Site icon Vistara News

ವಿಸ್ತಾರ TOP 10 NEWS: ರೈಲು ದುರಂತ ಕೇಸ್‌ CBI ತನಿಖೆಯಿಂದ, ರಾಜ್ಯದಲ್ಲಿ ಮಳೆ ಮುನ್ಸೂಚನೆವರೆಗಿನ ಪ್ರಮುಖ ಸುದ್ದಿಗಳಿವು

#image_title

1. Odisha Train Accident: ತಪ್ಪಿತಸ್ಥರಿಗೆ ಕ್ರಮ ಎಂದು ಮೋದಿ ಎಚ್ಚರಿಕೆ ಬೆನ್ನಲ್ಲೇ ರೈಲು ದುರಂತ ಕೇಸ್‌ ಸಿಬಿಐಗೆ
ಒಡಿಶಾದ ಬಾಲಾಸೋರ್‌ ಜಿಲ್ಲೆ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ (Odisha Train Accident) ಭೀಕರ ರೈಲು ಅಪಘಾತದಲ್ಲಿ ಸುಮಾರು 288 ಜನ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದು, ಹಲವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಇನ್ನು ಅಪಘಾತ ನಡೆದ ಸ್ಥಳದಲ್ಲಿ ಹಳಿ ಜೋಡಣೆ ಸೇರಿ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಬೆನ್ನಲ್ಲೇ, ಪ್ರಕರಣದ ಕುರಿತು ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Odisha Train Accident: ರೈಲುಗಳಿಗೆ ಅಲ್ಲ, ಪ್ರಧಾನಿ ಮೋದಿಗೇ ‘ಕವಚ’ದ ರಕ್ಷಣೆ! ಪಿಎಂಗೆ ಕಾಂಗ್ರೆಸ್ ಸಖತ್ ಟಾಂಗ್
ಶುಕ್ರವಾರ ಸಂಜೆ ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ (Odisha Train Accident) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಕಾಂಗ್ರೆಸ್ (Congress) ಹರಿಹಾಯ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸುತ್ತ ಸೃಷ್ಟಿಸಿಕೊಂಡಿರುವ ‘ಕವಚ್’ (Kavach) ಅವರನ್ನು ಎಲ್ಲ ಸಾರ್ವಜನಿಕ ವಿಮರ್ಶೆ ಮತ್ತು ದೂರದರ್ಶನಗಳ ಚರ್ಚೆಯಿಂದ ರಕ್ಷಿಸುತ್ತಿದೆ. ಅದು ದೇಶದ ಜನರನ್ನು ರಕ್ಷಿಸುವುದಿಲ್ಲ ಎಂದು ಟಾಂಗ್ ಕೊಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Cow slaughter: ಗೋಹತ್ಯೆ ಹೇಳಿಕೆ ನೀಡಿದ್ದು ಖಾತೆ ಬದಲಾವಣೆಗಾಗಿ: ಸಚಿವ ಕೆ. ವೆಂಕಟೇಶ್‌ ಕುರಿತು ಮಾಜಿ ಸಿಎಂ ಹೇಳಿದ್ದೇನು?
ಗೋವುಗಳನ್ನು ಏಕೆ ಕಡಿಯಬಾರದು ಎಂಬ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿಕೆಯನ್ನು ಖಂಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಖಾತೆಯನ್ನು ಬದಲಾಯಿಸಲಿ ಎಂಬ ಕಾರಣಕ್ಕೆ ಸಚಿವರು ಈ ಹೇಳಿಕೆ ನೀಡಿರುವ ಸಾಧ್ಯತೆಯಿದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Congress Guarantee: ಮಹಿಳೆಯರೂ ಬಸ್‌ ಟಿಕೆಟ್‌ ಪಡೆಯಲೇಬೇಕು: ಟಿಕೆಟ್‌ನಲ್ಲೂ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್‌!
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ (Congress Guarantee) ಯೋಜನೆಗಳನ್ನು ಘೋಷಣೆ ಮಾಡಲಿದ್ದು, ಮೊದಲ ಯೋಜನೆಯಾಗಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಆರಂಭವಾಗಲಿದೆ. ಇದೀಗ ಬಿಎಂಟಿಸಿಯು ಮಾದರಿ ಉಚಿತ ಟಿಕೆಟನ್ನು ಬಿಡುಗಡೆ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. bamul: ಹೇಳ್ದೇ ಕೇಳ್ದೇ ನಿರ್ಧಾರ ಮಾಡಿದ್ರೆ ಸರಿ ಇರೋಲ್ಲ: ಹಾಲಿನ ಸಬ್ಸಿಡಿ ಇಳಿಸಿದ ಬಮುಲ್‌ಗೆ ಸಿದ್ದರಾಮಯ್ಯ ವಾರ್ನಿಂಗ್‌
ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂಬ ಕಾರಣಕ್ಕೆ, ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಡಿತ ಮಾಡಿದ್ದ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ (Bamul) ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಪ್ರೋತ್ಸಾಹಧನ ಕಡಿತ ಮಾಡಬಾರದು ಎಂದು ಸೂಚಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Google Wallet: ಗೂಗಲ್ ವಾಲೆಟ್‌ಗೆ 5 ಹೊಸ ಫೀಚರ್ಸ್, ಇವುಗಳಿಂದ ಏನೆಲ್ಲ ಉಪಯೋಗ?
ಟೆಕ್ ದೈತ್ಯ ಕಂಪನಿ ಗೂಗಲ್ ಕಳೆದ ವರ್ಷವಷ್ಟೇ ಗೂಗಲ್ ವಾಲೆಟ್ ಸೇವೆಯನ್ನು ಆರಂಭಿಸಿತ್ತು. ಇದೀಗ, ಐದು ಹೊಸ ಫೀಚರ್‌ಗಳನ್ನು ಜಾರಿ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Viral Video: ಪಾಕ್ ಪ್ರಧಾನಿಗೆ ಹಗ್ ಮಾಡಲು ಒಪ್ಪದ ಟರ್ಕಿ ಅಧ್ಯಕ್ಷ! ಪಾಕ್ ಪಿಎಂಗೆ ನೆಟ್ಟಿಗರಿಂದ ಮಂಗಳಾರತಿ
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ (pakistan prime minister Shehbaz Sharif) ಆಗಾಗ ತಮ್ಮ ವಿಚಿತ್ರ ನಡವಳಿಕೆ ಹಾಗೂ ಎದುರಿಸಿದ ಮುಜುಗರಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗಿನ ಮಾತುಕತೆ ವೇಳೆ, ಇಯರ್ ಫೋನ್ ಸಿಕ್ಕಿಸಿಕೊಳ್ಳಲು ಪರದಾಡಿದ ವಿಡಿಯೋ ಭಾರೀ ವೈರಲ್ ಆಗಿತ್ತು. ಈಗ ಅಂಥದ್ದೇ ಮತ್ತೊಂದು ಮುಜುಗರ ಪರಿಸ್ಥಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಎದುರಿಸಿದ್ದಾರೆ. ಟರ್ಕಿಯ ಅಧ್ಯಕ್ಷರಾಗಿ ಮರು ಆಯ್ಕೆಯಾದ ರೆಸಿಪ್ ತಾಯಿಪ್ ಎರ್ಡೋವನ್ (turkish president recep tayyip erdogan) ಅವರ ಪದಗ್ರಹಣ ಸಮಾರಂಭಕ್ಕೆ ಹೋದಾಗ ಈ ಟ್ರೋಲ್ ಘಟನೆ ನಡೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್‌ ಅಭಿಯಾನ
ಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ʼಮತ ಹಾಕಿ ಫೋಟೊ ಕಳುಹಿಸಿʼ ಅಭಿಯಾನದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ವಿಸ್ತಾರ ನ್ಯೂಸ್‌ ಈಗ ಮತ್ತೊಂದು ಅಭಿಯಾನ ಆಯೋಜಿಸಿದೆ. ಪರಿಸರ ದಿನದಂದು ನೀವು ಸಸಿ ನೆಟ್ಟು ನಮಗೆ ಫೋಟೊ ಕಳುಹಿಸಿಕೊಡಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather report: 13 ಜಿಲ್ಲೆಗಳಲ್ಲಿ ಆರ್ಭಟಿಸಲಿದ್ದಾನೆ ವರುಣ; ಇರಲಿದೆ ಗುಡುಗು, ಸಿಡಿಲು, ಬೀಸಲಿದೆ ಬಿರುಗಾಳಿ
ಮುಂದಿನ 24 ಗಂಟೆಯಲ್ಲಿ (Weather report) ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain alert) ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಮೊದಲ ರಾತ್ರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ನವದಂಪತಿ; ಅಂಥದ್ದೇನಾಯ್ತು ಕೋಣೆಯಲ್ಲಿ!
ಅವತ್ತೇ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಅಂದೇ ಮೊದಲ ರಾತ್ರಿ ಸಂಭ್ರಮವೂ ಅವರದ್ದಾಗಿತ್ತು. ಆದರೆ ಮರುದಿನ ಅವರು ಮಲಗಿದ್ದ ಕೋಣೆಯಲ್ಲಿ ಶವವಾಗಿದ್ದರು. ಇವರಿಬ್ಬರ ಸಾವು ವಿಚಿತ್ರ ಎನ್ನಿಸಲು ಕಾರಣ, ಪೋಸ್ಟ್​ಮಾರ್ಟಮ್​ ರಿಪೋರ್ಟ್​. ಏನೋ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಅನುಮಾನ ಮೊದಲು ಎಲ್ಲರಿಗೂ ಕಾಡಿತ್ತು. ಆದರೆ ಸತ್ಯ ಬೇರೆಯಿತ್ತು. ಇವರಿಬ್ಬರೂ ಹೃದಯಾಘಾತದಿಂದ (Couple dies Due to Heart Attack) ಮೃತಪಟ್ಟಿದ್ದಾಗಿ ಪೋಸ್ಟ್​ಮಾರ್ಟಮ್​ ವರದಿ ಹೇಳಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version