ಬೆಂಗಳೂರು: ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನೆಯ ವೇಳೆ ಜಾಮಾ ಮಸೀದಿ ವಿರುದ್ಧ ಘೋಷಣೆಗಳು ಕೇಳಿಬಂದಿದೆ, ಹನುಮ ಮಂದಿರ ನಿರ್ಮಿಸುವುದಾಗಿ ಹೇಳಿದ್ದಾರೆ. ಪಂಚಮಸಾಲಿ ಮೀಸಲಾತಿ ಕುರಿತು ವಚನಾನಂದ ಶ್ರೀ ಮತ್ತು ಶಾಸಕ ಯತ್ನಾಳ್ ನಡುವಿನ ವಾಗ್ದಾಳಿ ತೀವ್ರವಾಗಿದೆ, ಔಷಧಗಳಿಗೆ ಬಾರ್‌ಕೋಡ್ ಕಡ್ಡಾಯ ಮಾಡಲಾಗಿದೆ, ಮಹಿಳೆಯೊಬ್ಬಳು ನೆರೆಮನೆಯ ವೃದ್ಧೆಯನ್ನು ಕೊಂದು ಕಪಾಟಿನಲ್ಲಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ, ಬೆಂಗಳೂರಿನಲ್ಲಿ ಕಾಣಿಸಿಕೊಂಡ ಚಿರತೆಯ ಹುಡುಕಾಟ ನಡೆಯುತ್ತಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Hanuman sankirtan yatra | ಜಾಮಿಯಾ ಮಸೀದಿ ಜಾಗ ನಮ್ಮದು ಎಂದು ನುಗ್ಗಲು ಮಾಲಾಧಾರಿಗಳ ಯತ್ನ; ಶ್ರೀರಂಗಪಟ್ಟಣ ಉದ್ವಿಗ್ನ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಎದುರು ಸಾವಿರಾರು ಹನುಮ ಮಾಲಾಧಾರಿಗಳು ಜಮಾಯಿಸಿ ಪ್ರತಿಭಟನೆ ನಡೆಸಿ, ಮಸೀದಿ ನಿರ್ಮಾಣವಾಗಿರುವ ಜಾಗ ನಮ್ಮದು, ಸ್ಥಳದಲ್ಲಿ ಹನುಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಘೋಷಣೆಗಳನ್ನು ಕೂಗಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು. ಹನುಮ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹನುಮ ಸಂಕೀರ್ತನಾ ಯಾತ್ರೆ (Hanuman sankirtan yatra) ವೇಳೆ ಹನುಮ ಮಾಲಾಧಾರಿಗಳು ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅಲ್ಲದೆ, ಒಂದು ಕಡೆ ಮನೆಯೊಂದರ ಮೇಲೆ ಮುಸ್ಲಿಂ ಬಾವುಟವನ್ನು ಕಿತ್ತುಹಾಕಿ ಕೇಸರಿ ಧ್ವಜವನ್ನು ಸ್ಥಾಪನೆ ಮಾಡಿರುವುದು ಸಹ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ವಚನಾನಂದ ಶ್ರೀ-ಯತ್ನಾಳ್ ನಡುವೆ ಜೋಕರ್-ಬ್ರೋಕರ್ ವಾರ್: ಸ್ವಾಮೀಜಿ ಬಣ್ಣ ಬಯಲು ಮಾಡುವೆ ಎಂದ ಶಾಸಕ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನಡುವಿನ ವಾಕ್ಸಮರ ಮುಂದುವರಿದಿದೆ.
