Site icon Vistara News

ವಿಸ್ತಾರ TOP 10 NEWS: ಕಾದಾಡುವ ಮಹಿಳಾಧಿಕಾರಿಗಳ ಎತ್ತಂಗಡಿಯಿಂದ, ದುಡಿಯುವ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-Two women officers transferred to free bus pass for women and more news

#image_title

1. Sindhuri Vs Roopa: ರೋಹಿಣಿ-ರೂಪಾ ಇಬ್ಬರಿಗೂ ಜಾಗ ತೋರಿಸದೇ ಎತ್ತಂಗಡಿ: ರೂಪಾ ಪತಿ ಮೌನೀಶ್‌ ಮೌದ್ಗಿಲ್‌ ಸಹ ವರ್ಗಾವಣೆ
ಐಪಿಎಸ್‌ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ( Sindhuri Vs Roopa) ನಡುವಿನ ಕಾಳಗದಲ್ಲಿ ಇಬ್ಬರನ್ನೂ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಆದರೆ ಇಬ್ಬರಿಗೂ ಯಾವುದೇ ಜಾಗ ತೋರಿಸದೆ, ಇದ್ದ ಸ್ಥಳದಿಂದ ಎತ್ತಂಗಡಿ ಮಾಡಿದೆ. ಇದೇ ವೇಳೆ ರೂಪಾ ಪತಿ ಹಾಗೂ ಹಿರಿಯ ಐಎಎಸ್‌ ಅಧಿಕಾರಿ ಮೌನೀಶ್‌ ಮೌದ್ಗಿಲ್‌ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Sindhuri Vs Roopa : ಸಿಂಧೂರಿ, ರೂಪಾ ಬೀದಿ ಜಗಳಕ್ಕೆ ಬ್ರೇಕ್‌ ; ಬಹಿರಂಗ ಹೇಳಿಕೆ ನೀಡದಂತೆ ಸರ್ಕಾರ ಆರ್ಡರ್‌

2. ಅಂಬಾರಿ ಉತ್ಸವ ಬಸ್ ಲೋಕಾರ್ಪಣೆ; ದುಡಿಯುವ, ಕಲಿಯುವ ಹೆಣ್ಣುಮಕ್ಕಳಿಗೆ ಏ.1ರಿಂದ ಸರ್ಕಾರಿ ಬಸ್ಸಲ್ಲಿ ಉಚಿತ ಪ್ರಯಾಣ: ಸಿಎಂ ಬೊಮ್ಮಾಯಿ
ಏಪ್ರಿಲ್ 1ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್ಸುಗಳನ್ನು (Ambaari Utsav Bus) ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈ ಸೂಚನೆಯನ್ನು ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. 2nd PUC Exam 2023: ಈ ಬಾರಿ ಪಿಯುದಲ್ಲಿ ಮಲ್ಟಿಪಲ್‌ ಚಾಯ್ಸ್;‌ ಮೂರು ಹಂತದಲ್ಲಿ ಸಿದ್ಧವಾಗಿದೆ ಪ್ರಶ್ನೆಗಳು: ಬಿ.ಸಿ. ನಾಗೇಶ್‌ ಹೇಳಿದ್ದೇನು?
ಫೆಬ್ರವರಿ ೩ರಂದು ನಡೆಯಲಿರುವ ಪಿಯುಸಿ ಪರೀಕ್ಷೆಯಲ್ಲಿ (2nd PUC Exam 2023) ಮೊದಲ ಬಾರಿಗೆ ಮಲ್ಟಿಪಲ್ ಚಾಯ್ಸ್ (Multiple Choice) ಅನ್ನು ಪರಿಚಯಿಸಲಾಗುತ್ತಿದ್ದು, 3 ಹಂತದ ಪ್ರಶ್ನೆಗಳನ್ನು ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದ್ದು, ಉತ್ತೀರ್ಣರಾಗಲು ಸಹಾಯಕವಾಗಲಿದೆ. ಇನ್ನು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ಬ್ಯಾನ್‌ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ (BC Nagesh) ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Assembly Session: ಧಮ್‌, ತಾಕತ್ ಇದ್ದರೆ ಹೊಡೆದುಹಾಕಲಿ ನೋಡೋಣ: ಅಶ್ವತ್ಥನಾರಾಯಣ ಹೇಳಿಕೆಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ತಿರುಗೇಟು
