದು (Diary found during IT Raid) ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲಿ ಯಾರ ಹೆಸರಿದೆ ಎನ್ನುವುದು ಚರ್ಚೆಯ ವಿಷಯವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ1: DK Shivakumar : ಐಟಿ ದಾಳಿಯಲ್ಲಿ ಸಿಕ್ಕಿರೋದು ಬಿಜೆಪಿ ಹಣ, ಡೈರಿ; ಡಿ.ಕೆ ಶಿವಕುಮಾರ್ ಹೇಳಿಕೆ
ಪೂರಕ ಸುದ್ದಿ2: ರಾಜ್ಯ ಲೂಟಿ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ: ಸಿ.ಎನ್.ಅಶ್ವತ್ಥ ನಾರಾಯಣ್ ಕಿಡಿ
3. ದಳಪತಿಗಳ ಕೋಟೆಯಲ್ಲಿ ತಾರಕಕ್ಕೇರಿದ ಸೈದ್ಧಾಂತಿಕ ಸಂಘರ್ಷ: ಸಿಎಂ ಇಬ್ರಾಹಿಂ ಉಚ್ಚಾಟನೆ?
ಜಾತ್ಯತೀತ ಜನತಾಳದಲ್ಲಿ ಸೈದ್ಧಾಂತಿಕ ಸಂಘರ್ಷ ಜೋರಾಗಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಎಚ್.ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನೇ ಸಿಎಂ ಇಬ್ರಾಹಿಂ ಉಚ್ಛಾಟನೆ ಮಾಡಿದ್ದಾರಂತೆ ಎಂಬ ಆದೇಶದ ಪ್ರತಿಯೊಂದು ವೈರಲ್ ಆಗಿದೆ. ಆದರೆ, ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನೇ ವಜಾ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಪಂಚಮಸಾಲಿಗಳಿಗೆ ಸದ್ಯಕ್ಕಿಲ್ಲ 2ಎ ಮೀಸಲಾತಿ ಗಿಫ್ಟ್ : ಹಾಗಿದ್ದರೆ ಇನ್ಯಾವಾಗ?
ಪಂಚಮಸಾಲಿ ಸಮುದಾಯಕ್ಕೆ (Panchamasali Community) ಸದ್ಯಕ್ಕೆ 2ಎ ಮೀಸಲಾತಿ (2A Reservation) ಸಿಗುವ ಸಾಧ್ಯತೆಗಳಿಲ್ಲ. ಯಾಕೆಂದರೆ, 2ಎ ಮೀಸಲಾತಿ ನೀಡಿಕೆ ಸಂಬಂಧ ಹೈಕೋರ್ಟ್ನಲ್ಲಿ ಎರಡು ಅರ್ಜಿಗಳಿದ್ದು, ಅವುಗಳು ಇತ್ಯರ್ಥವಾಗಬೇಕು. ಈ ವಿಚಾರವನ್ನು ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ (K Jayaprakash Hegde) ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಅ.21ಕ್ಕೆ ಮಾನವಸಹಿತ ಗಗನಯಾನದ ಪರೀಕ್ಷಾರ್ಥ ಪ್ರಯೋಗ-2035ಕ್ಕೆ ಬಾಹ್ಯಾಕಾಶ ಕೇಂದ್ರ ನಿರ್ಮಾಣ
ಇಸ್ರೋ ತನ್ನ ಮೊದಲ ಮಾನವ ಸಹಿತ ಗಗನಯಾನಕ್ಕೆ (Gaganyaan Mission) ಸರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಅಕ್ಟೋಬರ್ 21ರಂದು ಬೆಳಗಿನ 7 ಗಂಟೆಯಿಂದ 9 ಗಂಟೆಯ ನಡುವೆ ಮಿಷನ್ಗೆ ಬಳಸಲಾಗುವ ಮಾನವ ಬಾಹ್ಯಾಕಾಶ ನೌಕೆಯನ್ನು (Spaceflight) ಪರೀಕ್ಷಿಸಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. I.N.D.I.A ಮೈತ್ರಿಕೂಟಕ್ಕೆ ಖರ್ಗೆ, ರಾಹುಲ್ ಪ್ರಧಾನಿ ಅಭ್ಯರ್ಥಿ- ಸಂಚಲನ ಮೂಡಿಸಿದ ಶಶಿ ತರೂರ್ ಹೇಳಿಕೆ
2024ರ ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಇಂಡಿಯಾ ಕೂಟದ (India Bloc) ಪ್ರಧಾನಿ ಅಭ್ಯರ್ಥಿಯಾಗಿ (PM Candidate) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಥವಾ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರನ್ನು ಪಕ್ಷವು ಸೂಚಿಸಬಹುದು ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ಶಶಿ ತರೂರ್ (Shashi Tharoor)ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ICC World Cup 2023 : ಭಾರತ ವಿರುದ್ಧ ಸೋತು ಕಂಗೆಟ್ಟ ಪಾಕ್ ತಂಡಕ್ಕೆ ಜ್ವರದ ಬಾಧೆ!