ಗದಗದಲ್ಲಿ ಆಯೋಜನೆಯಾಗಿದ್ದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಶ್ರೀ ವಚನಾನಂದ ಸ್ವಾಮೀಜಿ, ಕೆಲವರು ನಮ್ಮ ಬಗ್ಗೆ ವ್ಯಕ್ತಿಗತವಾಗಿ ಟೀಕೆ ಮಾಡುತ್ತಾರೆ. ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ ಎಂದರೆ ಅವರಿಗಿಂತ ನಾವು ಮುಂದೆ ಇದ್ದೇವೆ ಅಂತ ಅರ್ಥ. ಜೋಕರ್‌ಗಳು ಟೀಕೆ ಮಾಡುತ್ತಾರೆ ಎಂದರೆ ನಾವು ತಲೆಕೆಡಿಸಿಕೊಳ್ಳುವದಿಲ್ಲ. ಜೋಕರ್‌ಗಳಿಗೆ ಜೋಕ್ ಇಲ್ಲ ಅಂದ್ರೆ ಜಾಬ್ ಇಲ್ಲ ಎಂದು ಮತ್ತೊಮ್ಮೆ ಬಸನಗೌಡ ಯತ್ನಾಳರನ್ನು ಜೋಕರ್ ಎಂದು ಸ್ವಾಮೀಜಿ ಸಂಬೋಧಿಸಿದರು. ವಿಜಯಪುರದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹರಿಹರ ವಚನಾನಂದಶ್ರೀ ಬ್ರೋಕರ್ ಸ್ವಾಮಿ. ಮಂತ್ರಿಗಿರಿ ಮಾಡಲು ಹರಿಹರ ಶ್ರೀ 10 ಕೋಟಿ ರೂ. ವಸೂಲಿ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್‌ವೈ ಅವರಿಂದ ಹರಿಹರ ಶ್ರೀ 10 ಕೋಟಿ ರೂ. ತೆಗೆದುಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Medicine with Barcode | ಭಾರತದಲ್ಲಿ ಬಾರ್‌ಕೋಡ್ ಸಹಿತ ಔಷಧ ಮಾರಾಟ ಕಡ್ಡಾಯ
ಬಾರ್ ಕೋಡ್ ಇಲ್ಲದೇ ಯಾವುದೇ ಔಷಧವನ್ನು ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರವು, ದೇಶದಲ್ಲಿ ಔಷಧಗಳನ್ನು ಬಾರ್ ಕೋಡ್ ಸಹಿತ (Medicine with Barcode) ಮಾರಾಟ ಮಾಡಬೇಕು. ಬಾರ್ ಕೋಡ್ ಅಳವಡಿಕೆಯಿಂದ ಔಷಧದ ಅಧಿಕೃತತೆ ಮತ್ತು ಅದನ್ನು ಪತ್ತೆ ಹಚ್ಚಲು ನೆರವಾಗುತ್ತದೆ ಎಂದು ತಿಳಿಸಿದೆ. ಈ ನಿರ್ಧಾರವು 2023ರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಬಾರ್ ಕೋಡ್ ಅಳವಡಿಕೆಯನ್ನು ಔಷಧಗಳ ಆಧಾರ್ ಕಾರ್ಡ್ ಎಂದೇ ಗುರುತಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಎಲ್ಲಿ ಹೋಯ್ತು ಚಿರತೆ? -ಅರಣ್ಯ ಇಲಾಖೆಯ ಮೂರು ತಂಡಗಳಿಂದ ಮುಂದುವರಿದ ಶೋಧ
