1. Pulse of Karnataka: ವಿಸ್ತಾರ-ಅಖಾಡಾ ಸಮೀಕ್ಷೆ: ಹಳೆ ಮೈಸೂರು ಭಾಗದ ಜನರ ಮನದಲ್ಲೇನಿದೆ?
2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ? ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ? ವಲಯವಾರು ಯಾವ ರಿಸಲ್ಟ್ ಬರಬಹುದು? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಠಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ. ಇಲ್ಲಿದೆ ಹಳೆ ಮೈಸೂರು ಭಾಗದ ಜನರ ನಾಡಿಮಿಡಿತ. ಪೂರ್ಣ ವರದಿಗೆ ಕ್ಲಿಕ್ ಮಾಡಿ
2. Govt Employees Strike : ಸರ್ಕಾರದಿಂದ ವೇತನ ಹೆಚ್ಚಳದ ಆದೇಶ; ಸರ್ಕಾರಿ ನೌಕರರ ಮುಷ್ಕರ ವಾಪಸ್
ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಬುಧವಾರ ಬೆಳಗ್ಗೆಯಿಂದ ಮುಷ್ಕರ ನಡೆಸುತ್ತಿದ್ದ (Govt Employees Strike) ರಾಜ್ಯದ ಸರ್ಕಾರಿ ನೌಕರರು ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ. ರಾಜ್ಯ ಸರ್ಕಾರವು ವೇತನವನ್ನು ಶೇ.17 ರಷ್ಟು ಹೆಚ್ಚಿಸಿ, ಅಧಿಕೃತ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನೌಕರರ ಸಂಘವು ಮುಷ್ಕರವನ್ನು ಹಿಂದಕ್ಕೆ ಪಡೆಯುವ ತೀರ್ಮಾನ ತೆಗೆದುಕೊಂಡಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
ಪೂರಕ ಸುದ್ದಿ : ಎನ್‌ಪಿಎಸ್ ರದ್ದು ಪರಿಶೀಲನೆಗೆ ವಿಶೇಷ ಸಮಿತಿ ರಚನೆ; ಸರ್ಕಾರಿ ಆದೇಶದಲ್ಲಿ ಹೇಳಿರುವುದೇನು?
3. ಮುಷ್ಕರ ವಾಪಸ್ ಪಡೆದ ಬೆನ್ನಲ್ಲೇ ಸರ್ಕಾರಿ ನೌಕರರ ಸಂಘದಲ್ಲಿ ಭಿನ್ನಮತ ಸ್ಫೋಟ
ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವೇತನವನ್ನು ಶೇ. 17ರಷ್ಟು ಹೆಚ್ಚಿಸಿದ ಮತ್ತು ಹಳೆ ಪಿಂಚಣಿ ಜಾರಿ ಅಧ್ಯಯನಕ್ಕೆ ಸಮಿತಿ ರಚನೆ ಘೋಷಿಸಿದ ಬಳಿಕ ಸರ್ಕಾರಿ ನೌಕರರ ಸಂಘ ಮುಷ್ಕರ ವಾಪಸ್ ಪಡೆದಿದೆ. ಅದರೆ, ಇದರ ನಡುವೆ ನೌಕರರ ಸಂಘದಲ್ಲಿ ಭಿನ್ನಮತ ಭುಗಿಲೆದ್ದಿದೆ. ರಾಜ್ಯ ಸರ್ಕಾರ ಶೇ. 17 ವೇತನ ಹೆಚ್ಚಳ ಘೋಷಿಸಿದ ಬೆನ್ನಿಗೇ ಮುಷ್ಕರವನ್ನು ವಾಪಸ್ ಪಡೆದಿರುವುದಾಗಿ ಘೋಷಿಸಿದ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ನಿಲುವಿಗೆ ನಿಲುವಿಗೆ ವೃಂದ ಸಂಘಗಳ ವಿರೋಧ ವ್ಯಕ್ತವಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
4. ಮನೆ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆ 50 ರೂ. ಏರಿಕೆ, ವಾಣಿಜ್ಯ ಸಿಲಿಂಡರ್‌ಗೆ 350 ರೂ. ಹೆಚ್ಚಳ