ಟಿಪ್ಪೂ ಸುಲ್ತಾನನನ್ನು ಉರಿಗೌಡ ಹಾಗೂ ನಂಜೇಗೌಡ ಹೊಡೆದುಹಾಕಿದಂತೆ ಸಿದ್ದರಾಮಯ್ಯ ಅವರನ್ನೂ ಮಾಡಬೇಕು ಎಂದು ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿಕೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಟೀಕಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. J.P. Nadda: ಮೋದಿ ಸರ್ಕಾರ ಉಚಿತ ಘೋಷಣೆ ಮಾಡಲಿಲ್ಲ; ಅದಕ್ಕೇ ದೇಶ ಉತ್ತಮ ಸ್ಥಿತಿಯಲ್ಲಿದೆ: ಕಾಂಗ್ರೆಸ್‌ ಕುರಿತು ಜೆ.ಪಿ. ನಡ್ಡಾ ಟೀಕೆ
ಕೊರೊನಾ ಕಾಲದಲ್ಲಿ ವಿವಿಧ ದೇಶಗಳು ತಮ್ಮ ನಾಗರಿಕರನ್ನು ಖುಷಿಪಡಿಸಲು ಉಚಿತ ಯೋಜನೆಗಳನ್ನು ಘೋಷಣೆ ಮಾಡಿದವು, ಅದಕ್ಕಾಗಿ ಇಂದು ಸಂಕಷ್ಟದಲ್ಲಿವೆ. ಆದರೆ ಮೋದಿ ಸರ್ಕಾರ ದೇಶದ ಅಭಿವೃದ್ಧಿಯ ಕುರಿತು ಗಮನ ಹರಿಸಿದ್ದರಿಂದ ಅತ್ಯಂತ ಸದೃಢವಾಗಿದ್ದೇವೆ ಎಂದು ರಾಜ್ಯ ಕಾಂಗ್ರೆಸ್‌ ವಿರುದ್ಧ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ(J.P. Nadda) ಟೀಕೆ ಮಾಡಿದರು. ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಪ್ರಬುದ್ಧರು, ವೃತ್ತಿಪರರು ಹಾಗೂ ಚಿಂತಕರ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ವಕೀಲರು, ವೈದ್ಯರು, ಇಂಜಿನಿಯರ್, ಬಿಜೆಪಿ ಪ್ರಮುಖರು ಭಾಗಿಯಾಗಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Rahul Gandhi: ಪ್ರತಿಪಕ್ಷಗಳು ಒಂದಾದರೆ ಮೋದಿಯನ್ನು ಸೋಲಿಸುವುದು ಕಷ್ಟವಲ್ಲ! ರಾಹುಲ್ ವಿಶ್ವಾಸ
ಭಾರತೀಯ ಪ್ರತಿಪಕ್ಷಗಳು ಒಂದಾಗಿ ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತವಾಗಿಯೂ ಭಾರತೀಯ ಜನತಾ ಪಾರ್ಟಿ(BJP)ಯನ್ನು ಸೋಲಿಸಬಹುದು ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಹೇಳಿದ್ದಾರೆ. ಇಟಲಿಯ Corriere della Sera ದಿನ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ರಾಹುಲ್ ಗಾಂಧಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೋ ಸೋಲಿಸಬಹುದು. ಅದಕ್ಕಾಗಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಬೈಡೆನ್ ಉಕ್ರೇನ್ ಭೇಟಿ ಎಫೆಕ್ಟ್! ಅಮೆರಿಕ ಜತೆ ಪರಮಾಣು ಒಪ್ಪಂದ ಮಾತುಕತೆ ಇಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್
ಉಭಯ ರಾಷ್ಟ್ರಗಳ ನಡುವಿನ ಪರಮಾಣು ಶಸ್ತ್ರಾಸ್ತ್ರಗಳನ್ನು ಸೀಮಿತಗೊಳಿಸುವ ಅಮೆರಿಕದ (America) ಪರಮಾಣು ಒಪ್ಪಂದ ಸ್ಟಾರ್ಟ್‌ನ(START) ಕೊನೆಯ ಸಭೆಯಲ್ಲಿ ರಷ್ಯಾ ಭಾಗವಹಿಸುವುದಿಲ್ಲ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಯುದ್ಧನಿರತ ಉಕ್ರೇನ್‌ಗೆ ಭೇಟಿ ನೀಡಿರುವುದರಿಂದ, ರಷ್ಯಾ ಅಧ್ಯಕ್ಷ ಪುಟಿನ್ ತೀವ್ರ ಅಸಮಾಧಾನಗೊಂಡಿದ್ದು, ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Javed Akhtar: 26/11 ಮುಂಬೈ ದಾಳಿಕೋರರು ಇನ್ನೂ ನಿಮ್ಮಲ್ಲೇ ಇದ್ದಾರೆ! ಪಾಕಿಸ್ತಾನಕ್ಕೆ ಅಖ್ತರ್ ಖಡಕ್ ಉತ್ತರ