ತುರಹಳ್ಳಿ ಅರಣ್ಯಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದೆ. 4 ದಿನಗಳು ಕಳೆದರೂ ಅವುಗಳನ್ನು ಪತ್ತೆ ಮಾಡಿ ಹಿಡಿಯಲು ಸಾಧ್ಯವಾಗಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಇಂದೂ ಕೂಡ ಚಿರತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕಗ್ಗಲೀಪುರ ವಲಯದ RFO ನೇತೃತ್ವದಲ್ಲಿ, ಮೂರು ತಂಡಗಳನ್ನು ಮಾಡಿಕೊಂಡು ಚಿರತೆಗಾಗಿ ಶೋಧ ನಡೆಸಲಾಗುತ್ತಿದೆ. ಎಲ್ಲೆಲ್ಲಿ ಹೆಜ್ಜೆ ಗುರುತುಗಳಿವೆಯೋ, ಅಲ್ಲೆಲ್ಲ ಹುಡುಕಾಟ ನಡೆಸಲಾಗುತ್ತಿದೆ. ಚಿರತೆ ಸುಳಿವು ಇರುವ ಕಡೆಗಳಲ್ಲೆಲ್ಲ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿಯೆಲ್ಲ ಗಸ್ತು ತಿರುಗುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Tiger Attack | ಗುಂಡ್ಲುಪೇಟೆ ಸುತ್ತಮುತ್ತ ಹುಲಿ ಹಾವಳಿ; ಜಾನುವಾರುಗಳು ಬಲಿ, ಜನರಲ್ಲಿ ಹೆಚ್ಚಿದ ಆತಂಕ
5. Murder Case | ಮುಸ್ಲಿಂ ಮಹಿಳೆಯಿಂದ ಅಜ್ಜಿಯ ಭೀಕರ ಕೊಲೆ; ಕಬೋರ್ಡ್‌ನಲ್ಲಿ ಶವ ಬಚ್ಚಿಟ್ಟು ಪರಾರಿ
ಆನೇಕಲ್ ತಾಲೂಕಿನ ನೆರಳೂರು ಬಳಿ ಮನೆಯೊಂದರಲ್ಲಿ ವಯೋವೃದ್ಧೆಯೊಬ್ಬರನ್ನು ಮುಸ್ಲಿಂ ಮಹಿಳೆ ಕೊಲೆ (Murder Case) ಮಾಡಿ ಬಳಿಕ ಶವವನ್ನು ಕಬೋರ್ಡ್‌ನಲ್ಲಿ ಬಚ್ಚಿಟ್ಟು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆನೇಕಲ್ ತಾಲೂಕಿನ ನೆರಳೂರು ಬಳಿಯ ಬಹುಮಹಡಿ ಮನೆಯೊಂದರಲ್ಲಿ ಈ ಪ್ರಕರಣ ನಡೆದಿದೆ. ಪಾರ್ವತಮ್ಮ ಕೊಲೆಯಾದವರು. ಪಾವಲ್ ಖಾನ್ ಎಂಬಾಕೆ ಕೊಲೆ ಮಾಡಿ ಪರಾರಿಯಾಗಿರುವ ಮುಸ್ಲಿಂ ಮಹಿಳೆಯಾಗಿದ್ದಾಳೆ. ಪಾರ್ವತಮ್ಮ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಗೊತ್ತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Congress Yatra | ಜ.26ರಿಂದ ಹಾಥ್ ಸೇ ಹಾಥ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಸಜ್ಜು
