Site icon Vistara News

ವಿಸ್ತಾರ TOP 10 NEWS: ರಾಜ್ಯದಲ್ಲಿ ಬಿಜೆಪಿ ನಾಯಕರ ಚಕ್ರವ್ಯೂಹದಿಂದ, ಯತ್ನಾಳ್‌ರ ವಿಷವ್ಯೂಹದವರೆಗೆ ಪ್ರಮುಖ ಸುದ್ದಿಗಳು

Vistara Top 10: Major developments of the day

Vistara Top 10: Major developments of the day

1. ರಾಜ್ಯದಲ್ಲಿ ಚಕ್ರವ್ಯೂಹ ಹೆಣೆದ ಬಿಜೆಪಿ ವರಿಷ್ಠರು- ನಾಳೆಯಿಂದ 2 ದಿನ ಮೋದಿ ಪ್ರವಾಸ
ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಚುನಾವಣಾ ಪ್ರಚಾರ ಏಪ್ರಿಲ್‌ 29ರಿಂದ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ಎರಡು ದಿನ ಪ್ರಚಾರದ ಅಖಾಡದಲ್ಲಿ ಇರಲಿದ್ದು ಅಮಿತ್ ಶಾ, ಜೆ.ಪಿ. ನಡ್ಡಾ, ರಾಜನಾಥ್​​​​ ಸೇರಿ ಅಷ್ಟದಿಕ್ಕುಗಳಲ್ಲೂ ದಿಗ್ಗಜರ ಅಬ್ಬರ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : Karnataka Election: ರಾಜ್ಯದಲ್ಲಿ ಶನಿವಾರ ಮೋದಿ, ಶಾ, ನಡ್ಡಾ ಪ್ರಚಾರದ ಅಬ್ಬರ, ಹೀಗಿದೆ ವಿವರ

2. ಸೋನಿಯಾ ಗಾಂಧಿ ವಿಷಕನ್ಯೆ, ರಾಹುಲ್ ಹುಚ್ಚ: ಬಿಜೆಪಿ ನಾಯಕ ಯತ್ನಾಳ್ ವಿವಾದಾತ್ಮಕ ಹೇಳಿಕೆ
ಕೊಪ್ಪಳ, ಕರ್ನಾಟಕ:
ಪ್ರಧಾನಿ ನರೇಂದ್ರ ಮೋದಿ ಅವರು ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ವಿಷದ ಹಾವು ಎಂದು ಹೇಳಿ, ಬಳಿಕ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರಚಾರ ಅಖಾಡದಲ್ಲಿ ಈ ವಿಷಯ ಇನ್ನೂ ನಿಂತಿಲ್ಲ. ವಿಜಯಪುರ ನಗರ ಬಿಜೆಪಿ ಅಭ್ಯರ್ಥಿಯೂ ಆಗಿರುವ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿಷದ ಹಾವು ಎಂದಾದರೆ, ಸೋನಿಯ ಗಾಂಧಿಯೇನು ವಿಷ ಕನ್ಯೆಯೇ ಎಂದು ಪ್ರಶ್ನಿಸುವ ಮೂಲಕ ಸಭ್ಯತೆಯ ಗೆರೆಯನ್ನು ದಾಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿಗಳು : 1. ಯತ್ನಾಳ್‌ ವಿಷ ಕನ್ಯೆ ಹೇಳಿಕೆ ಹಿಂದೆ ಮೋದಿ ಪ್ರಚೋದನೆ; ಸಿದ್ದರಾಮಯ್ಯಗೆ ಸಂಶಯ
2. ನನ್ನ ತಾಯಿಯನ್ನು ವಿಷ ಕನ್ಯೆ ಎಂದ ಮಿ. ಯತ್ನಾಳ್‌, ನಿಮ್ಮ ನಾಲಿಗೇನಾ.. ; ಡಿಕೆಶಿ ಆಕ್ರೋಶ

3. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಓಪನ್ ಮಾಡಲು ಬಂದಿದ್ದೇನೆ: ರಾಹುಲ್ ಗಾಂಧಿ
ಬಳ್ಳಾರಿ‌ ಮೋತಿ ಸರ್ಕಲ್‌ನಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರು ತಮ್ಮ ಮಾತುಗಳ ಮೂಲಕ ಅಲ್ಲಿ ನೆರೆದಿದ್ದ ಸಾವಿರಾರು ಜನರ ಮನಸ್ಸು ಗೆದ್ದರು. ”ದ್ವೇಷದ ಮಾರುಕಟ್ಡೆಯಲ್ಲಿ, ಪ್ರೀತಿಯ ಅಂಗಡಿಯನ್ನು ಓಪನ್ ಮಾಡಲು ಬಂದಿದ್ದೇನೆ,” ಎಂಬ ರಾಹುಲ್ ಗಾಂಧಿ (Rahul Gandhi) ಅವರ ಮಾತಿಗೆ ನೆರೆದಿದ್ದ ಜನರು ತಲೆದೂಗಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : ಕುಷ್ಟಗಿ ಮಹಿಳಾ ಸಂವಾದಕ್ಕೆ ರಾಹುಲ್ ಗಾಂಧಿ ಗೈರು; ಕಾರಣ ಏನು?

4. ಪ್ರಚಾರ ಕಣಕ್ಕೆ ಎಂಟ್ರಿ ಕೊಡಲಿದ್ದಾರೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ; ಯಾರ ಪರ ಪ್ರಚಾರ?
ಸ್ಯಾಂಡಲ್‌ವುಡ್‌ ಕ್ವೀನ್‌, ಮಾಜಿ ಸಂಸದೆ, ಚಿತ್ರನಟಿ ರಮ್ಯಾ (Actress Ramya) ಅವರು ವಿಧಾನಸಭಾ ಚುನಾವಣಾ (Karnataka Election 2023) ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ. ಯಾವಾಗದಿಂದ ಪ್ರಚಾರ ಆರಂಭ, ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎನ್ನುವುದು ಇನ್ನಷ್ಟೇ ಫೈನಲ್‌ ಆಗಬೇಕಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. Karnataka Election: ಮೇ 10ರವರೆಗೆ ಕಾಯಬೇಕಿಲ್ಲ, ಶನಿವಾರದಿಂದಲೇ ಮಾಡಿ ಮತದಾನ
ರಾಜ್ಯಾದ್ಯಂತ ಮೇ 10ರಂದು ಮತದಾನ (Karnataka Election) ನಡೆಯಲಿದೆ. ಇದಕ್ಕಾಗಿ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಪಕ್ಷಗಳು ಪ್ರಮುಖ ನಾಯಕರನ್ನು ರಾಜ್ಯಕ್ಕೆ ಕರೆಸಿದ್ದಾರೆ. ಆದರೆ, 80 ವರ್ಷ ದಾಟಿದ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಮಾತ್ರ ಏಪ್ರಿಲ್‌ 29ರಿಂದಲೇ ಮತದಾನ ಮಾಡಬಹುದಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡಲು ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. Operation Kaveri: ಸುಡಾನ್‌ನಿಂದ ಬೆಂಗಳೂರಿಗೆ ಬಂದಿಳಿದ 362 ಕನ್ನಡಿಗರು, ಅವರು ಹೇಳಿದ್ದೇನು? ಸಂಘರ್ಷಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರವು ಆಪರೇಷನ್ ಕಾವೇರಿ (Operation Kaveri) ಆರಂಭಿಸಿದೆ. ಈಗಾಗಲೇ ನೂರಾರು ಭಾರತೀಯರನ್ನು ಸುಡಾನ್‌ನಿಂದ ವಾಪಸ್ ಕರೆತರಲಾಗಿದೆ. ಈಗ, ಸುಡಾನ್‌ನಿಂದ ಸುಮಾರು 362 ಕನ್ನಡಿಗರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲೆಸೆತ; ತಲೆಗೆ ಗಂಭೀರ ಗಾಯ
ನಾಮಪತ್ರ ಸಲ್ಲಿಕೆ ವೇಳೆ ಕಲ್ಲೆಸೆತ ಪ್ರಕರಣ ನಡೆದ ಬೆನ್ನಲ್ಲೇ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಮೇಲೆ ಮತ್ತೊಮ್ಮೆ ಕಲ್ಲೆಸೆದಿರುವ ಘಟನೆ ನಡೆದಿದೆ. ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಚುನಾವಣಾ ಪ್ರಚಾರದ (Karnataka Election) ವೇಳೆ ಕಿಡಿಗೇಡಿಯೊಬ್ಬ ಕಲ್ಲೆಸೆದ ಕಾರಣ ಪರಮೇಶ್ವರ್‌ ಅವರ ತಲೆಗೆ ಗಂಭೀರ ಗಾಯವಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

