1. Muslim Quota Issue : ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರಿಂ ಕೋರ್ಟ್ ತಡೆ
ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ ಶೇ.4 ಮೀಸಲು ರದ್ದು (Muslim Quota Issue) ಮಾಡಿ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ (Supreme Court) ಮಂಗಳವಾರ ತಡೆ ನೀಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Muslim quota issue : ಮುಸ್ಲಿಂ ಮೀಸಲು ಬಗ್ಗೆ ಮೇ 9ರವರೆಗೆ ಯಾವುದೇ ನಿರ್ಧಾರ ಇಲ್ಲ ಎಂದ ಸಿಎಂ ಬೊಮ್ಮಾಯಿ
ಹೆಚ್ಚಿನ ಓದಿಗಾಗಿ: Muslim Reservation: ತನ್ನದೇ ಆದೇಶವನ್ನು ಸರ್ಕಾರ ಕೋರ್ಟ್‌ನಲ್ಲಿ ಏಕೆ ಸಮರ್ಥಿಸಿಕೊಳ್ಳಲಿಲ್ಲ?: ಬಿಜೆಪಿ ಸರ್ಕಾರಕ್ಕೆ ಸುರ್ಜೆವಾಲ 9 ಪ್ರಶ್ನೆ
2. Karnataka Election: ಕೊಟ್ಟ ಮಾತಿನಂತೆ ನಡೆಯುವ ಏಕೈಕ ಗಂಡು ಕುಮಾರಸ್ವಾಮಿ: ಎಚ್.ಡಿ. ದೇವೇಗೌಡ
ಪಂಚರತ್ನ ಯೋಜನೆ ಜನರಿಗೆ ಸಹಕಾರಿ ಆಗಲಿದೆ. ಕೊಟ್ಟ ಮಾತಿನಂತೆ ನಡೆಯುವ ಗಂಡು ಯಾರಾದರೂ ಇದ್ದರೆ ಅದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ. ಜನರಿಗೆ ಅವರ ಬಗ್ಗೆ ವಿಶ್ವಾಸ ಇದೆ. ಹೀಗಾಗಿ ಜೆಡಿಎಸ್ ಬಹುಮತ ಪಡೆದು ಸ್ವತಂತ್ರ ಸರ್ಕಾರ (Karnataka Election) ರಚನೆ ಮಾಡಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election : ಶೆಟ್ಟರ್ ಕೋ ಕಭೀ ಮಾಫ್ ನಹೀ ಕರನಾ: ಅಮಿತ್ ಶಾ ಕಠಿಣ ಸಂದೇಶ
3. Priyanka Gandhi: ಬಿಜೆಪಿ ಲೂಟಿ ಮಾಡಿದ್ದು ₹1.5 ಲಕ್ಷ ಕೋಟಿ: 100 ಏಮ್ಸ್ ಕಟ್ಟಬಹುದಿತ್ತು ಎಂದ ಪ್ರಿಯಾಂಕಾ ಗಾಂಧಿ
ಕರ್ನಾಟಕದಲ್ಲಿರುವ 40% ಕಮಿಷನ್ ಸರ್ಕಾರವು ಒಟ್ಟು 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪ ಮಾಡಿದ್ದಾರೆ. ಹಾಗೂ ಈ ಹಣದಲ್ಲಿ ಏನೇನು ಮಾಡಬಹುದಾಗಿತ್ತು ಎಂಬ ಲೆಕ್ಕವನ್ನು ತಿ. ನರಸೀಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Karnataka Election 2023 : ನಾಳೆಯಿಂದ ಕಿಚ್ಚ ಸುದೀಪ್ ಪ್ರಚಾರ; ಈ ಬಾರಿ ಯಾವ ನಟ-ನಟಿಯರೆಲ್ಲಾ ಪ್ರಚಾರ ಮಾಡಲಿದ್ದಾರೆ?
ರಾಜ್ಯ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು (Karnataka Election 2023), ಸ್ಯಾಂಡಲ್‌ವುಡ್ (sandalwood) ನಟ-ನಟಿಯರು ತಮ್ಮ, ಪಕ್ಷ, ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಈಗಾಲೇ ಚುನಾವಣಾ ಕಣದಲ್ಲಿ ʻಬೆವರುʼ ಸುರಿಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Water Metro: ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋಗೆ ಚಾಲನೆ, ಟಿಕೆಟ್ ದರ ಎಷ್ಟು?
