Site icon Vistara News

VISTARA TOP 10 NEWS: ಕಾಂಗ್ರೆಸ್‌ನಲ್ಲಿ ಮೂರು ಡಿಸಿಎಂ ತರಾತುರಿ, ಮೋದಿ 73ನೇ ಜನುಮದಿನಕ್ಕೆ ಬಿಜೆಪಿ ತಯಾರಿ!

Vistara top10 News 1609

1.ಕಾಂಗ್ರೆಸ್‌ನಲ್ಲಿ ಎದ್ದಿದೆ ಮೂರು ಡಿಸಿಎಂ ಕೂಗು; ಡಿಕೆಶಿ ಹಣಿಯುವ ಸಿದ್ದರಾಮಯ್ಯ ಪ್ಲ್ಯಾನಾ?
ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಮೂವರು ಉಪಮುಖ್ಯಮಂತ್ರಿಗಳ ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪರಮಾಪ್ತ ಸಚಿವರಾಗಿರುವ ಸಹಕಾರ ಸಚಿವ ಕೆ.ಎನ್‌. ರಾಜಣ್ಣ (KN Rajanna) ಅವರು ಈ ಪ್ರಸ್ತಾಪ ಮಂಡನೆ ಮಾಡಿದ್ದರಿಂದ ಇದೊಂದು ಗಾಳಿಯಲ್ಲಿ ಹಾರಿಬಂದ ಸಂಗತಿಯಲ್ಲ ಎನ್ನುವುದು ಸ್ಪಷ್ಟವಾಗಿದೆ. ‌ಇದರ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳು ಇವೆ. ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್‌ ಅವರ ಅಧಿಕಾರವನ್ನು ಮೊಟಕುಗೊಳಿಸುವ ಸಿದ್ದರಾಮಯ್ಯ ಪ್ಲ್ಯಾನಾ ಇದು ಎನ್ನುವುದು ಚರ್ಚೆಯ ಸಂಗತಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಮೂರು ಡಿಸಿಎಂ ಕೇಳೋದ್ರಲ್ಲಿ ತಪ್ಪೇನಿಲ್ಲ; ಪರಮೇಶ್ವರ್‌ ಬಹಿರಂಗ ಬೆಂಬಲ, ಹಲವರ ವಿರೋಧ

2. ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ವಿನಯ ಗುರೂಜಿ, ಬಿಜೆಪಿ ಶಾಸಕರ ಹೆಸರು!
ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ. ಡೀಲ್‌ ನಡುವೆ ಬಿಜೆಪಿ ಶಾಸಕರ ಹೆಸರು, ಅವಧೂತ ವಿನಯ ಗುರೂಜಿ ಹೆಸರುಗಳೆಲ್ಲ ಕೇಳಿಬಂದಿವೆ. ಇತ್ತ ಚೈತ್ರಾ ಇನ್ನೂ ಆಸ್ಪತ್ರೆಯಲ್ಲೇ ಇದ್ದು, ಆಕೆಗೆ ಎದೆನೋವು ಕಾಣಿಸಿಕೊಂಡಿದೆ ಎಂಬ ಸುದ್ದಿ ಇದೆ. ಹಾಲಶ್ರೀ ಸ್ವಾಮೀಜಿ ಇನ್ನೂ ಸಿಕ್ಕಿಲ್ಲ. ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ. 19ಕ್ಕೆ ಮುಂದೂಡಲ್ಪಟ್ಟಿದೆ. ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ

3. ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುತ್ತಿದೆಯಾ ಸರ್ಕಾರ?; ಬಿಜೆಪಿ ನಾಯಕರಿಂದ ಗಂಭೀರ ಆರೋಪ
ಸೆಪ್ಟೆಂಬರ್‌ 12ರಂದು ನಡೆದ ರಾಜ್ಯದ ಸರ್ವ ಪಕ್ಷಗಳ ಸಭೆಯಲ್ಲಿ ಯಾವ ಕಾರಣಕ್ಕೂ ಕಾವೇರಿ ನೀರು ನಿಯಂತ್ರಣ ಮಂಡಳಿ (CWRC) ಆದೇಶ ಪಾಲಿಸಬಾರದು, ತಮಿಳುನಾಡಿಗೆ ನೀರು ಬಿಡಬಾರದು ಎಂಬ ನಿರ್ಣಯವಾಗಿತ್ತು. ಸರ್ಕಾರವೇ (State Government) ಇದನ್ನು ಘೋಷಿಸಿತ್ತು. ಆದರೆ, ಈ ನಿರ್ಣಯವನ್ನು ಉಲ್ಲಂಘಿಸಿ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆಯಾ? ಹೌದು ಎನ್ನುತ್ತಿದೆ ಬಿಜೆಪಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ : ಮೋದಿ ಹುಟ್ಟುಹಬ್ಬದಂದೇ ರಾಜ್ಯಾದ್ಯಂತ ಬಿಜೆಪಿ ಹೋರಾಟ ಆರಂಭ; ಕುರುಡುಮಲೆ ದೇವಳದಿಂದಲೇ ಶುರು!

4. PM Modi Birthday: ಸೇವೆಯಿಂದ ಅಭಿವೃದ್ಧಿವರೆಗೆ; ದೇಶಾದ್ಯಂತ ನಾಳೆ ಮೋದಿ ಜನ್ಮದಿನ ಭರ್ಜರಿ ಆಚರಣೆ
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಸೆಪ್ಟೆಂಬರ್‌ 17) 73ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ, ಬಿಜೆಪಿಯು ದೇಶಾದ್ಯಂತ ಅದ್ಧೂರಿಯಾಗಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಿಸಲು ತೀರ್ಮಾನಿಸಿದೆ. ಮೋದಿ ಜನ್ಮದಿನವನ್ನು ಬಿಜೆಪಿ ಹೇಗೆ ಆಯೋಜಿಸುತ್ತದೆ? ಯಾವ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಮಧು ಬಂಗಾರಪ್ಪರಿಂದ ಜೀವ ಬೆದರಿಕೆ; ಪ್ರಣವಾನಂದ ಶ್ರೀ ಗಂಭೀರ ಆರೋಪ, ಕಾಂಗ್ರೆಸ್‌ ಪಕ್ಷಕ್ಕೂ ಎಚ್ಚರಿಕೆ
ಅತಿ ಹಿಂದುಳಿದ ವರ್ಗಗಳ ನಾಯಕರನ್ನು ಒಗ್ಗೂಡಿಸುತ್ತಿರುವ ಪ್ರಣವಾನಂದ ಶ್ರೀ ಅವರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆದರಿಕೆ ಹಾಕುತ್ತಿದ್ದಾರಂತೆ. ಇದನ್ನು ಬಹಿರಂಗಪಡಿಸಿದ ಶ್ರೀಗಳು ಒಂದೊಮ್ಮೆ ಮಧುವನ್ನು ಕಂಟ್ರೋಲ್‌ ಮಾಡದೆ ಇದ್ದರೆ ಕಾಂಗ್ರೆಸ್‌ ಪಕ್ಚಕ್ಕೂ ಹಾನಿ ಮಾಡಬೇಕಾದೀತು ಎಂದು ಬೆದರಿಕೆ ಹಾಕಿದ್ದಾರೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ
ರಾಷ್ಟ್ರೀಯವಾದಿಗಳು ಅಂದರೆ ಬಲಪಂಥೀಯರು ಎಂದು ಕರೆಸಿಕೊಳ್ಳುವವರು ಅಲ್ಪಸಂಖ್ಯಾತರ ಧ್ವನಿಯನ್ನು ಅಡಗಿಸುತ್ತಿದ್ದಾರೆ ಎಂದು ಆಗಾಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ. ಆದರೆ ನಿಜವಾಗಿ ಹಿಂದುಗಳ, ಸನಾತನ ಧರ್ಮದ ಕುರಿತು ಮಾಡಿದ ಸಂದೇಶ ಹಾಗೂ ಖಾತೆಗಳೇ ಹೆಚ್ಚು ಬ್ಲಾಕ್ ಆಗಿವೆ. ಡಿಜಿಟಲ್‌ ನೈತಿಕ ಪೊಲೀಸ್‌ಗಿರಿಯ ಬಗ್ಗೆ ವಿಸ್ತೃತ ವಿಶ್ಲೇಷಣೆ ನಡೆಸಿದ್ದರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರ ತಮ್ಮ ವಿಸ್ತಾರ ಅಂಕಣದಲ್ಲಿ . ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