8. ವಿಸ್ತಾರ Explainer: ಉಚಿತ, ಉಚಿತ, ಉಚಿತ; ಖಜಾನೆಗೆ ತೂತು ಖಚಿತ!
ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್‌ ಕೆಲವೊಂದು ಭರವಸೆಗಳನ್ನು ನೀಡಿದೆ. ಜೆಡಿಎಸ್‌ ಕೂಡಾ ಹಿಂದೆ ಬಿದ್ದಿಲ್ಲ. ಯಾವತ್ತೂ ಫ್ರೀ ಇಲ್ಲ ಎನ್ನುತ್ತಿದ್ದ ಬಿಜೆಪಿ ಕೂಡಾ ಕೆಲವೊಂದು ಭರವಸೆ ನೀಡಿದೆ. ಈ ಉಚಿತ ಭರವಸೆಗಳನ್ನು ಈಡೇರಿಸಲು ಬೇಕಾದಷ್ಟು ಹಣ ರಾಜ್ಯದ ಬೊಕ್ಕಸದಲ್ಲಿ ಇದೆಯೇ? ಇಲ್ಲವಾದರೆ ಅದಕ್ಕೆಲ್ಲಾ ಹಣವನ್ನು ಎಲ್ಲಿಂದ ತರುತ್ತಾರೆ? ಇದು ಸಾಮಾನ್ಯ ಮತದಾರನ ಕುತೂಹಲ. ಇದನ್ನು ಉತ್ತರಿಸಲು ಪಕ್ಷಗಳು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆ ಲೆಕ್ಕಾಚಾರ ನಾವೇ ಮಾಡಬೇಕು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ವಿಸ್ತಾರ Explainer : ಏನಿದು ಮಹಿಳಾ ಕುಸ್ತಿಪಟುಗಳು, ಕುಸ್ತಿ ಒಕ್ಕೂಟದ ಜಂಗೀ ಕುಸ್ತಿ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಜಗದಗಲಕ್ಕೂ ಹಾರಿಸಿದ್ದ ಏಳು ಮಹಿಳಾ ಕುಸ್ತಿಪಟುಗಳು ಕಳೆದ ಭಾನುವಾರದಿಂದ (ಏಪ್ರಿಲ್​ 23ರಿಂದ) ನವದೆಹಲಿಯ ಜಂತರ್​ ಮಂಥರ್​ನಲ್ಲಿ ಆಹೋರಾತ್ರಿ ಪ್ರತಿಭಟನೆಗೆ ಕುಳಿತಿದ್ದಾರೆ. ನಮ್ಮ ಮೇಳೆ ಲೈಂಗಿಕ ದೌರ್ಜನ್ಯ ಎಸಗಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷರಾದ ಬ್ರಿಜ್​ಭೂಷಣ್ ಶರಣ್​ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಟ್ಟು ಹಿಡಿದಿದ್ದಾರೆ. ಈ ವಿವಾದದ ಕುರಿತ ವಿಸ್ತಾರ Explainer ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ದಿನಾಂಕ ನಿಗದಿ; ಯಾವಾಗ?
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಇದೇ ವರ್ಷ ಡಿಸೆಂಬರ್​ನೊಳಗೆ ಶ್ರಿರಾಮ ದೇಗುಲದ ಗರ್ಭಗುಡಿ ಕಾರ್ಯ ಪೂರ್ಣಗೊಳ್ಳಲಿದ್ದು, 2024ರ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version