ಭಾರತ್ ಜೋಡೋ ಯಾತ್ರೆ ಮುಗಿಯುವ ಮುನ್ನವೇ ಕಾಂಗ್ರೆಸ್ ಮತ್ತೊಂದು ಯಾತ್ರೆಗೆ (Congress Yatra) ಸಿದ್ಧವಾಗುತ್ತಿದೆ. ಜನವರಿ 26ರಿಂದ ಹಾಥ್ ಸೇ ಹಾಥ್ ಜೋಡೋ ಯಾತ್ರೆಯನ್ನು (Hath se Hath Jodo Yatra) ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ಯಾತ್ರೆಯು ಹಳ್ಳಿಗಳಲ್ಲಿ ನಡೆಯಲಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶ ಮತ್ತು ರಾಜ್ಯ ಮಟ್ಟದಲ್ಲಿ ರ್ಯಾಲಿಗಳನ್ನು ಆಯೋಜಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Tickets To Muslim Women | ಮುಸ್ಲಿಂ ಮಹಿಳೆಯರಿಗೆ ಚುನಾವಣೆ ಟಿಕೆಟ್ ನೀಡುವುದು ಇಸ್ಲಾಂ ವಿರೋಧಿ, ಶಾಹಿ ಇಮಾಮ್ ವಿವಾದ
ಮುಸ್ಲಿಂ ಹೆಣ್ಣುಮಕ್ಕಳಿಗೆ ಮಸೀದಿಗಳ ಪ್ರವೇಶಕ್ಕೆ ನಿರ್ಬಂಧಿಸಿರುವ ಕುರಿತು ಆಗಾಗ ಚರ್ಚೆಗಳು ನಡೆಯುತ್ತವೆ. ಪ್ರವೇಶ ಕಲ್ಪಿಸಬೇಕು ಎಂಬ ಹಕ್ಕೊತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಮುಸ್ಲಿಂ ಮೌಲ್ವಿ ಅವರು ಹೆಣ್ಣುಮಕ್ಕಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಂ ಹೆಣ್ಣುಮಕ್ಕಳಿಗೆ ಟಿಕೆಟ್ (Tickets To Muslim Women) ನೀಡುವುದು ಇಸ್ಲಾಂ ವಿರೋಧಿ” ಎಂದು ಅಹಮದಾಬಾದ್‌ನಲ್ಲಿರುವ ಜಾಮಾ ಮಸೀದಿಯ ಶಾಹಿ ಇಮಾಮ್ ಶಬ್ಬೀರ್ ಅಹ್ಮದ್ ಸಿದ್ದಿಕಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ವಿಸ್ತಾರ Explainer | ದಿಲ್ಲಿ ಕಾರ್ಪೊರೇಷನ್ ಗೆಲ್ಲೋರು ಯಾರು? ಬಿಜೆಪಿ-ಆಪ್ ಮಧ್ಯೆ ಸ್ಪರ್ಧೆ, ಕಾಂಗ್ರೆಸ್ ಸ್ಥಿತಿ ಏನು?
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್- ಎಂಸಿಡಿಗೆ(Municipal Corporation of Delhi) ಡಿ.4, ಭಾನುವಾರ ಮತದಾನ ನಡೆಯುತ್ತಿದೆ. ಕಾರ್ಪೊರೇಷನ್ ಚುನಾವಣೆಯೇ ಆದರೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ(BJP) ಮತ್ತು ದಿಲ್ಲಿ ವಿಧಾನಸಭೆಯಲ್ಲಿ ಪ್ರಾಬಲ್ಯವನ್ನು ಹೊಂದಿರುವ ಆಮ್ ಆದ್ಮಿ ಪಾರ್ಟಿ(AAP) ಬಹಳ ತುರುಸಿನಿಂದ ಚುನಾವಣೆಯನ್ನು ಎದುರಿಸುತ್ತಿವೆ. ಇದರ ಮಧ್ಯೆ, ಕಾಂಗ್ರೆಸ್ (Congress) ಕೂಡ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಈ ಕುರಿತು ವಿಸ್ತಾರ Explainer ಇಲ್ಲಿದೆ.
