Site icon Vistara News

ವಿಸ್ತಾರ TOP 10 NEWS: 3ದಿನದ ವಿಶೇಷ ಅಧಿವೇಶನ ಆರಂಭದಿಂದ, 9ಕ್ಕೇರಿದ ʼಮಳೆ ಸಾವಿನʼವರೆಗಿನ ಪ್ರಮುಖ ಸುದ್ದಿಗಳಿವು

vistara top 10 news three days assembly session begins to nine deaths due to rain and more news

#image_title

1. Rain News: ಮಳೆ ಭೀಕರತೆಗೆ ಮತ್ತೆರಡು ಬಲಿ, 9ಕ್ಕೇರಿದ ಸಾವಿನ ಸಂಖ್ಯೆ
ಭಾನುವಾರ ಅಪ್ಪಳಿಸಿದ ಮಳೆ- ಗಾಳಿ- ಸಿಡಿಲಿಗೆ (Rain News) ಮತ್ತಿಬ್ಬರು ಮೃತಪಟ್ಟಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 9ಕ್ಕೇರಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Bangalore Rain: ರಣಮಳೆ ನಡುವೆ ಹುಚ್ಚಾಟ; ರಾಜ ಕಾಲುವೆ ಆಳ ನೋಡಲು ಹೋಗಿ ಕೊಚ್ಚಿಹೋದ ಯುವಕ
ಹೆಚ್ಚಿನ ಓದಿಗಾಗಿ: Rain News: ಕುರಿದೊಡ್ಡಿಯಲ್ಲಿ ಮಲಗಿದ್ದ ವ್ಯಕ್ತಿಗೆ ಸಿಡಿಲು ಬಡಿದು ಸಾವು

