Site icon Vistara News

ವಿಸ್ತಾರ TOP 10 NEWS: ಚುಂಚಶ್ರೀ ವಿರುದ್ಧ ಅಡ್ಡಂಡ ಅಡ್ಡಾದಿಡ್ಡಿ ಹೇಳಿಕೆಯಿಂದ, ರಾಹುಲ್‌ಗೆ ಮಾನನಷ್ಟ ಸಂಕಷ್ಟದವರೆಗೆ ಪ್ರಮುಖ ಸುದ್ದಿಗಳಿವು

vistara-top-10-news-top-10-developments-of-the-day-2

#image_title

1. ಅವರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ; ಉರಿ ಗೌಡ, ನಂಜೇಗೌಡ ಚರ್ಚೆ ತಡೆದ ಚುಂಚಶ್ರೀ ವಿರುದ್ಧ ಸಿಡಿದ ಅಡ್ಡಂಡ
ಉರಿ ಗೌಡ, ನಂಜೇಗೌಡ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ವಿರುದ್ಧ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಎಲ್ಲ ಸಮಾಜಕ್ಕಲ್ಲ ಎಂದಿರುವ ಅಡ್ಡಂಡ ಕಾರ್ಯಪ್ಪ, ಶ್ರೀಗಳು ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಒಕ್ಕಲಿಗರ ನಡುವೆ ತಾರತಮ್ಯ ತೋರುತ್ತಾರೆ ಎಂದು ಆರೋಪಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಕತ್ತಿ ಹೋಯ್ತು ಬಂದೂಕು ಬಂತು; ಇವರೇ ನಿಜವಾದ ಉರಿ, ನಂಜೇಗೌಡ ಎಂದಿದ್ದಾರೆ ಅಡ್ಡಂಡ!

2. ಕಳ್ಳರ ಹೆಸರೆಲ್ಲ ಮೋದಿ ಎಂದೇ ಇರುತ್ತದೆ ಏಕೆ ಎಂದು ಪ್ರಶ್ನಿಸಿದ್ದ ರಾಹುಲ್ ಗಾಂಧಿಗೆ 2 ವರ್ಷ ಜೈಲು
2019ರ ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ (Rahul Gandhi)ಯವರು ಕರ್ನಾಟಕದ ಕೋಲಾರದಲ್ಲಿ, ಪ್ರಚಾರ ಸಭೆಯಲ್ಲಿ ಮಾತನಾಡುತ್ತ ‘ಎಲ್ಲ ಕಳ್ಳರ ಸರ್​ನೇಮ್​​ಗಳೂ ಮೋದಿ ಎಂದೇ ಇರುತ್ತದೆ. ಅದು ಹೇಗೆ ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದರು. ಇದರ ವಿರುದ್ಧ ಸಲ್ಲಿಸಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿದ ಕೋರ್ಟ್‌ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಕೆಲವೇ ಗಂಟೆಯಲ್ಲಿ ಜಾಮೀನು ಸಿಕ್ಕಿ ಶಿಕ್ಷೆಯಿಂದ ಪಾರಾಗಿದ್ದಾರೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

3. ಪಂಚಮಸಾಲಿಗಳಿಗೆ 2ಸಿ, 2ಡಿ ಮೀಸಲಾತಿ ನೀಡಲು ಇದ್ದ ತಡೆ ತೆರವು, ಸಿಎಂಗೆ ಬಿಗ್‌ ರಿಲೀಫ್‌?
ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಬಿಗ್‌ ರಿಲೀಫ್‌ ಸಿಕ್ಕಿದೆ. ಪಂಚಮಸಾಲಿ ಲಿಂಗಾಯತರಿಗೆ ಯಾವ ಕಾರಣಕ್ಕೂ 2ಎ ಮೀಸಲಾತಿ ಅಡಿ ಮೀಸಲಾತಿ ನೀಡಲು ಅವಕಾಶ ಕೊಡಬಾರದು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಯಾವುದೇ ಮೀಸಲಾತಿ ಬದಲಾವಣೆಗೂ ತಡೆ ನೀಡಿತ್ತು. ಅದೀಗ ತೆರವಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ
ಪೂರಕ ಸುದ್ದಿ : 2ಡಿಯಲ್ಲೇ 2ಎನ ಎಲ್ಲ ಸವಲತ್ತು ಸಿಗುವ ವಿಶ್ವಾಸ ಎಂದ ಜಯಮೃತ್ಯುಂಜಯ ಶ್ರೀ
ಪೂರಕ ಸುದ್ದಿ: ನಾಳೆ ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕೊಡುಗೆ; ವಚನಾನಂದ ಸ್ವಾಮೀಜಿ ವಿಶ್ವಾಸ

