Site icon Vistara News

Vistara Top 10 News: ಬೆಳಗ್ಗೆಯೂ ಕೃಷಿ ಬಾವಿಗೆ ತ್ರಿ ಫೇಸ್‌ನಿಂದ, ಬಂಗಾಳದಲ್ಲಿ ಟಿಎಂಸಿ ಮುನ್ನಡೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news Three phase electricity to farmers borewell to tmc leading in west bengal elections and more

1. ಹಲೋ ಸಚಿವರೇ: ರೈತರಿಗೆ ಗುಡ್‌ ನ್ಯೂಸ್!‌ ಬೆಳಗ್ಗೆಯೂ ಸಿಗಲಿದೆ ತ್ರಿ‌ ಫೇಸ್ ವಿದ್ಯುತ್‌: ಚಲುವರಾಯಸ್ವಾಮಿ
ಬೆಳಗ್ಗೆ ಹೊತ್ತಿನಲ್ಲಿಯೂ ರೈತರಿಗೆ ತ್ರಿ ಫೇಸ್‌ ವಿದ್ಯುತ್‌ (Three Phase Electricity) ಶೀಘ್ರದಲ್ಲಿಯೇ ಕೊಡುತ್ತೇವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳೂ ನಡೆದಿವೆ. ಕನಿಷ್ಠ ಪಕ್ಷ 7-8 ಗಂಟೆ ನೀರು ಒದಗಿಸಲು ವಿದ್ಯುತ್‌ ಪೂರೈಸುವ ಗುರಿ ಇಟ್ಟುಕೊಂಡಿದ್ದು, ಆದ್ಯತೆ ಮೇರೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿವೇಶನ ಮುಗಿದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ (Agriculture Minister N Chaluvarayaswamy) ಅವರು ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿದ್ದ “ಹಲೋ ಸಚಿವರೇ” (Hello Minister) ನೇರ ಫೋನ್‌ ಇನ್‌ (Phone in Programme) ಕಾರ್ಯಕ್ರಮದಲ್ಲಿ ವಾಗ್ದಾನ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Murder Case: ವೇಣುಗೋಪಾಲ್‌ ಕೊಲೆ ಆಕಸ್ಮಿಕ ಎಂದ ಸಿಎಂ ಸಿದ್ದರಾಮಯ್ಯ: ಸರ್ಕಾರದ ಸಮರ್ಥನೆಗೆ ಬಿಜೆಪಿ ಆಕ್ರೋಶ
ತಿ. ನರಸೀಪುರದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆ ಪ್ರಕರಣವು (Murder Case) ಆಕಸ್ಮಿಕವಾಗಿದ್ದು, ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಈ ಪ್ರಕರಣದ ಕುರಿತು ಸರ್ಕಾರದ ಉತ್ತರ ನೀಡುವ ಸಮಯದಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Murder Case : ನನ್ನ ಗಂಡ ಹುಲಿ ಥರ ಇದ್ದ ಸರ್‌, ಮುಖ ಮತ್ತು ತಲೆಗೆ ಸಾಬನಿಂದ ಚುಚ್ಚಿಸಿ ಕೊಂದ್ರು; ವೇಣುಗೋಪಾಲ್‌ ಪತ್ನಿ

3. Jain Muni Murder: ಸ್ವಾಮೀಜಿ ಎಂದ ತಕ್ಷಣ ಪ್ರಕರಣ ಬದಲಾಗಲ್ಲ; ಕೊಲೆ ಕೊಲೆ ಅಷ್ಟೆ: ಸಿಬಿಐಗೆ ಕೊಡಲ್ಲ ಎಂದ ಸರ್ಕಾರ
ಜೈನ ಮುನಿಗಳನ್ನು ಹತ್ಯೆ (Jain Muni Murder) ಮಾಡಿರುವುದನ್ನು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತ ಮಾಡದೆ ಅದನ್ನು ಸಾಮಾಜಿಕ ಹಿನ್ನೆಲೆಯಲ್ಲಿ ನೋಡುವಂತಾಗಲು ಆಳಕ್ಕಿಳಿತು ತನಿಖೆ ನಡೆಯಬೇಕು, ಅದಕ್ಕಾಗಿ ಸಿಬಿಐಗೆ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಒತ್ತಾಯಿಸಿದೆ. ಆದರೆ ನಮ್ಮ ಪೊಲೀಸರ ಮೇಲಿನ ಗೌರವವನ್ನು ಇದು ಕಡಿಮೆ ಮಾಡುವುದರಿಂದ ಸಿಬಿಐಗೆ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Crime Politics : ಕೈ ಸರ್ಕಾರ ಬಂದ ಮೇಲೆ 4 ಭಯಾನಕ ಕೊಲೆ, 13 ರೈತರ ಆತ್ಮಹತ್ಯೆ; ಬಿಜೆಪಿ Chargesheet