ಮನೆ ಬಳಕೆಯ 14 ಕಿಲೋ ತೂಕದ ಗ್ಯಾಸ್ ಸಿಲಿಂಡರ್ (LPG) ಬೆಲೆಯನ್ನು 50 ರೂ. ಹೆಚ್ಚಿಸಲಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರುತ್ತಿದೆ. ನೂತನ ಏರಿಕೆಯಿಂದ ಒಂದು ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1103 ರೂ. ಆಗಲಿದೆ. ಹಾಗೆಯೇ 19 ಕಿಲೋದ ಗ್ಯಾಸ್ ಸಿಲಿಂಡರ್ ಬೆಲೆಯನ್ನು 350 ರೂ.ಗಳಷ್ಟು ಏರಿಸಲಾಗಿದೆ. 19 ಕಿಲೋ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇದೀಗ 2119.50 ರೂ. ತಲುಪಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
5. BJP Rathayatre: ಆದಿವಾಸಿ, ಶೋಷಿತರ ಪರ ಮೋದಿ ಸರ್ಕಾರ ಕೆಲಸ; ಜೆ.ಪಿ. ನಡ್ಡಾ
ಆದಿವಾಸಿ, ದಲಿತ, ಶೋಷಿತ, ಹಿಂದುಳಿದ ವರ್ಗಗಳ ಪ್ರಗತಿಗೆ ಮೋದಿ ನೇತೃತ್ವದ ಸರ್ಕಾರ ಪಣತೊಟ್ಟಿದೆ. ದಲಿತ, ಶೋಷಿತ ಸಮುದಾಯದವರನ್ನು ಮಂತ್ರಿ ಮಾಡಿದ್ದೇವೆ. ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇ ಇದಕ್ಕೆ ಸಾಕ್ಷಿ. ನಾನು ಸಂವಾದ ಮಾಡಿ ಹೋಗಲು ಇಲ್ಲಿಗೆ ಬಂದಿಲ್ಲ. ಈ ಪ್ರದೇಶದ ಚಿತ್ರಣವನ್ನೇ ಬದಲು ಮಾಡುವ ಸಂಕಲ್ಪ ಮಾಡಲು ಬಂದಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ “ವಿಜಯ ಸಂಕಲ್ಪ ರಥಯಾತ್ರೆ”ಗೆ ಚಾಲನೆ ನೀಡಿ ತಿಳಿಸಿದರು. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಪೂರಕ ವರದಿ : ಮಾ.12ಕ್ಕೆ ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟಿಸಲಿರುವ ಮೋದಿ; 2 ರೋಡ್ ಶೋಗೆ ಪ್ಲ್ಯಾನ್
6. ಕಾಂಗ್ರೆಸ್ ಮೋದಿ ಸಾವಿನ ಜಪ ಮಾಡ್ತಿದೆ ಎನ್ನುವುದು ಸುಳ್ಳು, ಹಾಗೆ ಹೇಳಿದವರ ಹೆಸರು ಹೇಳಿ: ಸಿದ್ದು ಸವಾಲು
ʻʻಕಾಂಗ್ರೆಸ್ ನನ್ನ ಸಾವಿಗಾಗಿ ಜಪ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಶುದ್ಧ ಸುಳ್ಳುʼʼ ಎಂದು ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka Politics) ಹೇಳಿದ್ದಾರೆ. ʻʻಯಾರಾದರೂ ಆ ರೀತಿಯಾಗಿ ಹೇಳಿಕೆ ನೀಡಿದ್ದಾರಾ? ಹೇಳಿದವರ ಹೆಸರು ಹೇಳಿ ನೋಡೋಣʼʼ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. MK Stalin turns 70: ಸ್ಟಾಲಿನ್ ಬರ್ತ್‌ಡೇ ದಿನ ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶನ ಪ್ರಯತ್ನ!