4. ಮತ್ತೆ ನಾಲ್ಕು ದಿನ ರಾಜ್ಯದಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ ಹವಾ!
ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಪ್ರಧಾನ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಮತ್ತೆ ಮತ್ತೆ ರಾಜ್ಯಕ್ಕೆ ದಾಂಗುಡಿ ಇಡುತ್ತಿದ್ದಾರೆ. ಮಾರ್ಚ್‌ 23ರಿಂದ ಆರಂಭಗೊಂಡು ಇನ್ನು ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರದ್ದೇ ಹವಾ ಇರಲಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ದಾವಣಗೆರೆ ಸಮಾವೇಶದಲ್ಲಿ ಪೆಂಡಾಲ್‌ನೊಳಗೇ ನಡೆಯಲಿದೆ ನರೇಂದ್ರ ಮೋದಿ ರೋಡ್ ಶೋ!

5. ಬಿಜೆಪಿ ಪ್ರತಿಮೆ ಪಾಲಿಟಿಕ್ಸ್‌, ರಾಜಧಾನಿಯಲ್ಲಿ ನಿರ್ಮಾಣ ಆಗಲಿದೆ 100 ಅಡಿ ಎತ್ತರದ ಕೆಂಪೇಗೌಡ ಮೂರ್ತಿ
ರಾಜ್ಯ ವಿಧಾನ ಸಭಾ ಚುನಾವಣಾ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ದೊಡ್ಡ ಮಟ್ಟದ ಪ್ರತಿಮೆ ಪಾಲಿಟಿಕ್ಸ್‌ಗೆ ಮುಂದಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಬಸವಣ್ಣ ಮತ್ತು ಕೆಂಪೇಗೌಡರ ಪ್ರತಿಮೆಯನ್ನು ಮಾರ್ಚ್‌ 26ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅನಾವರಣಗೊಳಿಸುವ ಮಾಹಿತಿಯನ್ನು ಹಂಚಿಕೊಳ್ಳಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ತೋಟಗಾರಿಕಾ ಸಚಿವ ಆರ್‌. ಮುನಿರತ್ನ ಅವರು ಇನ್ನೊಂದು ಬೃಹತ್‌ ಪ್ರತಿಮೆಯ ಅನಾವರಣದ ಸಂಗತಿಯನ್ನು ತೆರೆದಿಟ್ಟರು. ಇದು ರಾಜಧಾನಿಯ ಪಕ್ಕದಲ್ಲೇ 100 ಅಡಿ ಎತ್ತರದ ಕೆಂಪೇಗೌಡರ ಮೂರ್ತಿ ಪ್ರತಿಷ್ಠಾಪನೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