ದೇಶದ ಮೊದಲ ವಾಟರ್ ಮೆಟ್ರೋಗೆ (Water Metro) ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಡ್ರೀಮ್ ಪ್ರಾಜೆಕ್ಟ್ ಎಂದು ಕರೆದಿದ್ದಾರೆ. (Kochi Water Metro) ಭಾರತದ ಸಾರಿಗೆ ವಲಯದದಲ್ಲಿ ಈ ಜಲ ಸಾರಿಗೆ ಕ್ರಾಂತಿ ಉಂಟು ಮಾಡುವ ನಿರೀಕ್ಷೆ ಇದೆ. ಹಾಗಾದರೆ ಏನಿದು? ಇದರ ವಿಶೇಷತೆ ಏನು? ಪ್ರಯಾಣಿಕರಿಗೆ ಕನಿಷ್ಠ-ಗರಿಷ್ಠ ಟಿಕೆಟ್ ದರ ಎಷ್ಟು? ಇಲ್ಲಿದೆ ವಿವರ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Narendra Modi: ಕೇರಳದ ಪ್ರಮುಖ ಪಾದ್ರಿಗಳ ಭೇಟಿ ಮಾಡಿದ ಪ್ರಧಾನಿ ಮೋದಿ, ಕ್ರೈಸ್ತ ಸಮುದಾಯದತ್ತ ಪಕ್ಷದ ಗಮನ
6. Drowned in canal : ಮಂಡ್ಯದ ವಿ ಸಿ ನಾಲೆಯಲ್ಲಿ ಮುಳುಗಿ ಐವರು ಸಾವು, ನೀರಿಗೆ ಬಿದ್ದ ಬಾಲಕನ ರಕ್ಷಿಸಲು ಹೋದಾಗ ದುರಂತ
ಮಂಡ್ಯದ ವಿಸಿ ನಾಲೆಯಲ್ಲಿ ಮುಳುಗಿ ಐವರು ಮೃತಪಟ್ಟ ದಾರುಣ ಘಟನೆ (drowned in canal) ನಡೆದಿದೆ. ನೀರುಪಾಲಾದ ಐವರ ಪೈಕಿ ಮೂವರ ಶವವನ್ನು ಮೇಲಕ್ಕೆತ್ತಲಾಗಿದ್ದು, ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Operation Kaveri: ಆಪರೇಷನ್ ಕಾವೇರಿ ಶುರು, ಸುಡಾನ್‌ನಿಂದ ಹೊರಟ 278 ಭಾರತೀಯರ ಮೊದಲ ಬ್ಯಾಚ್
ಯುದ್ಧಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಷನ್ ಕಾವೇರಿ (Operation Kaveri) ಶುರುವಾಗಿದೆ. 278 ಭಾರತೀಯರ ಮೊದಲ ಬ್ಯಾಚ್ ಸುಡಾನ್‌ನಿಂದ (Sudan) ಹೊರಟಿದ್ದು, ಶೀಘ್ರವೇ ಭಾರತವನ್ನು ತಲುಪಲಿದೆ. ”ಆಪರೇಷನ್ ಕಾವೇರಿ ಅಡಿಯಲ್ಲಿ ಭಾರತೀಯರ ಮೊದಲ ಬ್ಯಾಚ್ ಸುಡಾನ್‌ನಿಂದ ಹೊರಡುತ್ತಿದೆ. 278 ಜನರೊಂದಿಗೆ ಐಎನ್‌ಎಸ್ ಸುಮೇಧಾ ಸೌದಿ ಅರೆಬಿಯಾದ ಜೆಡ್ಡಾಕ್ಕೆ ಪೋರ್ಟ್ ಸುಡಾನ್‌ನಿಂದ ಹೊರಡುತ್ತಿದೆ,” ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂಧಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Indonesia Earthquake: ಇಂಡೋನೇಷ್ಯಾದಲ್ಲಿ 7.3 ತೀವ್ರತೆಯ ಭೂಕಂಪ; ಸುನಾಮಿ ಏಳುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಇಂಡೋನೇಷ್ಯಾದ ಪಶ್ಚಿಮ ಪ್ರಾಂತ್ಯದಲ್ಲಿರುವ ಸುಮಾತ್ರಾ ದ್ವೀಪದಲ್ಲಿ ಇಂದು ಪ್ರಬಲ ಭೂಕಂಪ ಉಂಟಾಗಿದೆ (Indonesia Earthquake). ರಿಕ್ಟರ್ ಮಾಪಕದಲ್ಲಿ 7.3ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಬೆನ್ನಲ್ಲೇ ಇಂಡೋನೇಷ್ಯಾದ ಭೂಭೌತಶಾಸ್ತ್ರ ಏಜೆನ್ಸಿ (BMKG) ‘ಸುನಾಮಿ’ ಎಚ್ಚರಿಕೆಯನ್ನು ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ವಿಡಿಯೊ ನೋಡುತ್ತಿದ್ದಾಗಲೇ ಮೊಬೈಲ್ ಸ್ಫೋಟವಾಗಿ 8 ವರ್ಷದ ಬಾಲಕಿ ಸಾವು; ಮುಖ, ಕೈಯೆಲ್ಲ ಛಿದ್ರಛಿದ್ರ