9. Tirutpati Temple | ನವೆಂಬರ್ ತಿಂಗಳಲ್ಲಿ 127 ಕೋಟಿ ರೂಪಾಯಿ ಆದಾಯ ಗಳಿಸಿದ ತಿರುಪತಿ ದೇಗುಲ
ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ (Tirutpati Temple) ಕಳೆದ ನವೆಂಬರ್ ತಿಂಗಳಲ್ಲಿ ದಾಖಲೆಯ ೧೨೭ ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಆದಾಯದಲ್ಲಿ ಚೇತರಿಕೆ ಕಂಡಿದೆ. ಕೊರೊನಾ ನಿರ್ಬಂಧಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಭಕ್ತರು ತಿರುಪತಿಗೆ ಸತತವಾಗಿ ಭೇಟಿ ನೀಡುತ್ತಿರುವ ಕಾರಣ ಆದಾಯದಲ್ಲಿ ಏರಿಕೆ ಕಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಇಂದು ಗೀತಾ ಜಯಂತಿ | ಬದುಕಿನ ಸಂಘರ್ಷಗಳಿಗೆ ಭಗವದ್ಗೀತೆ ಪರಿಹಾರ
ಭಗವದ್ಗೀತೆ ಸರ್ವಕಾಲಿಕ ಮತ್ತು ಸರ್ವವ್ಯಾಪಕ. ವಿದೇಶಗಳಲ್ಲೂ ಇಂದು ಗೀತೆಯು ಅಧ್ಯಯನದ ವಿಷಯ. ಮ್ಯಾನೇಜ್‍ಮೆಂಟ್ ತರಗತಿಗಳಲ್ಲಿ ಗೀತೆಯ ಅದ್ಯಾಯಗಳನ್ನು ಮತ್ತು ತಾತ್ಪರ್ಯಗಳನ್ನು ತರಗತಿಗಳಲ್ಲಿ ಬೋಧಿಸಲಾಗುತ್ತಿದೆ. ಈ ಕುರಿತು ಮಯೂರಲಕ್ಷ್ಮಿ ಅವರ ವಿಶೇಷ ಲೇಖನ.
ಮತ್ತಷ್ಟು ಓದಿಗಾಗಿ: ಧವಳ ಧಾರಿಣಿ ಅಂಕಣ | ಇಂದು ಗೀತಾಜಯಂತಿ | ವಿಷಾದದ ಅಂತಿಮ ಫಲವೇ ಯುದ್ಧವೆಂದು ಸಾರಿದ ವಿಷಾದಯೋಗ
ವಿಸ್ತಾರ TOP 10 NEWS Plus
- ಸಿದ್ದರಾಮಯ್ಯ, ಡಿಕೆಶಿ ಸ್ಪರ್ಧೆ ಮಾಡುವುದು ಬೇಡ ಎಂದ ಸಂತೋಷ್ ಲಾಡ್; ಸೇಫ್ ಜಾಗ ಇರಲಿ ಎಂದ ಸತೀಶ್ ಜಾರಕಿಹೊಳಿ
- INDvsBAN | ಏಳು ವರ್ಷದ ಬಳಿಕ ಬಾಂಗ್ಲಾದೇಶ ತಂಡಕ್ಕೆ ಮಂಡಿಯೂರಿದ ಭಾರತ ತಂಡ
- Badruddin Ajmal Apology | ಹಿಂದುಗಳ ಬಗ್ಗೆ ವಿವಾದಾತ್ಮಕ ಹೇಳಿಕೆ, ನನ್ನ ಬಗ್ಗೆ ನನಗೇ ನಾಚಿಕೆ ಆಗ್ತಿದೆ ಎಂದ ಅಸ್ಸಾಂ ಸಂಸದ ಅಜ್ಮಲ್
- Manjhi 2.0 | 1,500 ಅಡಿ ಎತ್ತರದ ಬೆಟ್ಟದ ಮೇಲಿನ ದೇಗುಲಕ್ಕೆ 8 ವರ್ಷ ಶ್ರಮಿಸಿ 400 ಮೆಟ್ಟಿಲು ಕೊರೆದ ಪರಮ ಭಕ್ತ!
- ವಿಸ್ತಾರ Explainer | ಭಾರತೀಯ ಸೇನಾ ಫೀಲ್ಡ್ ಮಾರ್ಷಲ್ ನೇಮಕ ಹೇಗೆ, ಕಾರ್ಯಗಳೇನು?
- Video| ಅಮ್ಮ ಹೀರಾಬೆನ್ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ; ಚಹಾ ಸವಿಯುತ್ತ ಮಾತುಕತೆ
- ಪೋಸ್ಟ್ ಬಾಕ್ಸ್ 143 | ದೂರ- ಅಂತರಗಳೆಂಬ ಮಾಯೆ!
- ಪ್ರಣಾಮ್ ಭಾರತ್ ಅಂಕಣ | “ತೋಡಾ ದೇಖ್ ಲೇನಾ ಸಾಬ್”