1. Modi In Karnataka : ಕರ್ನಾಟಕದಲ್ಲಿ ಮೋದಿ ಹವಾ: ₹10,800 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ
ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಕರ್ನಾಟಕದ ಪ್ರವಾಸಕ್ಕೆ (Modi In Karnataka) ಆಗಮಿಸುತ್ತಿದ್ದು, ಸುಮಾರು 10,800 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಚುನಾವಣೆ ಸಮಯವಾದ್ಧರಿಂದ ಸಹಜವಾಗಿಯೇ ರಾಜ್ಯ ರಾಜಕೀಯದಲ್ಲಿ ಈ ಭೇಟಿ ಕುತೂಹಲ ಮೂಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Loose Talk : ಬಿಜೆಪಿಯಲ್ಲಿ ಪಿಂಪ್ ರವಿಗಳೇ ತುಂಬಿದ್ದಾರೆ: ಸ್ಪಷ್ಟೀಕರಣದಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ಬಿ.ಕೆ. ಹರಿಪ್ರಸಾದ್
ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಆಗಮಿಸಿದ ಶಾಸಕರನ್ನು ವೇಶ್ಯೆಗೆ ಹೋಲಿಸಿದ್ದ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸ್ಪಷ್ಟೀಕರಣ ನೀಡುವಾಗ ಮತ್ತಷ್ಟು ನಾಲಗೆ ಹರಿಬಿಟ್ಟಿದ್ದಾರೆ. ವೇಶ್ಯೆಯರಿಗೆ ಹೋಲಿಕೆ ಮಾಡಿದ್ದಕ್ಕೆ ರಾಜ್ಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದ್ದರು. ಈ ಕುರಿತು ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿ ಸ್ಯಾಂಟ್ರೊ ರವಿ, ಸಿ.ಟಿ. ರವಿ, ಪೈಟರ್ ರವಿಯಂತಹ ಪಿಂಪ್ ರವಿಗಳೇ ತುಂಬಿ ತುಳುಕುತ್ತಿದ್ದಾರೆ. ಇವರಿಂದ ಏನೂ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Drinking Age : ಒತ್ತಡಕ್ಕೆ ಮಣಿದ ಸರ್ಕಾರ; ಮದ್ಯಸೇವನೆ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವ ಪ್ರಸ್ತಾವನೆ ವಾಪಸ್
ಮದ್ಯ ಸೇವನೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಉಂಟಾಗುತ್ತವೆ ಎನ್ನುವ ಮಾತಿನ ನಡುವೆಯೇ, ಮದ್ಯ ಸೇವನೆಗೆ ಸದ್ಯ ಇರುವ 21 ವರ್ಷವನ್ನು 18 ವರ್ಷಕ್ಕೆ ಇಳಿಕೆ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Election Commission | ಫೆಬ್ರವರಿ 16 ತ್ರಿಪುರಾ, ಫೆ.27ಕ್ಕೆ ನಾಗಾಲ್ಯಾಂಡ್, ಮೇಘಾಲಯ ಎಲೆಕ್ಷನ್, ಮಾರ್ಚ್ 2ರಂದು ರಿಸಲ್ಟ್
ಈಶಾನ್ಯ ಭಾರತದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ಮತ್ತು ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು (Election Commission) ತಿಳಿಸಿದೆ. ಮಾರ್ಚ್ 2ರಂದು ಮತ ಏಣಿಕೆ ನಡೆಯಲಿದೆ. ಬುಧವಾರ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಈ ಮಾಹಿತಿಯನ್ನು ನೀಡಿದರು. ಜನವರಿ 30ಕ್ಕೆ ಚುನಾವಣಾ ಅಧಿಸೂಚನೆ ಹೊರ ಬೀಳಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. IND VS NZ | ದಿಲ್ ಗೆದ್ದ ಶುಭಮನ್ ಗಿಲ್; ಬೃಹತ್ ಮೊತ್ತ ಪೇರಿಸಿದ ಭಾರತ!