ಕೈಯಲ್ಲಿ ಹಿಡಿದಿದ್ದ ಮೊಬೈಲ್ ಸ್ಫೋಟಗೊಂಡು 8ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದುರ್ಘಟನೆ ಕೇರಳದ ತಿರುವಿಲ್ವಾಮಲದಲ್ಲಿ ನಡೆದಿದೆ. ಬಾಲಕಿಯ ಹೆಸರು ಆದಿತ್ಯಶ್ರೀ ಎಂದಾಗಿದ್ದು, ಅಶೋಕ್ ಕುಮಾರ್ ಮತ್ತು ಸೌಮ್ಯಾ ದಂಪತಿಯ ಪುತ್ರಿ. ಅಶೋಕ್ ಕುಮಾರ್ ಅವರು ತಿರುವಿಲ್ವಾಮಲ ಗ್ರಾಮ ಪಂಚಾಯಿತಿಯ ಪಜಯನ್ನೂರು ಬ್ಲಾಕ್ನ ಮಾಜಿ ಸದಸ್ಯ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Urban cooperative banks : ನಗರ ಸಹಕಾರಿ ಬ್ಯಾಂಕ್‌ಗಳ ಸುಧಾರಣೆಗೆ ಆರ್‌ಬಿಐ ಹೊಸ ನಿಯಮ ಜಾರಿ, ಪರಿಣಾಮವೇನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ನಗರ ಸಹಕಾರಿ ಬ್ಯಾಂಕ್‌ಗಳ ಸುಧಾರಣೆಗೆ ಮಹತ್ವದ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ( Urban cooperative banks ) ನಗರ ಸಹಕಾರಿ ಬ್ಯಾಂಕ್‌ಗಳ ಸ್ಟ್ಯಾಂಡರ್ಡ್ ಅಸೆಟ್‌ಗಳಿಗೆ ಪ್ರಾವಿಶನಿಂಗ್ ಕುರಿತ ಹೊಸ ನಿಯಮಾಳಿಗಳನ್ನು (ಮುನ್ನೇರ್ಪಾಟು) ಜಾರಿಗೊಳಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರ್‌ಬಿಐ, ನಗರ ಸಹಕಾರಿ ಬ್ಯಾಂಕ್‌ಗಳನ್ನು ನಿಯಂತ್ರಕ ಉದ್ದೇಶಗಳಿಗೆ 1,2,3 ಮತ್ತು 4 ಎಂದು ನಾಲ್ಕು ಸ್ತರಗಳಲ್ಲಿ ವರ್ಗೀಕರಿಸಿತ್ತು. ಇದಕ್ಕೂ ಮುನ್ನ 1 ಮತ್ತು 2 ಸ್ತರಗಳು ಮಾತ್ರ ಇತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- IPL 2023: ಗುಜರಾತ್-ಮುಂಬೈ ಪಂದ್ಯದಲ್ಲಿ ಸಾರಾ ತೆಂಡೂಲ್ಕರ್ ಪ್ರಮುಖ ಹೈಲೆಟ್; ಕಾರಣ ಏನು?
- PF For Medical Reason : ಅನಾರೋಗ್ಯದ ಸಂದರ್ಭ ಪಿಎಫ್‌ನಿಂದ ಮುಂಗಡ ಪಡೆಯುವುದು ಹೇಗೆ? ಇಲ್ಲಿದೆ ಡಿಟೇಲ್ಸ್
- Actress Ramya: ಮೋಹಕ ತಾರೆ ರಮ್ಯಾ ಕನ್ನಡ ಸಿನಿಮಾ ಪಯಣಕ್ಕೆ ಈಗ 20 ವರ್ಷ
- Aadhaar Rules | 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಪರಿಷ್ಕರಣೆ ಕಡ್ಡಾಯ, ಆನ್‌ಲೈನ್‌ನಲ್ಲಿ ಹೇಗೆ?
- ಬೆಲೆ ಏರಿಕೆಯಿಂದ ಸಂಕಷ್ಟ, 18ತಿಂಗಳ ಮಗುವಿಗೆ ಕೀಟದ ತಿನಿಸು ಕೊಡಲು ಶುರು ಮಾಡಿದ ತಾಯಿ; ಇಳಿಕೆಯಾಯ್ತು ಖರ್ಚು!