7. Baramulla Encounter: ಅನಂತ್‌ನಾಗ್‌ ಕೃತ್ಯಕ್ಕೆ ಸೇಡು; ಕಾಶ್ಮೀರದಲ್ಲಿ ಮೂವರು ಉಗ್ರರ ಉಡೀಸ್
ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ (Anantnag Encounter) ನಾಲ್ವರು ಯೋಧರು ಹುತಾತ್ಮರಾಗಿರುವುದಕ್ಕೆ ಭಾರತೀಯ ಸೇನೆಯು ಮುಯ್ಯಿ ತೀರಿಸಿಕೊಂಡಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಒಳನುಸುಳಲು ಯತ್ನಿಸಿದ ಮೂರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. Sanatana Dharma: ಸನಾತನ ಧರ್ಮ ಶಾಶ್ವತ ಎಂದ ಮದ್ರಾಸ್‌ ಹೈಕೋರ್ಟ್;‌ ಉದಯನಿಧಿಗೆ ಮಂಗಳಾರತಿ
‘ಸನಾತನ ಧರ್ಮವನ್ನು (Sanatana Dharma) ನಿರ್ಮೂಲನೆ ಮಾಡಬೇಕು’ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆಯು ದೇಶಾದ್ಯಂತ ವಿವಾದ ಭುಗಿಲೆದ್ದಿದೆ. ಈ ನಡುವೆ “ಸನಾತನ ಧರ್ಮದ ಆಚರಣೆಗಳು ಶಾಶ್ವತ” ಎಂದು ಮದ್ರಾಸ್‌ ಹೈಕೋರ್ಟ್‌ (Madras High Court) ಹೇಳಿರುವುದು ಉದಯನಿಧಿ ಸ್ಟಾಲಿನ್‌ ಅವರಿಗೆ ಪರೋಕ್ಷವಾಗಿ ಮಂಗಳಾರತಿ ಮಾಡಿದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. Asia Cup 2023 Final: ಲಂಕಾ-ಭಾರತ ಫೈನಲ್​ ಪಂದ್ಯಕ್ಕೆ ಮಳೆ ಭೀತಿ; ಮೀಸಲು ದಿನ ಇದೆಯೇ?
ಭಾನುವಾರ ಕೊಲಂಬೊದ(Colombo) ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ(R Premadasa International stadium) ಏಷ್ಯಾ ಕಪ್ 2023ರ ಫೈನಲ್‌ನಲ್ಲಿ(Asia Cup 2023 Final) ಭಾರತ ಮತ್ತು ಶ್ರೀಲಂಕಾ(IND vs SL) ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಭಾರಿ ಮಳೆಯಾಗುವ ಸೂಚನೆ ಇದ್ದು ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ. ಫೈನಲ್‌ಗೆ ಮೀಸಲು ದಿನ ಇದೆಯಾ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. Guinness World Record : ಹುಡುಗಿಯರಿಗಿಂತಲೂ ದೊಡ್ಡ ಜಡೆ ಬೆಳೆಸಿದ 15ರ ಹುಡುಗನ ವಿಶ್ವ ದಾಖಲೆ!
ಉತ್ತರ ಪ್ರದೇಶದ 15 ವರ್ಷದ ಸಿಖ್ ಬಾಲಕ ಸಿದಕ್​ದೀಪ್​ ಸಿಂಗ್ ಚಹಲ್ ತನ್ನ ಜೀವನದಲ್ಲಿ ಎಂದಿಗೂ ಕೂದಲು ಕ್ಷೌರ ಮಾಡಿಸಿಕೊಂಡಿಲ್ಲ. ಹೀಗಾಗಿ ಆತನ ಕೂದಲು ಉದ್ದವಾಗಿ ಬೆಳೆದಿದೆ. ಆ ಕೂದಲು ಆತನನ್ನು ಗಿನ್ನಿಸ್​ ವಿಶ್ವ ದಾಖಲೆಯ ಪುಸ್ತಕಕ್ಕೆ ಸೇರಿಸಿದೆ. ಹಾಗಿದ್ದರೆ ಅವನ ಕೂದಲ ಉದ್ದ ಎಷ್ಟು? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version