6. ಶ್ರವಣಬೆಳಗೊಳದ ಸ್ವಾಮೀಜಿ ಇನ್ನಿಲ್ಲ: ಚಂದ್ರಗಿರಿ ತಪ್ಪಲಲ್ಲಿ ಪಂಚಭೂತಗಳಲ್ಲಿ ಲೀನವಾಯ್ತು ಮಹಾಬೆಳಕು
ಶ್ರವಣಬೆಳಗೊಳದ ಕೀರ್ತಿಯನ್ನು ಜಗತ್ತಿನಾದ್ಯಂತ ಬೆಳಗಿಸಿದ ಧವಳ ಕೀರ್ತಿವಂತ ಸಂತ, ಶ್ರೀ ನೇಮಿ ಸಾಗರವರ್ಣಿ ಭಟ್ಟಾರಕ ಪರಂಪರೆಯ ಪೀಠಾಧೀಶ, ಪರಮಪೂಜ್ಯ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಗುರುವಾರ ಸಂಜೆ ಸೂರ್ಯಾಸ್ತಮಾನಕ್ಕೆ ಮುನ್ನ ಜಗತ್ತಿನಿಂದ ಅಸ್ತಮಿಸಿ ಅಚಂದ್ರಾರ್ಕ ಕೀರ್ತಿಯ ನಕ್ಷತ್ರವಾಗಿ ಪ್ರತಿಷ್ಠಾಪಿತರಾದರು. ಅವರು ಗುರುವಾರ ಮುಂಜಾನೆ ಶ್ರೀಮಠದಲ್ಲಿ ಜಾರಿಬಿದ್ದು ತಲೆಗೆ ಗಾಯವಾಗಿ ಮೃತಪಟ್ಟಿದ್ದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. Covid 19: ಒಂದೇ ದಿನ 1,300 ಕೊರೊನಾ ಕೇಸ್‌, ರಾಜ್ಯಗಳಿಗೆ ಪಂಚಸೂತ್ರ ನೀಡಿದ ಕೇಂದ್ರ
ದೇಶದಲ್ಲಿ ಕೊರೊನಾ (Covid 19) ಸೋಂಕಿತರ ಸಂಖ್ಯೆ ದಿನೇದಿನೆ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ ಬೆನ್ನಲ್ಲೇ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯವು ಐದು ಪ್ರಮುಖ ಸೂಚನೆ ನೀಡಿದೆ. ನಿತ್ಯ ಸೋಂಕಿತರ ಸಂಖ್ಯೆ ನಿತ್ಯವೂ ಜಾಸ್ತಿಯಾಗುತ್ತಿರುವ ಕಾರಣ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೊರೊನಾ ತಪಾಸಣೆ, ಪತ್ತೆ, ಚಿಕಿತ್ಸೆ, ಲಸಿಕೆ ವಿತರಣೆ ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ಸೋಂಕು ನಿಗ್ರಹಿಸುವಂತೆ ನಿರ್ದೇಶಿಸಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

8. ರಾಜ್ಯದ ಹಲವೆಡೆ ದಾಖಲೆ ಇಲ್ಲದ 13.16 ಕೋಟಿ ರೂ. ನಗದು, 3 ಕೋಟಿ ರೂ. ಚಿನ್ನಾಭರಣ ವಶ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದ ಹಲವು ಕಡೆ ಹಣದ ಹರಿವುಗಳು ಹೆಚ್ಚತೊಡಗಿವೆ. ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆಯೂ ದಾಖಲೆ ಇಲ್ಲದ ಒಟ್ಟು 13.16 ಕೋಟಿ ರೂಪಾಯಿ ಮತ್ತು 3 ಕೋಟಿ ರೂ. ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

9. ಟ್ವಿಟರ್‌ ಸಂಸ್ಥಾಪಕ ಜಾಕ್‌ ಡೋರ್ಸೆ ಕಂಪನಿ ಬ್ಲಾಕ್ ವಿರುದ್ಧ ಹಿಂಡೆನ್‌ಬರ್ಗ್‌ ಸ್ಫೋಟಕ ವರದಿ ಪ್ರಕಟ
ಅದಾನಿ ಕಂಪನಿಗಳ ವಿರುದ್ಧ ಶಾರ್ಟ್‌ ಸೆಲ್ಲಿಂಗ್‌ ಮಾಡಿದ್ದ ಅಮೆರಿಕದ ಹಿಂಡೆನ್‌ಬರ್ಗ್‌ ರಿಸರ್ಚ್‌ ಇದೀಗ ಸಾಮಾಜಿಕ ಜಾಲ ತಾಣ ದಿಗ್ಗಜ ಟ್ವಿಟರ್‌ನ ಸಂಸ್ಥಾಪಕ ಜಾಕ್‌ ಡೋರ್ಸೆ ಅವರ ಪೇಮೆಂಟ್‌ ಕಂಪನಿಯಾದ ಬ್ಲಾಕ್‌ ವಿರುದ್ಧ ಟಾರ್ಗೆಟ್‌ ಮಾಡಿದೆ. ಜಾಕ್‌ ಡೋರ್ಸೆ ಅವರ ಬ್ಲಾಕ್‌ ಕಂಪನಿಯಲ್ಲಿ ಹಲವಾರು ಅವ್ಯವಹಾರಗಳು ನಡೆದಿವೆ. ಈ ಬಗ್ಗೆ 2 ವರ್ಷಗಳ ತನಿಖೆ ನಡೆಸಿರುವುದಾಗಿ ಹಿಂಡೆನ್‌ಬರ್ಗ್‌ ವರದಿ ತಿಳಿಸಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