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಮಾರ್ಚ್ 1ರಂದು 70ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಈ ಹುಟ್ಟುಹಬ್ಬ ಸಂದರ್ಭವನ್ನು ಬಳಸಿಕೊಂಡು ಪ್ರತಿಪಕ್ಷದ ನಾಯಕರನ್ನು ಒಂದುಗೂಡಿಸುವುದು ಮತ್ತು ಸ್ಟಾಲಿನ್ ಅವರನ್ನು ರಾಷ್ಟ್ರೀಯ ನಾಯಕ ಎಂಬಂತೆ ಬಿಂಬಿಸುವ ಕಾರ್ಯಕ್ಕೆ ಡಿಎಂಕೆ ಮುಂದಾಗಿತ್ತು. ಆದರೆ, ಈ ಯೋಜನೆಗೆ ಸ್ವಲ್ಪ ಹಿನ್ನಡೆಯಾದಂತಿದೆ. ಕಾಂಗ್ರೆಸ್, ಜೆಡಿಯು, ಟಿಎಂಸಿ, ಎನ್‌ಸಿಪಿ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕೇವಲ ನಾಲ್ವರು ನಾಯಕರು ಮಾತ್ರ ಬರ್ತ್‌ಡೇ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಮಾ. 2ರಂದು ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಚುನಾವಣೆ ಫಲಿತಾಂಶ
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಹೆಚ್ಚಿನ ಮಹತ್ವ ಪಡೆದಿರುವ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ (Northeast Assembly Election Result 2023) ಗುರುವಾರ (ಮಾರ್ಚ್ 2) ಪ್ರಕಟವಾಗಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಯೋಗಿ ಬುಲ್ಡೋಜರ್: ಉಮೇಶ್ ಪಾಲ್ ಕೊಲೆ ಆರೋಪಿ ಆತೀಖ್ ಸಹವರ್ತಿಗಳ ಮನೆ ನೆಲಸಮ
ಉತ್ತರ ಪ್ರದೇಶದ ಉಮೇಶ್ ಪಾಲ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ಅತೀಖ್ ಅಹ್ಮದ್ ಅವರ ಸಹವರ್ತಿಗಳ ಮನೆಗಳನ್ನು ಪ್ರಯಾಗ್‌ರಾಜ್ ಪೊಲೀಸರು ಜೆಸಿಬಿ ಬಳಸಿ ನೆಲಸಮ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ನಾಯಕನಾಗಿರುವ ಆತೀಕ್ ಸದ್ಯ ಗುಜರಾತ್‌ನ ಅಹ್ಮದಾಬಾದ್ ಜೈಲಿನಲ್ಲಿದ್ದಾನೆ. ಅಲ್ಲಿದ್ದುಕೊಂಡೇ ಈ ಕೊಲೆಗೆ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ನೆರವು ನೀಡಿದ್ದು ಜಾಫರ್ ಅಹ್ಮದ್. ಈಗ ಪೊಲೀಸರು ಜಾಫರ್ ಮನೆಯನ್ನು ನೆಲಸಮ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ರಾಹುಲ್ ಗಾಂಧಿಯ ಬದಲಾದ ಲುಕ್, ಉದ್ದನೆಯ ಗಡ್ಡಕ್ಕೆ ಕತ್ತರಿ, ಕೇಂಬ್ರಿಡ್ಜ್ ವಿವಿಯಲ್ಲಿ ಉಪನ್ಯಾಸ
ಭಾರತ್ ಜೋಡೋ ಯಾತ್ರೆಯ ಆರಂಭವಾಗಿ ಮುಗಿಯೋವರೆಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಗಡ್ಡಕ್ಕೆ ಕತ್ತರಿ ಹಾಕಿರಲಿಲ್ಲ. ಸುಮಾರು 4 ತಿಂಗಳ ಕಾಲ ನಡೆದ ಈ ಯಾತ್ರೆಯ ವೇಳೆ, ಅವರು ತಮ್ಮ ಗಡ್ಡವನ್ನು ನೀಳವಾಗಿ ಬೆಳೆಸಿದ್ದರು. ಆದರೆ, ಈಗ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ಟ್ರಿಮ್ ಮಾಡಿದ್ದಾರೆ. ರಾಹುಲ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು, ತಮ್ಮ ಉದ್ದನೆಯ ಗಡ್ಡವನ್ನು ಕತ್ತರಿಸಿ, ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇತರ ಪ್ರಮುಖ ಸುದ್ದಿಗಳು
1. ಆಪ್‌ಗೆ ಗುಡ್‌ಬೈ ಹೇಳಿ ಕಮಲ ಪಾಳಯ ಸೇರಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್
2. ಇಬ್ಬರು ಸಚಿವರ ರಾಜೀನಾಮೆ, ಆತಿಶಿ, ಸೌರಭ್ ಭಾರದ್ವಾಜ್‌ಗೆ ಸಚಿವ ಸ್ಥಾನ ನೀಡಲು ಕೇಜ್ರಿವಾಲ್ ತೀರ್ಮಾನ
3. IND VS AUS: ಕಪಿಲ್ ದೇವ್ ದಾಖಲೆ ಸರಿಗಟ್ಟಿದ ರವೀಂದ್ರ ಜಡೇಜಾ
4. ಸಂಜಯ್ ಝಾ VS ಮೋಹನ್ ದಾಸ್ ಪೈ; ಗೌತಮ್ ಅದಾನಿ ಷೇರು ಕುಸಿತದ ಬಗ್ಗೆ ಟ್ವೀಟ್ ವಾರ್
5. 5 day work : ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ 2 ದಿನಗಳ ರಜೆ ಸೌಲಭ್ಯ ಪ್ರಸ್ತಾಪ