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government in Karnataka) ಅಧಿಕಾರಕ್ಕೆ ಬಂದು ಇನ್ನೂ 50 ದಿನವಷ್ಟೇ ಆಗಿದೆ. ಆದರೆ, ಅದರಲ್ಲೇ ಅದು ಮುಂದೆ ಸಾಗಲಿರುವ ಹಿಂಸಾತ್ಮಕ ದಾರಿಯನ್ನು (Crime Politics) ಸ್ಪಷ್ಟಪಡಿಸಿದೆ ಎಂದು ಕರ್ನಾಟಕ ಬಿಜೆಪಿ (BJP Karnataka) ಆರೋಪಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Rain News: ಉತ್ತರ ಭಾರತದಲ್ಲಿ ಅಬ್ಬರದ ವರುಣ, 37ಜನರ ಮರಣ; ನಲುಗುತ್ತಿದೆ ಹಿಮಾಚಲ
ಮಳೆಯ ಅಬ್ಬರಕ್ಕೆ ಉತ್ತರ ಭಾರತ ಅಕ್ಷರಶಃ ನಲುಗುತ್ತಿದೆ. ಮಳೆ (Rain News) ಸಂಬಂಧಿ ಅನಾಹುತಗಳಿಗೆ ಇದುವರೆಗೆ ಉತ್ತರ ಭಾರತದಲ್ಲಿ 37 ಮಂದಿ ಮೃತಪಟ್ಟಿದ್ದಾರೆ. ಎಲ್ಲಿ ನೋಡಿದರೂ ತುಂಬಿ ಹರಿಯುತ್ತಿರುವ ನೀರು, ಪ್ರವಾಹ, ಭೂಕುಸಿತ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಮಳೆ (Himachal Pradesh Rain) ತಂದೊಡ್ಡಿದ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಅತಿಹೆಚ್ಚು ಸಾವಾಗಿದ್ದೂ ಇಲ್ಲೇ. ಹಿಮಾಚಲ ಪ್ರದೇಶದಲ್ಲಿ ಕಳೆದ 2ದಿನಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್​​ನಲ್ಲಿ 9 ಮಂದಿ, ರಾಜಸ್ಥಾನದಲ್ಲಿ 7 ಮತ್ತು ಉತ್ತರ ಪ್ರದೇಶದಲ್ಲಿ ಮೂರು ಮಂದಿ ಅಸುನೀಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಅಪಾಯದ ಮಟ್ಟ ಮೀರಿ, ಮೈದುಂಬಿ ಹರಿಯುತ್ತಿರುವ ಬಿಯಾಸ್ ನದಿ, ಟ್ರಕ್​ವೊಂದನ್ನು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ಮತ ಎಣಿಕೆ: ಮುನ್ನುಗ್ಗುತ್ತಿರುವ ಟಿಎಂಸಿ ಹಿಂದೆ ಬಿಜೆಪಿ, ಬಾಂಬ್​ ಸ್ಫೋಟ
ಸಂಘರ್ಷ, ರಕ್ತದ ಮಧ್ಯೆಯೇ ನಡೆದಿದ್ದ ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ಫಲಿತಾಂಶ ( West Bengal Panchayat Polls Results) ಇಂದು ಹೊರಬೀಳಲಿದೆ. ಬೆಳಗ್ಗೆ 8ಗಂಟೆಯಿಂದ ಬಿಗಿ ಭದ್ರತೆ ಮಧ್ಯೆ ಮತ ಎಣಿಕೆ ಕಾರ್ಯ ( ಭರದಿಂದ ಸಾಗುತ್ತಿದೆ. ಜುಲೈ 8ರಂದು ಚುನಾವಣೆ ದಿನ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಹಿಂಸಾಚಾರ, ಗಲಾಟೆ (West Bengal Violence) ನಡೆದಿತ್ತು. ಎಲ್ಲೆಲ್ಲೂ ಗುಂಡು-ಬಾಂಬ್​​ಗಳ ಶಬ್ದವೇ ಕೇಳುತ್ತಿತ್ತು. ಅಂದು ನಡೆದಿದ್ದ ಹಿಂಸಾಚಾರದಲ್ಲಿ ಒಟ್ಟು 18 ಮಂದಿ ಮೃತಪಟ್ಟಿದ್ದರು. ಜು.8ರಂದು 61,636 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಆದರೆ ಅವ್ಯವಸ್ಥೆ-ಸಂಘರ್ಷ ಮಿತಿಮೀರಿ ನಡೆದಿದ್ದ 697 ಬೂತ್​​ಗಳಲ್ಲಿ ಜು.10ರಂದು ಮರು ಮತದಾನವಾಗಿತ್ತು . ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Govt Employees News : ಸರ್ಕಾರಿ ನೌಕರರಿಗೆ ಸದ್ಯವೇ ಕ್ಯಾಶ್‌ಲೆಸ್‌ ಇನ್ಷೂರೆನ್ಸ್‌ ಕಾರ್ಡ್‌
ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ʻಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆʼಯ (ಕೆಎಎಸ್‌ಎಸ್‌) (karnataka arogya sanjeevani) ಲಾಭ ಸದ್ಯವೇ ನೌಕರರಿಗೆ (Govt Employees News) ಲಭ್ಯವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ವಿಶ್ವದಲ್ಲೇ ಬಲಿಷ್ಠ ಸೇನಾಪಡೆ ಹೊಂದಿರುವ ದೇಶ ಯುಎಸ್​; ಲಿಸ್ಟ್​​ನಲ್ಲಿ ಮೇಲೇರಿದ ಪಾಕ್​, ಭಾರತಕ್ಕೆ ಎಷ್ಟನೇ ಸ್ಥಾನ?
ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸೇನೆ (Strongest Military Force in the World) ಹೊಂದಿರುವ ಟಾಪ್​ 10 ದೇಶಗಳು ಯಾವವು? ಹಾಗೇ, ಅತ್ಯಂತ ದುರ್ಬಲ ಸೇನೆ ಇರುವ ದೇಶಗಳು ಯಾವವು?-ವಿಶ್ವದ ಮಿಲಿಟರಿ ಫೋರ್ಸ್​ಗಳ ಸಾಮರ್ಥ್ಯದ ಶ್ರೇಯಾಂಕ ಮತ್ತು ಇತರ ವಿಷಯಗಳ ಬಗ್ಗೆ ಅಂಕಿ-ಸಂಖ್ಯೆ ನೀಡುವ ವೆಬ್​ಸೈಟ್​ ಗ್ಲೋಬಲ್​ ಫೈರ್​ಪವರ್​​ (Global Firepower)ಈಗ ಲಿಸ್ಟ್​ ಬಿಡುಗಡೆ ಮಾಡಿದೆ. ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸೇನೆ ಹೊಂದಿರುವ ರಾಷ್ಟ್ರ ಅಮೆರಿಕ (US). ಎರಡನೇ ಸ್ಥಾನದಲ್ಲಿ ರಷ್ಯಾ, ಮೂರನೇ ಸ್ಥಾನದಲ್ಲಿ ಚೀನಾ ದೇಶಗಳು ಇವೆ. ಒಂದು ಖುಷಿಯ ಸಂಗತಿಯೆಂದರೆ ಪ್ರಪಂಚದಲ್ಲೇ ಬಲಿಷ್ಠ ಸೇನೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿ ಇರುವುದು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Tata Group : ಟಾಟಾ ಗ್ರೂಪ್‌ನಿಂದ ಮೊದಲ ಬಾರಿಗೆ ಕೋಲಾರದಲ್ಲಿ ಐಫೋನ್‌ ಉತ್ಪಾದನೆ
ಟಾಟಾ ಸಮೂಹವು (Tata Group) ಐಫೋನ್‌ ಉತ್ಪಾದನೆ ಮಾಡುವ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಲಿದೆ. ಕೋಲಾರ ಬಳಿಯ ವಿಸ್ಟ್ರಾನ್‌ ಕಾರ್ಖಾನೆಯಲ್ಲಿ ಟಾಟಾ ಸಮೂಹವು ಮುಂಬರುವ ಆಗಸ್ಟ್‌ನಿಂದ ಐಫೋನ್‌ಗಳನ್ನು ತಯಾರಿಸಲಿದೆ ಎಂದು ವರದಿಯಾಗಿದೆ. ತೈವಾನ್‌ ಮೂಲದ ವಿಸ್ಟ್ರಾನ್‌ ಕಂಪನಿಯು ಸದ್ಯಕ್ಕೆ ಕೋಲಾರದ ನರಸಾಪುರದಲ್ಲಿರುವ ಘಟಕದಲ್ಲಿ ಐಫೋನ್‌ಗಳನ್ನು (iphone) ತಯಾರಿಸುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Internal Marks : ಪಿಯುಸಿಯಲ್ಲಿ ಇನ್ನು ಸೈನ್ಸ್‌ ಮಾತ್ರ ಅಲ್ಲ ಎಲ್ಲ ವಿಷಯಗಳಿಗೂ Internal Marks
ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ (PU Examination System) ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ಇನ್ನು ಮುಂದೆ ಪಿಯುಸಿಯಲ್ಲಿ ವಿಜ್ಞಾನ ಮಾತ್ರವಲ್ಲ ಎಲ್ಲ ವಿಭಾಗದ ಎಲ್ಲ ವಿಷಯಗಳಿಗೂ ಆಂತರಿಕ ಅಂಕ ಇರುತ್ತದೆ. ಇಲ್ಲಿವರೆಗೆ ಪ್ರಾಯೋಗಿಕ ಪರೀಕ್ಷೆ (Practical Exam) ಇರುವ ವಿಜ್ಞಾನದ ವಿಷಯಗಳಿಗೆ ಮಾತ್ರ ಆಂತರಿಕ ಅಂಕ (Internal Marks) ಇತ್ತು. ಇನ್ನು ಮುಂದೆ ಇದು ಎಲ್ಲ ವಿಷಯಗಳಿಗೂ ವಿಸ್ತರಣೆಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version