ಶುಭಮನ್ ಗಿಲ್(208) ಅವರ ಅತ್ಯಾಕರ್ಷಕ ದ್ವಿಶತಕದ ನೆರವಿನಿಂದ ಟೀಮ್ ಇಂಡಿಯಾ(IND VS NZ) ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 349 ರನ್ ಗಳಿಸಿ ಸವಾಲೊಡ್ಡಿದೆ. ಗಿಲ್ ಈ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮಿಂಚುವ ಮೂಲಕ ಈ ಸಾಧನೆ ಮಾಡಿದ 5ನೇ ಭಾರತೀಯ ಆಟಗಾರನಾಗಿ ಮೂಡಿಬಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Rohit Sharma | ಎಂ.ಎಸ್. ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ!
6. BRS Public Meeting | ಕೆಸಿಆರ್ ನೇತೃತ್ವದಲ್ಲಿ ಸಭೆ, 3 ರಾಜ್ಯಗಳ ಸಿಎಂಗಳು ಭಾಗಿ, ತೃತೀಯ ರಂಗಕ್ಕೆ ಸಭೆ ಮುನ್ನುಡಿ?
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಸಕಲ ಪಕ್ಷಗಳು ಸಿದ್ಧತೆ ಕೈಗೊಳ್ಳುತ್ತಿವೆ. ಇದರ ಮಧ್ಯೆಯೇ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಭಾರತ್ ರಾಷ್ಟ್ರ ಸಮಿತಿ (BRS Public Meeting)ಯ ಮೊದಲ ಸಾರ್ವಜನಿಕ ಸಭೆ ಆಯೋಜಿಸಿದ್ದು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಬೇರೆ ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ. ಆ ಮೂಲಕ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಾಗಾಗಿ, ಶೀಘ್ರದಲ್ಲಿಯೇ ತೃತೀಯ ರಂಗದ ರಚನೆ ಕುರಿತು ಘೋಷಿಸಲಾಗುತ್ತದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ವಿಸ್ತಾರ Explainer | ಭಾರತದ ಜತೆ ಯುದ್ಧಗಳಿಂದ ಪಾಕ್ ನಿಜಕ್ಕೂ ಪಾಠ ಕಲಿತಿದೆಯಾ? ಪಾಕ್ ಪ್ರಧಾನಿ ಮಾತಿನ ಅರ್ಥವೇನು?
ಪಾಕಿಸ್ತಾನ ನಿಜಕ್ಕೂ ಭಾರತದ ಜತೆಗೆ ದ್ವೇಷ ಬೇಡ ಎಂಬ ಪಾಠವನ್ನು ಕಲಿತಿದೆಯಾ? ಪಾಕ್ ಪ್ರಧಾನಿಯ ಇಂಟರ್‌ವ್ಯೂ ಹಿಂದಿನ ನಿಜವಾದ ಉದ್ದೇಶ ಏನಿರಬಹುದು? ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Non-NATO Ally | ಪಾಕಿಸ್ತಾನಕ್ಕೆ ಮತ್ತೊಂದು ಸಂಕಟ! ಕಳಚಲಿದೆಯಾ ಅಮೆರಿಕದ ನ್ಯಾಟೋಯೇತರ ಮಿತ್ರ ರಾಷ್ಟ್ರ ಪಟ್ಟ?