10. ಮದ್ಯದ ಬಾಟಲಿ ಹಿಡಿದು ವಿಮಾನದಲ್ಲಿ ಓಡಾಡಿದ ಇಬ್ಬರು ಪ್ರಯಾಣಿಕರು; ಈ ವರ್ಷದ 7ನೇ ಅಶಿಸ್ತಿನ ಕೇಸ್​!
ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಇದೀಗ ದುಬೈನಿಂದ ಮುಂಬಯಿಗೆ ಆಗಮಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು, ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ವಿಮಾನ ಸಿಬ್ಬಂದಿಯನ್ನು ಮತ್ತು ಸಹಪ್ರಯಾಣಿಕರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಹೀಗೆ ಪ್ಲೇನ್​​ನಲ್ಲಿ ಗಲಾಟೆ ಸೃಷ್ಟಿಸಿದ ಇವರಿಬ್ಬರನ್ನೂ, ಮುಂಬಯಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಬಂಧಿಸಲಾಗಿದೆ. ಈ ವರ್ಷದಲ್ಲಿ ನಡೆದ, ಪ್ರಯಾಣಿಕರ ಅಶಿಸ್ತಿನ ವರ್ತನೆಯ 7ನೇ ಪ್ರಕರಣ ಇದಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

ಇತರ ಪ್ರಮುಖ ಸುದ್ದಿಗಳು

1. ಹಳೆ ಪಿಂಚಣಿ ಯೋಜನೆ ಜಾರಿಗಾಗಿ ʻವೋಟ್‌ ಫಾರ್‌ ಓಪಿಎಸ್‌ʼ ಆಂದೋಲನ; ಸರ್ಕಾರಿ ನೌಕರರ ನಿರ್ಧಾರ
2. ದೆಹಲಿ ಮತ್ತು 3 ರಾಜ್ಯಗಳಲ್ಲಿ ಅಧ್ಯಕ್ಷರನ್ನು ಬದಲಾವಣೆ ಮಾಡಿದ ಬಿಜೆಪಿ; ಒಳಜಗಳ ಶಮನ, ಚುನಾವಣಾ ಸಿದ್ಧತೆಗೆ ಆದ್ಯತೆ
3. ಅಕ್ರಮ ಸಂಬಂಧಗಳು, ಅಶ್ಲೀಲ ಚಾಟ್​, ವಿಡಿಯೊ ಕಾಲ್​ನಲ್ಲಿ ಕಿಸ್​​; ಖಲಿಸ್ತಾನಿ ನಾಯಕ ಅಮೃತ್​ಪಾಲ್ ಸಿಂಗ್​​ನ ಕೊಳಕು ಜೀವನ
4. ಗೂಗಲ್‌ ಸೇವೆಯಲ್ಲಿ ವ್ಯತ್ಯಯ, ಯೂಟ್ಯೂಬ್‌, ಡ್ರೈವ್‌, ಜಿಮೇಲ್‌ಗೆ ಅಡಚಣೆ, ಬಳಕೆದಾರರ ಪರದಾಟ



Exit mobile version