ಪ್ರಖ್ಯಾತ ಉರ್ದು ಕವಿ ಫೈಯಾಜ್ ಅಹ್ಮದ್ ಫೈಯಾಜ್ ಸ್ಮರಣಾರ್ಥ ಆಯೋಜಿಸಲಾಗಿರುವ ಫಯಾಜ್ ಫೆಸ್ಟಿವಲ್ 2023 (Faiz Festival 2023) ಪಾಲ್ಗೊಳ್ಳಲು ಭಾರತದ ಖ್ಯಾತ ಬರಹಗಾರ ಹಾಗೂ ಚಿತ್ರಸಾಹಿತಿ ಜಾವೇದ್ ಅಖ್ತರ್ (Javed Akhtar) ಅವರು ಪಾಕಿಸ್ತಾನದಲ್ಲಿದ್ದಾರೆ. ಲಾಹೋರ್‌ನಲ್ಲಿ ಆಯೋಜಿಸಲಾಗಿರುವ ಈ ಫೆಸ್ಟಿವಲ್‌ನಲ್ಲಿ ಮಾತನಾಡಿದ ಅಖ್ತರ್ ಅವರು, 26/11 ಮುಂಬೈ ದಾಳಿಯನ್ನು ಪ್ರಸ್ತಾಪಿಸಿ, ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದ್ದಾರೆ. 2011ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದವರು ನಿಮ್ಮ ದೇಶ(ಪಾಕಿಸ್ತಾನ)ದಿಂದಲೇ ಬಂದವರು. ಈ ಬಗ್ಗೆ ಭಾರತೀಯರು ದೂರಿದರೆ ನೀವು ಅಸಮಾಧಾನಗೊಳ್ಳಲು ಕಾರಣಗಳೇ ಇಲ್ಲ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. 7th Pay Commission : ಮಾರ್ಚ್‌ 1 ರಿಂದ ಕರ್ತವ್ಯಕ್ಕೆ ಗೈರಾಗುವ ಹೋರಾಟ ಪ್ರಕಟಿಸಿದ ಸರ್ಕಾರಿ ನೌಕರರ ಸಂಘ
ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿಗೆ ತರುವ ಕುರಿತು ಬದ್ಧತೆ ಪ್ರಕಟಿಸಬೇಕು ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮಾರ್ಚ್‌ 1 ರಿಂದ ಕರ್ತವ್ಯಕ್ಕೆ ಗೈರಾಗುವ ಹೋರಾಟ ನಡೆಸಲು ರಾಜ್ಯಸ ಸರ್ಕಾರಿ ನೌಕರರ ಸಂಘವು ತೀರ್ಮಾನಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Rishab Shetty: ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ಕಾಂತಾರ ಕನ್ನಡ ಸಿನಿಮಾಕ್ಕೆ ಅಲ್ಲ, ಹಿಂದಿಗೆ ಎಂದ ರಿಷಬ್​ ಶೆಟ್ಟಿ
‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ (dada saheb phalke award 2023) ಪ್ರಶಸ್ತಿ ಸ್ವೀಕರಿಸಲು ಮುಂಬಯಿಗೆ ತೆರಳಿದ್ದ, ‘ಕಾಂತಾರ’ ನಟ ರಿಷಬ್​ ಶೆಟ್ಟಿ (Rishab Shetty) ಇಂದು ಬೆಂಗಳೂರಿಗೆ ಬಂದು ಇಳಿದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ಇದು ಕಾಂತಾರ ಹಿಂದಿ ಸಿನಿಮಾಕ್ಕೆ ಕೊಟ್ಟ ಪ್ರಶಸ್ತಿ. ಕನ್ನಡಕ್ಕೆ ಬಂದಿದ್ದಲ್ಲ. ಆದರೂ ಎಲ್ಲೆಡೆ ಕನ್ನಡ ಸಿನಿಮಾಗಳ ಬಗ್ಗೆ ವಿಶೇಷ ಗೌರವ ಮೂಡುತ್ತಿದೆ. ಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ಆಯಿತು’ ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ಸೋನು ನಿಗಮ್​ ಜತೆ ಸೆಲ್ಫಿಗಾಗಿ ಮುಗಿಬಿದ್ದು ಅವ್ಯವಸ್ಥೆ ಸೃಷ್ಟಿಸಿದ ಶಾಸಕನ ಪುತ್ರ; ಕ್ಷಮೆ ಕೇಳಿ ಟ್ವೀಟ್ ಮಾಡಿದ ಸಹೋದರಿ
  2. Operation Dost: ಭೂಕಂಪಪೀಡಿತ ಟರ್ಕಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಿದ ಭಾರತೀಯ ತಂಡಗಳಿಗೆ ಮೋದಿ ಸೆಲ್ಯೂಟ್
  3. IDBI Recruitment 2023 : ಐಡಿಬಿಐ ಬ್ಯಾಂಕ್‌ನಲ್ಲಿ 600 ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆ; ಪದವೀಧರರಿಂದ ಅರ್ಜಿ ಆಹ್ವಾನ
  4. Stray Dogs: 4 ವರ್ಷದ ಬಾಲಕನನ್ನು ರಸ್ತೆ ಮಧ್ಯೆ ಎಳೆದಾಡಿ ಕಚ್ಚಿ ಕೊಂದ ಬೀದಿ ನಾಯಿಗಳು; ಭಯಾನಕ ವಿಡಿಯೊ ವೈರಲ್​
  5. ಸ್ಮಾರ್ಟ್‌ಫೋನ್ ಕಳೆದು ಹೋಗಿದೆಯೇ? IMEI Number ಮೂಲಕ ಟ್ರ್ಯಾಕ್ ಅಥವಾ ಬ್ಲಾಕ್ ಮಾಡಬಹುದು!
Exit mobile version