ಅಹಮದಾಬಾದ್ನಲ್ಲಿ ಭಾರತ ವಿರುದ್ಧ ಹೀನಾಯ ಸೋಲಿನ ನಂತರ, ಪಾಕಿಸ್ತಾನ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ (ICC World Cup 2023) ಸಜ್ಜಾಗಬೇಕಾಗಿದೆ. ಅದಕ್ಕಾಗಿ ತಂಡ ಬೆಂಗಳೂರಿಗೆ ತಲುಪಿದೆ. ಆದರೆ ಪಾಖ್ ಶಿಬಿರದಲ್ಲಿ ಜ್ವರದ ಸಮಸ್ಯೆ ಕಾಣಿಸಿಕೊಂಡಿದೆ. ಅಬ್ದುಲ್ಲಾ ಶಫೀಕ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್ ಜ್ವರದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8.Anti Hindu HDFC: ಎಚ್ಡಿಎಫ್ಸಿ ಬ್ಯಾಂಕಿನಿಂದ ಹಿಂದೂ ವಿರೋಧಿ ಜಾಹೀರಾತು! ನೆಟ್ಟಿಗರು ಫುಲ್ ಗರಂ
ಸೈಬರ್ ವಂಚನೆಗಳ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಎಚ್ಡಿಎಫ್ಸಿ ಬ್ಯಾಂಕ್ ವಿಜಿಲ್ ಆಂಟಿ ಜಾಹೀರಾತು ಅಭಿಯಾನ ಕೈಗೊಂಡಿದೆ. ಆದರೆ, ಕೆಲವು ನೆಟ್ಟಿಗರು ಈ ಜಾಹೀರಾತು ಹಿಂದೂ ವಿರೋಧಿ ಎಂದು ಆರೋಪಿಸಿದ್ದಾರೆ. ಹಾಗಿದ್ದರೆ ಏನಿದೆ ಆ ಜಾಹೀರಾತಿನಲ್ಲಿ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. Success Story: ಉಜಾಲಾ ಮೂಲಕ ಜನಸಾಮಾನ್ಯರೂ ಹೊಳೆಯುವಂತೆ ಮಾಡಿದ ರಾಮಚಂದ್ರನ್
ಮೂಥೆದತ್ ಪಂಜನ್ ರಾಮಚಂದ್ರನ್ ಯಶಸ್ವಿ ಉದ್ಯಮಿ. ಹೀಗೆಂದ ಕೂಡಲೇ ಅವರು ಯಾರು ಎನ್ನುವುದು ಬಹುತೇಕರಿಗೆ ಗೊತ್ತಾಗುವುದಿಲ್ಲ. ಉಜಾಲಾ(Ujala) ಕಂಪೆನಿ ಸ್ಥಾಪಕರು ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಜನ ಸಾಮಾನ್ಯರ ಬದುಕಲ್ಲಿ ಉಜಾಲಾ ಬೀರಿದ ಹೊಳಪು ಅಂತಹದ್ದು. ರಾಮಚಂದ್ರನ್ ಅವರ ಯಶಸ್ಸಿನ ಪಯಣದ ಕಥೆ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. Viral News: ಕಾರಿನಲ್ಲಿ ವೇಗವಾಗಿ ಹೋಗುವಾಗ ಗಮನಿಸಿ; ಈತನಿಗೆ ಬಿದ್ದ ಫೈನ್ 11.65 ಕೋಟಿ ರೂ.!
ʼಮೂಗಿಗಿಂತ ಮೂಗುತಿ ಭಾರʼ ಎನ್ನುವ ಗಾದೆ ಮಾತಿದೆ. ಬಹುಶಃ ಈ ಮಾತು ಅಮೆರಿಕದ ವ್ಯಕ್ತಿಯೊಬ್ಬರಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಯಾಕೆಂದರೆ ಕಾರಿಗಿಂತ ಹಲವು ಪಟ್ಟು ಹೆಚ್ಚಿನ ದಂಡ ಅವರಿಗೆ ಬಂದಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕಾಗಿ ಜಾರ್ಜಿಯಾ ಮೂಲದ ಈತನಿಗೆ ಬರೋಬ್ಬರಿ 1.4 ಮಿಲಿಯನ್ ಡಾಲರ್ (11.65 ಕೋಟಿ ರೂ.) ದಂಡ ವಿಧಿಸಲಾಗಿದೆ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