2. Bangalore Rain: ಭಾನುರೇಖಾ ಸಾವಿನ ಹಿಂದೆ ನಿಜಕ್ಕೂ ನಡೆದಿದ್ದೇನು?; ಚಾಲಕನ ಬಂಧನ, ಬಿಡುಗಡೆ
ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮಳೆ ನೀರಿಗೆ (Bangalore Rain) ಯುವತಿ, ಇನ್ಫೋಸಿಸ್ ಉದ್ಯೋಗಿ ಮೃತಪಟ್ಟ ಪ್ರಕರಣ ಸಂಬಂಧ ಕಾರು ಚಾಲಕನ ಮೇಲೆ 304a ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ಆತನನ್ನು ಬಂಧನ ಮಾಡಿದ್ದಾರೆ. ಬಳಿಕ ವಿಶೇಷ ಜಾಮೀನಿನ ಮೂಲಕ ಬಿಡುಗಡೆ ಮಾಡಿದ್ದಾರೆ. ಈ ನಡುವೆ ಕಾರು ಚಾಲಕ ಹರೀಶ್‌, “ತನ್ನದೇನೂ ತಪ್ಪಿಲ್ಲ, ನಾನು ಹೇಳಿದರೂ ಕೇಳದೆ ಕಾರಿನ ಗ್ಲಾಸ್‌ ಏರಿಸಿಕೊಂಡಿದ್ದಾರೆ. ತಪ್ಪೆಲ್ಲ ಭಾನುರೇಖಾ ಕುಟುಂಬಸ್ಥರದ್ದೇ ಎಂದು ಹೇಳಿಕೆ ನೀಡಿದ್ದರೆ, ಇತ್ತ ಭಾನುರೇಖಾ ಕುಟುಂಬದವರು, “ಕೆಳಗೆ ಇಳಿಯಲು ಕಾರು ಚಾಲಕನೇ ಬೇಡ” ಎಂದು ಹೇಳಿದ್ದ ಎಂಬುದಾಗಿ ಆರೋಪ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Assembly: ಹಿಂದುತ್ವ-ಗೋಮಾತೆ ಹೆಸರಲ್ಲಿ ಯತ್ನಾಳ್, ಸತ್ಯಸಾರಮಣಿ ಹೆಸರಲ್ಲಿ ಭಾಗೀರಥಿ ಮುರುಳ್ಯ ಪ್ರಮಾಣ
ನೂತನವಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೂ ವಿಧಾನಸಭೆಯಲ್ಲಿ ಪ್ರಮಾಣವಚನ ಬೋಧನೆ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹಿಂದುತ್ವ ಹಾಗೂ ಗೋಮಾತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Assembly Session: ಚುಪ್‌ ಚುಪ್‌ ಕೇ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌!
ಸಚಿವರಾಗಿ ಕನ್ನಡದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಇದೀಗ ಗೌಪ್ಯವಾಗಿ ಶಾಸಕರ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Siddaramaiah: ಬಿಜೆಪಿ ನೇಮಿಸಿದ ನಿಗಮಾಧ್ಯಕ್ಷರು ಔಟ್‌; ಕಾಮಗಾರಿಗಳ ಪೇಮೆಂಟ್‌ ಸ್ಟಾಪ್‌: ಸಿಎಂ ಸಿದ್ದರಾಮಯ್ಯ ಸೂಚನೆ
ಬಿಜೆಪಿ ಸರ್ಕಾರವಿದ್ದಾಗ ನೇಮಕವಾಗಿದ್ದ ಎಲ್ಲ ನಿಗಮ ಮಂಡಳಿಗಳ ಪದಾಧಿಕಾರಿಗಳನ್ನು ಕಾಂಗ್ರೆಸ್‌ ಸರ್ಕಾರ ಹೊರಗೆ ಕಳಿಸಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಎಲ್ಲ ಅಕಾಡೆಮಿ, ಪ್ರಧಾಇಕಾರ ಮುಂತಾದ ನಿಗಮ ಮಂಡಳಿಗಳ ಅಧ್ಯಕ್ಷ, ನಿರ್ದೇಶಕ ಹಾಗೂ ಸದಸ್ಯರುಗಳ ಅವಧಿಯನ್ನು ಮೇ 22ರಿಂದಲೇ ಜಾರಿಗೆ ಬರುವಂತೆ ಹಿಂಪಡೆಯಬೇಕು ಎಂದು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. PM Narendra Modi: ಪ್ರಧಾನಿ ಮೋದಿಗೆ ಫಿಜಿ, ಪಪುವಾ ನ್ಯೂಗಿನಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಪ್ರದಾನ
ಫಿಜಿ (Fiji) ಮತ್ತು ಪಪುವಾ ನ್ಯೂಗಿನಿಯಾ (Papua New Guinea) ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪ್ರದಾನ ಮಾಡಲಾಗಿದೆ. ಮೂರನೇ ಇಂಡಿಯಾ-ಪೆಸಿಫಿಕ್ ಐಲ್ಯಾಂಡ್ಸ್ ಕೋ ಆಪರೇಷನ್ (FIPIC) ಶೃಂಗದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಈ ದ್ವೀಪ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು. ಈ ವೇಳೆ, ಅವರಿಗೆ ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ದಿ ಚಾಂಪಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ (The Companion of the Order of Fiji) ಗೌರವವನ್ನು ಫಿಜಿ ಪ್ರಧಾನಿ ಸಿತಿವೇನಿ ರಬುಕಾ ಅವರು ಪ್ರದಾನ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. 2000 Notes Withdrawn : 2000 ರೂ. ನೋಟನ್ನು ಅರ್ಜೆಂಟಾಗಿ ವಿನಿಮಯ ಮಾಡಬೇಕೆ? ಆರ್‌ಬಿಐ ಗವರ್ನರ್ ಹೇಳಿದ್ದೇನು?
ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು (2000 Notes Withdrawn) ಜನತೆ ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಲು ಅವಸರ ಮಾಡಬೇಕಿಲ್ಲ. ಸಾವಕಾಶವಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು (RBI Governor Shakti‌ Kanta Das) ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. G20 Meeting: ಕಾಶ್ಮೀರವನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಲಿಸಿದ ಅರಬ್‌ ಇನ್‌ಫ್ಲುಯೆನ್ಸರ್;‌ ಇಲ್ಲಿದೆ ವಿಡಿಯೊ
ಭೂಲೋಕದ ಸ್ವರ್ಗ ಎಂದೇ ಖ್ಯಾತಿಯಾಗಿರುವ ಜಮ್ಮು-ಕಾಶ್ಮೀರದ ಚಹರೆಯು 370ನೇ ವಿಧಿ ರದ್ದುಗೊಳಿಸಿದ ಬಳಿಕ ಬದಲಾಗುತ್ತಿದೆ. ಉದ್ಯಮ, ಪ್ರವಾಸೋದ್ಯಮಕ್ಕೆ ಮತ್ತಷ್ಟು ತೆರೆದುಕೊಳ್ಳುತ್ತಿದೆ. ಕಲ್ಲು ತೂರುವವರು, ಪ್ರತ್ಯೇಕವಾದಿಗಳ ಉಪಟಳ ಕಡಿಮೆಯಾಗಿ, ಅಭಿವೃದ್ಧಿಯತ್ತ ಮುಖ ಮಾಡುತ್ತಿದೆ. ಇನ್ನು, ಕಾಶ್ಮೀರದಲ್ಲಿ ಜಿ-20 ಸಭೆ (G20 Meeting) ಆರಂಭವಾಗಿದ್ದು, ಜಾಗತಿಕ ಗಣ್ಯರು ಪಾಲ್ಗೊಂಡಿದ್ದಾರೆ. ಸಭೆಗೂ ಮೊದಲು ಅರಬ್‌ ಇನ್‌ಫ್ಲುಯೆನ್ಸರ್‌ ಒಬ್ಬರು ಜಮ್ಮು-ಕಾಶ್ಮೀರದ ಸೌಂದರ್ಯಕ್ಕೆ ಮರುಳಾಗಿದ್ದಾರೆ. ಅಲ್ಲದೆ, ಕಾಶ್ಮೀರವನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಲಿಕೆ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IPL 2023: ಕಪ್​ ಎತ್ತಿ ವಿದಾಯ ಹೇಳಲಿದ್ದಾರಾ ಧೋನಿ?
ಈ ಬಾರಿಯ ಐಪಿಎಲ್(IPL 2023)​ ಎಲ್ಲ ಆವೃತ್ತಿಗಳಿಗಿಂತಲೂ ಕುತೂಹಲ ಹೆಚ್ಚಿದೆ. ಇದಕ್ಕೆ ಕಾರಣ ಭಾರತ ಕ್ರಿಕೆಟ್​ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರ ಸಿಂಗ್​ ಧೋನಿ ಅವರು ಐಪಿಎಲ್ ವಿದಾಯ ಹೇಳಲಿದ್ದಾರೆ ಎಂಬ ಮಾತು. ಹೌದು ಈ ಬಾರಿಯ ಐಪಿಎಲ್​ ಟೂರ್ನಿ ಆರಂಭಕ್ಕೂ ಮುನ್ನವೇ ಧೋನಿ ಅವರು ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಭಾರಿ ಸಂಚಲನ ಮೂಡಿಸಿತ್ತು. ಆದರೆ ಧೋನಿ ಮಾತ್ರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Fact Check: ʼಅಲ್ಲಾಡ್ಸು ಅಲ್ಲಾಡ್ಸು..ʼ ಪದ್ಯಕ್ಕೆ ಡ್ಯಾನ್ಸ್‌ ಮಾಡಿದವರು ಸಿದ್ದರಾಮಯ್ಯ ಅವರಾ?
ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರ ಡ್ಯಾನ್ಸಿಂಗ್‌ ಕೌಶಲ ಎಲ್ಲರಿಗೂ ತಿಳಿದಿರುವಂಥದ್ದೇ. ಪ್ರತಿವರ್ಷ ಅವರು ವರುಣಾ ಕ್ಷೇತ್ರದಲ್ಲಿರುವ ತಮ್ಮ ಊರು ಸಿದ್ದರಾಮನಹುಂಡಿಯ ಜಾತ್ರೆಗೆ ತೆರಳುವುದು, ಅಲ್ಲಿ ತಮ್ಮ ಆತ್ಮೀಯರ ಜತೆಗೆ ಜನಪದ ನೃತ್ಯಕ್ಕೆ ಹೆಜ್ಜೆ ಜೋಡಿಸುವುದೂ ಮಾಡುತ್ತಾರೆ. ಅವರು ನೃತ್ಯ ಮಾಡುವ ವಿಡಿಯೋಗಳು ಲಭ್ಯವಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version