8. Kite tragedy | ಗಾಳಿಪಟ ಹಾರಿಸುವಾಗ ಹೈಟೆನ್ಶನ್ ವಯರ್ ತಗುಲಿ 11 ವರ್ಷದ ಬಾಲಕ ದಾರುಣ ಬಲಿ
ರಾಜಧಾನಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಮತ್ತು ಗಾಳಿಪಟ ಹಾರಿಸುವ ಹುಚ್ಚು ಒಬ್ಬ ಬಾಲಕನ ಜೀವವನ್ನೇ ಬಲಿ (Kite tragedy) ಪಡೆದಿದೆ. ಆರ್ ಟಿ ನಗರ ವ್ಯಾಪ್ತಿಯ ಚಾಮುಂಡಿ ನಗರದ ಚ್ಯೂಯಿಂಗ್ ಗಮ್ ಫ್ಯಾಕ್ಟರಿ ಬಳಿ ಅಬೂಬಕರ್ ಎಂಬ ೧೧ ವರ್ಷದ ಬಾಲಕ ಗಾಳಿಪಟ ಹಾರಿಸುವಾಗ ವಿದ್ಯುತ್ ತಂತಿ ತಗುಲಿ ಪ್ರಾಣ ಕಳೆದುಕೊಂಡಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. LIC AAO Recruitment 2023 | ಎಲ್‌ಐಸಿಯಲ್ಲಿ 300 ಎಎಓ ನೇಮಕ; ಕನ್ನಡದಲ್ಲಿ ನಡೆಯಲ್ಲ ಪರೀಕ್ಷೆ!
ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಸಹಾಯಕ ಆಡಳಿತ ಅಧಿಕಾರಿ (Assistant Administrative Officer) 300 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು (LIC AAO Recruitment 2023), ಇದಕ್ಕೆ ನಡೆಸಲಾಗುವ ಪೂರ್ವಭಾವಿ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆಯನ್ನು (ಮೇನ್) ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ನಡೆಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗೆ: SBI PO Exam : ಎಸ್‌ಬಿಐ ಪಿಓ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ; ಜ.30ಕ್ಕೆ ಮುಖ್ಯ ಪರೀಕ್ಷೆ
10. Praveen Nettaru murder | ಪ್ರವೀಣ್ ನೆಟ್ಟಾರು ಕೊಲೆ: ತಲೆಮರೆಸಿಕೊಂಡಿರುವ ಇಬ್ಬರು ಪಿಎಫ್ಐ ನಾಯಕರಿಗಾಗಿ NIA ಶೋಧ
ಕಳೆದ ಜುಲೈ ೨೬ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಉದ್ಯಮಿ, ಬಿಜೆಪಿ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ((Praveen Nettaru murder) ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಇಬ್ಬರು ಪಿಎಫ್‌ಐ ಮುಖಂಡರಿಗಾಗಿ ಶೋಧ ಮುಂದುವರಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Vinesh Phogat | ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ವಿನೇಶ್ ಪೋಗಟ್ ಗಂಭೀರ ಆರೋಪ
- 7th Pay Commission : ನೌಕರರಿಂದ ಮಾಹಿತಿ ಸಂಗ್ರಹಿಸಲು ಪ್ರಶ್ನಾವಳಿ ಪ್ರಕಟಿಸಿದ ಆಯೋಗ
- Helicopter Crash | ಹೆಲಿಕಾಪ್ಟರ್ ಪತನ, ಉಕ್ರೇನ್ ಸಚಿವ ಸೇರಿ 18 ಜನರು ದುರ್ಮರಣ
- West Bengal | ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ʼಪಿಒಕೆʼ ಬದಲು ʼಆಜಾದ್ ಕಾಶ್ಮೀರ್ʼ! ದೀದಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಬಿಜೆಪಿ
- ದಶಮುಖ ಅಂಕಣ | ಬಣ್ಣಿಸುವುದು ಹೇಗೆ ಬದುಕನ್ನು? ಬಣ್ಣಗಳ ಮೂಲಕ!
- ವೈದ್ಯ ದರ್ಪಣ ಅಂಕಣ | ನಮ್ಮ ಶರೀರವನ್ನು ನಿಯಂತ್ರಿಸುವವರು ಯಾರು?
- Salary hike | ಭಾರತದ ಉದ್ಯೋಗಿಗಳಿಗೆ ಶೇ.15ರಿಂದ 30ರಷ್ಟು ವೇತನ ಏರಿಕೆ: ಸಮೀಕ್ಷೆ